ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿರುವ ಜೀಪ್ ಕಂಪಾಸ್‌ನಲ್ಲಿ ಗ್ರಾಹಕರ ಬೇಡಿಕೆಯೆಂತೆ ಹೊಸ ಆವೃತ್ತಿಯೊಂದನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಮುಂಬರುವ ದೀಪಾವಳಿ ಹೊತ್ತಿಗೆ ಕಂಪಾಸ್ ಡೀಸೆಲ್ ಆರಂಭಿಕ ಆವೃತ್ತಿಗಳಲ್ಲೂ ಕೂಡಾ ಆಟೋಮ್ಯಾಟಿಕ್ ವರ್ಷನ್ ಹೊರತರುವ ಬಗ್ಗೆ ಜೀಪ್ ಸಂಸ್ಥೆಯು ಸುಳಿವು ನೀಡಿದೆ.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಸದ್ಯ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಮಹೀಂದ್ರಾ ಎಕ್ಸ್500 ಕಾರುಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಜೀಪ್ ಸಂಸ್ಥೆಯು ಕಂಪಾಸ್ ಎಸ್‌ಯುವಿ ಆಯ್ಕೆಯಲ್ಲಿ ಕೆಲವು ಬದಲಾವಣೆ ತರಲು ಯೋಜನೆ ರೂಪಿಸಿದ್ದು, ಈ ಹಿಂದೆ ಡೀಸೆಲ್ ಆವೃತ್ತಿಯ ಹೈ ಎಂಡ್ ಆವೃತ್ತಿಯಲ್ಲಿ ಮಾತ್ರವೇ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಿದ್ದ ಜೀಪ್ ಸಂಸ್ಥೆಯು ಈ ಬಾರಿ ಪೆಟ್ರೋಲ್ ಮಾದರಿಯಂತೆ ಆರಂಭಿಕವಾಗಿಯೇ ಡೀಸೆಲ್ ಮಾದರಿಗಳಲ್ಲೂ ಆಟೋಮ್ಯಾಟಿಕ್ ಸೌಲಭ್ಯವನ್ನು ನೀಡಲಿದೆ.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಇದರಿಂದ ಡೀಸೆಲ್ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಖರೀದಿ ಮಾಡಬೇಕೆಂಬ ಗ್ರಾಹಕರ ಆಯ್ಕೆಗೆ ಸಹಕಾರಿಯಾಗಲಿದ್ದು, ಆರಂಭಿಕ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಖರೀದಿಯ ಮೇಲೆ ಸುಮಾರು ರೂ. 4 ಲಕ್ಷ ಉಳಿತಾಯವಾಗಲಿದೆ ಎನ್ನಬಹುದು.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಇನ್ನು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಎಂಜಿ ಹೆಕ್ಟರ್ ಮಾದರಿಯು ಜೀಪ್ ಕಂಪಾಸ್‌ಗೆ ತೀವ್ರ ಪೈಪೋಟಿ ನೀಡುತ್ತಿದ್ದು, ಜೂನ್ ಅವಧಿಯ ಕಾರು ಮಾರಾಟದಲ್ಲಿ ಕಂಪಾಸ್ ಎಸ್‌ಯುವಿ ಮಾದರಿಯು ಭಾರೀ ಪ್ರಮಾಣದ ಹಿನ್ನಡೆ ಅನುಭವಿಸಿದೆ. ಇದಕ್ಕೆ ಪ್ರಮುಖ ಕಾರಣ ಎಂಜಿ ಹೆಕ್ಟರ್ ಆಕರ್ಷಕ ಬೆಲೆಗಳೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯು ಈ ಹಿಂದೆ 2017ರ ಜುಲೈನಲ್ಲಿ ಬಿಡುಗಡೆಗೊಂಡಾಗ ಪ್ರತಿ ತಿಂಗಳು ಸರಾಸರಿಯಾಗಿ 2,500 ಯುನಿಟ್ ಮಾರಾಟ ಪ್ರಮಾಣವನ್ನು ಕಾಯ್ದುಕೊಂಡು ಬಂದಿತ್ತು. ಆದರೆ 2019ರ ಆರಂಭದಿಂದ ತೀವ್ರ ಕುಸಿತ ಅನುಭವಿಸಿರುವ ಜೀಪ್ ಕಂಪಾಸ್ ಮಾದರಿಯು ಜೂನ್ ಅವಧಿಯಲ್ಲಿ ಅತಿ ಕನಿಷ್ಠ ಕಾರುಗಳು ಮಾರಾಟವಾಗಿವೆ. 2018ರ ಕೊನೆಯಲ್ಲಿ 2,500ರಿಂದ 2 ಸಾವಿರಕ್ಕೆ ಕುಸಿತ ಕಂಡಿದ್ದ ಜೀಪ್ ಮಾರಾಟವು ಇದೀಗ 791ಕ್ಕೆ ಕುಸಿದಿದೆ.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

2019ರ ಆರಂಭದಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್‌ನೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿದ್ದ ಜೀಪ್ ಕಂಪಾಸ್‌ ಮಾದರಿಗೆ ಇದೀಗ ಮತ್ತೊಂದು ಬಲಿಷ್ಠ ಕಾರು ಮಾದರಿಯಾದ ಎಂಜಿ ಹೆಕ್ಟರ್ ತೀವ್ರ ಪೈಪೋಟಿ ನೀಡುತ್ತಿದ್ದು, 2 ಸಾವಿರ ಇದ್ದ ಕಾರು ಮಾರಾಟವು 791ಕ್ಕೆ ನೆಲಕಚ್ಚಿದೆ. ಇದಕ್ಕೆ ಪ್ರಮುಖ ಕಾರಣವೇ ಅಗ್ಗದ ಬೆಲೆಗಳಲ್ಲಿ ರಸ್ತೆಗಿಳಿದಿರುವ ಎಂಜಿ ಹೆಕ್ಟರ್ ಎಸ್‌ಯುವಿ ಮಾದರಿಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಸದ್ಯ ಜೀಪ್ ಕಂಪಾಸ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಪೆಟ್ರೋಲ್ ಮಾದರಿಯು ರೂ. 15.65 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.21.68 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ಮಾದರಿಯು ಜೀಪ್ ಕಂಪಾಸ್ ಕಾರು 1,368 ಸಿಸಿ ಎಂಜಿನ್‌ನೊಂದಿಗೆ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ ಹಲವು ಆಧುನಿಕ ಡ್ರೈವ್ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಹಾಗೆಯೇ ಜೀಪ್ ಕಂಪಾಸ್‌ನಲ್ಲಿ ಡೀಸೆಲ್ ಎಂಜಿನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.62 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 27.06 ಲಕ್ಷ ಬೆಲೆ ಹೊಂದಿದ್ದು, 1,956ಸಿಸಿ ಎಂಜಿನ್‌ನೊಂದಿಗೆ 4x4 ಡ್ರೈವ್ ಟೆಕ್ನಾಲಜಿ ಸೇರಿದಂತೆ ಹಲವು ಹೊಸ ಆಧುನಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಜೀಪ್‌ಗೆ ತೀವ್ರ ಪೈಪೋಟಿಯಾಗಿರುವ ಎಂಜಿ ಹೆಕ್ಟರ್ ಮಾದರಿಯ ಕಂಪಾಸ್ ಕಾರಿನಂತೆಯೇ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಹೆಕ್ಟರ್ ಕಾರು ಕೂಡಾ ಪೆಟ್ರೋಲ್, ಡೀಸೆಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಹೆಕ್ಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಯು ಆರಂಭಿಕವಾಗಿ ರೂ. 12.18 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 16.78 ಲಕ್ಷ ಬೆಲೆ ಹೊಂದಿದ್ದರೆ, ಡೀಸೆಲ್ ಮಾದರಿಯು ಆರಂಭಿಕವಾಗಿ ರೂ. 13.18 ಲಕ್ಷಕ್ಕೆ ಮತ್ತು ಎಂಡ್ ಮಾದರಿಯು ರೂ. 16.88 ಲಕ್ಷ ಬೆಲೆ ಹೊಂದಿದೆ.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಜೀಪ್ ಕಂಪಾಸ್ ಮಾದರಿಯಲ್ಲೇ ಎಂಜಿ ಹೆಕ್ಟರ್ ಕೂಡಾ ಪೆಟ್ರೋಲ್ ಮಾದರಿಯು 1,451 ಸಿಸಿ ಎಂಜಿನ್ ಹೊಂದಿದ್ದರೆ ಡೀಸೆಲ್ ಮಾದರಿಯು 1,956-ಸಿಸಿ ಎಂಜಿನ್ ಹೊಂದಿದೆ. ಹೀಗಾಗಿ ಕಂಪಾಸ್‌ಗೆ ತಾಂತ್ರಿಕವಾಗಿ ಸರಿಸಮನಾಗಿರುವ ಹೆಕ್ಟರ್ ಕಾರು ಭರ್ಜರಿ ಪೈಪೋಟಿ ನೀಡುತ್ತಿದೆ. ಜೊತೆಗೆ ಹೆಕ್ಟರ್ ಪೆಟ್ರೋಲ್ ಮಾದರಿಯಲ್ಲಿ ಹೈಬ್ರಿಡ್ ವರ್ಷನ್ ಕೂಡಾ ಖರೀದಿ ಲಭ್ಯವಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಅಧಿಕ ಮೈಲೇಜ್ ನೀಡುತ್ತಿದೆ.

ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜೀಪ್ ಕಂಪಾಸ್ ಹೊಸ ಆವೃತ್ತಿ

ಇದರೊಂದಿಗೆ ಎಂಜಿ ಹೆಕ್ಟರ್ ಮತ್ತು ಟಾಟಾ ಹ್ಯಾರಿಯರ್‌ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಜೀಪ್ ಕಂಪಾಸ್ ಕಾರಿಗೆ ಮುಂಬರುವ ದಿನಗಳಲ್ಲಿ ಕಿಯಾ ಸೆಲ್ಟೊಸ್ ಕೂಡಾ ಮತ್ತಷ್ಟು ಪೈಪೋಟಿ ನೀಡುವ ನೀರಿಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಆರಂಭಿಕ ಡೀಸೆಲ್ ಆವೃತ್ತಿಗಳಲ್ಲೂ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ.

Source: autocarindia

Most Read Articles

Kannada
Read more on ಜೀಪ್ jeep
English summary
Jeep Compass diesel-AT to launch before Diwali.
Story first published: Tuesday, July 23, 2019, 11:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X