ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಜೀಪ್ ಸಂಸ್ಥೆಯು ಟಾಟಾ ಹ್ಯಾರಿಯರ್ ಮತ್ತು ಎಂಜಿ ಹೆಕ್ಟರ್ ಬಿಡುಗಡೆಯ ನಂತರ ಕಂಪಾಸ್ ಎಸ್‌ಯುವಿ ಮಾರಾಟದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದು, ಆಯ್ದ ಮಾದರಿಗಳ ಮೇಲೆ ಭಾರೀ ಪ್ರಮಾಣದ ಡಿಸ್ಕೌಂಟ್ ಘೋಷಣೆ ಮಾಡುತ್ತಿದೆ. ಆರಂಭಿಕವಾಗಿ ರೂ.30 ಸಾವಿರದಿಂದ ರೂ.1.20 ಲಕ್ಷದ ತನಕ ಡಿಸ್ಕೌಂಟ್ ಪಡೆಯಬಹುದಾಗಿದ್ದು, ಸೀಮಿತ ಅವಧಿಗೆ ಈ ಆಫರ್ ನೀಡಲಾಗುತ್ತಿದೆ.

ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಕಂಪಾಸ್ ಎಸ್‌ಯುವಿ ಮಾದರಿಯ ಟ್ರೈಲ್‌ಹ್ವಾಕ್ ವೆರಿಯೆಂಟ್ ಮೇಲೆ ಕನಿಷ್ಠ ರೂ.30 ಸಾವಿರ ಮತ್ತು ಸಾಮಾನ್ಯ ವೆರಿಯೆಂಟ್‌ಗಳಾದ ಲ್ಯಾಂಗಿಟ್ಯೂಡ್, ಲ್ಯಾಂಗಿಟ್ಯೂಡ್(ಒ), ಲ್ಯಾಂಗಿಟ್ಯೂಡ್ ಮತ್ತು ಲಿಮಿಟೆಡ್(ಒ) ಮೇಲೆ ಗರಿಷ್ಠ 1.20 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಸ್ಪೋರ್ಟ್ಸ್ ಪ್ಲಸ್ ಮೇಲೆ ಮಾತ್ರವೇ ಯಾವುದೇ ಡಿಸ್ಕೌಂಟ್ ನೀಡಿಲ್ಲ. ಜೊತೆಗೆ ಆಯ್ದ ಕೆಲವು ಆವೃತ್ತಿಗಳ ಮೇಲೆ ಡಿಸ್ಕೌಂಟ್ ಆಫರ್‌ಗಳಷ್ಟೇ ಅಲ್ಲದೇ ಗರಿಷ್ಠ ಮಟ್ಟದ ವಾರಂಟಿ, ಉಚಿತ ಆಕ್ಸೆರಿಸ್‌ಗಳನ್ನು ನೀಡಲಾಗುತ್ತಿದೆ.

ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಇನ್ನು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಎಂಜಿ ಹೆಕ್ಟರ್ ಮಾದರಿಯು ಜೀಪ್ ಕಂಪಾಸ್‌ಗೆ ತೀವ್ರ ಪೈಪೋಟಿ ನೀಡುತ್ತಿದ್ದು, ಜೂನ್ ಮತ್ತು ಜುಲೈ ಅವಧಿಯ ಕಾರು ಮಾರಾಟದಲ್ಲಿ ಕಂಪಾಸ್ ಎಸ್‌ಯುವಿ ಮಾದರಿಯು ಭಾರೀ ಪ್ರಮಾಣದ ಹಿನ್ನಡೆ ಅನುಭವಿಸಿದೆ. ಇದಕ್ಕೆ ಪ್ರಮುಖ ಕಾರಣ ಎಂಜಿ ಹೆಕ್ಟರ್ ಆಕರ್ಷಕ ಬೆಲೆಗಳೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯು ಈ ಹಿಂದೆ 2017ರ ಜುಲೈನಲ್ಲಿ ಬಿಡುಗಡೆಗೊಂಡಾಗ ಪ್ರತಿ ತಿಂಗಳು ಸರಾಸರಿಯಾಗಿ 2,500 ಯುನಿಟ್ ಮಾರಾಟ ಪ್ರಮಾಣವನ್ನು ಕಾಯ್ದುಕೊಂಡು ಬಂದಿತ್ತು. ಆದರೆ 2019ರ ಆರಂಭದಿಂದ ತೀವ್ರ ಕುಸಿತ ಅನುಭವಿಸಿರುವ ಜೀಪ್ ಕಂಪಾಸ್ ಮಾದರಿಯು ಜೂನ್ ಅವಧಿಯಲ್ಲಿ ಅತಿ ಕನಿಷ್ಠ ಕಾರುಗಳು ಮಾರಾಟವಾಗಿವೆ. 2018ರ ಕೊನೆಯಲ್ಲಿ 2,500ರಿಂದ 2 ಸಾವಿರಕ್ಕೆ ಕುಸಿತ ಕಂಡಿದ್ದ ಜೀಪ್ ಮಾರಾಟವು ಇದೀಗ 791ಕ್ಕೆ ಕುಸಿದಿದೆ.

ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹೌದು, 2019ರ ಆರಂಭದಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್‌ನೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿದ್ದ ಜೀಪ್ ಕಂಪಾಸ್‌ ಮಾದರಿಗೆ ಇದೀಗ ಮತ್ತೊಂದು ಬಲಿಷ್ಠ ಕಾರು ಮಾದರಿಯಾದ ಎಂಜಿ ಹೆಕ್ಟರ್ ತೀವ್ರ ಪೈಪೋಟಿ ನೀಡುತ್ತಿದ್ದು, 2 ಸಾವಿರ ಇದ್ದ ಕಾರು ಮಾರಾಟವು 791ಕ್ಕೆ ನೆಲಕಚ್ಚಿದೆ. 2018ರ ಜೂನ್ ಅವಧಿಯಲ್ಲಿ 1,478 ಕಂಪಾಸ್ ಕಾರುಗಳನ್ನು ಮಾರಾಟ ಮಾಡಿದ್ದ ಜೀಪ್ ಸಂಸ್ಥೆಯು ಕಳೆದ ಜೂನ್‌ನಲ್ಲಿ ಕೇವಲ 791 ಕಾರುಗಳನ್ನು ಮಾರಾಟ ಮಾಡಿದ್ದು, ಶೇ.46 ರಷ್ಟು ಕಾರು ಮಾರಾಟ ಪ್ರಮಾಣವು ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣವೇ ಅಗ್ಗದ ಬೆಲೆಗಳಲ್ಲಿ ರಸ್ತೆಗಿಳಿದಿರುವ ಎಂಜಿ ಹೆಕ್ಟರ್ ಎಸ್‌ಯುವಿ ಮಾದರಿಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಸದ್ಯ ಜೀಪ್ ಕಂಪಾಸ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಪೆಟ್ರೋಲ್ ಮಾದರಿಯು ರೂ. 15.65 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.21.68 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ಮಾದರಿಯು ಜೀಪ್ ಕಂಪಾಸ್ ಕಾರು 1,368 ಸಿಸಿ ಎಂಜಿನ್‌ನೊಂದಿಗೆ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ ಹಲವು ಆಧುನಿಕ ಡ್ರೈವ್ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹಾಗೆಯೇ ಜೀಪ್ ಕಂಪಾಸ್‌ನಲ್ಲಿ ಡೀಸೆಲ್ ಎಂಜಿನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.62 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 27.06 ಲಕ್ಷ ಬೆಲೆ ಹೊಂದಿದ್ದು, 1,956ಸಿಸಿ ಎಂಜಿನ್‌ನೊಂದಿಗೆ 4x4 ಡ್ರೈವ್ ಟೆಕ್ನಾಲಜಿ ಸೇರಿದಂತೆ ಹಲವು ಹೊಸ ಆಧುನಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಜೀಪ್‌ಗೆ ತೀವ್ರ ಪೈಪೋಟಿಯಾಗಿರುವ ಎಂಜಿ ಹೆಕ್ಟರ್ ಮಾದರಿಯ ಕಂಪಾಸ್ ಕಾರಿನಂತೆಯೇ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಹೆಕ್ಟರ್ ಕಾರು ಕೂಡಾ ಪೆಟ್ರೋಲ್, ಡೀಸೆಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹೆಕ್ಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಯು ಆರಂಭಿಕವಾಗಿ ರೂ. 12.18 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 16.78 ಲಕ್ಷ ಬೆಲೆ ಹೊಂದಿದ್ದರೆ, ಡೀಸೆಲ್ ಮಾದರಿಯು ಆರಂಭಿಕವಾಗಿ ರೂ. 13.18 ಲಕ್ಷಕ್ಕೆ ಮತ್ತು ಎಂಡ್ ಮಾದರಿಯು ರೂ. 16.88 ಲಕ್ಷ ಬೆಲೆ ಹೊಂದಿದೆ.

ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಜೀಪ್ ಕಂಪಾಸ್ ಮಾದರಿಯಲ್ಲೇ ಎಂಜಿ ಹೆಕ್ಟರ್ ಕೂಡಾ ಪೆಟ್ರೋಲ್ ಮಾದರಿಯು 1,451 ಸಿಸಿ ಎಂಜಿನ್ ಹೊಂದಿದ್ದರೆ ಡೀಸೆಲ್ ಮಾದರಿಯು 1,956-ಸಿಸಿ ಎಂಜಿನ್ ಹೊಂದಿದೆ. ಹೀಗಾಗಿ ಕಂಪಾಸ್‌ಗೆ ತಾಂತ್ರಿಕವಾಗಿ ಸರಿಸಮನಾಗಿರುವ ಹೆಕ್ಟರ್ ಕಾರು ಭರ್ಜರಿ ಪೈಪೋಟಿ ನೀಡುತ್ತಿದೆ. ಜೊತೆಗೆ ಹೆಕ್ಟರ್ ಪೆಟ್ರೋಲ್ ಮಾದರಿಯಲ್ಲಿ ಹೈಬ್ರಿಡ್ ವರ್ಷನ್ ಕೂಡಾ ಖರೀದಿ ಲಭ್ಯವಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಅಧಿಕ ಮೈಲೇಜ್ ನೀಡುತ್ತಿದೆ.

ಜೀಪ್ ಕಂಪಾಸ್ ಕಾರು ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಇದರೊಂದಿಗೆ ಎಂಜಿ ಹೆಕ್ಟರ್ ಮತ್ತು ಟಾಟಾ ಹ್ಯಾರಿಯರ್‌ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಜೀಪ್ ಕಂಪಾಸ್ ಕಾರಿಗೆ ಮುಂಬರುವ ದಿನಗಳಲ್ಲಿ ಕಿಯಾ ಸೆಲ್ಟೊಸ್ ಕೂಡಾ ಮತ್ತಷ್ಟು ಪೈಪೋಟಿ ನೀಡುವ ನೀರಿಕ್ಷೆಯಿದೆ.

Source: autocarindia

Most Read Articles

Kannada
Read more on ಜೀಪ್ jeep
English summary
Jeep dealers are offering discounts up to Rs 1.2 lakh on compass suv. Read in Kannada.
Story first published: Saturday, August 3, 2019, 13:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X