ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಕಳೆದ ತಿಂಗಳ ಹಿಂದಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಎಂಜಿ ಮೋಟಾರ್ ನಿರ್ಮಾಣದ ಹೆಕ್ಟರ್ ಎಸ್‌ಯುವಿ ಕಾರು ಬಿಡುಗಡೆಗೊಂಡಿದ್ದು, ಬುಕ್ಕಿಂಗ್ ಪ್ರಕಾರ ಇತ್ತೀಚೆಗಷ್ಟೇ ಹೊಸ ಕಾರಿನ ವಿತರಣೆಯನ್ನು ಶುರು ಮಾಡಲಾಗಿದೆ. ಹೀಗಾಗಿ ಹೊಸ ಕಾರನ್ನು ತಮ್ಮದಾಗಿಸಿಕೊಳ್ಳಲು ಸಾವಿರಾರು ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದು, ಮೊದಲ ಹಂತದಲ್ಲಿ ಕಾರು ಪಡೆದಿದ್ದ ಗ್ರಾಹಕರ ಆಗಲೇ ತನ್ನ ಹೊಸ ಕಾರುನ್ನು ಓಎಲ್ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದಾನೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಹೌದು, ಎಂಜಿ ಮೋಟಾರ್ ಸಂಸ್ಥೆಯ ಹೆಕ್ಟರ್ ಕಾರು ಮೊದಲ ಬಾರಿಗೆ ಮರುಮಾರಾಟಕ್ಕೆ ಲಭ್ಯವಾಗಿದ್ದು, ಕೇವಲ 100 ಕಿ.ಮಿ ರನ್ನಿಂಗ್ ಆಗಿರುವ ಕಾರನ್ನೇ ಓಎಲ್ಎಕ್ಸ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಆದ್ರೆ ಇಟ್ರಸ್ಟಿಂಗ್ ಸುದ್ದಿ ಅಂದ್ರೆ ಎಂಜಿ ಹೆಕ್ಟರ್ ಕಾರಿನ ಮೂಲ ಬೆಲೆಗಿಂತಲೂ ದುಬಾರಿ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರುನ್ನು ಮಾರಾಟ ಮಾಡಲಾಗುತ್ತಿದ್ದು, ಕಾರು ಮಾರಾಟಕ್ಕಿದೆ ತಿಳಿದ ಎಸ್‌ಯುವಿ ಪ್ರಿಯರಿಗೆ ಅದರ ಬೆಲೆಯನ್ನು ನೋಡಿಯೇ ಸುಮ್ಮನಾಗಿದ್ದಾರೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಯಾಕೆಂದ್ರೆ ಮಾರುಕಟ್ಟೆಯಲ್ಲಿ ಸದ್ಯ ಹೆಕ್ಟರ್ ಕಾರು ಆನ್ ರೋಡ್ ಬೆಲೆಗಳಿಗೆ ಅನುಗುಣವಾಗಿ ಆರಂಭಿಕ ಆವೃತ್ತಿಯು ರೂ. 15.21 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 21.19 ಲಕ್ಷ ಬೆಲೆ ಹೊಂದಿದೆ. ಆದ್ರೆ ಕೇರಳ ಮೂಲದ ವ್ಯಕ್ತಿಯೊಬ್ಬರು ತಾವು ಖರೀದಿ ಮಾಡಿದ ಹೆಕ್ಟರ್ ಕಾರನ್ನು ಬರೋಬ್ಬರಿ ರೂ.23 ಲಕ್ಷಕ್ಕೆ ಬೆಲೆ ನಿಗದಿಪಡಿಸಿದ್ದಾನೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಅಂದರೆ ಎಂಜಿ ಮೋಟಾರ್ ಸಂಸ್ಥೆಯು ನಿಗದಿಪಡಿಸಿದ ದರಕ್ಕಿಂತ ರೂ.3 ಲಕ್ಷ ಹೆಚ್ಚುವರಿ ಬೆಲೆ ನಿಗದಿಪಡಿಸಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್‌ಗೆ ಭಾರೀ ಪ್ರಮಾಣದ ಬೇಡಿಕೆ ಹರಿದು ಬಂದಿರುವುದರಿಂದ ಗ್ರಾಹಕರನ್ನು ಸೆಳೆಯಲು ಈ ರೀತಿಯಾಗಿ ಹೆಚ್ಚುವರಿ ನಿಗದಿ ಮಾಡಿರಬಹುದು ಎನ್ನಲಾಗಿದೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಇನ್ನು ಮಾರುಕಟ್ಟೆಯಲ್ಲಿ ಆಕರ್ಷಕ ಬೆಲೆಗಳೊಂದಿಗೆ ಬಿಡುಗಡೆಯಾಗಿರುವ ಎಂಜಿ ಹೆಕ್ಟರ್ ಕಾರು ಖರೀದಿಗೆ ಈಗಾಗಲೇ 30 ಸಾವಿರ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಮುಂದಿನ 8 ತಿಂಗಳ ಅವಧಿಗೆ ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಬಂದ್ ಮಾಡಲಾಗಿದೆ. ಇದರಿಂದ ಹೆಕ್ಟರ್ ಕಾರನ್ನು ಹೊಸದಾಗಿ ಖರೀದಿ ಮಾಡಬೇಕೆನ್ನುವ ಗ್ರಾಹಕರು ಮುಂದಿನ ಎಂಟು ತಿಂಗಳು ಕಾಯಬೇಕಾದ ಅನಿವಾರ್ಯತೆಗಳಿದ್ದು, ಇದೇ ಸಂದರ್ಭದಲ್ಲಿ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿರುವ ಕಾರು ಮಾಲೀಕರನು ಕೇವಲ 100 ಕಿ.ಮಿ ರನ್ನಿಂಗ್ ಆದ ಕಾರನ್ನು ಮಾರಾಟಕ್ಕಿಟ್ಟಿದ್ದಾನೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ಎಂಜಿನ್ ಸೌಲಭ್ಯವನ್ನು ಹೊತ್ತು ಬಂದಿರುವ ಹೆಕ್ಟರ್, ಪೆಟ್ರೋಲ್, ಡೀಸೆಲ್ ಮತ್ತು ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿರುವ ಹೊಸ ಕಾರು ಸ್ಟೈಲ್, ಸೂಪರ್, ಸ್ಮಾರ್ಟ್ ಮತ್ತು ಶಾರ್ಪ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಹೆಕ್ಟರ್ ಕಾರು ಖರೀದಿಗೆ ಲಭ್ಯವಿದ್ದು, ಪ್ರತಿ ವೆರಿಯೆಂಟ್‌ಗಳಲ್ಲೂ ಬೆಲೆಗೆ ಅನುಗುಣವಾಗಿ ವಿವಿಧ ಮಾದರಿಯ ತಾಂತ್ರಿಕ ಅಂಶಗಳನ್ನು ಜೋಡಿಸಲಾಗಿದೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಹೆಕ್ಟರ್ ಹೊಸ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಸದ್ಯಕ್ಕೆ ಬಿಎಸ್-4 ವೈಶಿಷ್ಟ್ಯತೆಗಳಿಗೆ ಅನುಗುಣವಾಗಿಯೇ ಹೊಸ ಎಂಜಿನ್ ಸೌಲಭ್ಯ ಹೊಂದಿರುವ ಹೆಕ್ಟರ್ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಬಿಎಸ್-6 ಎಂಜಿನ್‌ಗೆ ಉನ್ನತಿಕರಣ ಹೊಂದಲಿದ್ದು, ಸ್ಮಾಟ್ ಹೈಬ್ರಿಡ್ ತಂತ್ರಜ್ಞಾನವು ಮೈಲೇಜ್ ಪ್ರಮಾಣದಲ್ಲಿ ಶೇ.14ರಷ್ಟು ಹೆಚ್ಚಳಕ್ಕೆ ಕಾರಣವಾದರೆ ಶೇ.11 ರಷ್ಟು ಕಾರ್ಬನ್ ಹೊರಸೂಸುವ ಪ್ರಮಾಣವನ್ನು ತಗ್ಗಿಸಲಿದೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಜೊತೆಗೆ ಹೆಕ್ಟರ್ ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿದ್ದು, ಬ್ಲ್ಯಾಕ್ ಕಲರ್ ಥೀಮ್ ಇಂಟಿರಿಯರ್‌ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಪೋಟೈನ್‌ಮೆಂಟ್ ಕಂಟ್ರೋಲ್, ನೆವಿಗೇಷನ್ ನಿಯಂತ್ರಿಸಬಲ್ಲ 10.4-ಇಂಚಿನ ವರ್ಟಿಕಲ್ ಸ್ಟ್ರಾಕ್ಡ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೈ ನೀಡಲಾಗಿದೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಇದರಲ್ಲಿ ಐ ಸ್ಮಾರ್ಟ್ ಕನೆಕ್ವಿವಿಟಿ ಸೌಲಭ್ಯವು ಹೆಕ್ಟರ್ ಕಾರಿಗೆ ಮತ್ತಷ್ಟು ಮೆರಗು ತಂದಿರುವುದಲ್ಲದೇ ಕಾರಿಗೂ ಗರಿಷ್ಠ ಭದ್ರತೆ ಒದಗಿಸಲಿದ್ದು, ಪ್ಯಾಕೇಜ್ ಸೌಲಭ್ಯ ಹೊಂದಿರುವ ಐ ಸ್ಮಾರ್ಟ್ ಕನೆಕ್ಟಿವಿಟಿನಲ್ಲಿ ಧ್ವನಿ ಹಿಂಬಾಲಿಸುವಿಕೆ, ಲೈವ್ ವೆಹಿಕಲ್ ಟ್ರಾಕಿಂಗ್, ವೆಹಿಕಲ್ ಸ್ಟೆಟಸ್, ಜಿಯೋ ಫೆನ್ಸ್ ಸೇರಿದಂತೆ 50ಕ್ಕೂ ಹೆಚ್ಚು ಫೀಚರ್ಸ್ ಇದರಲ್ಲಿವೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಹಾಗೆಯೇ ಹೊಸ ಕಾರಿನಲ್ಲಿ ಆ್ಯಂಬಿಯೆಂಟ್ ಲೈಟ್ಸ್ (8 ಬಣ್ಣಗಳಲ್ಲಿ), ಲೆದರ್ ಅಪ್‌ಹೊಲಿಸ್ಟ್ರೈ( ಟಾಪ್ ಎಂಡ್ ಮಾಡೆಲ್‌ಗಳಲ್ಲಿ), 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕ ಸೀಟು, ಪನೊರೊಮಿಕ್ ಸನ್‌ರೂಫ್, ಟಿಲ್ಟ್ ಆ್ಯಂಡ್ ಟೆಲಿಸ್ಕೊಪಿಕ್ ಸ್ಟಿರಿಂಗ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಆಟೋ ಎಸಿ ಜೊತೆ ರಿಯರ್ ವೆಂಟ್ಸ್ , ಪ್ರೀಮಿಯಂ ಇನ್ಫಿನಿಟಿ ಸೌಂಡ್ ಸಿಸ್ಟಂ, ಫ್ರಂಟ್ ಆ್ಯಂಡ್ ರಿಯರ್ ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಅಂಡ್ರಾಯಿಡ್ ಆಡಿಯೋ, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯಗಳಿವೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ರಿಮೋಟ್ ಕೀ ಲೆಸ್ ಎಂಟ್ರಿ, ವೆಲ್‌ಕಮ್ ಲೈಟ್, ಹೈಟ್ ಅಡ್ಜೆಸ್ಟ್ ಹೆಡ್ ರೆಸ್ಟ್, ಫ್ರಂಟ್ ಮತ್ತು ರಿಯರ್ ಫಾಸ್ಟ್-ಚಾರ್ಜಿಂಗ್ ಪೋರ್ಟ್ಸ್, ಗ್ಲೋ ಬಾಕ್ಸ್, ಡ್ರೈವರ್ ಆರ್ಮ್ ರೆಸ್ಟ್, 60:40 ಅನುಪಾತದಲ್ಲಿ ಮಡಚಬಹುದಾದ ಹಿಂಬದಿ ಆಸನ, ಆಟೋ ಎಸಿ, ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯವು ಪ್ರತಿ ವೆರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೊಸ ಕಾರಿಗಿಂತಲೂ ದುಬಾರಿ ಬೆಲೆಗೆ ಓಎಲ್ಎಕ್ಸ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ಎಂಜಿ ಹೆಕ್ಟರ್ ಮಾರಾಟಕ್ಕಿಟ್ಟ ಭೂಪ..!

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಆರ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫಾಗರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ISOFIX ಚೈಲ್ಡ್-ಸೀಟ್ ಮೌಂಟ್ಸ್ ಸೌಲಭ್ಯ ನೀಡಲಾಗಿದೆ.

Source: OLX

Most Read Articles

Kannada
English summary
India’s first used MG Hector SUV: Driven only 100 Kms. Read in Kannada.
Story first published: Friday, July 26, 2019, 19:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X