2022ರ ವೇಳೆಗೆ ಎಲೆಕ್ಟ್ರಿಕ್ ಎಂಜಿನ್‍ನೊಂದಿಗೆ ಬಿಡುಗಡೆಯಾಗಲಿವೆ ಜೀಪ್ ಕಾರುಗಳು

ಈಗ ಎಲ್ಲಿ ನೋಡಿದರೂ ಎಲೆಕ್ಟ್ರಿಕ್ ವಾಹನಗಳದೇ ಸದ್ದು. ಬಹುತೇಕ ಎಲ್ಲಾ ಕಂಪನಿಗಳೂ ತಮ್ಮ ವಾಹನಗಳನ್ನು ಎಲೆಕ್ಟ್ರಿಕ್‍‍ನಲ್ಲಿ ಬಿಡುಗಡೆಗೊಳಿಸುತ್ತಿವೆ. ಎಫ್‍‍ಸಿ‍ಎನ ಜೀಪ್ ಕಂಪನಿಯು ಸಹ ತನ್ನ ಎಲ್ಲಾ ವಾಹನಗಳನ್ನು 2022ರ ವೇಳೆಗೆ ಎಲೆಕ್ಟ್ರಿಕ್‍‍ಗೊಳಿಸಲು ಬಯಸಿದೆ. ಈ ವಿಷಯವನ್ನು ಅಮೇರಿಕನ್ ಯುಟಿಲಿಟಿ ವೆಹಿಕಲ್‍‍ನ ಸಿ‍ಇ‍ಒ ಖಚಿತಪಡಿಸಿದ್ದಾರೆ.

2022ರ ವೇಳೆಗೆ ಎಲೆಕ್ಟ್ರಿಕ್ ಎಂಜಿನ್‍ನೊಂದಿಗೆ ಬಿಡುಗಡೆಯಾಗಲಿವೆ ಜೀಪ್ ಕಾರುಗಳು

ನ್ಯೂಜಿಲ್ಯಾಂಡ್‍‍ನಲ್ಲಿ ಗ್ಲಾಡಿಯೇಟರ್ ಪಿಕ್‍ಅಪ್ ಟ್ರಕ್ ಬಿಡುಗಡೆ ವೇಳೆಯಲ್ಲಿ ಅವರು ಮಾತನಾಡುತ್ತಿದ್ದರು.ಜೀಪ್ ಕಂಪನಿಯ ಕಂಪಾಸ್, ರೆನೆಗೆಡ್, ವ್ರಾಂಗ್ಲರ್ ಎಸ್‍‍ಯುವಿಗಳನ್ನು ಮುಂದಿನ ವರ್ಷ ಪಿ‍‍ಹೆಚ್‍ಇವಿ ಟೆಕ್ನಾಲಜಿ ಅಂದರೆ ಪ್ಲಗ್ ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿಯಲ್ಲಿ ಬಿಡುಗಡೆಗೊಳಿಸಲಾಗುವುದು.

2022ರ ವೇಳೆಗೆ ಎಲೆಕ್ಟ್ರಿಕ್ ಎಂಜಿನ್‍ನೊಂದಿಗೆ ಬಿಡುಗಡೆಯಾಗಲಿವೆ ಜೀಪ್ ಕಾರುಗಳು

ನಂತರ ಇವುಗಳನ್ನು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಆಗಿ ಪರಿವರ್ತಿಸಲಾಗುವುದು. ಇದು ಜೀಪ್ ಕಂಪನಿಯ ಜಾಗತಿಕ ಉತ್ಪಾದನೆಯ ಭಾಗವಾಗಿದೆ. ಈ ಮೂಲಕ ಕಂಪನಿಯು ತನ್ನ ಎಲ್ಲಾ ವಾಹನಗಳನ್ನು 2022ರ ವೇಳೆಗೆ ಶೂನ್ಯ ಮಾಲಿನ್ಯಗೊಳಿಸಲು ಮುಂದಾಗಿದೆ.

2022ರ ವೇಳೆಗೆ ಎಲೆಕ್ಟ್ರಿಕ್ ಎಂಜಿನ್‍ನೊಂದಿಗೆ ಬಿಡುಗಡೆಯಾಗಲಿವೆ ಜೀಪ್ ಕಾರುಗಳು

ಜೀಪ್ ಕಂಪನಿಯ ಸಿಇ‍ಒರವರು ಜೀಪ್ ಕಂಪನಿಯನ್ನು ಅಂತರ್‍‍ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಬಯಸಿದ್ದಾರೆ. ಈ ಕಾರಣಕ್ಕಾಗಿ ಕಳೆದ ಆರು ತಿಂಗಳಿನಿಂದ ಚೀನಾ ಮಾರುಕಟ್ಟೆಯ ಅಧ್ಯಯನವನ್ನು ನಡೆಸುತ್ತಿದ್ದಾರೆ.

2022ರ ವೇಳೆಗೆ ಎಲೆಕ್ಟ್ರಿಕ್ ಎಂಜಿನ್‍ನೊಂದಿಗೆ ಬಿಡುಗಡೆಯಾಗಲಿವೆ ಜೀಪ್ ಕಾರುಗಳು

ಈ ಅಧ್ಯಯನದಲ್ಲಿ ಜೀಪ್ ಕಂಪನಿಯು ಜಾಗತಿಕ ಕಂಪನಿಯಾಗಬಹುದೆಂದು ಕಂಡು ಬಂದಿದೆ. ಜೀಪ್ ಕಂಪನಿಯು ಚೀನಾಗಾಗಿ ಹೊಸ ತಂತ್ರವನ್ನು ಅಳವಡಿಸಿಕೊಂಡಿದೆ. 2019ರಲ್ಲಿ ಜೀಪ್ ಕಂಪನಿಯ ಜಾಗತಿಕ ಮಾರುಕಟ್ಟೆಯ ಮಾರಾಟವು ಒಂದು ಮಿಲಿಯನ್‍‍ಗಿಂತ ಹೆಚ್ಚಾಗಿದೆ.

2022ರ ವೇಳೆಗೆ ಎಲೆಕ್ಟ್ರಿಕ್ ಎಂಜಿನ್‍ನೊಂದಿಗೆ ಬಿಡುಗಡೆಯಾಗಲಿವೆ ಜೀಪ್ ಕಾರುಗಳು

ಇದು ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಐದು ಪಟ್ಟು ಹೆಚ್ಚಾಗಿದೆ. ಹೈಬ್ರಿಡ್ ಟೆಕ್ನಾಲಜಿಯನ್ನು ಅಳವಡಿಸಿದ ನಂತರ ಜೀಪ್ ಪೆಟ್ರೋಲ್ ಎಂಜಿನ್‍‍ನಿಂದ 450 ಕಿ.ಮೀ ಹಾಗೂ ಎಲೆಕ್ಟ್ರಿಕ್ ಮೋಟರ್‍‍ನಿಂದ 50 ಕಿ.ಮೀ ದೂರದವರೆಗೂ ಚಲಿಸಲಿದೆ.

2022ರ ವೇಳೆಗೆ ಎಲೆಕ್ಟ್ರಿಕ್ ಎಂಜಿನ್‍ನೊಂದಿಗೆ ಬಿಡುಗಡೆಯಾಗಲಿವೆ ಜೀಪ್ ಕಾರುಗಳು

ಜೀಪ್ ಕಂಪನಿಯು ಮೊದಲಿಗೆ ಕಂಪಾಸ್ ಹಾಗೂ ರೆನೆಗಡ್ ವಾಹನಗಳಲ್ಲಿ ಪಿ‍‍ಹೆಚ್‍ಇ‍‍ವಿ ಟೆಕ್ನಾಲಜಿಯನ್ನು ಅಳವಡಿಸಲಿದೆ. ಈ ಎರಡೂ ಆಫ್ ರೋಡ್ ಎಸ್‍‍ಯುವಿಗಳು 1.3 ಲೀಟರಿನ ಟರ್ಬೊಚಾರ್ಜ್ಡ್ ಎಂಜಿನ್ ಹೊಂದಿರಲಿವೆ.

2022ರ ವೇಳೆಗೆ ಎಲೆಕ್ಟ್ರಿಕ್ ಎಂಜಿನ್‍ನೊಂದಿಗೆ ಬಿಡುಗಡೆಯಾಗಲಿವೆ ಜೀಪ್ ಕಾರುಗಳು

ಈ ಎಂಜಿನ್ ಜೊತೆಯಲ್ಲಿ ಎಲೆಕ್ಟ್ರಿಕ್ ಮೋಟರ್‍‍ಗಳನ್ನು ಅಳವಡಿಸಲಾಗುವುದು. ಪೆಟ್ರೋಲ್ ಎಂಜಿನ್ ಫ್ರಂಟ್ ವ್ಹೀಲ್‍‍ಗಳಿಗೆ ಪವರ್ ನೀಡಿದರೆ, ಎಲೆಕ್ಟ್ರಿಕ್ ಮೋಟರ್ ಹಿಂಭಾಗದ ವ್ಹೀಲ್‍‍ಗಳಿಗೆ ಪವರ್ ನೀಡಲಿದೆ.

2022ರ ವೇಳೆಗೆ ಎಲೆಕ್ಟ್ರಿಕ್ ಎಂಜಿನ್‍ನೊಂದಿಗೆ ಬಿಡುಗಡೆಯಾಗಲಿವೆ ಜೀಪ್ ಕಾರುಗಳು

ಜೀಪ್ ಕಂಪನಿಯು ಈ ವಾಹನಗಳ ಎಲೆಕ್ಟ್ರಿಕ್ ಆವೃತ್ತಿಯನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಜೀಪ್ ಕಂಪನಿಯು 2020ರ ಮಧ್ಯ ಭಾಗದಲ್ಲಿ ಕಂಪಾಸ್ ಕಂಪನಿಯ ಫೇಸ್‍‍ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ.

2022ರ ವೇಳೆಗೆ ಎಲೆಕ್ಟ್ರಿಕ್ ಎಂಜಿನ್‍ನೊಂದಿಗೆ ಬಿಡುಗಡೆಯಾಗಲಿವೆ ಜೀಪ್ ಕಾರುಗಳು

ಇದರ ಜೊತೆಗೆ ಸಿ‍ಎ‍ಎಫ್‍ಇ ನಿಯಮಗಳಿಗೆ ಅನುಸಾರವಾಗಿ ಪಿ‍‍ಹೆಚ್‍ಇ‍‍ವಿ ಆವೃತ್ತಿಗಳನ್ನೂ ಸಹ ಬಿಡುಗಡೆಗೊಳಿಸಲಿದೆ. 7 ಸೀಟರ್‍‍ಗಳ ಕಂಪಾಸ್ ಆವೃತ್ತಿಯ ಬಿಡುಗಡೆಯನ್ನು 2021ಕ್ಕೆ ಮುಂದೂಡಲಾಗಿದೆ. ಇದರ ಜೊತೆಗೆ ಜೀಪ್ ಕಂಪನಿಯು ಆಫ್ ರೋಡ್ ಸಾಮರ್ಥ್ಯದ ಕಂಪ್ಯಾಕ್ಟ್ ಎಸ್‍‍ಯುವಿಯನ್ನು ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ವರದಿಗಳಾಗಿವೆ.

Most Read Articles

Kannada
Read more on ಜೀಪ್ jeep
English summary
Jeep cars to be electrified by 2022 - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X