ಟೊಯೊಟಾ ಫಾರ್ಚೂನರ್‌ಗೆ ಟಕ್ಕರ್ ನೀಡುತ್ತಾ ಜೀಪ್ ಗ್ರ್ಯಾಂಡ್ ಕಮಾಂಡರ್?

ಪ್ರೀಮಿಯಂ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಜೀಪ್ ಇಂಡಿಯಾ ಸಂಸ್ಥೆಯು ಕಂಪಾಸ್ ಕಾರಿನ ಯಶಸ್ವಿ ನಂತರ ಮತ್ತೆರಡು ಹೊಸ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ. ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಸಣ್ಣ ಗಾತ್ರದ ಎಸ್‌ಯುವಿ ಜೊತೆ ಬಿ ಸೆಗ್ಮೆಂಟ್‌ನಲ್ಲೂ ಹೊಸ ಮಾದರಿಯ ಎಸ್‌ಯುವಿಯೊಂದನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿಕೊಂಡಿದೆ.

ಟೊಯೊಟಾ ಫಾರ್ಚೂನರ್‌ಗೆ ಟಕ್ಕರ್ ನೀಡುತ್ತಾ ಜೀಪ್ ಗ್ರ್ಯಾಂಡ್ ಕಮಾಂಡರ್?

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಉತ್ತಮ ಬೇಡಿಕೆ ಕಂಡುಬರುತ್ತಿದ್ದು, ಇದೇ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸುತ್ತಿರುವ ಜೀಪ್ ಸಂಸ್ಥೆಯು ರೂ.10 ಲಕ್ಷದೊಳಗೆ ಒಂದು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನ ಮತ್ತು ಬಿ ಸೆಗ್ಮೆಂಟ್‌ನಲ್ಲಿ ಜನಪ್ರಿಯವಾಗಿರುವ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಐಷಾರಾಮಿ 7 ಸೀಟರ್ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದೆ.

ಟೊಯೊಟಾ ಫಾರ್ಚೂನರ್‌ಗೆ ಟಕ್ಕರ್ ನೀಡುತ್ತಾ ಜೀಪ್ ಗ್ರ್ಯಾಂಡ್ ಕಮಾಂಡರ್?

ಹೊಸ ಕಾರುಗಳ ಬಿಡುಗಡೆ ಕುರಿತಂತೆ ಮಾತನಾಡಿರುವ ಜೀಪ್ ಇಂಡಿಯಾ ಸಿಇಒ ಕೇವಿನ್ ಫ್ಲೈಯನ್ ಅವರು, ಅಭಿವೃದ್ಧಿ ಪಥದಲ್ಲಿರುವ ಭಾರತದಲ್ಲಿ ಪ್ರೀಮಿಯಂ ಕಾರುಗಳ ಮಾರುಕಟ್ಟೆಗೆ ತ್ವರಿತಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕೆಲವು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಇದು ಸೂಕ್ತ ಸಮಯ ಎಂದಿದ್ದಾರೆ.

ಟೊಯೊಟಾ ಫಾರ್ಚೂನರ್‌ಗೆ ಟಕ್ಕರ್ ನೀಡುತ್ತಾ ಜೀಪ್ ಗ್ರ್ಯಾಂಡ್ ಕಮಾಂಡರ್?

ಕೇವಿನ್ ಫ್ಲೆಯನ್ ಅವರು ಪ್ರಕಾರ, ರೂ.10 ಲಕ್ಷ ಬೆಲೆಯೊಳಗಿನ ಕಾರುಗಳು ಸಾಕಷ್ಟು ಲಾಭದಾಯಕವಾಗಲಿದ್ದರೆ, ಪ್ರೀಮಿಯಂ ಕಾರುಗಳು ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಲಿವೆ. ಹೀಗಾಗಿ ಎರಡು ಮಾದರಿಯಲ್ಲೂ ಕಾರುಗಳನ್ನು ಹೊರತರಲಾಗುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಕಾರುಗಳು ಭಾರತೀಯ ರಸ್ತೆಗಿಳಿಯಲಿವೆ ಎಂದಿದ್ದಾರೆ.

ಟೊಯೊಟಾ ಫಾರ್ಚೂನರ್‌ಗೆ ಟಕ್ಕರ್ ನೀಡುತ್ತಾ ಜೀಪ್ ಗ್ರ್ಯಾಂಡ್ ಕಮಾಂಡರ್?

ಹೀಗಾಗಿ ಜೀಪ್ ಸಂಸ್ಥೆಯು ಭಾರತದಲ್ಲಿ ರೂ.10 ಲಕ್ಷ ಬೆಲೆಯ ಅಂತರದಲ್ಲಿ ರೆನೆಗೆಡ್ ಕಂಪ್ಯಾಕ್ಟ್ ಎಸ್‌ಯುವಿ ಕಾರುನ್ನು ಬಿಡುಗಡೆ ಮಾಡಲಿದ್ದರೆ, ಟೊಯೊಟಾ ಫಾರ್ಚೂನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಗ್ರ್ಯಾಂಡ್ ಕಮಾಂಡರ್ ಅಥವಾ ಗ್ರ್ಯಾಂಡ್ ಕಮಾಂಡರ್ ಹೋಲಿಕೆ ಇರುವ ಮತ್ತೊಂದು ಹೊಸ ಕಾರು ಉತ್ಪನ್ನವನ್ನು ಬಿಡುಗಡೆಗೊಳಿಸುವ ಬಗ್ಗೆ ಮುಂದಿನ ಕೆಲವೇ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುವುದಾಗಿ ಮಾಹಿತಿ ನೀಡಿದೆ.

ಒಟ್ಟಿನಲ್ಲಿ ಭಾರತದಲ್ಲಿ ಜೀಪ್ ಸಂಸ್ಥೆಯು ಹೊಸದಾಗಿ ಎರಡು ಕಾರುಗಳು ಬಿಡುಗಡೆಯಾಗುವುದು ಖಚಿತವಾಗಿದ್ದು, ಹೊಸ ಯೋಜನೆಯ ಭಾಗವಾಗಿ ಕಾರುಗಳ ಉತ್ಪಾದನಾ ಸಾಮಾರ್ಥ್ಯವನ್ನು ಸಹ ಹೆಚ್ಚಿಸುವತ್ತ ಜೀಪ್ ಸಂಸ್ಥೆಯು ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದೆ.

ಟೊಯೊಟಾ ಫಾರ್ಚೂನರ್‌ಗೆ ಟಕ್ಕರ್ ನೀಡುತ್ತಾ ಜೀಪ್ ಗ್ರ್ಯಾಂಡ್ ಕಮಾಂಡರ್?

ಪುಣೆಯ ಬಳಿಯಿರುವ ರಂಜನ್‌ಗಾಂವ್‌ನಲ್ಲಿ ಜೀಪ್ ಕಾರು ಉತ್ಪಾದನಾ ಘಟಕವನ್ನು ವಿಸ್ತರಣೆ ಮಾಡಲಾಗುತ್ತಿದ್ದು, ಇಷ್ಟು ದಿನಗಳ ಕಾಲ ಕಂಪಾಸ್ ಆವೃತ್ತಿ ಹೊರತುಪಡಿಸಿ ಇನ್ನುಳಿದ ಐಷಾರಾಮಿ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡುತ್ತಿದ್ದ ಜೀಪ್ ಸಂಸ್ಥೆಯು ಇನ್ಮುಂದೆ ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಹೊಸ ಕಾರುಗಳನ್ನು ಅಭಿವೃದ್ಧಿಪಡಿಸಲಿದೆ.

ಟೊಯೊಟಾ ಫಾರ್ಚೂನರ್‌ಗೆ ಟಕ್ಕರ್ ನೀಡುತ್ತಾ ಜೀಪ್ ಗ್ರ್ಯಾಂಡ್ ಕಮಾಂಡರ್?

2020 ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಹೊಸ ಕಾರುನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿರುವ ಜೀಪ್ ಸಂಸ್ಥೆಯು ಫಾರ್ಚೂನರ್ ಪ್ರತಿಸ್ಪರ್ಧಿ ಕಾರಿನಲ್ಲಿ 2.7-ಲೀಟರ್ ಡೀಸೆಲ್ ಎಂಜಿನ್ ಮತ್ತು 2.5-ಲೀಟರ್ ಪೆಟ್ರೋಲ್ ಎಂಜಿನ್ ಒದಗಿಸಲಿದ್ದರೆ, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ರೆನೆಗೆಡ್‌ನಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.

ಟೊಯೊಟಾ ಫಾರ್ಚೂನರ್‌ಗೆ ಟಕ್ಕರ್ ನೀಡುತ್ತಾ ಜೀಪ್ ಗ್ರ್ಯಾಂಡ್ ಕಮಾಂಡರ್?

ಅದಕ್ಕೂ ಮುನ್ನ ಜೀಪ್ ಸಂಸ್ಥೆಯು ರ‍್ಯಾಂಗ್ಲರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ತದನಂತರ ಗ್ರ್ಯಾಂಡ್ ಚರೋಕಿ ಫೇಸ್‌ಲಿಫ್ಟ್ ಮತ್ತು ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ.

Most Read Articles

Kannada
Read more on ಜೀಪ್ jeep
English summary
Jeep Plans To Launch 7 Seater SUV In India - Toyota Fortuner Rival. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X