#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

#10YearChallenge ಇದೀಗ ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಆಗುತ್ತಿದೆ. ಕೆೇವಲ ಚಿತ್ರರಂಗಕ್ಕೆ ಮಾತ್ರವಲ್ಲ ಪ್ರತಿಯೊಬ್ಬರು ಸಹ 10 ಇಯರ್ಸ್ ಚಾಲೆಂಜ್ ಸ್ವೀಕರಿಸುವ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಆಟೋ ಮೊಬೈಲ್ ಕ್ಷೇತ್ರದಲ್ಲೂ ಇದರ ಹವಾ ಶುರುವಾಗಿದ್ದು, 10 ವರ್ಷದ ಹಿಂದಿನ ಕಾರುಗಳು ಈ ಹೇಗಿವೆ ಎನ್ನುವ ಕುರಿತಾದ ಒಂದು ಇಂಟ್ರಸ್ಟಿಂಗ್ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಭಾರತೀಯ ಆಟೋ ಉದ್ಯಮವು ಕಳೆದ ಒಂದು ದಶಕಗಳ ಅವಧಿಯಲ್ಲಿ ಸಾಕಷ್ಟು ಬದಲಾವಣೆಗೊಂಡಿದೆ. ಈ ಹಿಂದೆ ಜನಪ್ರಿಯಗೊಂಡಿದ್ದ ಕೆಲವು ಕಾರು ಮಾದರಿಗಳು ಇಂದು ಮೂಲೆಗುಂಪಾಗಿದ್ದು, ಮತ್ತೆ ಕೆಲವು ಕಾರುಗಳು ಬಿಡುಗಡೆಗೊಂಡ ಮೊದಲ ದಿನದ ಬೇಡಿಕೆಯನ್ನು ಇದುವರೆಗೆ ಹಾಗೆಯೇ ಉಳಿಸಿಕೊಂಡುಬಂದಿವೆ. ಅಂತಹ ಪ್ರಮುಖ 10 ಕಾರುಗಳ ಬಗ್ಗೆ ನಿಮಗೆ ಇಲ್ಲಿ ಮಾಹಿತಿ ನೀಡಲಾಗಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಮಾರುತಿ ಸುಜುಕಿ ಸ್ವಿಫ್ಟ್

2005ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಂಡಿದ್ದ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರುಗಳು ಗ್ರಾಹಕರ ಹಾಟ್ ಫೆವರಿಟ್ ಅಂದ್ರೆ ತಪ್ಪಾಗುವುದಿಲ್ಲ. ಬಿಡುಗಡೆಯಾಗಿ 14 ವರ್ಷವಾದ್ರು ಇದುವರೆಗೂ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಸ್ವಿಫ್ಟ್ ಕಾರು ಕಳೆದ ವರ್ಷವಷ್ಟೇ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆಯಾಗಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸ್ವಿಫ್ಟ್ ಕಾರು ಮಾದರಿಯು ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಯ್ದುಕೊಳ್ಳುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಹ್ಯುಂಡೈ ಸ್ಯಾಂಟ್ರೋ

ಸ್ಯಾಂಟ್ರೋ ಕಾರು ಬಿಡುಗಡೆಗೊಂಡು 20 ವರ್ಷವಾದ್ರು ಇನ್ನು ಕೂಡಾ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿರುವ ಏಕೈಕ ಕಾರು ಮಾದರಿಯಾಗಿದ್ದು, ಇದೀಗ ಮಹತ್ತರ ಬದಲಾವಣೆಯೊಂದಿಗೆ ಮತ್ತೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿಶೇಷ ವಿನ್ಯಾಸಗಳನ್ನು ಹೊಂದಿರುವ ಸ್ಯಾಂಟ್ರೋ ಹೊಸ ಕಾರು ಎಂಟ್ರಿ ಲೆವಲ್ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಹಳೆಯ ಸ್ಯಾಂಟ್ರೋ ಕಾರಿಗೂ ಮತ್ತು ಹೊಸ ಸ್ಯಾಂಟ್ರೋ‌ ಕಾರಿಗೂ ಸಾಕಷ್ಟು ಭಿನ್ನತೆಯಿದ್ದು, ಹೊಸ ಕಾರಿನ ಹೊರ ಮತ್ತು ಒಳ ಭಾಗದ ಡಿಸೈನ್‌ನಲ್ಲಿ ಮಹತ್ವದ ಬದಲಾವಣೆ ಕಂಡಿರುವ ಹೊಸ ಸ್ಯಾಂಟ್ರೋ ಕಾರು ಹೊಚ್ಚ ಹೊಸ ಡಿಸೈನ್ ಪ್ರೇರಿತ ಕಾಸ್‌ಕ್ಯಾಡಿಂಗ್ ಬ್ಲ್ಯಾಕ್ ಗ್ರಿಲ್, ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್, ಸ್ಪೋರ್ಟಿ ಬಂಪರ್ ಪಡೆದುಕೊಂಡಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಮಾರುತಿ ಸುಜುಕಿ ಆಲ್ಟೋ

ದೇಶಿಯ ಮಾರುಕಟ್ಟೆಯಲ್ಲಿ ಈ ಹಿಂದೆ 1983ರಲ್ಲಿ ಬಿಡುಗಡೆಗೊಂಡಿದ್ದ ಆಲ್ಟೋ 800 ಕಾರುಗಳು ಭಾರೀ ಜನಪ್ರಿಯತೆಯೊಂದಿಗೆ ಆಟೋ ಉದ್ಯಮದಲ್ಲಿ ಇಂದಿಗೂ ಬೇಡಿಕೆಯ ಕಾರು ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಸದ್ಯ ಮಾರುಕಟ್ಟೆಯಲ್ಲಿ ಕಾರುಗಳ ಸುರಕ್ಷಾ ವಿಚಾರದಲ್ಲಿ ಕಾರುಗಳ ಉತ್ಪಾದನೆಯಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಆಲ್ಟೋ ಕಾರುಗಳ ಮಾರಾಟಕ್ಕೆ ಕುತ್ತು ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಕಾರಿನ ವಿನ್ಯಾಸದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಗಳಿವೆ.

#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಹ್ಯುಂಡೈ ಐ20

ಪ್ಯಾರಿಸ್ ಮೋಟಾರ್ ಶೋನಲ್ಲಿ ಭಾಗಿಯಾದ ನಂತರ ಮೊದಲ ಬಾರಿಗೆ 2008ರಲ್ಲಿ ಭಾರತಕ್ಕೆ ಪ್ರವೇಶ ಪಡೆದಿರುವ ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ದಾಖಲೆಗಳನ್ನು ಸೃಷ್ಛಿಸಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಕಳೆದ ವರ್ಷವಷ್ಟೇ ಹ್ಯುಂಡೈ ಐ20 ಫೇಸ್‌ಲಿಫ್ಟ್ ಆವೃತ್ತಿಯು ಮರುಬಿಡುಗಡೆಯಾಗಿದ್ದು, ಸ್ಟೈಲಿಶ್ ಬಂಪರ್, ನ್ಯೂ ಅಲಾಯ್ ಚಕ್ರಗಳು, ದೊಡ್ಡದಾದ ಟೈಲ್‌ಲ್ಯಾಂಪ್, ನ್ಯೂ ಟೈಲ್‌ಗೇಟ್‌, ಹೊಸ ನಮೂನೆಯ ಇಂಟಿರಿಯರ್ ಮತ್ತು ಇನ್ಪೋಟೈನ್‍‌ಮೆಂಟ್ ಸೌಲಭ್ಯವು 2018ರ ಐ20 ಪ್ರಮುಖ ಅಂಶಗಳಾಗಿವೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

#10YearChallenge: ಹತ್ತು ವರ್ಷದ ಹಿಂದೆ ಈಗಿರುವ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಮಾರುತಿ ಸುಜುಕಿ ವ್ಯಾಗನ್ ಆರ್

1999ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಿದ್ದ ವ್ಯಾಗನ್ ಆರ್ ಕಾರುಗಳು ಮಧ್ಯಮ ವರ್ಗದ ಗ್ರಾಹಕ ಬಹುಬೇಡಿಕೆಯ ಕಾರು ಮಾದರಿಯಾಗಿದ್ದು, ಇದುವರೆಗೆ ಭಾರತದಲ್ಲಿ 22 ಲಕ್ಷ ವ್ಯಾಗನ್ ಆರ್ ಕಾರುಗಳು ಮಾರಾಟಗೊಂಡಿವೆ.

#10YearChallenge: ಹತ್ತು ವರ್ಷದ ಹಿಂದೆ ಈಗಿನ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

2010ರಲ್ಲಿ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬದಲಾವಣೆಗೊಂಡಿದ್ದ ವ್ಯಾಗನ್ ಆರ್ ಇದೀಗ ಮತ್ತೊಮ್ಮೆ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆಯಾಗುತ್ತಿದ್ದು, ಇದೇ ತಿಂಗಳು 23ರಂದು ಹೊಸ ವಿನ್ಯಾಸಗಳೊಂದಿಗೆ ರಸ್ತೆಗಿಳಿಯಲಿದೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

#10YearChallenge: ಹತ್ತು ವರ್ಷದ ಹಿಂದೆ ಈಗಿನ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಟಾಟಾ ನ್ಯಾನೋ

ಅಗ್ಗದ ಕಾರು ಎಂದೇ ಹೆಸರುಗಳಿಸಿದ್ದ ನ್ಯಾನೋ ಕಾರು ಸದ್ಯ ಮಾರುಕಟ್ಟೆಯಿಂದ ಮರೆಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದ್ದು, ನ್ಯಾನೋ ಮಾರಾಟದಲ್ಲಿ ದೀರ್ಘ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿನ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

2008ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿ ನ್ಯಾನೋ ಕಾರು ಕಾಣಿಸಿಕೊಂಡು 2009ರಲ್ಲಿ ವಿಶ್ವದ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ರತನ್ ಟಾಟಾರವರು ಭಾರತೀಯರಿಗೆ ಕೊಟ್ಟಿದ್ದ ಮಾತಿನಂತೆ 1 ಲಕ್ಷ ರೂಪಾಯಿಗೆ ನ್ಯಾನೋ ಕಾರನ್ನು ಗ್ರಾಹಕರಿಗೆ ನೀಡಿತ್ತು. ನ್ಯಾನೋ ಕಾರು ವಿಶ್ವದಲ್ಲಿಯೇ ಅಗ್ಗದ ಕಾರು ಎಂಬ ಹೆಸರು ಸಹ ಪಡೆದುಕೊಂಡಿದ್ದು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಸ್ಥಗಿತಗೊಳ್ಳಲಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿನ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಮಹೀಂದ್ರಾ ಸ್ಕಾರ್ಪಿಯೋ

ದೇಶದ ಕ್ರೀಡಾ ಬಳಕೆಯ ವಾಹನಗಳ ರಾಜ ಎಂದೇ ಪರಿಗಣಿಸಲ್ಪಟ್ಟಿರುವ ಮಹೀಂದ್ರ ಸ್ಕಾರ್ಪಿಯೋ ಕಾರುಗಳು 2002ರಲ್ಲೇ ಬಿಡುಗಡೆಗೊಂಡಿದ್ದು, ಇದುವರೆಗೂ ಎಸ್‌ಯುವಿ ಮಾರಾಟದಲ್ಲಿ ಭಾರೀ ಪ್ರಮಾಣದ ಮಾರಾಟ ದಾಖಲೆಯನ್ನು ಮಾಡಿದೆ. ಗ್ರಾಹಕರ ಬೇಡಿಕೆಯೆಂತೆ ವಿವಿಧ 9 ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಈ ಕಾರು ಆಫ್ ರೋಡ್‌ನಲ್ಲಿ ಹೆಚ್ಚು ಬಳಕೆಯಾಗುತ್ತಿದೆ.

MOST READ: ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿಗೆ ಹೊಸ ಹೆಸರು ನೀಡಿದ್ರೆ 2 ಕಾರು ಫ್ರೀ ಅಂತೆ..!

#10YearChallenge: ಹತ್ತು ವರ್ಷದ ಹಿಂದೆ ಈಗಿನ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಟೊಯೊಟೊ ಫಾರ್ಚೂನರ್

ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳಿಗೆ ವಿಶೇಷ ಬೇಡಿಕೆಯಿದ್ದು, ಎಸ್‌ಯುವಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಟೊಯೊಟಾ ನಿರ್ಮಾಣದ ಫಾರ್ಚೂನರ್ ಕಾರು ಹೊಸ ಟ್ರೆಂಡ್ ಸೃಷ್ಠಿಸಿದೆ ಎನ್ನಬಹುದು. 2009ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಫಾರ್ಚೂನರ್ ಎಸ್‌ಯುವಿ ಕಾರು ದುಬಾರಿ ಬೆಲೆ ಹೊಂದಿದ್ದರು ಸಹ ತನ್ನದೆ ಆದ ವಿಶಿಷ್ಟ ವಿನ್ಯಾಸಗಳಿಂದಾಗಿ ಆಫ್ ರೋಡ್ ವಿಭಾಗದಲ್ಲಿ ಭಾರೀ ಬೇಡಿಕೆ ಕಾಯ್ದುಕೊಂಡಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿನ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಹೋಂಡಾ ಸಿಟಿ

ಹೋಂಡಾ ಸಿಟಿ ಕಾರು, ಯಶಸ್ವಿ 20 ವರ್ಷಗಳ ಪಯಣವನ್ನು ಭಾರತದಲ್ಲಿ ಪೂರೈಸಿದೆ. ಹೋಂಡಾ ಸಿಟಿ ಕಾರನ್ನು ಮೊದಲ ಬಾರಿಗೆ ಭಾರತದಲ್ಲಿ 1998ರಲ್ಲಿ ಆರಂಭಿಸಲಾಯಿತು. ಸದ್ಯ ನಾಲ್ಕು ತಲೆಮಾರು ಅವತಾರವನ್ನು ಕಂಡಿರುವ ಸಿಟಿ ಭಾರತದಲ್ಲಿ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದೆ.

#10YearChallenge: ಹತ್ತು ವರ್ಷದ ಹಿಂದೆ ಈಗಿನ ಜನಪ್ರಿಯ ಕಾರುಗಳು ಹೇಗಿದ್ದವು ಗೊತ್ತಾ?

ಫೋರ್ಡ್ ಎಂಡೀವರ್

ಟೊಯೊಟಾ ಫಾರ್ಚೂನರ್ ಹಿಂದಿಕ್ಕುವ ಏಕೈಕ ಕಾರು ಮಾದರಿ ಅಂದ್ರೆ ಅದು ಫೋರ್ಡ್ ಎಂಡೀವರ್ ಮಾತ್ರ. ಯಾಕೇಂದ್ರೆ ಫಾರ್ಚೂನರ್ ಮಾದರಿಯಲ್ಲೇ ಎಲ್ಲಾ ಗುಣಲಕ್ಷಣಗಳನ್ನು ಹೊಂದುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಬಿಡುಗಡೆಯ ನೀರಿಕ್ಷೆಯಲ್ಲಿರುವ ಫೇಸ್‌ಲಿಫ್ಟ್ ಆವೃತ್ತಿಯು ಮತ್ತಷ್ಟು ಜನಪ್ರಿಯತೆ ಸಾಧಿಸುವ ತವಕದಲ್ಲಿದೆ.

Most Read Articles

Kannada
English summary
India's Most Popular Cars in 10 year challenge- Read in Kannada.
Story first published: Friday, January 18, 2019, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X