ಬಹುನೀರಿಕ್ಷಿತ ಜೀಪ್ ಕಂಪಾಸ್ ಟ್ರೈಲ್‌‌ಹ್ವಾಕ್ ಟೀಸರ್ ಬಿಡುಗಡೆ

ಜೀಪ್ ಕಂಪಾಸ್ ಟ್ರೈಲ್‌‌ಹ್ವಾಕ್ ಎಸ್‍ಯುವಿ ಕಾರು ಮಾದರಿಯು ಮುಂಬರುವ ಜುಲೈ ಆರಂಭದಲ್ಲಿ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿದ್ದು, ಹೊಸ ಕಾರಿನ ವೈಶಿಷ್ಟ್ಯತೆಗಳ ಕುರಿತಾದ ಫಸ್ಟ್ ಲುಕ್ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿದೆ.

ಬಹುನೀರಿಕ್ಷಿತ ಜೀಪ್ ಕಂಪಾಸ್ ಟ್ರೈಲ್‌‌ಹ್ವಾಕ್ ಟೀಸರ್ ಬಿಡುಗಡೆ

ಜೀಪ್ ಕಂಪಾಸ್ ಟ್ರೈಲ್‍ಹ್ವಾಕ್ ವೆರಿಯೆಂಟ್ ಮಾದರಿಯು ದೇಶಿಯ ಮಾರುಕಟ್ಟೆಗಾಗಿ ವಿಶೇಷವಾಗಿ ಸಿದ್ದವಾಗಿದ್ದು, ಸಾಧಾರಣ ಕಂಪಾಸ್ ಕಾರುಗಳಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿರುವ ಟ್ರೈಲ್‌ಹ್ವಾಕ್ ಮಾದರಿಯು ಅಕ್ರಮಕಾರಿ ಬಂಪರ್, ಟೋ ಹುಕ್ಸ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, 17 ಇಂಚಿನ ವೀಲ್ಹ್ ಮತ್ತು ಪ್ಯಾನೊರಮಿಕ್ ಸನ್‍ರೂಫ್ ಅನ್ನು ಪಡೆದುಕೊಂಡಿದೆ.

ಬಹುನೀರಿಕ್ಷಿತ ಜೀಪ್ ಕಂಪಾಸ್ ಟ್ರೈಲ್‌‌ಹ್ವಾಕ್ ಟೀಸರ್ ಬಿಡುಗಡೆ

ಜೀಪ್ ಸಂಸ್ಥೆಯು ಇತ್ತೀಚೆಗೆ ತಮ್ಮ ಹೊಸ ಕಂಪಾಸ್ ಲಿಮಿಟೆಡ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 21.07 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದ್ದು, ಇದೀಗ ಟ್ರೈಲ್‍ಹ್ವಾಕ್ ವೆರಿಯೆಂಟ್ ಬಿಡುಗಡೆಯ ನೀರಿಕ್ಷೆಯಲ್ಲಿದೆ.

ಬಹುನೀರಿಕ್ಷಿತ ಜೀಪ್ ಕಂಪಾಸ್ ಟ್ರೈಲ್‌‌ಹ್ವಾಕ್ ಟೀಸರ್ ಬಿಡುಗಡೆ

ಟ್ರೈಲ್‍ಹ್ವಾಕ್ ಕಾರಿನಲ್ಲಿ ವಿಶೇಷವಾಗಿ 'ಟ್ರೈಲ್‍ಹ್ವಾಕ್' ಬ್ಯಾಡ್ಜಿಂಗ್ ಹಾಕಲಾಗಿದ್ದು, ಹಲವು ಪ್ರೀಮಿಯಂ ಫಿಚರ್ಸ್‌ಗಳೊಂದಿಗೆ ಹೊಸದಾಗಿ 8.4 ಇಂಚಿನ ಅನ್-ಕನೆಕ್ಟ್ ಟಚ್‍ಸ್ಕ್ರೀನ್ ಇನ್ಫೋಟೈನೆಂಟ್ ಸಿಸ್ಟಂ ಮತ್ತು ಕಾರಿನ ಲಿಮಿಟೆಡ್ ಪ್ಲಸ್ ಕಾರಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ.

ಬಹುನೀರಿಕ್ಷಿತ ಜೀಪ್ ಕಂಪಾಸ್ ಟ್ರೈಲ್‌‌ಹ್ವಾಕ್ ಟೀಸರ್ ಬಿಡುಗಡೆ

ಇನ್ನು ಕಾರಿನ ಸ್ಪೈ ಚಿತ್ರಗಳನ್ನು ಗಮನಿಸಿದಲ್ಲಿ ಕಪ್ಪು ಡೆಕಲ್ಸ್, ರೆಡ್ ಹುಕ್ಸ್, ಅಪ್ಪರ್ ಗ್ರಿಲ್, ಫಾಗ್ ಲ್ಯಾಂಪ್ ಬೆಸೆಲ್ಸ್, ರೂಫ್ ರೈಲ್ಸ್, 17 ಇಂಚಿನ ಡ್ಯುಯಲ್ ಟೋನ್ ಆಫ್ ರೋಡ್ ಅಲಾಯ್ ವೀಲ್ಹ್, ಕಪ್ಪನೆಯ ಜೀಪ್ ಬ್ಯಾಡ್ಜ್, ಟ್ರೈಲ್ ರೇಟೆಡ್ ಫೆಂಡರ್ ಮತ್ತು ಟ್ರೈಲ್ ಹ್ವಾಕ್ ಟೈಲ್‍‍ಗೇಟ್ ಬ್ಯಾಡ್ಜಿಂಗ್ ಅನ್ನು ಅಳವಡಿಸಲಾಗಿದೆ.

ಬಹುನೀರಿಕ್ಷಿತ ಜೀಪ್ ಕಂಪಾಸ್ ಟ್ರೈಲ್‌‌ಹ್ವಾಕ್ ಟೀಸರ್ ಬಿಡುಗಡೆ

ಈಗಾಗಲೇ ಈ ಕಾರು ಭಾರತೀಯ ರಸ್ತೆಗಳಲ್ಲಿ ತನ್ನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಶೀಲಿಸುತ್ತಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಕಾರಿನ ಇಂಟೀರಿಯರ್ ವಿನ್ಯಾಸಗಳು ಕೂಡಾ ಬಹಿರಂಗವಾಗಿವೆ. ಸಂಪೂರ್ಣ ಕಪ್ಪು ಮತ್ತು ಕೆಂಪು ಬಣ್ಣವನ್ನು ಹೈಲೈಟ್ ಮಾಡಿರಬಹುದೆಂದು ಹೇಳಲಾಗಿದ್ದು, ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್ ಗಳು ಲೆದರ್‍‍ನಿಂದ ಸುತ್ತುವರೆದಿದೆ.

ಬಹುನೀರಿಕ್ಷಿತ ಜೀಪ್ ಕಂಪಾಸ್ ಟ್ರೈಲ್‌‌ಹ್ವಾಕ್ ಟೀಸರ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಭಾರತದಲ್ಲಿ ಬಿಡುಗಡೆಯಾಗಲಿರುವ ಜೀಪ್ ಕಂಪಾಸ್ ಟ್ರೈಲ್‍ಹ್ವಾಕ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಪೆಟ್ರೋಲ್ ಎಂಜಿನ್ ಕಾರು 1.4-ಲೀಟರ್ ಮಲ್ಟಿ ಏರ್ ಟರ್ಬೋಚಾರ್ಜ್ಡ್‌ನೊಂದಿಗೆ 160-ಬಿಹೆಚ್‍ಪಿ ಮತ್ತು 250-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಬಹುನೀರಿಕ್ಷಿತ ಜೀಪ್ ಕಂಪಾಸ್ ಟ್ರೈಲ್‌‌ಹ್ವಾಕ್ ಟೀಸರ್ ಬಿಡುಗಡೆ

ಇದರಲ್ಲಿ ಡೀಸೆಲ್ ಎಂಜಿನ್ ಜೀಪ್ ಕಂಪಾಸ್ ಟ್ರೈಲ್‍ಹ್ವಾಕ್ ಕಾರು 2.0-ಲೀಟರ್ ಮಲ್ಟಿ ಜೆಟ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಮತ್ತು 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಎಂಜಿನ್‌ನಲ್ಲಿ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಹಾಗು ಡೀಸೆಲ್ ಎಂಜಿನ್‌ನಲ್ಲಿ 9-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಿರುವುದಾಗಿ ಟೀಸರ್‌ನಲ್ಲಿ ಹೇಳಲಾಗಿದೆ.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಬಹುನೀರಿಕ್ಷಿತ ಜೀಪ್ ಕಂಪಾಸ್ ಟ್ರೈಲ್‌‌ಹ್ವಾಕ್ ಟೀಸರ್ ಬಿಡುಗಡೆ

ಬೆಲೆಗಳು(ಅಂದಾಜು)

ಜೀಪ್ ಕಂಪಾಸ್ ಟ್ರೈಲ್‍ಹ್ವಾಕ್ ಕಾರು ಸಾಮಾನ್ಯ ಕಂಪಾಸ್ ಕಾರುಗಳಿಂತಲೂ ತುಸು ಪ್ರೀಮಿಯಂ ಸೌಲಭ್ಯಗಳೊಂದಿಗೆ ದುಬಾರಿ ಎನ್ನಿಸಲಿದ್ದು, ಆರಂಭಿಕವಾಗಿ ರೂ.22 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.25 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
Read more on ಜೀಪ್ jeep
English summary
Jeep Compass Trailhawk Teased. Read in Kannada.
Story first published: Saturday, May 25, 2019, 20:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X