ಇ-ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ ಕನ್ನಡಿಗರು..!

ಭಾರತದಲ್ಲಿ ಇತ್ತೀಚೆಗೆ ಮೋಟಾರ್‌ಸ್ಪೋರ್ಟ್ಸ್ ತ್ವರಿತಗತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದು, ದೇಶಾದ್ಯಂತ ನೂರಾರು ರೇಸಿಂಗ್ ಅಕಾಡೆಮಿಗಳಲ್ಲಿ ಪ್ರತಿವರ್ಷ ಸಾವಿರಾರು ಮೋಟಾರ್‌ಸ್ಪೋರ್ಟ್ಸ್ ಪ್ರತಿಭೆಗಳು ಹೊರ ಜಗತ್ತಿಗೆ ಪರಿಚಯಿಸುತ್ತಿವೆ. ಆದ್ರೆ ಕಲಿಕೆಗೆ ಬೇಕಿರುವ ಪ್ರಾಥಮಿಕ ಹಂತದ ತರಬೇತಿಗಳನ್ನು ಪಡೆಯುವುದು ಅಷ್ಟು ಸುಲಭ ಮಾತಲ್ಲ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲದ ವಿಚಾರ. ಯಾಕೆಂದ್ರೆ ಗಂಟೆಯ ಲೆಕ್ಕಾಚಾರದಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾದ ಮೋಟಾರ್‌ಸ್ಪೋರ್ಟ್ ಶಿಕ್ಷಣವು ಕೇವಲ ಉನ್ನತ ವರ್ಗದ ಜನರಿಗೆ ಮಾತ್ರ ಸೀಮಿತ ಅಂದ್ರೆ ತಪ್ಪಾಗುವುದಿಲ್ಲ.

ಇ-ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ ಕನ್ನಡಿಗರು..!

ಮೋಟಾರ್‌ಸ್ಪೋರ್ಟ್‌ ವಿಭಾಗದಲ್ಲಿ ಮಿಂಚುವುದು ಅಂದ್ರೆ ನಾವು ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ. ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದಕ್ಕೂ ಟ್ರ್ಯಾಕ್‌ನಲ್ಲಿ ವಾಹನಗಳನ್ನು ಚಾಲನೆ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿ ಇದೊಂದು ದುಬಾರಿ ಮಾದರಿಯ ತರಬೇತಿ ಎಂದೇ ಹೇಳಬಹುದಾಗಿದ್ದು, ವಿದೇಶಿಗಳಲ್ಲಿ ನೀಡಲಾಗುವ ಮೋಟಾರ್‌ಸ್ಪೋರ್ಟ್ ತರಬೇತಿಗಳನ್ನು ನಮ್ಮ ನೆಲದಲ್ಲೇ ಕೈ ಗೆಟುಕುವ ಬೆಲೆಗಳಲ್ಲಿ ನೀಡಬೇಕು ಎನ್ನುವ ಉದ್ದೇಶದಿಂದ ಕನ್ನಡಿಗರು ಕೂಡಾ ಹೊಸ ಪ್ರಯತ್ನ ಮಾಡಿರುವುದು ಇದೀಗ ಸಾಕಷ್ಟು ಚರ್ಚಗೆ ಕಾರಣವಾಗಿದೆ.

ಇ-ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ ಕನ್ನಡಿಗರು..!

ಟ್ರ್ಯಾಕ್‌ನಲ್ಲಿ ಮೋಟಾರ್‌ಸ್ಪೋರ್ಟ್ಸ್ ಕೈಗೊಳ್ಳುವುದಕ್ಕಾಗಿ ಸಾಮಾನ್ಯವಾಗಿ ಸಾಮರ್ಥ್ಯ, ಫಿಟ್ನೆಸ್, ಪ್ರತಿವರ್ತನ ಮತ್ತು ಸಿಮ್ಯುಲೇಶನ್ ವಿಭಾಗದಲ್ಲಿ ತರಬೇತಿಗಳನ್ನು ನೀಡಲಾಗುತ್ತೆ. ಇದರಲ್ಲಿ ಮುಖ್ಯ ತರಬೇತಿ ಅಂದ್ರೆ ಅದು ರೇಸಿಂಗ್ ಸಿಮ್ಯುಲೇಶನ್ ತರಬೇತಿ ತುಸು ದುಬಾರಿ ಎಂದೇ ಹೇಳಬಹುದು. ಈ ನಿಟ್ಟಿನಲ್ಲಿ ಭಾರತದಲ್ಲೇ ರೇಸಿಂಗ್ ಸಿಮ್ಯುಲೇಶನ್ ತೆರೆಯಬೇಕೆಂಬ ಮಹತ್ವದ ಯೋಜನೆಯೊಂದಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಬೆಂಗಳೂರು ಮೂಲದ ಸುಮುಖ್ ರಾವ್ ಮತ್ತು ದೀಪಕ್ ಚಿನ್ನಪ್ಪ ಎನ್ನುವವರು ಇನ್‌ರೇಸಿಂಗ್ ಸಿಮ್ಯುಲೇಟರ್ ಪರಿಚಯಿಸಿರುವುದು ಹಲವು ವಿಶೇಷತೆಗಳಿಂದ ಕೂಡಿದೆ.

ಇ-ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ ಕನ್ನಡಿಗರು..!

ದೇಶಿ ಮತ್ತು ವಿದೇಶಿ ನೆಲದಲ್ಲಿ ಸುಮಾರು 20 ವರ್ಷ ಕಾಲ ಮೋಟಾರ್‌ಸ್ಪೋರ್ಟ್ ಹಿನ್ನೆಲೆಯನ್ನು ಅರಿತಿರುವ ಸುಮುಖ್ ರಾವ್ ಅವರು ಭಾರತೀಯರ ಬೇಡಿಕೆಯನ್ನು ಅರಿತು ಹೊಸ ಯೋಜನೆ ರೂಪಿಸಿದ್ದು, ಮನೆಯಲ್ಲೇ ಕುಳಿತು ಟ್ರ್ಯಾಕ್ ಸಂಬಂಧಿಸಿ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾದ ಇನ್‌ರೇಸಿಂಗ್ ಸಿಮ್ಯುಲೇಟರ್ ಅಭಿವೃದ್ಧಿಗೊಳಿಸಿದ್ದಾರೆ. ಹಾಗೆಯೇ ದೀಪಕ್ ಚಿನ್ನಪ್ಪ ಕೂಡಾ ನಾಲ್ಕು ಬಾರಿ ನ್ಯಾಷನಲ್ ರೇಸಿಂಗ್ ಚಾಂಪಿಯನ್ ತಮ್ಮದಾಗಿಸಿಕೊಳ್ಳುವ ಮೂಲಕ ಎರಡು ಬಾರಿ ನ್ಯಾಷನಲ್ ಕಾರ್ಟಿಂಗ್ ಚಾಂಪಿಯನ್‌ಶಿಪ್ ತಮ್ಮದಾಗಿಸಿಕೊಂಡು ಮೋಟಾರ್‌ಸ್ಪೋರ್ಟ್ ತಮ್ಮದೇ ಆದ ಜನಪ್ರಿಯತೆ ಹೊಂದಿದ್ದಾರೆ.

ಇ-ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ ಕನ್ನಡಿಗರು..!

ಇಂತಹ ಬಹುಮುಖ ಪ್ರತಿಭೆಗಳಿಂದೂ ಭಾರತೀಯ ಮೋಟಾರ್‌ಸ್ಪೋರ್ಟ್ಸ್ ಉದಯೋಮ್ಮಖ ಪ್ರತಿಭೆಗಳಿಗೆ ಸಹಾಯಕಾರಿಯಾಗುವ ಇನ್‌ರೇಸಿಂಗ್ ಸಿಮ್ಯುಲೇಟರ್ ಅನ್ನು ಅಭಿವೃದ್ಧಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಟಿಜಿಲ್ ರಾವ್ ಅವರು ಇನ್‌ರೇಸಿಂಗ್ ಸಿಮ್ಯುಲೇಟರ್‌ನ ಮುಖ್ಯ ಚಾಲಕನಾಗಿ ಮುನ್ನಡೆಸಲಿದ್ದಾರೆ. 18 ವರ್ಷದೊಳಗಿನ ನ್ಯಾಷನಲ್ ರೇಸಿಂಗ್ ಚಾಂಪಿಯನ್ ಈಗಾಗಲೇ ಮಿಂಚಿರುವ ಟಿಜಿಲ್ ರಾವ್ ಅವರು ಸುಮುಖ್ ರಾವ್ ಪುತ್ರನಾಗಿದ್ದು, ಇನ್‌ರೇಸಿಂಗ್‌ನಲ್ಲೂ ಹೊಸ ಸಾಧನೆ ಮಾಡುವ ತವಕದಲ್ಲಿದ್ದಾರೆ.

ಇನ್‌ರೇಸಿಂಗ್ ಸಿಮ್ಯುಲೇಟರ್

ಭಾರತದಲ್ಲಿ ನಿರ್ಮಾಣವಾಗಿರುವ ಮೊದಲ ಇನ್‌ರೇಸಿಂಗ್ ಸಿಮ್ಯುಲೇಟರ್ ಇದಾಗಿದ್ದು, ಸುಮುಖ್ ರಾವ್ ಮತ್ತು ದೀಪಕ್ ಚಿನ್ನಪ್ಪ ಅವರ ಸಾರಥ್ಯದಲ್ಲಿ ಅಭಿವೃದ್ಧಿಗೊಂಡಿದೆ. ರೇಸಿಂಗ್ ತತ್ವದಡಿ ನಿರ್ಮಾಣವಾಗಿರುವ ಈ ಸಾಧನವು ವಿಶ್ವದರ್ಜೆಯ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ಇದು ಅನುಕೂಲಕರವಾಗಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಇನ್‌ರೇಸಿಂಗ್ ಸಿಮ್ಯುಲೇಟರ್‌ಗಳನ್ನು ಥ್ರಸ್ಟ್‌ಮಾಸ್ಟರ್, ಮ್ಯಾಡ್ ಕಾಟ್ಜ್, ಫನಾಟೆಕ್ ಮತ್ತು ಲಾಜಿಟೆಕ್ ಸೇರಿದಂತೆ ಹಲವು ಬಗೆಯ ಪೆಡಲ್, ಸ್ಟಿರಿಂಗ್ ಸೌಲಭ್ಯಗಳೊಂದಿಗೆ ಖದೀಸಬಹುದಾಗಿದ್ದು, ಟ್ರ್ಯಾಕ್‌ನಲ್ಲಿ ಸಿಗುವ ತರಬೇತಿ ಅನುಭವವು ನಿಮಗೆ ಮನೆಯಲ್ಲೇ ಸಿಗಲಿದೆ. ಈ ಕುರಿತು ಡ್ರೈವ್‌ಸ್ಪಾಕ್ ತಂಡ ಕೂಡಾ ಇನ್‌ರೇಸಿಂಗ್ ಸಿಮ್ಯುಲೇಟರ್‌ನ್ನು ಪರೀಕ್ಷಿಸಿದ್ದು, ಇದೊಂದು ಅತ್ಯುತ್ತಮ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ, ಯಾಕೆಂದ್ರೆ ಇದು ವಾಸ್ತವಿಕತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ನಮ್ಮನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿದೆ.

ಇನ್‌ರೇಸಿಂಗ್ ಭವಿಷ್ಯದ ಪ್ಲ್ಯಾನ್

ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಲು ಮತ್ತು ಭವಿಷ್ಯದ ವೃತ್ತಿಪರ ಇಸ್ಪೋರ್ಟ್ ಉತ್ತೇಜಿಸಲು ಇನ್‌ರೇಸಿಂಗ್ ಹಲವು ಯೋಜನೆಗಳನ್ನು ರೂಪಿಸಿದ್ದು, ಮುಂಬರುವ ದಿನಗಳಲ್ಲಿ ದೇಶದಾದ್ಯಂತ ಇ-ಸ್ಪೋರ್ಟ್ ರೇಸಿಂಗ್ ಲೀಗ್‌ಗಳನ್ನು ಆಯೋಜನೆ ಮಾಡುವ ಗುರಿಹೊಂದಿದೆ.

ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ ಕನ್ನಡಿಗರು..!

ಇನ್‌ರೇಸಿಂಗ್ ಪಾಲುದಾರರು

ಮೊಮೆಂಟಮ್ ಮೋಟಾರ್‌ರ್ಸ್ಪೋರ್ಟ್ಸ್: ಚೆನ್ನೈ ಮೂಲದ ವೃತ್ತಿಪರ ರೇಸಿಂಗ್ ತಂಡವಾಗಿರುವ ಇದು 2016 ರಿಂದ ಎಮ್ಆರ್‌ಎಫ್, ಎಂಎಂಎಸ್ಸಿ, ಎಫ್ಎಂಎಸ್ಸಿಐ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಶಿಪ್ ಅನ್ನು ಪ್ರಾರಂಭಿಸಿದ್ದು, ದೀಪಕ್ ಚಿನ್ನಪ್ಪ ಅವರೇ ಈ ತಂಡ ತರಬೇತಿದಾರರಾಗಿದ್ದಾರೆ. ಹಾಗೆಯೇ ಇದೇ ತಂಡವನ್ನು ಟಿಜಿಲ್ ರಾವ್ ಪ್ರತಿನಿಧಿಸುತ್ತಿದ್ದಾರೆ.

ವಿ ಫಿಟ್: ಇದೊಂದು ವೃತ್ತಿಪರ ಜಿಮ್ ತರಬೇತಿ ಸಂಸ್ಥೆಯಾಗಿದ್ದು, ಇದು ಇಡೀ ಋತುವಿನ ಉದ್ದಕ್ಕೂ ಟಿಜಿಲ್ ರಾವ್‌ಗೆ ತರಬೇತಿ ನೀಡುತ್ತದೆ.

ಲಾಜಿಟೆಕ್: ಸ್ಟೀರಿಂಗ್ ಚಕ್ರ ಮತ್ತು ಪಾದದ ಪೆಡಲ್‌ಗಳನ್ನು ಒಳಗೊಂಡಿರುವ ಗೇಮಿಂಗ್ ಕನ್ಸೋಲ್‌ಗಳನ್ನು ಒದಗಿಸಲು ಇನ್‌ರೇಸಿಂಗ್‌ನೊಂದಿಗೆ ಲಾಜಿಟೆಕ್ ಸಹಭಾಗಿತ್ವ ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ

ಆಸಕ್ತರು ಇನ್‌ರೇಸಿಂಗ್ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಇ-ಮೇಲ್ : [email protected]

ಫೇಸ್‌ಬುಕ್

ಇನ್ಸ್ಟಾಗ್ರಾಮ್

ಟ್ವಿಟರ್

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ ಕನ್ನಡಿಗರು..!

ಇನ್‌ರೇಸಿಂಗ್ ಕುರಿತಾಗಿ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಇ-ಸ್ಪೋರ್ಟ್ಸ್ ಮತ್ತು ಮೋಟಾರ್‌ರ್ಸ್ಪೋರ್ಟ್ಸ್ ಭವಿಷ್ಯದಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಳ್ಳುವ ಕ್ಷೇತ್ರಗಳಾಗಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿರುವ ಇನ್‌ರೇಸಿಂಗ್ ಸಂಸ್ಥೆಯು ವೃತ್ತಿಪರ ತರಬೇತಿದಾರರೊಂದಿಗೆ ಸಿಮ್ಯುಲೇಟರ್ ಆರಂಭಿಸಿರುವುದು ಮುಂಬರುವ ದಿನಗಳಲ್ಲಿ ಹೊಸ ಬದಲಾವಣೆಗಳಿಗೆ ಕಾರಣವಾಗಲಿದೆ.

Most Read Articles

Kannada
English summary
INRacing — India’s First Homogeneous Racing Simulator; A Must-Try For Motorsport Fanatics! Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X