ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

2030ರ ವೇಳೆಗೆ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ಇದಕ್ಕೆ ಪ್ರಮುಖ ವಾಹನ ಉತ್ಪಾದಕರು ಸಹ ಸ್ಪಂದಿಸುತ್ತಿರುವುದು ಹೊಸ ಮುನ್ನುಡಿಗೆ ಕಾರಣವಾಗಿದೆ.

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಉತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ ಎಲ್ಲಾ ಆಟೋ ಉತ್ಪಾದಕರು ಬೃಹತ್ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಮಧ್ಯೆ ಎಲೆಕ್ಟ್ರಿಕ್ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದೆ. ಇದು ಇವಿ ವಾಹನಗಳ ಉತ್ಪಾದನೆಗೆ ಮತ್ತಷ್ಟು ಬಲ ತುಂಬಲಿದ್ದು, ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಉತ್ತೇಜಿಸಲು ಈ ಯೋಜನೆಯು ಭಾರೀ ಪ್ರಾಮುಖ್ಯತೆ ಪಡೆಯಲಿದೆ.

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಹೆಚ್ಚಿಸುವ ಸಂಬಂಧ ಕೇಂದ್ರ ಸರ್ಕಾರವು ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಸಂಸ್ಥೆಗಳಿಗೆ ಮತ್ತು ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ನೀಡುವ ಬಗ್ಗೆ ಸುಳಿವು ನೀಡಿದೆ.

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹಲವು ಅವಕಾಶಗಳಿದ್ದರೂ ಗ್ರಾಹಕರು ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಮೇಲೆಯೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಕೇಂದ್ರ ಸರ್ಕಾರವು ಚೀನಾ ಮೊರೆ ಹೋಗುತ್ತಿದೆ.

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಇದಕ್ಕೆ ಕಾರಣ, ದೇಶಾದ್ಯಂತ ಚಾರ್ಚಿಂಗ್ ಸ್ಟೇಷನ್‌ಗಳ ಕೊರತೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂತ ದುಬಾರಿಯಾಗಿರುವ ಎಲೆಕ್ಟ್ರಿಕ್ ಕಾರುಗಳ ಬೆಲೆಯಿಂದಾಗಿ ಗ್ರಾಹಕರು ಎಲೆಕ್ಟ್ರಿಕ್ ಕಾರುಗಳತ್ತ ಮುಖಮಾಡದಿರುವುದು ಭವಿಷ್ಯದ ಯೋಜನೆಗೆ ತುಸು ಹಿನ್ನಡೆ ಉಂಟಾಗುತ್ತಿದೆ ಎನ್ನಬಹುದು.

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

2020ರ ವೇಳೆಗೆ ಕನಿಷ್ಠ 25ರಷ್ಟು ಆದರೂ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟವಾಗುವಂತೆ ಮಾಡಬೇಕೆಂಬ ಕೇಂದ್ರ ಸರ್ಕಾರದ ಯೋಜನೆಯು ಸದ್ಯದ ಪರಿಸ್ಥಿತಿಯು ಅಸಾಧ್ಯ ಎನ್ನುವಂತೆ ಮಾಡುತ್ತಿದ್ದು, ಒಂದು ವೇಳೆ ಚೀನಾ ಸಂಸ್ಥೆಗಳು ಭಾರತದಲ್ಲಿ ಹೊಸ ಯೋಜನೆ ರೂಪಿಸಿದ್ದಲ್ಲಿ ಇದು ಕಷ್ಟದ ಯೋಜನೆಯಲ್ಲ.

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಪ್ರಸ್ತುತ ಭಾರತವು ಲೀಥಿಯಂ ಅಯಾನ್ ಬ್ಯಾಟರಿಗಳ ಆಮದಿಗಾಗಿ ಚೀನಾ, ಥೈವಾನ್, ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳನ್ನೇ ಹೆಚ್ಚು ಅವಲಂಭಿಸಿದ್ದು, 2017ರ ಅವಧಿಯಲ್ಲಿಯೇ ಬರೋಬ್ಬರಿ 150 ಮಿಲಿಯನ್ ಡಾಲರ್ ಮೊತ್ತದ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಆಮದು ಮಾಡಿಕೊಂಡಿತ್ತು.

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಇದು ಎಲೆಕ್ಟ್ರಿಕ್ ಕಾರುಗಳ ಬೆಲೆಯ ಹೆಚ್ಚಳಕ್ಕೆ ಮೂಲ ಕಾರಣವಾಗಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳಿಂತಲೂ ಹೆಚ್ಚಿನ ಬೆಲೆ ಹೊಂದಿರುವ ಹಿನ್ನೆಲೆಯಲ್ಲಿ ಇವಿ ಕಾರುಗಳ ಮಾರಾಟ ಪ್ರಕ್ರಿಯೆಯಲ್ಲಿ ಅಷ್ಟಾಗಿ ಮುನ್ನಡೆ ಕಂಡುಬರದಿರುವುದು ಇದೇ ಕಾರಣಕ್ಕೆ.

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಇದರಿಂದ ಕೇಂದ್ರ ಸರ್ಕಾರದ ಮೊರೆಹೊಗಿದ್ದ ಪ್ರಮುಖ ಆಟೋ ಉತ್ಪಾದಕ ಸಂಸ್ಥೆಗಳು ಸ್ಥಳೀಯವಾಗಿಯೇ ಲೀಥಿಯಂ ಅಯಾನ್ ಬ್ಯಾಟರಿಗಳ ಉತ್ಪಾದನೆ ಮಾಡುವತ್ತ ಗಮನಹರಿಸುವಂತೆ ಮನವಿ ಮಾಡಿದ್ದವು. ಇದರ ಫಲವಾಗಿ ದೇಶಿಯವಾಗಿಯೇ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಉತ್ಪಾದನೆ ಮಾಡುವ ಪ್ರಮುಖ ಯೋಜನೆಗೆ ಕೇಂದ್ರ ಸರ್ಕಾರವು ಚಾಲನೆ ನೀಡಿದೆ.

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಒಂದು ವೇಳೆ ಚೀನಾ ಪ್ರಮುಖ ಲೀಥಿಯಂ ಅಯಾನ್ ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ಹೊಸ ಘಟಕಗಳನ್ನು ನಿರ್ಮಾಣ ಮಾಡಿದ್ದಲ್ಲಿ ಬ್ಯಾಟರಿ ಬೆಲೆಗಳು ತಗ್ಗಲಿದ್ದು, ಆಮದು ಮಾಡಿಕೊಳ್ಳುವ ಬೆಲೆಯಲ್ಲೇ ಅತ್ಯುತ್ತಮ ಮೈಲೇಜ್ ರೇಂಜ್ ಬ್ಯಾಟರಿಗಳನ್ನು ಭಾರತದಲ್ಲೇ ಉತ್ಪಾದನೆ ಮಾಡಬಹುದಾಗಿದೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಜಪಾನ್ ಆಟೋ ದಿಗ್ಗಜ ಸಂಸ್ಥೆಯಾದ ಸುಜುಕಿ ಮೋಟಾರ್ಸ್ ಈಗಾಗಲೇ ಕೇಂದ್ರದ ಆಹ್ವಾನವನ್ನು ಸ್ವಿಕರಿಸುವ ಮೂಲಕ ರೂ. 1,700 ಕೋಟಿ ಬಂಡವಾಳದೊಂದಿಗೆ ಗುಜರಾತ್‌ನಲ್ಲಿ ಮೊದಲ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುತ್ತಿದೆ.

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಇನ್ನು ನೀತಿ ಆಯೋಗ ಶಿಫಾರಸ್ಸು ಅನ್ವಯ ಎಲೆಕ್ಟ್ರಿಕ್ ಕಾರುಗಳಿಗೆ ಗ್ರಿನ್ ನಂಬರ್ ಪ್ಲೆಟ್ ಜೊತೆಗೆ ಟೋಲ್ ಶುಲ್ಕದಲ್ಲಿ ವಿನಾಯ್ತಿ ಸೌಲಭ್ಯವನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರವು ಸದ್ಯದಲ್ಲೇ ತನ್ನ ನಿಲವು ವ್ಯಕ್ತಪಡಿಸಲಿದ್ದು, ಇದರ ಜೊತೆಗೆ ಮತ್ತಷ್ಟು ಹೊಸ ಆಫರ್‌ಗಳನ್ನು ನೀಡುವ ಬಗ್ಗೆ ಸುಳಿವು ನೀಡಿದೆ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ಭವಿಷ್ಯದ ಯೋಜನೆಗಳಿಗೆ ಮತ್ತೆ ಚೀನಾ ಮೊರೆ ಹೋದ ಕೇಂದ್ರ ಸರ್ಕಾರ..!

ಕೆಲವು ಬಲ್ಲ ಮೂಲಗಳ ಪ್ರಕಾರ, ಎಲೆಕ್ಟ್ರಿಕ್ ಕಾರು ಖರೀದಿಸುವ ಮಾಲೀಕರಿಗೆ 3 ವರ್ಷದ ತನಕ ದೇಶಾದ್ಯಂತ ಪಾರ್ಕಿಂಗ್ ಶುಲ್ಕ ವಿನಾಯ್ತಿ ಕೂಡಾ ನೀಡಲಿದ್ದು, ಎಲೆಕ್ಟ್ರಿಕ್ ಕಾರುಗಳ ಮುಖ್ಯ ತಾಂತ್ರಿಕ ಅಂಶವಾದ ಎಲೆಕ್ಟ್ರಿಕ್ ಬ್ಯಾಟರಿಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣವನ್ನು ತಗ್ಗಿಸಿರುವುದು ಇವಿ ಕಾರುಗಳ ಮೇಲಿನ ಬೆಲೆ ಇಳಿಕೆಗೆ ಸಹಕಾರಿಯಾಗುವುದರ ಜೊತೆಗೆ ಮಾರಾಟಕ್ಕೂ ಅನುಕೂಲವಾಗುತ್ತಿದೆ.

Most Read Articles

Kannada
English summary
India Invites Chinese Industries Participation, Investment In Its Plans To Expand EV Market. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X