ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರಿಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾದ ಕೇವಲ ದಿನಗಳಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಾರು ಖರೀದಿಯ ಅವಧಿಯು ತಿಂಗಳಿನಿಂದ ತಿಂಗಳಿಗೆ ಏರಿಕೆಯಾಗುತ್ತಲೇ ಇದೆ.

ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ಸದ್ಯ ಮಾರುಕಟ್ಟೆಯಲ್ಲಿ ಟಾಪ್ 5 ಕಾರು ಮಾರಾಟ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾದ ನಂತರ ಇದುವರೆಗೂ ಸರಾಸರಿಯಾಗಿ ಪ್ರತಿ ತಿಂಗಳು 8 ಸಾವಿರದಿಂದ 10 ಸಾವಿರ ಯುನಿಟ್ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದು, ಬುಕ್ಕಿಂಗ್ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಹೊಸ ಕಾರು ಖರೀದಿಗೆ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 5 ವಾರಗಳಿಂದ 15 ವಾರಗಳ ತನಕ ಕಾಯುವಿಕೆ ಅವಧಿಯನ್ನು ನೀಡಲಾಗುತ್ತಿದ್ದು, ಹೊಸ ಕಾರು ಹ್ಯುಂಡೈ ಸಂಸ್ಥೆಗೆ ಭರ್ಜರಿ ಲಾಭ ತಂದುಕೊಡುತ್ತಿದೆ.

ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಸ್ಪರ್ಧಿ ಕಾರು ಮಾದರಿಯಾದ ಬ್ರೆಝಾ ಆವೃತ್ತಿಯು ಡೀಸೆಲ್ ಮಾದರಿಯಲ್ಲಿ ಮಾತ್ರವೇ ಮಾರಾಟಕ್ಕಿದ್ದು, ವೆನ್ಯೂ ಮಾತ್ರ ಪೆಟ್ರೋಲ್, ಡೀಸೆಲ್ ಮಾದರಿಗಳಲ್ಲಿ ಮಾತ್ರವಲ್ಲದೇ ಪರ್ಫಾಮೆನ್ಸ್ ಆವೃತ್ತಿಯನ್ನು ಹೊಂದಿರುವುದೇ ಅಧಿಕ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ಇನ್ನು ವೆನ್ಯೂ ಸದ್ಯ ಹ್ಯುಂಡೈ ನಿರ್ಮಾಣದ ಇತರೆ ಕಾರುಗಳಿಂತಲೂ ಅತಿ ವಿನೂತನ ತಂತ್ರಜ್ಞಾನ ಸೌಲಭ್ಯಗಳನ್ನು ಹೊತ್ತು ಬಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 4 ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಹೊಸ ವೆನ್ಯೂ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.6,50,000 ದಿಂದ ಟಾಪ್ ಎಂಡ್ ಆವೃತ್ತಿಯು ರೂ.11,10,500 ಬೆಲೆ ಪಡೆದುಕೊಂಡಿದೆ.

ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ವೆನ್ಯೂ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದ್ದರೆ ಡಿಸೇಲ್ ಎಂಜಿನ್‌ನಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದ್ದು, ಇ, ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್(0) ವೆರಿಯೆಂಟ್‌ಗಳಲ್ಲಿ ಹೊಸ ವೆನ್ಯೂ ಖರೀದಿಗೆ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಮತ್ತು 1.4-ಡೀಸೆಲ್ ಎಂಜಿನ್‌ಗಳು ಸಾಮಾನ್ಯ ಮಾದರಿಯ ಕಾರುಗಳಗಾಗಿ ಮಾರಾಟಗೊಳ್ಳಲಿದ್ದರೆ, ಕಡಿಮೆ ಎಂಜಿನ್ ಸಾಮಾರ್ಥ್ಯದ 1.0-ಲೀಟರ್ ಪೆಟ್ರೋಲ್ ಆವೃತ್ತಿಯು ಅತಿ ಹೆಚ್ಚು ಬಿಎಚ್‌ಪಿ ಉತ್ಪಾದನೆಯೊಂದಿಗ ವೆನ್ಯೂ ಟಾಪ್ ಎಂಡ್ ಮಾದರಿಯಾಗಿ ಹೊರಹೊಮ್ಮಿದೆ.

ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ಎಂಜಿನ್ ಪರ್ಫಾಮೆನ್ಸ್

ಐ20 ಕಾರಿನಿಂದ ಎರವಲು ಪಡೆಯಲಾದ 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಎಚ್‌ಪಿ, 115-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ, 1.4-ಲೀಟರ್ ಡೀಸೆಲ್ ಮಾದರಿಯು ಕ್ರೆಟಾದಿಂದ ಎರವಲು ಪಡೆಯಲಾದ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 89-ಬಿಎಚ್‌ಪಿ, 220-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ಹಾಗೆಯೇ ಟಾಪ್ ಎಂಡ್ ಮಾದರಿಯಾದ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 120-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿದ್ದು, ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆ ಮಾಡಬಹುದಾಗಿದೆ.

MOST READ: ನಮ್ಮ ಬೆಂಗಳೂರು ತಲುಪಿದ ವೆಲ್‌ಫೈರ್- ಹೊಸ ಕಾರು ಬಿಡುಗಡೆಗೆ ಟೊಯೊಟಾ ಭರ್ಜರಿ ತಯಾರಿ..!

ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ವೆನ್ಯೂ ತಾಂತ್ರಿಕ ವೈಶಿಷ್ಟ್ಯತೆ ಹ್ಯುಂಡೈ ವೆನ್ಯೂ ಕಾರಿನಲ್ಲಿ 33 ಫೀಚರ್ಸ್‌ಗಳನ್ನು ಹೊಂದಿರುವ ಬ್ಯೂ ಲಿಂಕ್ ಕನೆಕ್ಟಿವಿಟಿ ಸೌಲಭ್ಯವನ್ನು ಜೋಡಿಸಲಾಗಿದ್ದು, ಪ್ಯಾಕೇಜ್ ಮಾದರಿಯನ್ನು ಹೊಂದಿರುವ ಈ ಸೌಲಭ್ಯವು ಹೊಸ ಕಾರಿಗೆ ಗರಿಷ್ಠ ಸುರಕ್ಷತೆಯ ಜೊತೆಗೆ ಕಾರು ಪ್ರಯಾಣವನ್ನು ಸುಖವಾಗಿಸಲು ಹಲವು ಮಾಹಿತಿಗಳನ್ನು ನೀಡಲಿದೆ.

MOST READ: ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ಬ್ಲೂ ಲಿಂಕ್ ಪ್ಯಾಕೇಜ್‌ನಲ್ಲಿ ಜಿಯೋ ಫೆನ್ಸ್, ಎರ್ಮಜೆನ್ಸಿ ಅಸಿಸ್ಟ್, ಕಾರ್ ಟ್ರಾಕಿಂಗ್ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಸಿಗ್ನಿಚೆಕ್ ಕಾಸ್‌ಕ್ಲ್ಯಾಡಿಂಗ್ ಹೆಕ್ಸಾಗೊನಲ್ ಫ್ರಂಟ್ ಗ್ರಿಲ್, ಡ್ಯುಯಲ್ ಹೆಡ್‌ಲ್ಯಾಂಪ್ ಕ್ಲಸ್ಟರ್, ಸಣ್ಣ ಎಳೆಯಂತಿರುವ ಲೈಟ್ ಸ್ಟ್ರಿಪ್, ಹೆಡ್‌ಲ್ಯಾಂಪ್ ಕ್ಲಸ್ಟರ್ ಕಳೆಭಾಗದಲ್ಲಿ ಹೊಂದಿಕೊಂಡಂತಿರುವ ಎಲ್ಇಡಿ ಡಿಆರ್‌ಎಲ್ಎಸ್ ಮತ್ತು 16-ಇಂಚಿನ ಟೈರ್ ಸೌಲಭ್ಯವು ಎಸ್‌ಯುವಿ ಪ್ರಿಯರನ್ನು ಸೆಳೆಯಲಿವೆ.

MOST READ: ಈ 6 ಕಾರಣಗಳಿಂದಾಗಿ ಫುಲ್ ಫೇಮಸ್ ಆಯ್ತು ಕಿಯಾ ಸೆಲ್ಟೊಸ್

ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ಇದಲ್ಲದೇ ಹೊಸ ಕಾರಿನ ಒಳಾಂಗಣ ವಿನ್ಯಾಸದ ಬಗೆಗೆ ಹೇಳುವುದಾದರೇ, 5-ಸೀಟರ್ ಸೌಲಭ್ಯ ಹೊಂದಿರುವ ವೆನ್ಯೂ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದಿದ್ದು, ಬ್ಲ್ಯಾಕ್ ಡ್ಯಾಶ್‌ಬೋರ್ಡ್ ಮತ್ತು ಕ್ಯಾಬಿನ್, 8-ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್ಪೈ, ಸೆಂಟರ್ ಕನ್ಸೊಲ್, ಡ್ಯಾಶ್‌ಬೋರ್ಡ್ ಸುತ್ತಲೂ ಸಿಲ್ವರ್ ಎಕ್ಸೆಂಟ್, ಉತ್ತಮ ದರ್ಜೆಯ ಲೆದರ್ ಸೀಟುಗಳು, ವೈರ್‌ಲೆಸ್ ಚಾರ್ಚಿಂಗ್ ಪಾಯಿಂಟ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವಿದೆ.

ಹ್ಯುಂಡೈ ವೆನ್ಯೂಗೆ ಭರ್ಜರಿ ಬೇಡಿಕೆ- ಹೊಸ ಕಾರು ಖರೀದಿಗೆ 15 ವಾರ ಕಾಯಬೇಕಂತೆ..!

ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್, ISOFIX ಸೀಟ್, ಹೊಂದಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

Most Read Articles

Kannada
English summary
Hyundai Venue compact suv waiting period extends. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X