ಜೀಪ್ ಕಂಪಾಸ್ ಟ್ರೈಲ್‍‍ಹಾವ್ಕ್ ಕಾರಿನ ಟೀಸರ್ ಇಲ್ಲಿದೆ ನೋಡಿ..

ಜೀಪ್ ಸಂಸ್ಥೆಯು ತಮ್ಮ ಹೊಸ ಟ್ರೈಲ್‍ಹಾವ್ಕ್ ಐಷಾರಾಮಿ ಎಸ್‍ಯುವಿ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾದಲಿದ್ದು, ಇದೀಗ ಅಧಿಕೃತವಾಗಿ ಅನಾವರಣಗೊಳಿಸಿದೆ. ಅನಾವರಣಗೊಳಿಸುವುದರ ಜೊತೆಗೆ ಜೀಪ್ ಸಂಸ್ಥೆಯು ಟ್ರೈಲ್‍ಹಾವ್ಕ್ ಕಾರಿನ ಟೀಸರ್ ಅನ್ನು ಕೂಡಾ ಬಿಡುಗಡೆ ಮಾಡಲಾಗಿದ್ದು, ಈ ಟೀಸರ್‍‍ನಲ್ಲಿ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊರ ಹಾಕಿದೆ.

ಜೀಪ್ ಕಂಪಾಸ್ ಟ್ರೈಲ್‍‍ಹಾವ್ಕ್ ಕಾರಿನ ಟೀಸರ್ ಇಲ್ಲಿದೆ ನೋಡಿ..

ಜೀಪ್ ಸಂಸ್ಥೆಯು ಬಿಡುಗಡೆ ಮಾಡಲಿರುವ ಹೊಸ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರು ಎಸ್‍ಯುವಿ ಪ್ರಿಯರಲ್ಲಿ ಕುತೂಹಲವನ್ನು ಹುಟ್ಟುಹಾಕಿದ್ದು, ಮಾಹಿತಗಳ ಪ್ರಕಾರ ಈ ಕಾರು ಎಕ್ಸ್ ಶೋರುಂ ಪ್ರಕರ ರೂ. 30 ಲಕ್ಷದ ಬೆಲೆಯನ್ನು ಪಡೆದಿರಬಹುದೆಂದು ಅಂದಾಜಿಸಲಾಗಿದೆ. ಹಾಗೆಯೆ ಈ ಕಾರು ಇದೇ ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳ್ಳುವ ಬಹುತೇಕ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ವೆರಿಯೆಂಟ್ ಮಾದರಿಯು ದೇಶಿಯ ಮಾರುಕಟ್ಟೆಗಾಗಿ ವಿಶೇಷವಾಗಿ ಸಿದ್ದವಾಗಿದ್ದು, ಸಾಧಾರಣ ಕಂಪಾಸ್ ಕಾರುಗಳಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿರುವ ಟ್ರೈಲ್‍ಹಾವ್ಕ್ ಮಾದರಿಯು ಅಕ್ರಮಣಕಾರಿ ಬಂಪರ್, ಟೋ ಹುಕ್ಸ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, 17 ಇಂಚಿನ ವೀಲ್ಹ್ ಮತ್ತು ಪ್ಯಾನೊರಮಿಕ್ ಸನ್‍ರೂಫ್ ಅನ್ನು ಪಡೆದುಕೊಂಡಿದೆ.

ಜೀಪ್ ಕಂಪಾಸ್ ಟ್ರೈಲ್‍‍ಹಾವ್ಕ್ ಕಾರಿನ ಟೀಸರ್ ಇಲ್ಲಿದೆ ನೋಡಿ..

ಜೀಪ್ ಸಂಸ್ಥೆಯು ಇತ್ತೀಚೆಗೆ ತಮ್ಮ ಹೊಸ ಕಂಪಾಸ್ ಲಿಮಿಟೆಡ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 21.07 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದ್ದು, ಇದೀಗ ಟ್ರೈಲ್‍ಹ್ವಾಕ್ ವೆರಿಯೆಂಟ್ ಬಿಡುಗಡೆಯ ನೀರಿಕ್ಷೆಯಲ್ಲಿದೆ.

ಜೀಪ್ ಕಂಪಾಸ್ ಟ್ರೈಲ್‍‍ಹಾವ್ಕ್ ಕಾರಿನ ಟೀಸರ್ ಇಲ್ಲಿದೆ ನೋಡಿ..

ಟ್ರೈಲ್‍ಹಾವ್ಕ್ ಕಾರಿನಲ್ಲಿ ವಿಶೇಷವಾಗಿ 'ಟ್ರೈಲ್‍ಹ್ವಾಕ್' ಬ್ಯಾಡ್ಜಿಂಗ್ ಹಾಕಲಾಗಿದ್ದು, ಹಲವು ಪ್ರೀಮಿಯಂ ಫಿಚರ್ಸ್‌ಗಳೊಂದಿಗೆ ಹೊಸದಾಗಿ 8.4 ಇಂಚಿನ ಅನ್-ಕನೆಕ್ಟ್ ಟಚ್‍ಸ್ಕ್ರೀನ್ ಇನ್ಫೋಟೈನೆಂಟ್ ಸಿಸ್ಟಂ ಮತ್ತು ಕಾರಿನ ಲಿಮಿಟೆಡ್ ಪ್ಲಸ್ ಕಾರಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ.

ಜೀಪ್ ಕಂಪಾಸ್ ಟ್ರೈಲ್‍‍ಹಾವ್ಕ್ ಕಾರಿನ ಟೀಸರ್ ಇಲ್ಲಿದೆ ನೋಡಿ..

ಇನ್ನು ಕಾರಿನ ಸ್ಪೈ ಚಿತ್ರಗಳನ್ನು ಗಮನಿಸಿದಲ್ಲಿ ಕಪ್ಪು ಡೆಕಲ್ಸ್, ರೆಡ್ ಹುಕ್ಸ್, ಅಪ್ಪರ್ ಗ್ರಿಲ್, ಫಾಗ್ ಲ್ಯಾಂಪ್ ಬೆಸೆಲ್ಸ್, ರೂಫ್ ರೈಲ್ಸ್, 17 ಇಂಚಿನ ಡ್ಯುಯಲ್ ಟೋನ್ ಆಫ್ ರೋಡ್ ಅಲಾಯ್ ವೀಲ್ಹ್, ಕಪ್ಪನೆಯ ಜೀಪ್ ಬ್ಯಾಡ್ಜ್, ಟ್ರೈಲ್ ರೇಟೆಡ್ ಫೆಂಡರ್ ಮತ್ತು ಟ್ರೈಲ್ ಹ್ವಾಕ್ ಟೈಲ್‍‍ಗೇಟ್ ಬ್ಯಾಡ್ಜಿಂಗ್ ಅನ್ನು ಅಳವಡಿಸಲಾಗಿದೆ.

ಜೀಪ್ ಕಂಪಾಸ್ ಟ್ರೈಲ್‍‍ಹಾವ್ಕ್ ಕಾರಿನ ಟೀಸರ್ ಇಲ್ಲಿದೆ ನೋಡಿ..

ಈಗಾಗಲೇ ಈ ಕಾರು ಭಾರತೀಯ ರಸ್ತೆಗಳಲ್ಲಿ ತನ್ನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಶೀಲಿಸುತ್ತಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಕಾರಿನ ಇಂಟೀರಿಯರ್ ವಿನ್ಯಾಸಗಳು ಕೂಡಾ ಬಹಿರಂಗವಾಗಿವೆ. ಸಂಪೂರ್ಣ ಕಪ್ಪು ಮತ್ತು ಕೆಂಪು ಬಣ್ಣವನ್ನು ಹೈಲೈಟ್ ಮಾಡಿರಬಹುದೆಂದು ಹೇಳಲಾಗಿದ್ದು, ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್ ಗಳು ಲೆದರ್‍‍ನಿಂದ ಸುತ್ತುವರೆದಿದೆ.

ಜೀಪ್ ಕಂಪಾಸ್ ಟ್ರೈಲ್‍‍ಹಾವ್ಕ್ ಕಾರಿನ ಟೀಸರ್ ಇಲ್ಲಿದೆ ನೋಡಿ..

ಎಂಜಿನ್ ಸಾಮರ್ಥ್ಯ

ಭಾರತದಲ್ಲಿ ಬಿಡುಗಡೆಯಾಗಲಿರುವ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಪೆಟ್ರೋಲ್ ಎಂಜಿನ್ ಕಾರು 1.4-ಲೀಟರ್ ಮಲ್ಟಿ ಏರ್ ಟರ್ಬೋಚಾರ್ಜ್ಡ್‌ನೊಂದಿಗೆ 160-ಬಿಹೆಚ್‍ಪಿ ಮತ್ತು 250-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಜೀಪ್ ಕಂಪಾಸ್ ಟ್ರೈಲ್‍‍ಹಾವ್ಕ್ ಕಾರಿನ ಟೀಸರ್ ಇಲ್ಲಿದೆ ನೋಡಿ..

ಇದರಲ್ಲಿ ಡೀಸೆಲ್ ಎಂಜಿನ್ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಕಾರು 2.0-ಲೀಟರ್ ಮಲ್ಟಿ ಜೆಟ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಮತ್ತು 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಎಂಜಿನ್‌ನಲ್ಲಿ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಹಾಗು ಡೀಸೆಲ್ ಎಂಜಿನ್‌ನಲ್ಲಿ 9-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಿರುವುದಾಗಿ ಟೀಸರ್‌ನಲ್ಲಿ ಹೇಳಲಾಗಿದೆ.

Most Read Articles

Kannada
Read more on ಜೀಪ್ jeep
English summary
Jeep Launched First TVS Off Their Trailhawk SUV. Read In Kannada
Story first published: Wednesday, June 5, 2019, 11:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X