ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಜೀಪ್ ಕಂಪಾಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿರುವ ಕಾರಣ ಜೀಪ್ ಸಂಸ್ಥೆಯು ತಮ್ಮ ಕಂಪಾಸ್ ಎಸ್‍ಯುವಿ ಕಾರಿನ ಟ್ರೈಲ್‍ಹಾವ್ಕ್ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ. ಆಫ್ ರೋಡಿಂಗ್ ಗುಣವುಳ್ಳ ಈ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 26.8 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಲೆಕ್ಕ ಹಾಕಿದರೆ ಈ ಕಾರು ಸಾಧಾರಣ ಜೀಪ್ ಕಂಪಾಸ್ ಕಾರಿಗಿಂತಲೂ ದುಬಾರಿ ಬೆಲೆಯನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಬಿಡುಗಡೆಯಾದ ಹೊಸ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರು ಭಾರತ್ ಸ್ಟೇಜ್ 6 (BS-6) ನಿಯಮಾವಣಿಗಳ ಆನುಸಾರ 2 ಲೀಟರ್ ಮಲ್ಟಿಜೆಟ್ ಟರ್ಬೋ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 170 ಬಿಹೆಚ್‍ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಮತ್ತೊಂದು ವಿಶೇಷತೆ ಎನೆಂದರೆ ದೇಶಿಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಿಎಸ್-6 ಎಂಜಿನ್ ಪ್ರೇರಿತ ಕಾರು ಎಂದು ಹೇಳಲಾಗುತ್ತಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಐಷಾರಾಮಿ ಸೌಲಭ್ಯವನ್ನು ಹೊತ್ತು ಮಾರುಕಟ್ಟೆಗೆ ಎಂಟ್ರೀ ನೀಡಲಿರುವ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರಿನ ಖರೀದಿಗಾಗಿ ಆಸಕ್ತ ಗ್ರಾಹಕರು ದೇಶದಲ್ಲಿರುವ 82 ಶೋರುಂಗಳಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದ್ದು, ರೂ. 50,000 ನೀಡಬೇಕಿದೆ. ಈ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರಿನ ಮತ್ತೊಂದು ವಿಶೇಷವೆಂದರೇ ಇದು ನಮ್ಮ ದೇಶದಲ್ಲಿಯೇ ಉತ್ಪಾದನೆಯಾಗಿದ್ದು, ಭಾರತದ ರಸ್ತೆಗಳಿಗೆ ಮತ್ತು ಆಫ್ ರೋಡಿಂಗ್ ಕೌಶಲ್ಯವನ್ನು ಹೊಂದಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ವೇರಿಯೆಂಟ್ ಮಾದರಿಯು ದೇಶಿಯ ಮಾರುಕಟ್ಟೆಗಾಗಿ ವಿಶೇಷವಾಗಿ ಸಿದ್ದವಾಗಿದ್ದು, ಸಾಧಾರಣ ಕಂಪಾಸ್ ಕಾರುಗಳಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿರುವ ಟ್ರೈಲ್‍ಹಾವ್ಕ್ ಮಾದರಿಯು ಅಕ್ರಮಣಕಾರಿ ಬಂಪರ್, ಟೋ ಹುಕ್ಸ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, 17 ಇಂಚಿನ ವೀಲ್ಹ್ ಮತ್ತು ಪ್ಯಾನೊರಮಿಕ್ ಸನ್‍ರೂಫ್ ಅನ್ನು ಪಡೆದುಕೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಆರಂಭಿಕರಿಗಾಗಿ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರಿನಲ್ಲಿ ಮರು ವಿನ್ಯಾಸ ಮಾಡಲಾದ ಬಂಪರ್ ಅನ್ನು ನೀಡಲಾಗಿದ್ದು, ಇದು ಭಾರತೀ ರಸ್ತೆಗಳಲ್ಲಿ ಮತ್ತು ಆಫ್-ರೋಡಿಂಗ್ ಡ್ರೈವಿಂಗ್ ವೇಳೆ ಹೆಚ್ಚಾಗಿ ಸಹಕರಿಸುತ್ತೆ. ಇನ್ನು ಇದೇ ಮಾದರಿಯಾದ ವಿನ್ಯಾಸವನ್ನು ಕಾರಿನ ಹಿಂಭಾಗದಲ್ಲಿಯು ಸಹ ನೀಡಲಾಗಿದ್ದು, ಅಧಿಕವಾದ ಸಸ್ಪೆನ್ಷನ್ ಅನ್ನು ಒಳಗೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರಿನಲ್ಲಿ ಈ ಬಾರಿ ಸಾಧಾರಣ ಕಂಪಾಸ್ ಕಾರಿಗಿಂತಲೂ 20ಎಂಎಂ ಎತ್ತರದ ಸಸ್ಪೆನ್ಷನ್ ಅನ್ನು ನೀಡಲಾಗಿದ್ದು, ಆಪ್ ರೋಡಿಂಗ್‍ನಲ್ಲಿ ಉತ್ತಮ ವಾದ ಡ್ರೈವಿಂಗ್ ಅನ್ನು ಪಡೆಯಲು ತಾಂಟ್ರಿಕವಾದ ಬೇಷ್ ಪ್ಲೆಟ್ಸ್ ಮತ್ತು ಬಾನೆಟ್‍ನ ಮೇಲೆ ಬ್ಲಾಕ್ ಡೆಕಲ್ಸ್ ಅನ್ನು ನೀಡಲಾಗಿದೆ. ಈ ಕಾರಿನಲ್ಲಿ ರಾಕ್ ಮತ್ತು ಸ್ಯಾಂಡ್ ಎಂಬ 4 ವ್ಹೀಲ್ ಡ್ರೈವಿಂಗ್ ಮೋಡ್‍ಗಳನ್ನು ನೀಡಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಇದು ಕಡಿದಾದ ಏರಿಕೆಗಳಿಗೆ ಮಾತ್ರವಲ್ಲದೆ ಕಡಿದಾದ ಇಳಿಜಾರಿನ ಭಾರೀ ಎಂಜಿನ್ ಬ್ರೇಕಿಂಗ್‌ಗೆ ಇಳಿಯಲು ಸಹಾಯ ಮಾಡುತ್ತದೆ. ಕಂಪಾಸ್ ಹಿಲ್ ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಅನ್ನು ಆಲ್ ವೀಲ್ ಡ್ರೈವ್ ವ್ಯವಸ್ಥೆಯಲ್ಲಿ ನಿರ್ಮಿಸಿದೆ. ಎಸ್‌ಯುವಿಯ ಮತ್ತೊಂದು ಪ್ರಮುಖ ಯಾಂತ್ರಿಕ ಬದಲಾವಣೆಯು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಗಿದ್ದು, ಇದು ಟಾರ್ಕ್ ಪರಿವರ್ತಕ ಘಟಕವಾಗಿದೆ. ಕಂಪಾಸ್ ಟ್ರೈಲ್‌ಹಾಕ್‌ನಲ್ಲಿ ಸ್ವಯಂಚಾಲಿತ ಗೇರ್‌ಬಾಕ್ಸ್ ಮತ್ತು ಫೋರ್ ವೀಲ್ ಡ್ರೈವ್ ಸಿಸ್ಟಮ್ ಒಟ್ಟಿಗೆ ಸೇರಿಕೊಂಡು ರಸ್ತೆಯನ್ನು ಸಾಕಷ್ಟು ಪರಿಣಾಮಕಾರಿಯಾಗಿ ಸಂಚರಿಸಲು ಸಹಕರಿಸುತ್ತದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಇನ್ನು ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರಿನ ಓಲಭಾಗದಲ್ಲಿ ಏರ್ ಕಂಡೀಷನಿಂಗ್ ಸಿಸ್ಟಂ, ಉತ್ತಮ ವೆಹಿಕಲ್ ಡೈನಾಮ್ಕಿಕ್ಸ್ ಮತ್ತು ಡ್ರೈವಬಿಲಿಟಿ ಯೊಂದಿಗೆ ಲೋವರ್ ಎನ್‍ವಿಹೆಚ್ ಲೆವೆಲ್ ಅನ್ನು ಪಡೆದುಕೊಂಡಿದೆ. ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರಿನಲ್ಲಿ ವಾಯ್ಸ್ ಕಮಾಂಡ್ ಮತ್ತು ನ್ಯಾವಿಗೇಷನ್ ಸಿಸ್ಟಂ ಅನ್ನು ನೀಡಲಾಗಿದ್ದು, ಇಂಧನವನ್ನು ಉಳಿಸಲು ಸ್ಟಾರ್ಟ್ ಸ್ಟಾರ್ಪ್ ಫೀಚರ್ ಅನ್ನು ಸಹ ಒಳಗೊಂಡಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಹಾಗೆಯೆ ಇದರ ಒಳಭಾಗದಲ್ಲಿ ಕೆಪ್ಪು ಬಣ್ಣದಿಂದ ಸಜ್ಜುಗೊಂಡ ಇಂಟೀರಿಯರ್ ಮತ್ತು ಕಪ್ಪು ಲೆಧರ್ ಸೀಟ್‍ಗಳನ್ನು ನೀಡಲಾಗಿದ್ದು, 7 ಇಂಚಿನ ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೇ ಮತ್ತು ಸ್ಯಾತಿಲೈಟ್ ನ್ಯಾವಿಗೇಷನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಹಕರಿಸುವ 8.4 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸಲಾಗಿದೆ.

ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಪ್ರಯಾಣಿಕರ ಸುರಕ್ಷತೆಗಾಗಿ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರಿನಲ್ಲಿ ಹಿಲ್ ಡೆಸೆಂಟ್ ಕಂಟ್ರೋಲ್, ರಿಯರ್ ಲಾಕಿಂಗ್, ಒಟ್ಟು 6 ಏರ್‍‍ಬ್ಯಾಗ್‍ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಕಾರ್ನೆರಿಂಗ್ ಫಾಗ್ ಲ್ಯಾಂಪ್ಸ್ ಮತ್ತು ಪ್ಯಾನರಾಮಿಕ್ ಸನ್‍ರೂಫ್ ಅನ್ನು ಒದಗಿಸಲಾಗಿದೆ. ಮತ್ತು ಇಂಟೀರಿಯರ್ ಮತ್ತಷ್ಟು ಅಕರ್ಷಕವಾಗಿ ಕಾಣಲ್ಲು ಅಲ್ಲಲ್ಲಿ ಕೆಂಪು ಬಣ್ಣದ ಗೆರೆಗಳನ್ನು ನೀಡಲಾಗಿದೆ.

Most Read Articles

Kannada
English summary
Jeep Compass Trailhawk Launched In India — Priced At Rs 26.8 Lakh. Read In Kannada
Story first published: Tuesday, June 25, 2019, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X