ದುಬಾರಿ ಬೆಲೆಯೊಂದಿಗೆ ಹೊಸ ಬದಲಾವಣೆ ಪಡೆದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಜಪಾನ್ ಆಟೋ ಉತ್ಪಾದನಾ ಸಂಸ್ಥೆಯಾದ ಇಸುಝು ಇಂಡಿಯಾ ತನ್ನ ಜನಪ್ರಿಯ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಆವೃತ್ತಿಯು ಮಹತ್ವದ ಬದಲಾವಣೆಗಳೊಂದಿಗೆ ಮುಂದಿನ ತಿಂಗಳು ಜೂನ್ ಅಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ದುಬಾರಿ ಬೆಲೆಯೊಂದಿಗೆ ಹೊಸ ಬದಲಾವಣೆ ಪಡೆದ ಇಸುಝು ಡಿ-ಮ್ಯಾಕ್ ವಿ-ಕ್ರಾಸ್

ಇಸುಝು ಸಂಸ್ಥೆಯು ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾರಾಟದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಹೊಸ ಆವೃತ್ತಿಯ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ. ಮಾಹಿತಿಗಳ ಪ್ರಕಾರ, ಹೊಸ ಪಿಕ್ ಅಪ್ ಟ್ರಕ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಬಿಡುಗಡೆಯಾಗಲಿದೆಯೆಂತೆ.

ದುಬಾರಿ ಬೆಲೆಯೊಂದಿಗೆ ಹೊಸ ಬದಲಾವಣೆ ಪಡೆದ ಇಸುಝು ಡಿ-ಮ್ಯಾಕ್ ವಿ-ಕ್ರಾಸ್

ಇನ್ನು ದೇಶಾದ್ಯಂತ 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಜಾರಿಗೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ವಾಹನ ಉತ್ಪನ್ನಗಳನ್ನು ಹೊಸ ನಿಯಮಗಳಿಗೆ ಅನುಗುಣವಾಗಿ ಉನ್ನತಿಕರಿಸುತ್ತಿವೆ.

ದುಬಾರಿ ಬೆಲೆಯೊಂದಿಗೆ ಹೊಸ ಬದಲಾವಣೆ ಪಡೆದ ಇಸುಝು ಡಿ-ಮ್ಯಾಕ್ ವಿ-ಕ್ರಾಸ್

ಇದೀಗ ಇಸುಝು ಕೂಡಾ ತನ್ನ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಮಾದರಿಯನ್ನು ಸಹ ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಳಿಸಿದ್ದು, ಹೊಸ ನಿಯಮ ಜಾರಿಯಿಂದಾಗಿ ವಾಹನ ಎಂಜಿನ್ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆಯಾಗಲಿದೆ.

ದುಬಾರಿ ಬೆಲೆಯೊಂದಿಗೆ ಹೊಸ ಬದಲಾವಣೆ ಪಡೆದ ಇಸುಝು ಡಿ-ಮ್ಯಾಕ್ ವಿ-ಕ್ರಾಸ್

ಇದರಿಂದ ಹೊಸ ವಾಹನಗಳಿಂದ ಉತ್ಪಾದನೆಯಾಗುವ ಮಾಲಿನ್ಯ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಲಿದ್ದು, ಈ ಮೂಲಕ ಮಾಲಿನ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಇದು ಪರಿಹಾರವಾಗಲಿದೆ. ಹೀಗಾಗಿ ಸುಪ್ರೀಂಕೋರ್ಟ್ ಆದೇಶದಂತೆ ಬಿಎಸ್-6 ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು, ಹೊಸ ನಿಯಮ ಪಾಲನೆ ಮಾಡದ ಕೆಲವು ವಾಹನಗಳನ್ನು ನಿಷೇಧಿಸಲು ಪಟ್ಟಿ ಸಿದ್ದತೆ ಮಾಡಿಕೊಂಡಿದೆ.

ದುಬಾರಿ ಬೆಲೆಯೊಂದಿಗೆ ಹೊಸ ಬದಲಾವಣೆ ಪಡೆದ ಇಸುಝು ಡಿ-ಮ್ಯಾಕ್ ವಿ-ಕ್ರಾಸ್

ಹೀಗಾಗಿ ಇಸುಝು ಸಂಸ್ಥೆಯು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಟ್ರಕ್ ಮಾದರಿಯನ್ನು ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ಮರುನಿರ್ಮಾಣ ಮಾಡಿರುವುದಲ್ಲದೇ ಗ್ರಾಹಕರಿಗೆ ಈ ಬಾರಿ ಹೊಸ ಎಂಜಿನ್ ಆಯ್ಕೆ ನೀಡುತ್ತಿದ್ದು, ಪ್ರಸ್ತತ ಮಾರುಕಟ್ಟೆಯಲ್ಲಿರುವ 2.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಹೊಸದಾಗಿ 1.9-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಅಭಿವೃದ್ಧಿಗೊಳಿಸಿದೆ.

ದುಬಾರಿ ಬೆಲೆಯೊಂದಿಗೆ ಹೊಸ ಬದಲಾವಣೆ ಪಡೆದ ಇಸುಝು ಡಿ-ಮ್ಯಾಕ್ ವಿ-ಕ್ರಾಸ್

ಇಷ್ಟು ದಿನಗಳ ಕಾಲ ಡಿ-ಮ್ಯಾಕ್ಸ್ ವಿ-ಕ್ರಾಸ್ 2.5-ಲೀಟರ್ ಡೀಸೆಲ್ ವರ್ಷನ್‌ನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದ ಇಸುಝು ಸಂಸ್ಥೆಯು ಇದೀಗ 1.9-ಲೀಟರ್ ಡೀಸೆಲ್ ಮೂಲಕ ಮತ್ತಷ್ಟು ಆಫ್-ರೋಡ್ ಪ್ರಿಯರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ದುಬಾರಿ ಬೆಲೆಯೊಂದಿಗೆ ಹೊಸ ಬದಲಾವಣೆ ಪಡೆದ ಇಸುಝು ಡಿ-ಮ್ಯಾಕ್ ವಿ-ಕ್ರಾಸ್

ಹಾಗೆಯೇ 2.5-ಲೀಟರ್ ಡಿ-ಮ್ಯಾಕ್ಸ್ ವಿ-ಕ್ರಾಸ್ ಹೈ ಎಂಡ್ ಮಾದರಿಯಲ್ಲಿ ಈ ಬಾರಿ 4X4 ಡ್ರೈವ್ ಸೌಲಭ್ಯವನ್ನು ಪರಿಚಯಿಸಲಾಗುತ್ತಿದ್ದು, ನವೀಕರಿಸಲಾದ ಬ್ಲ್ಯಾಕ್ ಡ್ಯುಯಲ್ ಟೋನ್ ಇಂಟಿರಿಯರ್, ಸೆಂಟರ್ ಕನ್ಸೊಲ್, ಡ್ಯಾಶ್‌ಬೋರ್ಡ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರಿಲ್, ಸ್ಪೋರ್ಟಿ ಮಾದರಿಯ ರಿಯರ್ ಬಂಪರ್ ಮತ್ತು ಟೈಲ್ ಲೈಟ್ ಪಡೆದುಕೊಳ್ಳಲಿದೆ.

ದುಬಾರಿ ಬೆಲೆಯೊಂದಿಗೆ ಹೊಸ ಬದಲಾವಣೆ ಪಡೆದ ಇಸುಝು ಡಿ-ಮ್ಯಾಕ್ ವಿ-ಕ್ರಾಸ್

ಇನ್ನು ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 6 ಏರ್‌ಬ್ಯಾಗ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳನ್ನು ನೀಡಲಾಗುತ್ತಿದ್ದು, ಬಿಎಸ್-6 ನಿಯಮ ಪಾಲನೆಯಿಂದಾಗಿ ಹೊಸ ಪಿಕ್ ಅಪ್ ಟ್ರಕ್ ಬೆಲೆಯಲ್ಲೂ ಕೂಡಾ ತುಸು ದುಬಾರಿ ಎನ್ನಿಸಲಿವೆ.

MOST READ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಖರೀದಿಸಿದ ಬೆಂಝ್ ದುಬಾರಿ ಕಾರಿನ ವಿಶೇಷತೆ ಏನು ಗೊತ್ತಾ?

ದುಬಾರಿ ಬೆಲೆಯೊಂದಿಗೆ ಹೊಸ ಬದಲಾವಣೆ ಪಡೆದ ಇಸುಝು ಡಿ-ಮ್ಯಾಕ್ ವಿ-ಕ್ರಾಸ್

ಮಾಲಿನ್ಯ ಪ್ರಮಾಣವನ್ನು ತಗ್ಗಿಸುವಲ್ಲಿ ಪರಿಣಾಮಕಾರಿ ಪಾತ್ರವಹಿಸುವ ಹೊಸ ಎಂಜಿನ್‌ಗಳ ಬೆಲೆಯು ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್‌ಗಳಿಂದ ರೂ.1.50 ಲಕ್ಷದಿಂದ ರೂ.2.50 ಲಕ್ಷದಷ್ಟು ದುಬಾರಿಯಾಗಲಿದ್ದು, ಡಿ-ಮ್ಯಾಕ್ಸ್ ವಿ-ಕ್ರಾಸ್ ಹೊಸ ಪಿಕ್ ಟ್ರಕ್ ಬೆಲೆ ಕೂಡಾ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 12.49 ಲಕ್ಷದಿಂದ ರೂ. 14 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ.

Most Read Articles

Kannada
Read more on ಇಸುಝು isuzu
English summary
Isuzu D-Max V-Cross Launch Details Revealed — Will Get Smaller Engine. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X