ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ದೇಶಿಯ ಕಾರು ಮಾರುಕಟ್ಟೆ

ಕಳೆದ ಕೆಲವು ದಿನಗಳಿಂದ ಭಾರತೀಯ ಆಟೋ ಮೊಬೈಲ್ ಉದ್ಯಮವು ಭಾರೀ ಪ್ರಮಾಣದ ಕುಸಿತವನ್ನು ಎದುರಿಸುತ್ತಿದೆ. ದ್ವಿಚಕ್ರ, ನಾಲ್ಕು ಚಕ್ರ ಹಾಗೂ ಕಮರ್ಷಿಯಲ್ ವಾಹನ ಸೇರಿದಂತೆ ಎಲ್ಲಾ ಸೆಗ್‍‍ಮೆಂಟ್‍‍ಗಳ ಮಾರಾಟ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ. ಇದರಿಂದಾಗಿ ಬಹುತೇಕ ಎಲ್ಲಾ ಕಂಪನಿಗಳು ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಿವೆ. ಎಲ್ಲಾ ಕಂಪನಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರುತಿ ಸುಜುಕಿ ಕಂಪನಿಯು ನಷ್ಟ ಅನುಭವಿಸಿದ್ದು, 2019ರ ಜೂನ್ ತಿಂಗಳಿನಲ್ಲಿ 17%ನಷ್ಟು ನಷ್ಟ ಉಂಟಾಗಿದೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ದೇಶಿಯ ಕಾರು ಮಾರುಕಟ್ಟೆ

ಮಾರುತಿ ಸುಜುಕಿ ಕಂಪನಿಯ ಮಾರಾಟದಲ್ಲಿನ ಕುಸಿತವು ದೇಶದ ಮಾರುಕಟ್ಟೆಯ ಮೇಲೆಯೂ ಸಹ ಪ್ರತಿಕೂಲ ಪರಿಣಾಮ ಬೀರಿದೆ. ಭಾರತೀಯ ವಾಹನ ಉದ್ಯಮದಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿರುವ ಮಾರುತಿ ಸುಜುಕಿ 2019-20ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಅವಧಿಯಲ್ಲಿ, ಮಾರುತಿ ಸುಜುಕಿಯ ಮಾರುಕಟ್ಟೆ ಷೇರುಗಳು 1.40%ನಷ್ಟು ಇಳಿದು 52.54% ರಿಂದ 51%ಗೆ ಕುಸಿದಿವೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ದೇಶಿಯ ಕಾರು ಮಾರುಕಟ್ಟೆ

2019ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 3.63 ಲಕ್ಷ ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಸುಮಾರು 95,000 ಯುನಿಟ್‌ಗಳಷ್ಟು ಕುಸಿತ ಅನುಭವಿಸಿದೆ. ಕಂಪನಿಯ ಕೆಲವು ಜನಪ್ರಿಯ ಮಾದರಿಗಳಾದ ಬಲೆನೊ, ಸ್ವಿಫ್ಟ್, ಡಿಜೈರ್, ಇಗ್ನಿಸ್, ಎರ್ಟಿಗಾ ಹಾಗೂ ವ್ಯಾಗನ್ ಆರ್ ವಾಹನಗಳ ಮಾರಾಟವೂ ಕಳೆದ ಕೆಲವು ತಿಂಗಳುಗಳಲ್ಲಿ ಗಣನೀಯವಾಗಿ ಕುಸಿದಿದೆ.

ಕಂಪನಿ ಮಾರುಕಟ್ಟೆಯಲ್ಲಿನ ಶೇರುಗಳು (ಏಪ್ರಿಲ್ - ಜೂನ್)

ವ್ಯತ್ಯಾಸ (%)
2019 2018
ಮಾರುತಿ ಸುಜುಕಿ 51% 52.54%

-1.55

ಹ್ಯುಂಡೈ 17.75%

15.70%

2.06

ಮಹೀಂದ್ರಾ 8.34%

6.93%

1.4

ಟಾಟಾ ಮೋಟಾರ್ಸ್ 5.90%

6.75%

-0.85

ಹೋಂಡಾ 4.63%

4.88%

-0.24

ಟೊಯೊಟಾ 4.61%

4.49%

0.12

ಫೋರ್ಡ್ 2.56%

2.86%

-0.3

ರೆನಾಲ್ಟ್ 2.47%

2.38%

0.09

ಫೋಕ್ಸ್ ವ್ಯಾಗನ್ 1%

1.05%

-0.05

ನಿಸ್ಸಾನ್/ದಟ್ಸನ್ 0.75%

1.21%

-0.46

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ದೇಶಿಯ ಕಾರು ಮಾರುಕಟ್ಟೆ

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ, ಕೊರಿಯಾ ಮೂಲದ ಹ್ಯುಂಡೈ ಸಹ 2019ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕುಸಿತ ಕಂಡಿದೆ. ಆದರೆ ಕ್ಯುಮುಲೇಟಿವ್ ಮಾರಾಟದಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ 2%ನಷ್ಟು ಅಧಿಕ ಪಾಲನ್ನು ಪಡೆದು, ಮಾರುಕಟ್ಟೆಯಲ್ಲಿನ ಶೇರನ್ನು 15.75% ನಿಂದ 17.70%ಕ್ಕೆ ಏರಿಸಿಕೊಂಡಿದೆ. ಮುಖ್ಯವಾಗಿ ಯುವಿ ಸೆಗ್‍‍ಮೆಂಟಿನಲ್ಲಿನ ಮಾರಾಟದಿಂದಾಗಿ ಹ್ಯುಂಡೈ ಕಂಪನಿಯ ಮಾರುಕಟ್ಟೆಯಲ್ಲಿನ ಶೇರಿನ ಪ್ರಮಾಣವು ಹೆಚ್ಚಳವಾಗಿದೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ದೇಶಿಯ ಕಾರು ಮಾರುಕಟ್ಟೆ

ಈ ಅವಧಿಯಲ್ಲಿ ಕ್ರೆಟಾ ಹಾಗೂ ಹೊಸದಾಗಿ ಬಿಡುಗಡೆಯಾದ ವೆನ್ಯೂವಿನ, 43,687 ಯುನಿಟ್‍‍ಗಳನ್ನು ಒಟ್ಟಾರೆಯಾಗಿ ಮಾರಾಟ ಮಾಡಲಾಗಿದೆ. ಇದರಿಂದಾಗಿ ಹ್ಯಾಚ್‌ಬ್ಯಾಕ್ ಹಾಗೂ ಕಾಂಪ್ಯಾಕ್ಟ್ ಸೆಡಾನ್ ಸೆಗ್‍‍ಮೆಂಟ್‍‍ನಲ್ಲಿ ಉಂಟಾದ ಕುಸಿತವನ್ನು ಸರಿದೂಗಿಸಲು ಹ್ಯುಂಡೈ ಕಂಪನಿಗೆ ಅನುಕೂಲವಾಯಿತು. ಈ ಎರಡೂ ಸೆಗ್‍‍ಮೆಂಟಿನಲ್ಲಿ ಈ ಅವಧಿಯಲ್ಲಿ 6%ರಷ್ಟು ಕುಸಿತ ಉಂಟಾಗಿದೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ದೇಶಿಯ ಕಾರು ಮಾರುಕಟ್ಟೆ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹ್ಯುಂಡೈನಂತೆಯೇ, ಭಾರತೀಯ ಮೂಲದ ಕಾರು ತಯಾರಕ ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಯು, ಸಹ ತನ್ನ ಮಾರುಕಟ್ಟೆಯ ಪಾಲನ್ನು ಸುಧಾರಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಮೂಲದ ಕಂಪನಿಯ ಮಾರುಕಟ್ಟೆ ಪಾಲು 2019ರ ಮೊದಲ ತೈಮಾಸಿಕದಲ್ಲಿ 6.93% ರಿಂದ 8.34% ಕ್ಕೆ ಏರಿಕೆಯಾಗಿದ್ದು, ಕಳೆದ ಬಾರಿಗಿಂತ 1.40%ನಷ್ಟು ಸುಧಾರಣೆಯಾಗಿದೆ. ಹ್ಯುಂಡೈ ಕಂಪನಿಯಂತೆಯೇ, ಮಹೀಂದ್ರಾ ಕಂಪನಿಯ ಸಹ ಹೆಚ್ಚಿನ ಶೇರ್ ಅನ್ನು ಕಾಂಪ್ಯಾಕ್ಟ್ ಹಾಗೂ ಎಸ್‌ಯುವಿ ಸೆಗ್‍‍ಮೆಂಟ್‍‍ಗಳಿಂದ ಪಡೆದಿದೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ದೇಶಿಯ ಕಾರು ಮಾರುಕಟ್ಟೆ

ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾದ ಎಕ್ಸ್‌ಯುವಿ 300 ವಾಹನದ ಯಶಸ್ಸಿನಿಂದಾಗಿ ಕಂಪನಿಯು ಹೆಚ್ಚಿನ ಪ್ರಮಾಣದ ಮಾರಾಟವನ್ನು ದಾಖಲಿಸಿದೆ. ಭಾರೀ ಪ್ರಮಾಣದಲ್ಲಿ ನಷ್ಟ ಅನುಭವಿಸಿದ ಮತ್ತೊಂದು ಕಂಪನಿಯೆಂದರೆ ಟಾಟಾ ಮೋಟಾರ್ಸ್. ಮಾರಾಟದಲ್ಲಿ ಬೆಳವಣಿಗೆಯನ್ನು ದಾಖಲಿಸುವಲ್ಲಿ ಕಂಪನಿಯು ವಿಫಲವಾಗಿದೆ, ಇದು ಅವರ ಮಾರುಕಟ್ಟೆ ಪಾಲಿನಲ್ಲೂ ಸ್ವಲ್ಪ ಕುಸಿತಕ್ಕೆ ಕಾರಣವಾಗಿದೆ. 2019ರ ಮೊದಲ ತ್ರೈಮಾಸಿಕದಲ್ಲಿ 0.85%ನಷ್ಟು ಕುಸಿತ ದಾಖಲಿಸಿದೆ.

ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ದೇಶಿಯ ಕಾರು ಮಾರುಕಟ್ಟೆ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಆಟೋಮೊಬೈಲ್ ಕಂಪನಿಗಳು ದೇಶೀಯ ಮಾರಾಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಸಿತವನ್ನು ಕಾಣುತ್ತಿವೆ. ಈ ಕುಸಿತವು ಹಬ್ಬದ ಋತುವಿನವರೆಗೂ ಮುಂದುವರಿಯುವ ಸಾಧ್ಯತೆಗಳಿವೆ. ಬಿಎಸ್6 ಮಾಲಿನ್ಯ ನಿಯಮಗಳು ಹಾಗೂ ಕ್ರ್ಯಾಶ್ ಟೆಸ್ಟ್ ನಿಯಮಗಳು ಕಡ್ಡಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿರುವ ಕಂಪನಿಗಳು ಈ ಎಲ್ಲಾ ಬದಲಾವಣೆಗಳನ್ನು ಹೇಗೆ ನಿಭಾಯಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Indian Car Market Shares 2019 — Hyundai & Mahindra Grow As Maruti Suzuki’s Shares Decline - Read in kannada
Story first published: Tuesday, July 16, 2019, 18:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X