ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಭಾರತದಲ್ಲಿ, ಆಮದು ಮಾಡಿಕೊಳ್ಳುವ ವಾಹನಗಳ ಸಂಖ್ಯೆಯು ಇತ್ತೀಚಿಗೆ ಸಾಕಷ್ಟು ಹೆಚ್ಚುತ್ತಿದೆ. ಆದರೆ, ದುಬಾರಿಯಾದ ಆಮದು ತೆರಿಗೆ ದರದಿಂದಾಗಿ, ಖರೀದಿದಾರರು ಬೇರೆ ದೇಶದಿಂದ ಆಮದು ಮಾಡಿಕೊಳ್ಳುವ ವಾಹನಗಳಲ್ಲಿ ಓಡಾಡಲು ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ.

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಆಮದು ತೆರಿಗೆಯನ್ನು ಪಾವತಿಸಿದ ನಂತರವೂ, ವಾಹನವನ್ನು ನೋಂದಾಯಿಸಲು ಹಾಗೂ ಅವುಗಳನ್ನು ರಸ್ತೆಗಿಳಿಸಲು ಖರೀದಿದಾರರು ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡುವುದರಿಂದ ತಪ್ಪಿಸಿಕೊಳ್ಳಲು, ಅನೇಕರು ತಮ್ಮ ವಾಹನಗಳನ್ನು ಬೇರೆ ರಾಜ್ಯಗಳಲ್ಲಿ ವಿಶೇಷವಾಗಿ ಹತ್ತಿರದ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಾಯಿಸಿಕೊಳ್ಳುತ್ತಾರೆ.

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಕೇಂದ್ರಾಡಳಿತ ಪ್ರದೇಶಗಳಲ್ಲಿ ತೆರಿಗೆಗಳು ರಾಜ್ಯಗಳಿಗಿಂತ ಕಡಿಮೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಆದರೆ ಜಾಗ್ವಾರ್ ಎಫ್-ಟೈಪ್ ಕನ್ವರ್ಟಿಬಲ್ ಕಾರಿನ ಮಾಲೀಕರು ಕಾರು ಖರೀದಿಸಿ ಹಲವು ದಿನಗಳು ಕಳೆದರೂ ಕಾರ್ ಅನ್ನು ರಿಜಿಸ್ಟರ್ ಮಾಡಿಸದೇ ಆ ಕಾರ್ ಅನ್ನು ಚಲಾಯಿಸುತ್ತಿದ್ದ ಘಟನೆಯೊಂದು ನಡೆದಿದೆ.

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಅಂದ ಹಾಗೆ ಈ ಘಟನೆಯು ಗುಜರಾತ್‍‍ನಲ್ಲಿ ನಡೆದಿದೆ. ಪ್ರತಿ ಬಾರಿಯಂತೆ ವಲ್ಸದ್ ಪೊಲೀಸರು ತಪಾಸಣೆ ನಡೆಸುತ್ತಿರುವಾಗ ಜಾಗ್ವಾರ್ ಎಫ್ ಟೈಪ್ ಕನ್ವರ್ಟಬಲ್ ಕಾರ್ ಅನ್ನು ತಡೆದಿದ್ದಾರೆ. ಈ ಕಾರು ಯಾವುದೇ ನಂಬರ್ ಪ್ಲೇಟ್ ಹೊಂದಿರಲಿಲ್ಲ.

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಇದರ ಜೊತೆಗೆ ಕಾರಿನ ರಿಜಿಸ್ಟ್ರೇಷನ್‍‍ಗೆ ಸಂಬಂಧಪಟ್ಟ ಯಾವುದೇ ದಾಖಲೆಗಳೂ ಸಹ ಇರಲಿಲ್ಲ. ಯಾವುದೇ ದಾಖಲೆಗಳು ಇರದ ಕಾರಣ ಪೊಲೀಸರು ಈ ಕಾರ್ ಅನ್ನು ವಶಕ್ಕೆ ಪಡೆದಿದ್ದಾರೆ. ದಾಖಲೆಗಳನ್ನು ನೀಡದ ಬಗ್ಗೆ ಡ್ರೈವರ್ ಸಮಂಜಸವಾದ ಉತ್ತರವನ್ನು ನೀಡಿಲ್ಲ.

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಈ ಕಾರನ್ನು ಅಹಮದಾಬಾದ್‌ನಿಂದ ಖರೀದಿಸಲಾಗಿದೆ ಎಂದು ವಾಹನದ ಮಾಲೀಕರು ತಿಳಿಸಿದ್ದಾರೆ. ಓಡೋಮೀಟರ್ ಪ್ರಕಾರ ಇದು ಕೇವಲ 490 ಕಿ.ಮೀ.ಗಳಷ್ಟು ಸಂಚರಿಸಿದೆ. ಇದರಿಂದ ಹೊಸದಾಗಿ ಖರೀದಿಸಿದ ಕಾರು ಎಂದು ತಿಳಿದು ಬರುತ್ತದೆ.

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಆದರೆ, ವಾಹನ ಎಷ್ಟು ಹಳೆಯದು ಎಂಬ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ವಾಹನವು ಕೆಲವೇ ದಿನಗಳು ಅಥವಾ ಕೆಲವು ವಾರಗಳಷ್ಟು ಹಳೆಯದಾಗಿದೆ ಎಂದು ಕಂಡು ಬರುತ್ತದೆ. ಪೊಲೀಸರು ಕಾರಿನ ಮಾಲೀಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಿದ್ದಾರೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಪೊಲೀಸರು ಪ್ರಸ್ತುತ ಆರ್‌ಟಿಒ ಜೊತೆಗೂಡಿ ಜಂಟಿಯಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಎಲ್ಲ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ವಾಹನವನ್ನು ರಿಜಿಸ್ಟ್ರೇಷನ್ ಮಾಡಲಾಗಿದೆಯೇ ಅಥವಾ ರಿಜಿಸ್ಟ್ರೇಷನ್ ಇಲ್ಲದೆ ಚಲಿಸುತ್ತಿದೆಯೇ ಎಂದು ತಿಳಿದು ಬಂದಿಲ್ಲ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಈ ಕಾರು ವಲ್ಸಾದ್‌ನ ಬಿಪಿನ್ ಪಟೇಲ್‌ಗೆ ಸೇರಿದ್ದು, ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿದಾಗ, ಅವರ ಮಗ ಮಾಯನ್ ಈ ಕಾರ್ ಅನ್ನು ಚಾಲನೆ ಮಾಡುತ್ತಿದ್ದರು. ಈ ಕಾರು ಪ್ರಸ್ತುತ ಪೊಲೀಸರ ಬಳಿಯಿದ್ದು, ಸೆಕ್ಷನ್ 207ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ಯಾವುದೇ ವಾಹನಗಳು ರಿಜಿಸ್ಟ್ರೇಶನ್ ಸಂಖ್ಯೆಯನ್ನು ಹೊಂದಿರಲೇಬೇಕು. ಈಗ ಶಾಶ್ವತ ನಂಬರ್ ಸೇರಿದಂತೆ ಕೆಲವು ರೀತಿಯ ನೋಂದಣಿ ಸಂಖ್ಯೆಗಳಿವೆ. ಇವುಗಳನ್ನು ಎಲ್ಲಾ ವಾಹನಗಳು ಪಡೆಯಬೇಕಾಗುತ್ತದೆ.

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಹೊಸ ಕಾರುಗಳು ಕೆಂಪು ಬಣ್ಣದಲ್ಲಿರುವ ವರ್ಗಾವಣೆ ಪ್ರಮಾಣಪತ್ರಗಳನ್ನು (ಟಿಸಿ) ಹೊಂದಿರುತ್ತವೆ. ಈ ರೀತಿಯ ನೋಂದಣಿಗಳನ್ನು ಗ್ರಾಹಕರು ಬಳಸಲು ಅನುಮತಿ ನೀಡಲಾಗುವುದಿಲ್ಲ. ಇವುಗಳನ್ನು ಡೀಲರ್‍‍ಗಳು ಮಾತ್ರ ಬಳಸಬೇಕಾಗುತ್ತದೆ. ಆದರೂ ಟಿಸಿ ಸಂಖ್ಯೆಯನ್ನು ಶಾಶ್ವತವಾಗಿ ಬಳಸುವ ಅನೇಕ ಕಾರುಗಳನ್ನು ಕಾಣಬಹುದು.

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ವಾಹನ ಖರೀದಿಸಿದಾಗ ಆರ್‌ಟಿಒ ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ನೀಡುತ್ತದೆ. ಇದನ್ನು ವಾಹನ ಮಾರಾಟದ ಒಂದು ತಿಂಗಳ ನಂತರ ಅಥವಾ ವಾಹನವು ಶಾಶ್ವತ ನೋಂದಣಿ ವಿವರಗಳನ್ನು ಪಡೆಯುವವರೆಗೆ ಬಳಸಬಹುದು.

ಸೀಜ್ ಆಯ್ತು ನಂಬರ್ ಪ್ಲೇಟ್ ಇಲ್ಲದ ಜಾಗ್ವಾರ್ ಸೂಪರ್ ಕಾರು

ಈ ಹಿಂದೆ, ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದವರು ನಕಲಿ ವಿಳಾಸಗಳನ್ನು ನೀಡಿ ತಮ್ಮ ವಾಹನಗಳನ್ನು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಿಜಿಸ್ಟರ್ ಮಾಡಿಸುತ್ತಿದ್ದರು. ಈ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ವಾಹನಗಳನ್ನು ವಶಪಡಿಸಿಕೊಂಡು, ಆ ವಾಹನಗಳ ಮಾಲೀಕರು ವಾಸಿಸುವ ಸ್ಥಳದಲ್ಲಿ ಅನ್ವಯವಾಗುವಂತಹ ಸಂಪೂರ್ಣ ರಿಜಿಸ್ಟ್ರೇಶನ್ ಟ್ಯಾಕ್ಸ್ ಪಾವತಿಸುವಂತೆ ಮಾಡಿದ್ದಾರೆ.

Source: Connect Gujarat TV/YouTube

Most Read Articles

Kannada
English summary
Jaguar F-Type seized for driving without number plate - Read in Kannada
Story first published: Tuesday, October 22, 2019, 15:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X