Just In
- 9 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
- 12 hrs ago
ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
Don't Miss!
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಂಧ್ರಪ್ರದೇಶದಲ್ಲಿ ಹೊಸ ಸೇವೆ ಆರಂಭಿಸಿದ ಇಸುಝು
ಇಸುಝು ಮೋಟಾರ್ಸ್ ಇಂಡಿಯಾ ತನ್ನ ಹೊಸ 3 ಎಸ್(ಸೇಲ್ಸ್. ಸರ್ವಿಸ್, ಸ್ಪೇರ್ಸ್) ಡೀಲರ್ಶಿಪ್ ಮಹಾವೀರ್ ಇಸುಝು ಅನ್ನು ಭೀಮಾವರಂ ಆಂಧ್ರಪ್ರದೇಶದಲ್ಲಿ ಬಿಡುಗಡೆ ಮಾಡಿರುವುದಾಗಿ ಪ್ರಕಟಿಸಿದೆ. ಹೊಸ ಡೀಲರ್ಗಳ ಮೂಲಕ ಕಂಪನಿಯ ಗ್ರಾಮೀಣ ನೇಟವರ್ಕ್ ವಿಸ್ತರಣೆಯ ಕಾರ್ಯತಂತ್ರದ ಭಾಗವಾಗಿದೆ.

ಇದೀಗ ಆರಂಭಿಸಿದ ಡೀಲರ್ಶಿಪ್ ರಾಜ್ಯದ ಮೂರು ಅಧಿಕೃತ ಡೀಲರ್ಶಿಪ್ ಅನ್ನು ಸೇರಿಸಲಾಗಿದೆ. ಇದರಲ್ಲಿ ವಿಶಾಖಪಟ್ಟಣಂ, ರಾಜಮಂಡ್ರಿ ಮತ್ತು ವಿಜಯವಾಡದಲ್ಲಿ ಆರಂಭಿಸಿದ್ದಾರೆ. ಇದೀಗ ತೆರೆದಿರುವ ಮಹಾವೀರ್ ಇದುಝು ಡೀಲರ್ಶೀಪ್ 7,500 ಚದರ ಅಡಿ ವಿಸ್ತೀರ್ಣದಲ್ಲಿದೆ ಮತ್ತು ಇದು ಭೀಮವರಂನ ಉಂಡಿ ರಸ್ತೆಯಲ್ಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಇಸುಝು ಮೋಟಾರ್ಸ್ ಇಂಡಿಯಾದ ಮಾರಾಟ ಮತ್ತು ಮಾರ್ಕೆಟಿಂಗ್ ಉಪಾಧ್ಯಕ್ಷ ತಕೇಶಿ ಹಿರಾನೊ, ಕಂಪನಿಯು ದೇಶಾದ್ಯಂತ ತನ್ನ ಡೀಲರ್ ಮತ್ತು ಸರ್ವಿಸ್ ಹೆಚ್ಚಿಸುವುದಾಗಿ ಹೇಳಿದರು.

ಆಂಧ್ರಪ್ರದೇಶವು ಭಾರತದ ಇಸುಝು ವಾಹನಗಳಿಗೆ ನೆಲೆಯಾಗಿದೆ, ಇದು ಕಂಪನಿಯ ಪ್ರಮುಖ ಬೆಳವಣಿಗೆಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಯಾವುದೇ ಡೀಲರ್ಗಾರರಲ್ಲಿ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುವ ಗುರಿಯನ್ನು ಹೊಂದಿರುವ ವಿವಿಧ ಹಂತದ ತರಬೇತಿ ಕಾರ್ಯಕ್ರಮಗಳಿಂದ ಇಸುಝು ಮಾರಾಟ ಮತ್ತು ಸರ್ವಿಸ್ಗೆ ಸಹಕಾರಿಯಾಗಲಿದೆ.

ಮಹಾವೀರ್ ಗ್ರೂಪ್ನೊಂದಿಗಿನ ಇಸುಝು ಅವರ ಸಂಬಂಧವು 2012ರಿಂದಲೇ ಇದೆ. ಕಂಪನಿಯು ಮಹಾವೀರ್ ಅವರನ್ನು ತಮ್ಮ ಕಡೆ ಸೇರಿವುದಕ್ಕೆ ಮತ್ತು ವರ್ಷಗಳಿಂದ ಅವರು ಮಾರಾಟ ಮತ್ತು ಸರ್ವಿಸ್ ಅದ್ಬುತ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿ ಹೇಳಿದೆ.

ಇಸುಝು ಭಾರತದಲ್ಲಿ ಡಿ-ಮಾಕ್ಸ್ ವಿ ಕ್ರಾಸ್ ಮತ್ತು ಎಂಯು-ಎಕ್ಸ್ ಮಾದರಿಗಳ ಕೊಡುಗೆ ನೀಡಿದ್ದಾರೆ. ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಗಳು 1898 ಸಿಸಿ ಮತ್ತು 2499 ಸಿಸಿ ನಡುವಿನ ಎಂಜಿನ್ ಸ್ಪೆಕ್ಸ್ ಅನ್ನು ಹೊಂದಿವೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ವಾಹನಕ್ಕೆ ಭಾರತದ ಎಕ್ಸ್ ಶೋರೂಂ ಪ್ರಕಾರ ಬೆಲೆಯು ರೂ.16.5 ಲಕ್ಷದಿಂದ ರೂ.19.99 ಲಕ್ಷಗಳಾಗಿದೆ.

ಭಾರತದಲ್ಲಿ ಲಭ್ಯವಿರುವ ಎಂಯು-ಎಕ್ಸ್ ಮಾದರಿಗಳು 3.0 ಲೀಟರ್ ಎಂಜಿನ್ ಹೊಂದಿದೆ. ಈ ಎಂಜಿನ್ 175 ಬಿಎಚ್ಪಿ ಪವರ್ ಮತ್ತು 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ವಾಹನವು ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಹೊಂದಿರಲಿದೆ. ಎಂಯು-ಎಕ್ಸ್ ವಾಹನಕ್ಕೆ ಭಾರತದ ಎಕ್ಸ್ ಶೋರೂಂ ಪ್ರಕಾರ ಈ ವಾಹನದ ಬೆಲೆಯು ರೂ.27.35 ಲಕ್ಷದಿಂದ ರೂ.29.32 ಲಕ್ಷಗಳಾಗಿವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇದರೊಂದಿಗೆ ಆಂಧ್ರಪ್ರದೇಶದ ಯಾವುದೇ ಅಧಿಕೃತ ಮಳಿಗೆಗಳಿಂದ ಖರೀದಿಸಿದ ಇಸುಝು ವಾಹನಗಳಿಗೆ ಮುಂದಿನ ವರ್ಷದ ಮಾರ್ಚ್ ವರೆಗೆ ಮೋಟಾರ್ ವಾಹನ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇಸುಝು ಭಾರತದಲ್ಲಿ ಡೀಲರ್ಗಳನ್ನು ಹೆಚ್ಚು ವಿಸ್ತರಿಸುತ್ತೀವೆ. ಎಸುಝು ಅದ್ಭುತ ಎಸ್ಯುವಿಗಳನ್ನು ಹೊಂದಿದೆ. ಆದರೆ ದೇಶದ ಅಗ್ರ ಗಣ್ಯ ವಾಹನ ತಯಾರಕರ ಪಟ್ಟಿಯಲ್ಲಿ ಸ್ಥಾನವನ್ನು ಹೊಂದಿಲ್ಲ. ಇದರಿಂದ ಇದೀಗ ಡೀಲರ್ಗಳನ್ನು ಹೆಚ್ಚಿಸುವ ಮೂಲಕ ಹೊಸ ತಂತ್ರವನ್ನು ಅನುಸರಿಸುತ್ತಿದ್ದಾರೆ.