ಮಾರುಕಟ್ಟೆಯಿಂದ ಹೊರ ಬಂದರೂ ಸೇನೆಯಿಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಕೆಲ ದಿನಗಳ ಹಿಂದಷ್ಟೆ ಜನಪ್ರಿಯ ಓಮ್ನಿ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಮುಂದಿನ ಕೆಲವೇ ದಿನಗಳಲ್ಲಿ ಬಂದ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಜಿಪ್ಸಿ ಕಾರುಗಳಿಗೂ ಗುಡ್ ಬೈ ಹೇಳಿತ್ತು. ಆದರೆ ಅಕ್ಟೋಬರ್ 2018ರಂದು ಸ್ಥಗಿತಗೊಂಡಿದ್ದ ಜಿಪ್ಸಿ ಉತ್ಪಾದನೆಯು ಇದೀಗ ಮತ್ತೊಮ್ಮೆ ಶುರುವಾಗಲಿದ್ದು, ಇದಕ್ಕೆ ಕಾರಣ ಏನೆಂಬುದನ್ನು ತಿಳಿಯಲು ಮುಂದಕ್ಕೆ ಓದಿರಿ.

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಮಾರುತಿ ಸುಜುಕಿ ಜಿಪ್ಸಿ ಕಾರಿನಲ್ಲಿ ಸರಿಯಾದ ಸುರಕ್ಷಾ ಸಾಧನಗಳು ಇಲ್ಲವಾದ ಕಾರಣ ಮತ್ತು ಹೊರಸೂಸುವಿಕೆಯ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡ ಈ ಕಾರನ್ನು, ನಮ್ಮ ಸೇನೆಯು ಇಂದಿಗೂ ಬಳಸುತ್ತಿರುವುದಲ್ಲದೆಯೆ, ಇನ್ನು ಸಾವಿರಾರು ಜಿಪ್ಸಿ ಕಾರುಗಳನ್ನು ನಮಗೆ ಕಳುಹಿಸಿ ಕೊಡಿ ಎಂದು ಮಾರುತಿ ಸುಜುಕಿ ಸಂಸ್ಥೆಗೆ ಆರ್ಡರ್ ಮಾಡಲಾಗಿದೆ.

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಭಾರತೀಯ ಸೇನೆಯು 3,051 ಯೂನಿಟ್‍ನ ಜಿಪ್ಸಿ ಕಾರುಗಳು ಬೇಕೆಂದ್ರು ಮಾರುತಿ ಸುಜುಕಿ ಸಂಸ್ಥೆಗೆ ಆರ್ಡರ್ ನೀಡಲಾಗಿದ್ದು, ಸಂಸ್ಥೆಯು ಮತ್ತೊಮ್ಮೆ ಈ ಕಾರಿನ ಉತ್ಪಾದನೆಯನ್ನು ಶುರು ಮಾಡಲಿದೆ. ಈಗಾಗಲೇ ಟಾಟಾ ಮೋಟಾರ್ಸ್‍‍ನ ಸಫಾರಿ ಸ್ಟೋರ್ಮ್ ಕಾರುಗಳು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವುಗಳೊಂದಿಗೆ ಇನ್ನಷ್ಟು ಜಿಪ್ಸಿ ಕಾರುಗಳು ಬೇಕೆನ್ನಲಾಗಿದೆ.

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಜಿಪ್ಸಿ ಕಾರುಗಳೇ ಏಕೆ ಬೇಕು.?

ಟಾಟಾ ಮೋಟಾರ್ಸ್ ಸಂಸ್ಥೆಯು 3,192 ಯೂನಿಟ್ ಕಾರುಗಳಲ್ಲಿ ಶೇಕಡ 90ರಷ್ಟು ಟಾಟಾ ಸಫಾರಿ ಸ್ಟೋರ್ಮ್ ಕಾರುಗಳನ್ನು ಸೇನೆಗೆ ನೀಡಲಾಗಿದ್ದು, ಅವುಗಳಿರುವ ಗಾತ್ರಕ್ಕೆ ಕಿರಿದಾದ ರಸ್ತೆಗಳಲ್ಲಿ ಅವುಗಳು ತನ್ನ ಕಾರ್ಯವನ್ನು ನಿಭಾಯಿಸುವಲ್ಲಿ ಉತ್ತಮವಿಲ್ಲವಾದ ಕಾರಣ ಜಿಪ್ಸಿ ಕಾರುಗಳನ್ನು ಮತ್ತೊಮ್ಮೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಮತ್ತೊಂದು ಕಾರಣವೆಂದರೇ ಟಾಟಾ ಸಫಾರಿ ಸ್ಟೋರ್ಮ್ ಕಾರುಗಳು ಹಾರ್ಡ್‍‍ಟಾಪ್ ಕಾರುಗಳಾಗಿದ್ದು, ಮಾರುತಿ ಸುಜುಕಿ ಜಿಪ್ಸಿ ಕಾರುಗಳು ಮಾತ್ರ ಹಾರ್ಡ್‍‍ಟಾಪ್ ಮತ್ತು ಸಾಫ್ಟ್ ಟಾಪ್ ಎಂಬ ಆಯ್ಕೆಗಳಿವೆ. ಜಿಪ್ಸಿ ಕಾರುಗಳಲ್ಲಿ ಬಂದೂಕುಗಳನ್ನು ಇರಿಸಿಕೊಳ್ಳಲು ಮತ್ತು ತ್ವರಿತ ಪ್ರತಿಕ್ರಿಯೆಗಳಿಯೊಂದಿಗೆ ಸಂಪೂರ್ಣ ಶಸ್ತ್ರಸಜ್ಜಿತ ಸೈನಿಕರು ನಿಲ್ಲಬಹುದಾದ ಸೌಕರ್ಯಗಳು ಇದರಲ್ಲಿದೆ ಎಂದು ಅಧಿಕಾರುಯೊಬ್ಬರು ಹೇಳಿಕೊಂಡಿದ್ದಾರೆ.

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಒಂದು ಹೊಸ ಮಾದರಿಯನ್ನು ಪಡೆದುಕೊಳ್ಳುವ ಪ್ರಕ್ರಿಯೆಯು ಐದರಿಂದ ಆರು ವರ್ಷಗಳ ಸಮಯವನ್ನು ತೆಗೆದುಕೊಳ್ಳಲಿದ್ದು, ಆದ್ದರಿಂದ ಜಿಪ್ಸಿ ಅನ್ನು ತಕ್ಷಣದ ಅವಶ್ಯಕತೆಗಳನ್ನು ಪೂರೈಸಲು ಆಯ್ಕೆಮಾಡಲಾಗಿದೆ. ಸೈನೆಯು ಈ ವರ್ಗದಲ್ಲಿ 30,000 ವಾಹನಗಳನ್ನು ಬಳಸುತ್ತದೆ ಮತ್ತು ಹಳೆಯ ವಾಹನಗಳನ್ನು ಹಂತಗಳಲ್ಲಿ ನಿವೃತ್ತಿ ಮಾಡಲಾಗುತ್ತಿದೆ.

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಸದ್ಯಕ್ಕೆ ಸುಮಾರು 8,000 ವಾಹನಗಳ ಅವಶ್ಯಕತೆ ಇದೆ ಮತ್ತು ಸಫಾರಿ ಸ್ಟೋರ್ಮ್ ಮತ್ತು ಜಿಪ್ಸಿ ಕಾರುಗಳು ತಕ್ಷಣದ ಅವಶ್ಯಕತೆಗಳನ್ನು ಪೂರೈಸುತ್ತವೆ ಎಂದು ಹೇಳಲಾಗಿದ್ದು, 1991 ರಿಂದೀಚೆಗೆ ಜಿಪ್ಸಿ ಭಾರತೀಯ ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುತ್ತಿದೆ. ಹಾಗೆಯೆ ಇಲ್ಲಿಯ ವರೆಗೂ 35,000 ಕ್ಕಿಂತ ಹೆಚ್ಚು ಜಿಪ್ಸಿ ಕಾರುಗಳನ್ನು ಸೈನ್ಯಕ್ಕೆ ಮಾತ್ರ ವಿತರಿಸಲಾಗಿದೆ ಮಾರುತಿ ಸುಜುಕಿ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಮಾರುತಿ ಸುಜುಕಿ ಜಿಪ್ಸಿ ವಿಶೇಷತೆಗಳಿವು

ಮಾರುತಿ ಸುಜುಕಿ ಜಿಪ್ಸಿ ಕಾರು ಕೇವಲ ದೇಶಿಯವಾಗಿ ಮಾರ್ತವಲ್ಲದೇ ವಿದೇಶದ ಮಾರುಕಟ್ಟೆಯಲ್ಲಿಯು ಸಹ ಮಾರಾಟವಾಗುತ್ತಿತ್ತು. ವಿದೇಶದ ಮಾರುಕಟ್ಟೆಯಲ್ಲಿ ಸಮುರೈ ಅಥವಾ ಎಸ್‍ಜೆ410 ಎಂದು ಕರೆಯಲ್ಪಡುವ ಜಿಪ್ಸಿ ಕಾರುಗಳು ತಮ್ಮ ಆಫ್ ರೋಡಿಂಗ್‍ ಕೌಶಲ್ಯದಿಂದಲೇ ಹೆಸರುವಾಸಿಯಾದ ಕಾರನ್ನು ಇಂದಿಗೂ ಸಹ ಹಲವಾರು ರಾಜ್ಯಗಳಲ್ಲಿನ ಶಸ್ತ್ರ ಪಡೆಗಳು ಮತ್ತು ಪೊಲೀಸ್ ಪಡೆಗಳು ಬಳಸುತ್ತಿದ್ದಾರೆ.

MOST READ: ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಬಾಹ್ಯವಾಗಿ ಮಾರುತಿ ಸುಜುಕಿ ಸಂಸ್ಥೆಯು ಅನೇಕ ವರ್ಷಗಳ ವರೆಗು ಜಿಪ್ಸಿ ವಿನ್ಯಾಸದಲ್ಲಿ ಮಾರ್ಪಾಡುಗಳನ್ನು ಮಾಡಲಿಲ್ಲವಾದರೂ ಎಸ್‍ಯುವಿ ಪ್ರಿಯರಲ್ಲಿ ಪ್ರತ್ಯೇಕವಾದ ಸ್ಥಾನವನ್ನು ಪಡೆದುಕೊಂಡಿತ್ತು. ಆನಂತರ ಮಾರುತಿ ಸುಜುಕಿ ಸಂಸ್ಥೆಯು ಜಿಪ್ಸಿ ಕಾರಿನ ಎಂಜಿನ್ ಭಾಗವನ್ನು ಮಾತ್ರವೇ ನವೀಕರಣಗೊಳಿಸಿ ಅದಕ್ಕೆ ಜಿಪ್ಸಿ ಕಿಂಗ್ ಎಂದು ಹೆಸರಿಡಲಾಯಿತು.

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಜಿಪ್ಸಿ ಕಾರಿನಲ್ಲಿ ಮೊದಲ ಬಾರಿಗೆ ಮಾರುತಿ 1000 ಸೆಡಾನ್ ಕಾರಿನಿಂದ ಪಡೆದ 970ಸಿಸಿ, 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ನಂತರ ಅದನ್ನು 1.3 ಲೀಟರ್ ಏಂಜಿನ್ ಆಗಿ ಅಪ್ಗ್ರೇಡ್ ಮಾಡಲಾಗಿತ್ತು. ಈ 1.3 ಲೀಟರ್ ಪೆಟ್ರೋಲ್ ಎಂಜಿನ್ 80ಬಿಹೆಚ್‍ಪಿ ಮತ್ತು 104ಎನ್ಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿತ್ತು.

MOST READ: ದಿನಂಪ್ರತಿ ಲಿಫ್ಟ್ ಕೇಳುತ್ತಿದ್ದವನಿಗೆ ಅವನ ಸ್ನೇಹಿತರ ಗುಂಪು ಮಾಡಿದ್ದೇನು ಗೊತ್ತಾ?

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಜಿಪ್ಸಿ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲು ಕಾರಣ.?

ದೇಶದಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಹೀಗಾಗಿಯೇ ಜಿಪ್ಸಿ ವಾಹನಗಳಿಗೆ ಗುಡ್‌ಬೈ ಹೇಳಲು ನಿರ್ಧರಿಸುವ ಮಾರುತಿ ಸುಜುಕಿ ಸಂಸ್ಥೆಯು ಇನ್ನುಳಿದ ಕಾರು ಮಾದರಿಗಳಲ್ಲಿ ಹೆಚ್ಚಿನ ಗುಟ್ಟಮಟ್ಟ ಒದಗಿಸುವತ್ತ ಚಿಂತನೆ ನಡೆಸಿದ್ದು, ಇನ್ಮುಂದೆ ಜಿಪ್ಸಿ ಕಾರುಗಳು ಮಾರುಕಟ್ಟೆ ಇಂದ ಇತಿಹಾಸದ ಪುಟ ಸೇರಿದೆ.

Source: The New Indian Express

Most Read Articles

Kannada
English summary
Indian Army Ordered Thousands Of Maruti Suzuki Gypsy Suv's. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X