ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ವೆನ್ಯೂ ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 15,000ಕ್ಕು ಹೆಚ್ಚಿನ ಮಂದಿ ಈ ಕಾರಿನ ಖರೀದಿಗಾಗಿ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಹಾಗಾದರೆ ಈ ಲೇಖನದಲ್ಲಿ ಹ್ಯುಂಡೈ ವೆನ್ಯೂ ಕಾರಿಗೆ ಏಕಿಷ್ಟು ಬೇಡಿಕೆ ಮತ್ತು ತನ್ನ ಎದುರಾಳಿ ವಾಹನಗಳಲ್ಲಿರದ ವೈಶಿಷ್ಟ್ಯತೆಗಳು ಈ ಕಾರಿನಲ್ಲೇನಿದೆ ಎಂದು ತಿಳಿಯಿರಿ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಸೆಗ್ಮೆಂಟ್‍ನಲ್ಲೆ ಮೊದಲು

ಹ್ಯುಂಡೈ ವೆನ್ಯೂ ಕಾರನ್ನು 3 ಎಂಜಿನ್ ಆಯ್ಕೆಯಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದ್ದು, ಅಂದರೆ ಈ ಕಾರು 1.2 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹಾಗು 1.4 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಎಂಬ ಆಯ್ಕೆಗಳಲ್ಲಿ ಲಭ್ಯವಿದೆ. ಹಾಗೆಯೆ ಈ ಕಾರಿನಲ್ಲಿರುವ 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಧಿಕ ಸಾಮರ್ಥ್ಯವನ್ನು ಹೊರಹಾಕುತ್ತಂತೆ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಹಾಗೆಯೆ ಇದೇ ಎಂಜಿನ್ ಅನ್ನು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಗಂಟೆಗೆ ಸುಮಾರು 187 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲದು ಎಂದು ಅಧಿಕೃತವಾದ ಮಾಹಿತಿ ಲಭ್ಯವಾಗಿದೆ. ಅಂದರೆ 190 ಕಿಲೋಮೀಟರ್‍‍ಗು ಅಧಿಕವಾಗಿ ತೋರಿಸುವ ಸ್ಪೀಡೋಮೀಟರ್ ಅನ್ನು ಈ ಕಾರಿನಲ್ಲಿ ಇರಿಸಲಾಗಿದ್ದು, ಈ ಎಂಜಿನ್ 120 ಬಿಹೆಚ್‍ಪಿ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಕಡಿಮೆ ನಿರ್ವಹಣೆ ವೆಚ್ಚ

ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳ ವಿಭಾಗದಲ್ಲಿ ತನ್ನ ಎದುರಾಳಿಗಳಿಗಿಂತಲೂ ನಿರ್ವಹಣೆಯಲ್ಲಿ ಹ್ಯುಂಡೈ ವೆನ್ಯೂ ಅಗ್ಗವಾದ ಕಾರು ಎಂದು ಸಂಸ್ಥೆಯು ಹೇಳಿಕೊಂಡಿದೆ. ಹ್ಯುಂಡೈ ವೆನ್ಯೂ ಕಾರು ಕಡಿಮೆ ನಿಗದಿತ ನಿರ್ವಹಣೆಯನ್ನು ನೀಡಲಿದ್ದು, ಈ ಕಾರಿನ ನಿರ್ಹಣೆಯ ವೆಚ್ಚದ ಬಗ್ಗೆ ಹ್ಯುಂಡೈ ಸಂಸ್ಥೆಯು ನಿಖರವಾದ ಮಾಹಿತಿಯನ್ನು ಹೊರ ಹಾಕಲಿಲ್ಲ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಅಧಿಕ ಇಂಧನ ದಕ್ಷತೆ

ಹ್ಯುಂಡೈ ವೆನ್ಯೂ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳು ಅಧಿಕವಾದ ಇಂಧನ ದಕ್ಷತೆಯನ್ನು ಹೊರಹಾಕುತ್ತಂತೆ. ವೆನ್ಯೂ ಕಾರಿನಲ್ಲಿನ 1.2 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ 82 ಬಿಹೆಚ್‍ಪಿ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತು ಈ ಎಂಜಿನ್ ಒಂದು ಲೀಟರ್‍‍ಗೆ ಸುಮಾರು 17.52 ಕಿಲೋಮೀಟರ್‍‍ನ ಮೈಲೇಜ್ ಹಿಂದಿರುಗಿಸಬಲ್ಲದು.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಇನ್ನು 1.0 ಲೀಟರ್, 3 ಸಿಲೆಂಡರ್ ಪೆಟ್ರೋಲ್ ಎಂಜಿನ್ 118 ಬಿಹೆಚ್‍ಪಿ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತು ಈ ಎಂಜಿನ್ ಪ್ರತೀ ಲೀಟರ್‍‍ಗೆ ಸುಮಾರು 18.27 ಕಿಲೋಮೀಟರ್‍‍‍ನ ಮೈಲೇಜ್ ಹಿಂದಿರುಗಿಸಬಲ್ಲದು. ಇದೇ ಎಂಜಿನ್‍ನ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮಾದರಿಯು ಪ್ರತೀ ಲೀಟರ್‍‍ಗೆ ಸುಮಾರು 18.15 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಇನ್ನು ಹೊಸ ಹ್ಯುಂಡೈ ವೆನ್ಯೂ ಕಾರಿನಲ್ಲಿರುವ 1.4 ಲೀಟರ್ ಡೀಸೆಲ್ ಎಂಜಿನ್ 89 ಬಿಹೆಚ್‍ಪಿ ಮತ್ತು ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಹಾಗೆಯೆ ಈ ಎಂಜಿನ್ ಪ್ರತೀ ಲೀಟರ್‍‍ಗೆ ಸುಮಾರು 23.7 ಕಿಲೋಮೀಟರ್‍‍‍ನ ಮೈಲೇಜ್ ಹಿಂದಿರುಗಿಸಬಲ್ಲದು.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಬೆಲೆ

ಹ್ಯುಂಡೈ ವೆನ್ಯೂ ಕಾರು ಬೆಲೆಗೆ ತಕ್ಕ ಹಾಗೆ ವಿವಿಧ ಬಗೆಯ ವೈಶಿಷ್ಟ್ಯತೆಗಳನ್ನು ಹೊಂದಿದೆ ಎಂದು ಹೇಳಬಹುದು. ಈ ಕಾರಿನ ಬೇಸ್ ವೇರಿಯೆಂಟ್ 1.2 ಲೀಟರ್ ಪೆಟ್ರೋಲ್ ಎಂಜಿನ್ ರೂ. 6.5 ಲಕ್ಷದ ಬೆಲೆಯನ್ನು ಮತ್ತು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ರೂ. 8.21 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಎಲ್ಲರಿಗೂ ತಿಳಿದಿರುವ ಹಾಗೆ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆದ ಕಾರುಗಳ ಬೆಲೆಯು ಅಧಿವಾಗಿರುತ್ತದೆ. ಆದ್ರೆ ಹ್ಯುಂಡೈ ವೆನ್ಯೂನಲ್ಲಿನ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಆಯ್ಕೆಯು ರೂ. 9.35 ಲಕ್ಷದ ಬೆಲೆಯನ್ನು ಪಡೆದರೆ ಇನ್ನು ಡೀಸೆಲ್ ಮಾದರಿಯು ರೂ. 7.75 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಸಧ್ಯಕ್ಕೆ ಹ್ಯುಂಡೈ ವೆನ್ಯೂ ಕಾರಿನ ಎದುರಾಳಿಗಳಾದ ಮಾರುತಿ ಸುಜುಕಿ ಬ್ರೆಝಾ ಕಾರು ರೂ. 7.85 ಲಕ್ಷ ಮತ್ತು ಟಾಟಾ ನೆಕ್ಸಾನ್ ರೂ. 6.48 ಲಕ್ಷದ್ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಅನಿಯಮಿತ ವಾರೆಂಟಿ

ಹ್ಯುಂಡೈ ವೆನ್ಯೂ 3 ವರ್ಷದ ವಾರೆಂಟಿಯನ್ನು ಸ್ಟ್ಯಾಂಡರ್ಡ್ ಆಗಿ ಮತ್ತು ಅನಿಯಮಿತ ಕಿಲೋಮೀಟರ್‍ ವಾರೆಂಟಿಯನ್ನು ಗ್ರಾಹಕರು ಪಡೆಯಬಹುದಾಗಿದೆ. ಈ ಕೊಡುಗೆಯು ಈ ಸೆಗ್ಮೆಂಟ್‍‍‍ನಲ್ಲಿನ ಬೇರಾವ ಕಾರುಗಳಲ್ಲಿ ನೀವು ಪಡೆಯಲು ಸಾಧ್ಯವಿಲ್ಲ. ಈ ವಾರೆಂಟಿಯನ್ನು ಮತ್ತೆರಡು ವರ್ಷ ಅಧಿಕವಾಗಿ ಕೂಡಾ ನೀವು ಪಡೆಯಬಹುದಾಗಿದೆ. ಇವುಗಳ ಜೊತೆಗೆ ಹ್ಯುಂಡೈ ಸಂಸ್ಥೆಯು ಉಚಿತ ರೋಡ್‍ಸೈಡ್ ಅಸಿಸ್ಟೆಂನ್ಸ್ ಹಾಗು ಉಚಿತ ಇ-ಸಿಮ್ ಸೌಲಭ್ಯವನ್ನು ಮೂರು ವರ್ಷದ ವರೆಗೂ ನೀಡಿದೆ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ವೆನ್ಯೂ ತಾಂತ್ರಿಕ ವೈಶಿಷ್ಟ್ಯತೆ

ಹ್ಯುಂಡೈ ವೆನ್ಯೂ ಕಾರಿನಲ್ಲಿ 33 ಫೀಚರ್ಸ್‌ಗಳನ್ನು ಹೊಂದಿರುವ ಬ್ಯೂ ಲಿಂಕ್ ಕನೆಕ್ಟಿವಿಟಿ ಸೌಲಭ್ಯವನ್ನು ಜೋಡಿಸಲಾಗಿದ್ದು, ಪ್ಯಾಕೇಜ್ ಮಾದರಿಯನ್ನು ಹೊಂದಿರುವ ಈ ಸೌಲಭ್ಯವು ಹೊಸ ಕಾರಿಗೆ ಗರಿಷ್ಠ ಸುರಕ್ಷತೆಯ ಜೊತೆಗೆ ಕಾರು ಪ್ರಯಾಣವನ್ನು ಸುಖವಾಗಿಸಲು ಹಲವು ಮಾಹಿತಿಗಳನ್ನು ನೀಡಲಿದೆ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಬ್ಲೂ ಲಿಂಕ್ ಪ್ಯಾಕೇಜ್‌ನಲ್ಲಿ ಜಿಯೋ ಫೆನ್ಸ್, ಎರ್ಮಜೆನ್ಸಿ ಅಸಿಸ್ಟ್, ಕಾರ್ ಟ್ರಾಕಿಂಗ್ ಸೇರಿದಂತೆ ಹಲವಾರು ಸುರಕ್ಷಾ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಸಿಗ್ನಿಚೆರ್ ಕಾಸ್‌ಕ್ಲ್ಯಾಡಿಂಗ್ ಹೆಕ್ಸಾಗೊನಲ್ ಫ್ರಂಟ್ ಗ್ರಿಲ್, ಡ್ಯುಯಲ್ ಹೆಡ್‌ಲ್ಯಾಂಪ್ ಕ್ಲಸ್ಟರ್, ಸಣ್ಣ ಎಳೆಯಂತಿರುವ ಲೈಟ್ ಸ್ಟ್ರಿಪ್, ಹೆಡ್‌ಲ್ಯಾಂಪ್ ಕ್ಲಸ್ಟರ್ ಕಳೆಭಾಗದಲ್ಲಿ ಹೊಂದಿಕೊಂಡಂತಿರುವ ಎಲ್ಇಡಿ ಡಿಆರ್‌ಎಲ್ಎಸ್ ಮತ್ತು 16-ಇಂಚಿನ ಟೈರ್ ಸೌಲಭ್ಯವು ಎಸ್‌ಯುವಿ ಪ್ರಿಯರನ್ನು ಸೆಳೆಯಲಿವೆ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಇನ್ನು ಹೊಸ ಕಾರಿನ ಒಳಾಂಗಣ ವಿನ್ಯಾಸದ ಬಗೆಗೆ ಹೇಳುವುದಾದರೇ, 5-ಸೀಟರ್ ಸೌಲಭ್ಯ ಹೊಂದಿರುವ ವೆನ್ಯೂ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದಿದ್ದು, ಬ್ಲ್ಯಾಕ್ ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್, 8-ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್ಪೈ, ಸೆಂಟರ್ ಕನ್ಸೊಲ್, ಡ್ಯಾಶ್‌ಬೋರ್ಡ್ ಸುತ್ತಲೂ ಸಿಲ್ವರ್ ಎಕ್ಸೆಂಟ್, ಉತ್ತಮ ದರ್ಜೆಯ ಲೆದರ್ ಸೀಟುಗಳು, ವೈರ್‌ಲೆಸ್ ಚಾರ್ಚಿಂಗ್ ಪಾಯಿಂಟ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವಿದೆ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಹೊಸ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್, ISOFIX ಸೀಟ್, ಹೊಂದಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

ಹ್ಯುಂಡೈ ವೆನ್ಯೂ ಕಾರಿನ ಬಗ್ಗೆ ತಿಳಿಯಬೇಕಾದ ಟಾಪ್ ಸಂಗತಿಗಳಿವು

ಖರೀದಿಗೆ ಲಭ್ಯವಿರುವ ಬಣ್ಣಗಳು

ವೆನ್ಯೂ ಕಾರು ಒಟ್ಟು 10 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, 7 ಸಿಂಗಲ್ ಟೋನ್ ಮತ್ತು 3 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಸಿಂಗಲ್ ಟೋನ್‌ನಲ್ಲಿ ಪೊಲಾರ್ ವೈಟ್, ಸಿಲ್ವರ್, ಫ್ಲೆರಿ ರೆಡ್, ಡೆನಿಮ್ ಬ್ಲ್ಯೂ, ಲಾವಾ ಆರೆಂಜ್, ಸ್ಟಾರ್ ಡಸ್ಟ್, ಡೀಪ್ ಫಾರೆಸ್ಟ್ ಮತ್ತು ಡ್ಯುಯಲ್ ಟೋನ್‌ನಲ್ಲಿ ಡೆನಿಮ್ ಬ್ಲ್ಯೂ ಜೊತೆ ಪೊಲಾರ್ ವೈಟ್ ರೂಫ್, ಪೊಲಾರ್ ವೈಟ್ ಜೊತೆ ಬ್ಲ್ಯಾಕ್ ರೂಫ್ ಮತ್ತು ಲಾವಾ ಆರೇಂಜ್ ಜೊತೆ ಬ್ಲ್ಯಾಕ್ ರೂಫ್ ನೀಡಲಾಗಿದೆ.

Most Read Articles

Kannada
English summary
Hyunai Venue Top Features Mileage, Warranty, Maintainance, Blue-link Connectivity and More. Read In Kannada
Story first published: Tuesday, May 21, 2019, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X