ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಸಾರಿಗೆ ಆಧುನಿಕ ಜೀವನದ ಪ್ರಮುಖ ಮತ್ತು ಅನಿವಾರ್ಯ ಭಾಗವಾಗಿದೆ. ಗಾಳಿಯ ಮೂಲಕ, ಖಾಸಗಿ ಕಾರಿನ ಮೂಲಕ, ರೈಲುಮಾರ್ಗದ ಮೂಲಕ ಮತ್ತು ಬಸ್‌ನಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒಳಗೊಂಡಂತೆ ಹಲವಾರು ಮಾರ್ಗಗಳಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಅನೇಕ ಬ್ರ್ಯಾಂಡ್‌ಗಳ ಬಸ್‌ಗಳನ್ನು ವಿವಿಧ ಟ್ರಾವೆಲ್ ಏಜೆನ್ಸಿಗಳು ನೀಡುತ್ತವೆ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಆದರೆ ಖಾಸಗಿ ಬಸ್ಸುಗಳಲ್ಲಿ ಸಿಗುವ ಐಲತ್ತುಗಳು ಮತ್ತು ಗೌಪ್ಯಯು ನಿಮಗೇ ಬೇರಾವ ವಾಹನದಲ್ಲಿಯು ಸಿಗುವುದಿಲ್ಲ. ಈ ಬಸ್‍ಗಳಲ್ಲಿ ನಿಮ್ಮ ಆಫೀಸ್ ತಂಡದೊಂದಿಗೆ ಸಮಯವನ್ನು ಉಳಿಸಿಕೊಳ್ಳಲು ಹಾಗು ಕೆಲಸಕೆ ಸಂಬಂಧಿಸಿದ ಪ್ರಯಾಣವಾದರೆ ಇಂತಹ ಕಾಸಗಿ ಬಸ್ಸುಗಳು ಬಹು ಉಪಯೋಗಕಾರಿಗಾರುತ್ತವೆ. ಸಾಮಾನ್ಯ ಬಸ್ಸುಗಳು ಪ್ರಯಾಣ ಮಾಡುವಾಗ ನಿಧಾನವಾಗಿ ಕೆಲಸ ಮಾಡಲು ಆರಾಮ ಅಥವಾ ಸೌಲಭ್ಯಗಳನ್ನು ನೀಡುವುದಿಲ್ಲ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಫೋರ್ಸ್ ಟ್ರಾವೆಲರ್, ರಾಯಲ್ ಎನ್‌ಫೀಲ್ಡ್ ಬುಲೆಟ್ ಮತ್ತು ಇನ್ನಿತರೆ ವಾಹನಗಳ ಅದ್ಭುತ ಕಸ್ಟಮೈಸ್ (ಮಾಡಿಫಿಕೇಷನ್) ಕೆಲಸಗಳಿಗೆ ಜನಪ್ರಿಯ ಹೆಸದುವಾಸಿಯಾಗಿರುವ ರೆಡ್ಡಿ ಕಸ್ಟಮ್ಸ್ ಒಂದು ಖಾಸಗಿ ಬಸ್ ಅನ್ನು ಆಫಿಸ್‍‍ನಂತೆ ಮಾರ್ಪಾಡುಗಳನ್ನು ಮಾಡುವಲಿ ಯಶಸ್ವಿಯಾಗಿದೆ. ಈ ಮಾರ್ಪಾಡುಗಳು ನಮ್ಮ ದೇಶದಲ್ಲಿನ ಬಹುತೇಕ ಆಫೀಸ್‍‍ನಲ್ಲಿ ಇರದಿರುವ ಹಾಗೆ ಮಾಡಲಾಗಿದೆ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಹೊರಗಿನಿಂದ ನೋಡಿದರೆ, ಇದು ಎಲ್ಲಾ ಕಪ್ಪು ಹೊರಭಾಗ, ದೊಡ್ಡ ಪರದೆಯ ಕಿಟಕಿಗಳು ಮತ್ತು ಸುಂದರವಾಗಿ ಕಾಣುವ ಕ್ರೋಮ್ ರಿಮ್‌ಗಳನ್ನು ಹೊಂದಿರುವ ಐಷಾರಾಮಿ ಟೂರಿಂಗ್ ಬಸ್‌ನಂತೆ ಕಾಣುತ್ತದೆ. ಹೊರಭಾಗವು ನೀವು ಒಳಗೆ ಏನನ್ನು ಕಾಣುತ್ತೀರಿ ಎಂಬುದರ ಬಗ್ಗೆ ಒಂದು ಸೂಕ್ಷ್ಮವಾದ ಪ್ರಭಾವವನ್ನು ನೀಡುತ್ತದೆ ಆದರೆ ರೂಪಾಂತರದ ಕೆಲಸವು ಐಷಾರಾಮಿ ಖಾಸಗಿ ಜೆಟ್‌ಗಿಂತ ಉತ್ತಮವಾಗಿ ಹೊರಹೊಮ್ಮಿದೆ ಎಂದು ಚಿತ್ರಗಳು ತೋರಿಸುತ್ತವೆ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಇದರಲ್ಲಿರುವ ಎರಡು ಕ್ಯಾಬಿನ್‍ಗಳಲ್ಲಿ ಒಟ್ಟು 11 ಮಂದು ಪ್ರಯಾಣಿಸಬಹುದಾಗಿದ್ದು, ಮೊದಲ ಕ್ಯಾಬಿನ್‍ಗೆ 5 ಕಾರ್ಯನಿರ್ವಾಹಕರಿಗೆ ಅವಕಾಶ ಕಲ್ಪಿಸಬಹುದು ಮತ್ತು ಇದು ಮುಖ್ಯಸ್ಥರಿಗೆ ಸ್ಥಳಾವಕಾಶ ನೀಡುತ್ತದೆ. ಎರಡನೇ ಕ್ಯಾಬಿನ್ ಒಟ್ಟು 6 ಸೀಟುಗಳನ್ನು ಹೊಂದಿದ್ದು, ಇದು ಬಸ್ಸಿನಲ್ಲಿ ಹಿರಿಯ ಅಧಿಕಾರಿಯ ಸ್ಥಾನವು ಇರುವ ಸ್ಥಳವಾಗಿರಲಿದೆ. ಹಾಗೆಯೆ ಗರಿಷ್ಟ ಸೌಕರ್ಯಕ್ಕಾಗಿ ವಿವಿಧ ವಿಧಾನಗಳಲ್ಲಿ ಸ್ಥಾನ ಪಡೆಯಬಹುದಾದ ಜೋಡಣಾ ಕೋಣೆ ಸ್ಥಾನವನ್ನು ಹೊಂದಿದೆ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಇತರ ಆಸನಗಳು ಸಹ ತುಂಬಾ ಬೆಲೆಬಾಳುವವು ಮತ್ತು ಬಸ್‌ನಲ್ಲಿ ನೀವು ಊಹಿಸಲಾಗದ ಹಾಗೆ ಅತ್ಯುತ್ತಮ ಆಸನಗಳನ್ನು ಈ ಬಸ್ಸಿನಲ್ಲಿ ನೀಡಲಾಗಿದೆ. ಿದರಲ್ಲಿರುವ ಎಲ್ಲಾ ಸೀಟ್‍‍ಗಳನ್ನು ಲೆಧರ್‍‍ನಿಂದ ಸಜ್ಜುಗೊಳಿಸಲಾಗಿದೆ. ಇದು ವಾಹನಕ್ಕೆ ಪ್ರಾಚೀನ ನೋಟವನ್ನು ನೀಡುತ್ತದೆ ಹಾಗು ಮುಖ್ಯ ಕ್ಯಾಬಿನ್‌ನಲ್ಲಿ, ಮುಂಭಾಗದಲ್ಲಿ ದೊಡ್ಡ ಎಲ್‌ಸಿಡಿ ಪರದೆಯಿದೆ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಪರದೆಗಳು ಗಟ್ಟಿಯಾಗಿರುವುದರಿಂದ ಬಸ್ ತಿರುವು ಪಡೆದಾಗ ಅವು ತಿರುಗಾಡುವುದಿಲ್ಲ. ಅಲ್ಲದೆ, ನೆಲಹಾಸು ಎಲ್ಲಾ ಮರದದ್ದಾಗಿದೆ, ಇದರಲ್ಲಿ ನೀಡಲಾದ ಈ ವಿಧಾನವು ನೀವು ಭಾರತದಲ್ಲಿ ಬೇರೆಲ್ಲಿಯು ಕಾಣಲು ಸಾಧ್ಯವಿಲ್ಲ. ಸೀಲಿಂಗ್ ಕೂಡ ಕಣ್ಣನ್ನು ಸೆಳೆಯುತ್ತದೆ. ರೆಡ್ಡಿ ಕಸ್ಟಮ್ಸ್ ತಂಡವು ರೂಫ್‍ನ ಬೆಳಕನ್ನು ಆಭರಣಗಳಂತೆ ಕಾಣುವ ಹಾಗೆ ಅದ್ಭುತ ಕೆಲಸವನ್ನು ಮಾಡಿದ್ದಾರೆ. ಚಾವಣಿಯ ದೀಪಗಳು ಕಲಾಕೃತಿಯಂತೆ ಕಾಣುತ್ತವೆ ಮತ್ತು ಎಲ್ಇಡಿ ದೀಪಗಳಿಂದ ಮಾಡಲ್ಪಟ್ಟಿದೆ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಎರಡನೇ ಕ್ಯಾಬಿನ್‍ನಲ್ಲಿ 6 ಆಸನಗಳ ಸ್ಥಳವನ್ನು ಪಡೆಯುತ್ತದೆ ಮತ್ತು ಎಲ್ಲಾ ಆಸನಗಳು ಮುಂದಕ್ಕೆ ಮುಖ ಮಾಡಿಕೊಂಡಿರುತ್ತದೆ. ಐಷಾರಾಮಿ ವಿಮಾನಯಾನ ಸಂಸ್ಥೆಗಳ ಪ್ರಥಮ ದರ್ಜೆ ಕ್ಯಾಬಿನ್ ಅನ್ನು ಅನುಕರಿಸುವಂತೆ ಆಸನಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಮೀಸಲಾದ ಪುಲ್- ಟೇಬಲ್ ಕೋಷ್ಟಕಗಳನ್ನು ಪಡೆಯುತ್ತದೆ, ಅಲ್ಲಿ ಒಬ್ಬರು ತಮ್ಮ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗಳನ್ನು ಇಟ್ಟುಕೊಂಡು ಕೆಲಸ ಮಾಡಬಹುದು.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಕೆಲಸದ ವಾತಾವರಣವನ್ನು ಬೆಂಬಲಿಸಲು, ಮಲ್ಟಿ-ಸಿಮ್ ಹೈ-ಎಂಡ್ ಇಂಟರ್ನೆಟ್ ಸಾಧನವಿದೆ, ಅದು 100 ಎಂಬಿಪಿಎಸ್ ವರೆಗಿನ ವೇಗವನ್ನು ಕಾರ್ಯನಿರ್ವಾಹಕರಿಗೆ ಚಲಿಸಲು ಅನುವು ಮಾಡಿಕೊಡುತ್ತದೆ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಮತ್ತೆ ಇನ್ನು ಏನು?

ಎರಡನೇ ಕ್ಯಾಬಿನ್‌ನಲ್ಲಿ ಎರಡು ಟಿವಿಗಳನ್ನು ಇರಿಸಲಾಗಿದೆ, ಇದನ್ನು ಮುಖ್ಯ ಕ್ಯಾಬಿನ್‌ನ ಟಿವಿಯೊಂದಿಗೆ ಸಿಂಕ್ ಮಾಡಲಾಗುತ್ತದೆ. ನೀವು ಗಮ್ಯಸ್ಥಾನದತ್ತ ಸಾಗುತ್ತಿರುವಾಗ ನಿಮ್ಮ ಪ್ರಗತಿ ಪಟ್ಟಿಯಲ್ಲಿ ತೋರಿಸಲು ಅಥವಾ ಪ್ರಸ್ತುತಿಯ ಮೂಲಕ ಹೋಗಲು ಇದು ಸೂಕ್ತವಾಗಿದೆ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಎಲ್ಲಾ ವೈಯಕ್ತಿಕ ಆಸನಗಳು ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡಿಕೊಳ್ಳಲು ಯುಎಸ್‌ಬಿ ಚಾರ್ಜರ್‌ಗಳು ಮತ್ತು ಪಾಯಿಂಟ್‌ಗಳನ್ನು ನೀಡಲಾಗಿದೆ. ಇದಲ್ಲದೆ, ವೀಡಿಯೊ ಕ್ಯಾಮೆರಾದೊಂದಿಗೆ ಪೂರ್ಣ ಕಾನ್ಫರೆನ್ಸ್ ವ್ಯವಸ್ಥೆಯು ಈ ಐಷಾರಾಮಿ ಬಸ್‍ನಲ್ಲಿ ನೀಡಲಾಗಿದೆ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಮತ್ತು ಪ್ರಮುಖ ಸಭೆಗೆ ಪ್ರವೇಶಿಸುವ ಮೊದಲು ನೀವು ಫ್ರೆಶ್ ಆಗಲು, ಬಸ್‌ನ ಹಿಂಭಾಗದಲ್ಲಿ ಬೃಹತ್ ಸ್ನಾನಗೃಹದೊಂದಿಗೆ ಸಂಪೂರ್ಣ-ಕ್ರಿಯಾತ್ಮಕ ವಾಶ್ ರೂಮ್ ಇದೆ. ಇದು ಒಣ ಶೌಚಾಲಯ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ ಮತ್ತು ಇಡೀ ಪ್ರದೇಶವು ಬಿಳಿ ಬಣ್ಣದಲ್ಲಿ ಮುಗಿಸಲಾಗಿದೆ. ಇದರಲ್ಲಿ ಪ್ರಯಾಣದ ವೇಳೆ ನಿಮ್ಮ ಹಸಿವನುನ್ ನೀಗಿಸಲು ಪ್ಯಾಂಟ್ರಿ ವ್ಯವಸ್ಥೆ ಕೂಡ ಇದೆ.

ಮಿನಿ ಆಫಿಸ್‍‍ಗೆ ಬೇಕಾದ ಎಲ್ಲಾ ಸೌಲಭ್ಯಗಳು ಈ ಐಷಾರಾಮಿ ಬಸ್ಸಿನಲ್ಲಿದೆಯಂತೆ.!

ಇವೆಲ್ಲದಕ್ಕೆ ಖರ್ಚು.?

ಈ ಐಷಾರಾಮಿ ಮಾರ್ಪಾಡುಗಳನ್ನು ಮಾಡಲು ರೆಡ್ದಿ ಕಸ್ಟಮ್ಸ್ ಎಷ್ಟು ಹಣಾ ತೆಗೆದುಕೊಂಡಿದೆ ಎಂದು ಯಾವಾ ಮಾಹಿತಿಯು ನಮ್ಮ ಬಳಿ ಲಭ್ಯವಿಲ್ಲ. ಹೆಚ್ಚಿನ ಮಾಹಿತಿಗಳಿಗಾಗಿ ರೆಡ್ಡಿ ಕಸ್ಟಂರವರ ಅಧಿಕೃತ ವೆಬ್‍ಸೈಟ್ ಅನ್ನು ಭೇಟಿ ನೀಡಿ. www.reddycustoms.com ಅಥವಾ sales@reddycustoms.com, 9225668444, 9764073666 ಅನ್ನು ಸಂಪರ್ಕಿಸಿ.

Most Read Articles

Kannada
English summary
In This Luxury Bharth Benz Bus You Will Get What To Be Inside Mini Office. Read In Kannada
Story first published: Saturday, June 15, 2019, 15:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more