15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಸದ್ಯದಲ್ಲೇ ಹೊಸ ನೀತಿ ಅಡಿ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳನ್ನು ಸ್ಕ್ರ್ಯಾಪ್‌ಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ದತೆ ನಡೆಸಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಹೌದು, ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಪರಿಣಾಮಕಾರಿಯಾಗಿ ತಡೆ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಸದ್ಯದಲ್ಲೇ ಸ್ವಯಂಚಾಲಿತ ಸ್ಕ್ರ್ಯಾರ್ಪಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಹೊಸ ನಿಯಮ ಜಾರಿಗೆ ಬಂದಲ್ಲಿ 15 ಮೇಲ್ಪಪ್ಟ ವಾಹನಗಳು ಗಣನೀಯ ಪ್ರಮಾಣದಲ್ಲಿ ತಗ್ಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು, ಹೊಸ ಯೋಜನೆಯು ಮಾಲಿನ್ಯ ತಡೆಗೆ ಸೂಕ್ತ ಮಾರ್ಗವಾಗಿದ್ದು, ಹಳೆಯ ಕಾರುಗಳನ್ನು ಸ್ಕ್ರ್ಯಾಪ್ ಮಾಡುವುದರಿಂದ ಆಟೋಮೊಬೈಲ್ ಉತ್ಪಾದನಾ ವೆಚ್ಚ ಕೂಡಾ ತಗ್ಗಲಿದೆ ಎಂದಿದ್ದಾರೆ. ಜೊತೆಗೆ ಸ್ಕ್ರ್ಯಾಪ್ ಪ್ರಕ್ರಿಯೆಯಿಂದ ಬಂದ ಬಿಡಿಭಾಗಗಳನ್ನು ಹೊಸ ಕಾರುಗಳ ತಯಾರಿಕೆಗೆ ಮರುಬಳಕೆ ಮಾಡಿಕೊಳ್ಳಬಹುದಾಗಿದ್ದು, ಈ ಮೂಲಕ ಕಾರುಗಳ ಬೆಲೆಯನ್ನು ಕೂಡಾ ತಗ್ಗಿಸಬಹುದೆಂದು ಎಂಬ ಸಲಹೆ ನೀಡಿದ್ದಾರೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಇದಲ್ಲದೇ ಹೊಸ ಯೋಜನೆಯು ಯಶಸ್ವಿಯಾದಲ್ಲಿ ಪರೋಕ್ಷವಾಗಿ ಸರ್ಕಾರಕ್ಕೆ ರೂ. 10 ಸಾವಿರ ಕೋಟಿ ಆದಾಯ ಕೂಡಾ ಹರಿದುಬರಲಿದ್ದು, ಕಾರುಗಳ ಉತ್ಪಾದನಾ ವೆಚ್ಚ ತಗ್ಗುವುದಲ್ಲದೇ ಕಾರಿನ ಬೆಲೆಗಳು ಕೂಡಾ ಕಡಿತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುವುದು ಸಚಿವ ನಿತಿನ್ ಗಡ್ಕರಿ ಅಭಿಪ್ರಾಯವಾಗಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಹೀಗಾಗಿ ಹೊಸ ನೀತಿ ಜಾರಿಯಾದಲ್ಲಿ ಸ್ಕ್ರ್ಯಾರ್ಪಿಂಗ್ ವಿಭಾಗಗಳಲ್ಲಿ ಕೂಡಾ ವಿಫುಲ ಉದ್ಯೋಗ ಅವಕಾಶಗಳು ಸೃಷ್ಠಿಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿರುವ ಮಾರುತಿ ಸುಜುಕಿ ಬಲೆನೊ(ಸೆಡಾನ್), ಮಾರುತಿ 800, ಹೋಂಡಾ ಸಿಟಿ ಟೈಪ್ 2 ವಿಟೆಕ್, ಫಿಯೆಟ್ ಫಾಲಿಯೋ ಎಸ್10 ಸೇರಿದಂತೆ ಹಲವಾರು ಮಾದರಿಯ ಕಾರುಗಳು ಸ್ಕ್ರ್ಯಾಪ್‌ಗೊಳ್ಳಲಿವೆ. ಇನ್ನು ಜಾರಿಗೆ ತರಲಾಗುತ್ತಿರುವ ವ್ಯಾಲೆಂಟರಿ ವೆಹಿಕಲ್ ಫ್ಲಿಟ್ ಮಾಡರ್ನೈಷನ್ ಪ್ರೋಗ್ರಾಂ (ವಿ-ವಿಎಂಪಿ) ಅಡಿ ದೇಶಾದ್ಯಂತ ಬರೋಬ್ಬರಿ 2.80 ಕೋಟಿ ಹಳೆಯ ಕಾರುಗಳು (2005ರ ಮಾರ್ಚ್ 31 ಮೊದಲು ಖರೀದಿ ಮಾಡಿದ) ಸ್ಕ್ರ್ಯಾರ್ಪಿಂಗ್‌ಗೊಳ್ಳಲಿವೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ಮೂಲಕವೇ ಶೇ. 65ರಷ್ಟು ಮಾಲಿನ್ಯ ಪ್ರಮಾಣವು ತಗ್ಗಲಿದೆ ಎನ್ನಲಾಗಿದ್ದು, ಇದಕ್ಕಾಗಿ ಬೇಕಾಗಿರುವ ಅಗತ್ಯ ನಿಯಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಸಿಎಂವಿಆರ್(ಸೆಂಟ್ರಲ್ ಮೋಟಾರ್ ವೆಹಿಕಲ್ ರೂಲ್ಸ್)ಗೆ ತಿದ್ದುಪಡಿ ತರಲಾಗುತ್ತಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಹೊಸ ಮೋಟಾರ್ ವೆಹಿಕಲ್ ರೂಲ್ಸ್‌ಗೆ ತಿದ್ದುಪಡಿ ತಂದಲ್ಲಿ 15 ವರ್ಷದ ಮೇಲ್ಪಟ್ಟ ವಾಹನಗಳು ಕ್ರಮೇಣ ತಗ್ಗಲಿದ್ದು, 2030ರ ವೇಳೆಗೆ ದೇಶಾದ್ಯಂತ ಶೇ.100ರಷ್ಟು ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಸಿಎನ್‌ಜಿ ವಾಹನಗಳನ್ನು ಮಾತ್ರವೇ ರಸ್ತೆಗಿಳಿಸುವ ಉದ್ದೇಶವನ್ನು ಹೊಂದಲಾಗಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಇನ್ನು ಕೆಲವು ಮಾಹಿತಿಗಳ ಪ್ರಕಾರ, ಸ್ಕ್ರ್ಯಾಪಿಂಗ್ ನೀತಿ ಅನುಷ್ಠಾನಕ್ಕೆ ಬರಲು ಸಾಧ್ಯವಾಗದೇ ಇದ್ದಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳ ಫಿಟ್‌ನೆಸ್ ಸರ್ಟಿಫಿಕೇಟ್ ಶುಲ್ಕವನ್ನು ಮತ್ತಷ್ಟು ದುಬಾರಿ ಮಾಡುವ ಪ್ರಸ್ತಾಪವನ್ನು ಸಹ ಸೂಚಿಸಲಾಗಿದೆ ಎನ್ನಲಾಗುತ್ತಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಒಂದು ವೇಳೆ ಸ್ಕ್ರ್ಯಾರ್ಪಿಂಗ್ ಪ್ರಕ್ರಿಯು ಜಾರಿಗೆ ಬರದೇ ಇದ್ದರೂ ಸಹ ಫಿಟ್‌ನೆಸ್ ಸರ್ಟಿಫಿಕೇಟ್ ಶುಲ್ಕ ದುಬಾರಿಯಾಗುವುದು ಖಾಯಂ ಎನ್ನಲಾಗುತ್ತಿದ್ದು, ಪ್ರಸ್ತುತ ಜಾರಿಗೆಯಲ್ಲಿರುವ ಫಿಟ್‌ನೆಸ್ ಸರ್ಟಿಫಿಕೇಟ್ ಶುಲ್ಕವನ್ನು ರೂ.1,200 ರಿಂದ ರೂ.2 ಸಾವಿರಕ್ಕೆ ಹೆಚ್ಚಳ ಮಾಡುವ ಸುಳಿವು ನೀಡಲಾಗಿದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಇಲ್ಲದೇ ಫಿಟ್‌ನೆಸ್ ಸರ್ಟಿಫಿಕೇಟ್ ಕಾಲಾವಧಿಯನ್ನು 1 ವರ್ಷದಿಂದ 6 ತಿಂಗಳಿಗೆ ಇಳಿಕೆ ಮಾಡಲಾಗುತ್ತಿದ್ದು, 15 ವರ್ಷ ಮೇಲ್ಪಟ್ಟ ವಾಹನಗಳನ್ನು ಹೊಂದಿರುವ ಮಾಲೀಕರು ವರ್ಷಕ್ಕೆ ಎರಡು ಬಾರಿ ರೂ. 2 ಸಾವಿರದಂತೆ ಹಣ ಪಾವತಿಸಿ ಫಿಟ್‌ನೆಸ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕಾಗುತ್ತದೆ.

15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ಇದು ಹಳೆಯ ಕಾರುಗಳ ನಿರ್ವಹಣಾ ವೆಚ್ಚವನ್ನು ಹೆಚ್ಚಿಸಲಿದ್ದು, ಒಂದು ವೇಳೆ ದುಬಾರಿ ಹಣಪಾವತಿ ವೆಚ್ಚ ನಿರ್ವಹಣೆ ಮಾಡಬೇಕು ಇಲ್ಲವೇ ಹಳೆಯ ವಾಹನಗಳನ್ನ ನಿರ್ವಹಣೆ ಮಾಡಲು ಸಾಧ್ಯವಾಗದೇ ಸ್ವತಃ ವಾಹನ ಮಾಲೀಕರೇ ಗುಜುರಿ ಹಾಕಬೇಕಾದ ಪರಿಸ್ಥಿತಿ ಬಂದೊದಗುತ್ತದೆ ಎಂದು ಹೇಳಬಹುದು.

Most Read Articles

Kannada
English summary
Indian Government Proposes Scrapping Of Vehicles More Than 15 Years Old.
Story first published: Saturday, July 27, 2019, 19:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X