ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

ಬಹುತೇಕ ಎಲ್ಲಾ ಕಂಪನಿಗಳು ಬಿ‍ಎಸ್ 6 ಎಂಜಿನ್ ವಾಹನಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿವೆ. ಬಿ‍ಎಸ್ 6 ಎಂಜಿನ್‍‍ಗೆ ಅಪ್‍‍ಗ್ರೇಡ್‍‍ಗೊಳ್ಳದ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.

ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

ಕೆಲ ದಿನಗಳ ಹಿಂದಷ್ಟೇ ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಸರಣಿಯಲ್ಲಿರುವ 500 ಸಿಸಿಯ ಬೈಕುಗಳನ್ನು ಬಿ‍ಎಸ್ 6 ಎಂಜಿನ್‍‍ಗೆ ಅಪ್‍‍ಡೇಟ್‍‍ಗೊಳಿಸಲು ಸಾಧ್ಯವಿಲ್ಲದ ಕಾರಣಕ್ಕೆ, ಆ ಬೈಕುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು.

ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

ದೇಶಿಯ ಮಾರುಕಟ್ಟೆಯಲ್ಲಿರುವ ಮತ್ತೊಂದು ಜನಪ್ರಿಯ ಕಂಪನಿಯಾದ ಇಸುಝು ಮೋಟಾರ್ಸ್ ಇಂಡಿಯಾ, ತನ್ನ ಸರಣಿಯಲ್ಲಿರುವ ಬಿಎಸ್ 4 ವಾಹನಗಳ ಉತ್ಪಾದನೆಯನ್ನು 2019ರ ಡಿಸೆಂಬರ್‍‍ನಿಂದ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

ಇಸುಝು ಕಂಪನಿಯು 2020ರ ಆರಂಭದಿಂದ ಬಿ‍ಎಸ್ 6 ವಾಹನಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ. ಇದರ ಜೊತೆಗೆ ಮಾದರಿಗಳ ಆಧಾರದ ಮೇಲೆ ವಾಹನಗಳ ಬೆಲೆಯನ್ನು ರೂ.4 ಲಕ್ಷದವರೆಗೆ ಏರಿಸಲಾಗುವುದೆಂದು ತಿಳಿಸಿದೆ.

ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

ಇಸುಝು ಕಂಪನಿಯ ಟಾಪ್ ಎಂಡ್ ಮಾದರಿಗಳಾದ ಡಿ ಮ್ಯಾಕ್ಸ್ ವಿ ಕ್ರಾಸ್ ಹಾಗೂ ಎಂಯು ಎಕ್ಸ್ ಎಸ್‍‍ಯುವಿಗಳ ಬೆಲೆಯನ್ನು ರೂ.3 ಲಕ್ಷದಿಂದ 4 ಲಕ್ಷಗಳವರೆಗೆ ಏರಿಸಲಾಗುವುದು. ಕಮರ್ಷಿಯಲ್ ಸರಣಿಯ ವಾಹನಗಳಾದ ಡಿ ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಹಾಗೂ ಡಿ ಮ್ಯಾಕ್ಸ್ ಎಸ್ ಕ್ಯಾಬ್‍‍ಗಳ ಬೆಲೆಯನ್ನು ರೂ.1 ಲಕ್ಷದಿಂದ ರೂ.1.50 ಲಕ್ಷದವರೆಗೆ ಏರಿಸಲಾಗುವುದೆಂದು ತಿಳಿದು ಬಂದಿದೆ.

ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

ಬೆಲೆ ಏರಿಕೆಯ ಬಗ್ಗೆ ಮಾತನಾಡಿದ, ಇಸುಝು ಮೋಟಾರ್ಸ್ ಇಂಡಿಯಾದ ವಕ್ತಾರರಾದ ಕ್ಯಾ. ಶಂಕರ್ ಶ್ರೀನಿವಾಸ್‍‍ರವರು, ಭಾರತದಲ್ಲಿ ವಾಹನಗಳನ್ನು ಖರೀದಿಸ ಬಯಸುವವರಲ್ಲಿ ಒಂದು ರೀತಿಯ ಅನಿಶ್ಚಿತತೆ ಉಂಟಾಗಿದೆ.

ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

2020ರ ಮಾರ್ಚ್ 31ಕ್ಕೆ ಮೊದಲು ಖರೀದಿಸಲಾಗುವ ಬಿ‍ಎಸ್ 4 ವಾಹನಗಳು ನಂತರವೂ ಮುಂದುವರೆಯಲಿವೆ. ಅಂದ ಹಾಗೆ ಬಿ‍ಎಸ್ 6 ಹೊಸ ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

ಬೆಲೆ ಏರಿಕೆಯ ಬಗ್ಗೆ ಇಸುಝು ತನ್ನ ಹೊಸ ಹಾಗೂ ಹಳೆಯ ಗ್ರಾಹಕರಿಗೆ ತಿಳಿಸಲು ಬಯಸುತ್ತದೆ. ಸೂಕ್ತವಾದ ವಾಹನ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ತನ್ನ ಗ್ರಾಹಕರನ್ನು ಕೋರುತ್ತದೆ. ಇಸುಝು ಯುಟಿಲಿಟಿ ವಾಹನ ಸರಣಿಗಳ ಮೇಲೆ ದೊರೆಯುವ ಪ್ರಯೋಜನಗಳನ್ನು ಪಡೆಯುವಂತೆ ಕೋರುತ್ತದೆ ಎಂದು ಹೇಳಿದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

ಎಂಜಿನ್ ನವೀಕರಣ ಹಾಗೂ ಮೆಕಾನಿಕಲ್ ಅಂಶಗಳಲ್ಲಿ ಬದಲಾವಣೆ ಮಾಡುತ್ತಿರುವ ಕಾರಣಕ್ಕೆ ಹಾಗೂ ಬಿಎಸ್ 6 ನವೀಕರಣಗಳಿಂದಾಗಿ ಈ ಬೆಲೆ ಏರಿಕೆಯನ್ನು ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಬೆಲೆ ಏರಿಕೆಯನ್ನು ತಪ್ಪಿಸಲಾಗುವುದಿಲ್ಲ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

ಡೀಸೆಲ್ ಮಾದರಿಯ ಕಾರುಗಳಲ್ಲಿ ಯೂರಿಯಾವನ್ನು ಒಳಗೊಂಡಿರುವ ನೀಲಿ ಟ್ಯಾಂಕ್ ಅನ್ನು ಅಳವಡಿಸುವ ಅಗತ್ಯವಿದೆ. ಇದರಿಂದಾಗಿ ಕಟ್ಟುನಿಟ್ಟಾದ ನಿಯಮಗಳನ್ನು ಪೂರೈಸಲು ವಾಯುಮಾಲಿನ್ಯವನ್ನು ಮತ್ತಷ್ಟು ಕಡಿಮೆ ಮಾಡಲು ಅನುಕೂಲವಾಗಲಿದೆ.

ಬಿ‍ಎಸ್ 6 ಕಾರುಗಳ ಬೆಲೆ ಏರಿಸಲಿದೆ ಇಸುಝು ಮೋಟಾರ್ಸ್

ಹೊಸ ಇಸುಝು ವಾಹನವನ್ನು ಖರೀದಿಸಲು ಬಯಸುವವರು, ಈಗ ಲಭ್ಯವಿರುವ ಪ್ರಯೋಜನಗಳನ್ನು ಪಡೆಯಬಹುದು. ಬಹುತೇಕ ಎಲ್ಲ ವಾಹನ ತಯಾರಕ ಕಂಪನಿಗಳು ಮುಂದಿನ ವರ್ಷದಿಂದ ಬಿಎಸ್ 6 ಎಂಜಿನ್ ವಾಹನಗಳನ್ನು ಹೊಂದಲಿವೆ. ಹೊಸ ಮಾಲಿನ್ಯ ನಿಯಮಗಳ ಅಳವಡಿಕೆಯ ಗಡುವನ್ನು 2020ರ ಮಾರ್ಚ್ 31ಕ್ಕೆ ನಿಗದಿಪಡಿಸಲಾಗಿದೆ.

Most Read Articles

Kannada
Read more on ಇಸುಝು isuzu
English summary
Isuzu To Hike Up To ₹ 4 Lakh - Read in Kannada
Story first published: Saturday, November 23, 2019, 13:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X