ಶೀಘ್ರದಲ್ಲೇ ಬರಲಿದೆ ಮೊದಲ ಹೈಬ್ರಿಡ್ ಎಸ್ಕಾರ್ಟ್ಸ್ ಟ್ರ್ಯಾಕ್ಟರ್

ಎಸ್ಕಾರ್ಟ್ಸ್ ಕಂಪನಿಯು ಭಾರತದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಅನ್ನು ತನ್ನ 2019ರ ವಾರ್ಷಿಕ ಇನ್ನೋವೆಷನ್ ವೇದಿಕೆಯಲ್ಲಿ ಮೂರು ಹೊಸ ಟ್ರ್ಯಾಕ್ಟರನ್ನು ಪ್ರದರ್ಶಿಸಿದರು. ದೇಶಿಯ ಮಾರುಕಟ್ಟೆಯ ಮೊದಲ ಬಾರಿ ಹೈಬ್ರಿಡ್ ಟ್ರಾಕ್ಟರ್, ಹೈಬ್ರಿಡ್ ಬ್ಲಾಕ್‍‍ಹೋ ಲೋಡರ್ ಮತ್ತು ಮಲ್ಟಿ-ಯುಟಿಲಿಟಿ ಬ್ಯಾಕ್‍‍ಹೋ ಟ್ರ್ಯಾಕ್ಟರ್ ಅನ್ನು ಬಹಿರಂಗಪಡಿಸಿದರು.

ಶೀಘ್ರದಲ್ಲೇ ಬರಲಿದೆ ಮೊದಲ ಹೈಬ್ರಿಡ್ ಎಸ್ಕಾರ್ಟ್ಸ್ ಟ್ರ್ಯಾಕ್ಟರ್

ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿದ ವಾಹನಗಳು ಡೀಸೆಲ್ ಮತ್ತು ಬ್ಯಾಟರಿ ಪವರ್ ಮೂಲಕ ಕಾರ್ಯನಿರ್ವಹಿಸುತಿತ್ತು. ಕಾಲ ಕಳದಂತೆ ಅನೇಕ ಕಾರು ತಯಾರಕರು ತಮ್ಮ ವಾಹನಗಳನ್ನು ಸ್ವಚ್ಚವಾಗಿ ಮತ್ತು ಗ್ರೀನರ್ ಆಗಿ ಇರಲು ಹೈಬ್ರಿಡ್‍ ಡ್ರೈವ್‍ಟ್ರೇನ್‍ ವಿಧಾನಗಳಲ್ಲಿ ಬಳಸತೊಡಗಿತ್ತು. ಎಲೆಕ್ಟ್ರಿಕ್ ವಾಹನಗಳು ಮಾಲಿನ ಉಂಟು ಮಾಡಲ್ಲ ಆದರೆ ಪೆಟ್ರೋಲ್-ಡೀಸೆಲ್ ಎಂಜಿನ್‍‍ನಿಂದ ಮಾಲಿನ್ಯವಾಗುತ್ತದೆ. ಈಗಾಗಿ ಹಲವು ಕಂಪನಿಗಳು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿದ್ದಾರೆ. ವಿಶ್ವದ ಬಹುತೇಕ ಕಂಪನಿಗಳು ಎಲೆಕ್ಟ್ರಿಕ್ ಅಳವಡಿಸಿಕೊಂಡರೆ, ಕೆಲವು ಹೈಬ್ರಿಡ್ ವಾಹನಗಳಿಗೆ ಸೀಮಿತವಾಗಿದ್ದಾರೆ.

ಶೀಘ್ರದಲ್ಲೇ ಬರಲಿದೆ ಮೊದಲ ಹೈಬ್ರಿಡ್ ಎಸ್ಕಾರ್ಟ್ಸ್ ಟ್ರ್ಯಾಕ್ಟರ್

ಹಸಿರು ವಾಹನಗಳನ್ನು ಬಳಸಿಕೊಳ್ಳುವುದರಲ್ಲಿ ಭಾರತವು ತುಂಬಾ ಹಿಂದೆ ಇದೆ. ಯುರೋಪ್ ಮತ್ತು ಅಮೆರಿಕದ ಹಲವಾರು ದೇಶಗಳು ಹೈಬ್ರಿಡ್ ವಾಹನಗಳನ್ನು ಹೊಂದಿಕೊಂಡಿದ್ದರೆ, ಭಾರತವು ಈಗ ಹೈಬ್ರಿಡ್ ವಾಹನಗಳತ್ತ ಮುಖಮಾಡುತ್ತಿದೆ. ಹೈಬ್ರಿಡ್ ಟ್ರಾಕ್ಟರ್ ಮತ್ತು ಹೈಬ್ರಿಡ್ ಬ್ಯಾಕ್‍‍ಹೋ ಲೋಡರ್‍‍‍ನೊಂದಿಗೆ ಎಸ್ಕಾರ್ಟ್ಸ್ ದೇಶಿಯ ಮಾರುಕಟ್ಟೆಗೆ ಹೈಬ್ರಿಡ್ ವಿಭಾಗದ ಮೂಲಕ ಹೊಸ ಸಂಚಲನ ಮೂಡಿಸಲು ಸಜ್ಜಾಗುತ್ತಿದೆ. ಎಸ್ಕಾರ್ಟ್ಸ್ ಫಾರ್ಮ್‍‍ಟ್ರಾಕ್ ಹೈ‍ಬ್ರಿಡ್ ಟ್ರಾಕ್ಟರ್ 4-ವ್ಹೀಲ್ ಡ್ರೈವ್ ಮಾದರಿಯಾಗಿದ್ದು, ಇದನ್ನು 70-75 ಎಚ್‍‍ಪಿ ವಿಭಾಗಕ್ಕೆ ಸೇರಿದೆ.

ಶೀಘ್ರದಲ್ಲೇ ಬರಲಿದೆ ಮೊದಲ ಹೈಬ್ರಿಡ್ ಎಸ್ಕಾರ್ಟ್ಸ್ ಟ್ರ್ಯಾಕ್ಟರ್

ಈ ಟ್ರ್ಯಾಕ್ಟರ್ 70-75 ಎಚ್‍‍ಪಿ ವಿಭಾಗದಲ್ಲಿದ್ದರೂ, ಟ್ರ್ಯಾಕ್ಟರ್ ಅನ್ನು ಅದರ ಹೈಬ್ರಿಡ್ ಡ್ರೈವ್‍‍ಟ್ರೇನ್‍‍ಗೆ 90 ಎಚ್‍‍ಪಿ ರವರೆಗೆ ಹೆಚ್ಚಿಸಬಹುದು. ಇದು ನಾಲ್ಕು ಆಪರೇಟಿಂಗ್ ಮೋಡ್‍‍ಗಳನ್ನು ಹೊಂದಿದ್ದು, ಇದು ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್ ಎರಡನ್ನು ಸ್ವತಂತ್ರವಾಗಿ ಬಳಸಬಹುದು. ಟ್ರಾಕ್ಟರ್ ಅನ್ನು ಓಡಿಸಲು ಹೈಬ್ರಿಡ್ ಮೋಡ್ ಬಳಕೆದಾರರಿಗೆ ಬ್ಯಾಟರಿ ಪವರ್ ಮತ್ತು ಡೀಸೆಲ್ ಎಂಜಿನ್ ಅನ್ನು ಬಳಸಬಹುದು. ಐಸಿಇ ಡ್ರೈರೆಕ್ಟ್ ಮೋಡ್ ಕೇವಲ ಡೀಸೆಲ್ ಎಂಜಿನ್‍ ಪವರ್ ಅನ್ನು ಬಳಸುತ್ತದೆ. ಬ್ಯಾಟರಿ - ಎಲೆಕ್ಟ್ರಿಕ್ ಮೋಡ್ ಡೀಸೆಲ್ ಎಂಜಿನ್ ಅನ್ನು ಆಫ್ ಮಾಡುತ್ತದೆ ಮತ್ತು ಬ್ಯಾಟರಿ ಪವರ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಶೀಘ್ರದಲ್ಲೇ ಬರಲಿದೆ ಮೊದಲ ಹೈಬ್ರಿಡ್ ಎಸ್ಕಾರ್ಟ್ಸ್ ಟ್ರ್ಯಾಕ್ಟರ್

ಪ್ಲಗ್-ಇನ್ ಮೋಡ್‍‍ನಲ್ಲಿ ವಾಲ್ ಸಾಕೆಟ್‍ನ ಮೂಲಕ ವಿದ್ಯುತ್ ಮೂಲದಿಂದ ಬ್ಯಾಟರಿಗಳನ್ನು ಜಾರ್ಜ್ ಮಾಡಬಹುದು. ಪ್ಲಗ್‍-ಇನ್ ಮೋಡ್‍‍ನೊಂದಿಗೆ ಬ್ಯಾಟರಿ ಜಾರ್ಜ್ ಆದ ಬಳಿಕ ಎಲೆಕ್ಟ್ರಿಕ್ ಮೋಡ್ ಅನ್ನು ಬಳಸಿದ್ದರೆ, ಈ ಟ್ರಾಕ್ಟರ್ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಶೀಘ್ರದಲ್ಲೇ ಬರಲಿದೆ ಮೊದಲ ಹೈಬ್ರಿಡ್ ಎಸ್ಕಾರ್ಟ್ಸ್ ಟ್ರ್ಯಾಕ್ಟರ್

ಎಸ್ಕಾರ್ಟ್ಸ್ ಕಂಪನಿ ಪ್ರದರ್ಶಿಸಿದ ಇನ್ನೂಂಡು ಟ್ರಾಕ್ಟರ್ ಬ್ಲಾಕ್‍‍ಹೋ ಲೋಡರ್ ಕೂಡ ಇದೇ ರೀತಿಯ ಡ್ರೈವ್ ಮೋಡ್‍‍ಗಳನ್ನು ಹೊಂದಿದ್ದು, ಆದರೆ ಕಡಿಮೆ ಪವರ್ ಮತ್ತು ಕ್ರಿಯಾತ್ಮಕತೆಯನ್ನು ಹೊಂದಿದೆ. ಎಸ್ಕೋರ್ಟ್ಸ್ ಹೈಬ್ರಿಡ್ ಬ್ಯಾಕ್‍‍ಹೋ ಲೋಡರ್ 50 ಎಚ್‍‍ಪಿ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ, ಇದನ್ನು ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್‍‍ನೊಂದಿಗೆ 75ಎ‍‍ಚ್‍‍ಪಿಗೆ ಹೆಚ್ಚಿಸಬಹುದು.

ಶೀಘ್ರದಲ್ಲೇ ಬರಲಿದೆ ಮೊದಲ ಹೈಬ್ರಿಡ್ ಎಸ್ಕಾರ್ಟ್ಸ್ ಟ್ರ್ಯಾಕ್ಟರ್

ಹೈಬ್ರಿಡ್ ಐಸಿಇ ಡೈರೆಕ್ಟ್-ಡ್ರೈವ್ ಮತ್ತು ಎಲೆಕ್ಟ್ರಿಕ್ ಎಕ್ಸ್ಕಾವೇಟರ್ ಎಂಬ ಮೂರು ಡೈವ್ ಮೋಡ್‍‍‍ಗಳನ್ನು ಒಳಗೊಂಡಿದೆ. ಹೈ‍‍ಬ್ರಿಡ್ ಮತ್ತು ಐ‍‍ಸಿಇ ಡೈರೆಕ್ಟ್-ಡ್ರೈವ್ ಮೋಡ್‍ಗಳು ಹೈಬ್ರಿಡ್ ಟ್ರ್ಯಾಕ್ಟರ್‍‍ನಂತೆಯೇ ಕಾರ್ಯನಿರ್ವಹಿಸುತ್ತದೆ. ಎಕ್ಸ್ಕ್ವೇಟರ್ ಮೋಡ್ ಬ್ಯಾಕ್‍‍ಹೋ ಲೋಡರ್ ಅನ್ನು ಎಲೆಕ್ಟ್ರಿಕ್ ಮೋಡ್‍‍ನಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಶೀಘ್ರದಲ್ಲೇ ಬರಲಿದೆ ಮೊದಲ ಹೈಬ್ರಿಡ್ ಎಸ್ಕಾರ್ಟ್ಸ್ ಟ್ರ್ಯಾಕ್ಟರ್

ಟ್ರ್ಯಾಕ್ಟರ್ ಮತ್ತು ಬ್ಯಾಕ್‍‍ಹೋ ಲೋಡರ್ ಪುನರುತ್ಪಾದಕ ಜಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದರ ಮೂಲಕ ನಿಷ್ಕ್ರೀಯಗೊಂಡಾಗ ಎಂಜಿನ್‍‍ನಿಂದ ಹೆಚ್ಚುವರಿ ಶಕ್ತಿಯು ಬ್ಯಾಟರಿ ಪ್ಯಾಕ್ ಅನ್ನು ಹೆಚ್ಚಿಸುತ್ತದೆ. ಇದೇ ಸಂದರ್ಭದಲ್ಲಿ ಕಂಪನಿಯು ರೈಡರ್ ವಾಹನವನ್ನು ಪ್ರದರ್ಶಿಸಿತು, ಇದು ಭಾರತದ ಮೊದಲ ಮಲ್ಟಿ-ಯುಟಿಲಿಟಿ ಗ್ರಾಮೀಣ ಸಾರಿಗೆ ವಾಹನ ಎಂದು ಹೇಳಿದೆ. ಇದು 750 ಕಿಲೋ ಗ್ರಾಂ ಅಷ್ಟು ಲೋಡ್ ಸಾಗಿಸುವ ಸಾಮರ್ಥ್ಯ ಮತ್ತು 4ಡಬ್ಲ್ಯುಡಿ ಡ್ರೈವ್‍‍ಟ್ರೇನ್ ಹೊಂದಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಶೀಘ್ರದಲ್ಲೇ ಬರಲಿದೆ ಮೊದಲ ಹೈಬ್ರಿಡ್ ಎಸ್ಕಾರ್ಟ್ಸ್ ಟ್ರ್ಯಾಕ್ಟರ್

ಕಮರ್ಷಿಯಲ್ ವಾಹನ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನಗಳನ್ನು ತರುವಲ್ಲಿ ಎಸ್ಕಾರ್ಟ್ಸ್ ಮುಂಚೂಣಿಯಲ್ಲಿದೆ. ಕಂಪನಿಯು ಭಾರತದ ಮೊದಲ ಹೈಬ್ರಿಡ್ ಟ್ರಾಕ್ಟರ್ ಮತ್ತು ಹೈಬ್ರಿಡ್ ಬ್ಯಾಕ್‌ಹೋ ಲೋಡರ್ ಅನ್ನು ಬಹಿರಂಗಪಡಿಸಿದೆ. ಈ ಹೈಬ್ರಿಡ್ ಫಾರ್ಮ್ ಮತ್ತು ನಿರ್ಮಾಣ ವಾಹನಗಳನ್ನು ಹೆವಿ ಡ್ಯೂಟಿ ಕೆಲಸಕ್ಕೆ ಬಳಸಬಹುದು, ಮತ್ತು ಇನ್ನೂ ಇದು ಪರಿಸರ ಸ್ನೇಹಿಯಾಗಿರುತ್ತದೆ.

Most Read Articles

Kannada
English summary
Escorts Reveals India’s First Hybrid Tractor & Backhoe Loader With Pure Electric Mode -Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X