Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಮ್ಮ ಬೆಂಗಳೂರಿನಲ್ಲಿ K-1000 ರ್ಯಾಲಿ- ಗೌರವ್ ಗಿಲ್ ಔಟ್, ಚೇತನ್ ಶಿವರಾಮ್ ಶೈನ್..!
ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ರಾಷ್ಟ್ರೀಯ ಕೆ-1000 ರ್ಯಾಲಿ ಚಾಂಪಿಯನ್ಶಿಪ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದಲ್ಲದೇ ಘಟಾನುಘಟಿ ಕಾರ್ ರೇಸ್ ಸ್ಪರ್ಧಿಗಳು ಹಿನ್ನಡೆ ಅನುಭವಿಸಿದರೆ ಅಚ್ಚರಿ ಎಂಬಂತೆ ಹೊಸ ಪ್ರತಿಭೆಗಳು ತೀವ್ರ ಪೈಪೋಟಿ ನೀಡುವ ಮೂಲಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಹೌದು, ಬೆಂಗಳೂರಿನ ಹೊರವಲಯದಲ್ಲಿರುವ ಅಂಜನಾಪುರ ಬಳಿ ನಡೆದ 44ನೇ ಆವೃತ್ತಿಯ ಐಎನ್ಆರ್ಸಿ K-1000 ರ್ಯಾಲಿಯಲ್ಲಿ ಈ ಬಾರಿ ಪ್ರಮುಖ ಘಟ್ಟದಲ್ಲೇ ಮಹೀಂದ್ರಾ ಅಡ್ವೆಂಚರ್ ತಂಡವನ್ನು ಪ್ರತಿನಿಧಿಸಿದ್ದ ರಾಷ್ಟ್ರೀಯ ಕಾರ್ ರೇಸ್ ಚಾಂಪಿಯನ್ ಹಾಗೂ ಅರ್ಜುನ್ ಪ್ರಶಸ್ತಿ ವಿಜೇತ ಗೌರವ್ ಗಿಲ್ಗೆ ಹಿನ್ನಡೆಯಾಗಿದ್ದಲ್ಲದೇ ಅಕ್ಷರಾ ರೇಸಿಂಗ್ ತಂಡದ ಪ್ರತಿನಿಧಿ ಚೇತನ್ ಶಿವರಾಮ್ ಮತ್ತು ಟೀಮ್ ಚಾಂಪಿಯನ್ ತಂಡದ ಡಾ.ಬಿಕ್ಕು ಬಾಬು ಕ್ರಮವಾಗಿ ಮೊದಲ ಮತ್ತು ಎರಡನೇಯ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಬರೋಬ್ಬರಿ 100 ಕಿ.ಮೀ ಅಂತರವನ್ನು ಹೊಂದಿದ್ದ K-1000 ರ್ಯಾಲಿಯಲ್ಲಿ ಪ್ರತಿ ದಿನ ಎರಡು ಹಂತಗಳಲ್ಲಿ ಪೈಪೋಟಿ ನಡೆಸಿದ ಸ್ಪರ್ಧಿಗಳು ಅತ್ಯಂತ ಕಠಿಣ ಹಾದಿಯಲ್ಲಿ ಸಾಗುವ ಮೂಲಕ ಪ್ರಶಸ್ತಿಯನ್ನು ತಮ್ಮದಾಸಿಕೊಂಡಿದ್ದು, ಈ ಬಾರಿಯ ರ್ಯಾಲಿಯಲ್ಲಿ ಹಲವು ಪ್ರಸಿದ್ಧ ಚಾಲಕರ ಪೈಪೋಟಿಗೆ ಕಾರಣವಾಗಿತ್ತು.

ಮೋಟಾರ್ಸ್ಪೋರ್ಟ್ನಲ್ಲಿ ಮೊದಲ ಬಾರಿಗೆ ಅರ್ಜುನ ಪ್ರಶಸ್ತಿ ಪಡೆದಿದ್ದ ಗೌರವ್ ಗಿಲ್ ಮತ್ತು ನ್ಯಾವಿಗೇಟರ್ ಮೂಸಾ ಶೆರಿಫ್ ಸೇರಿದಂತೆ ಅಮಿತ್ ರಜಿತ್ ಘೋಶ್, ಅಶ್ವಿನ್ ನಾಯಕ್, ಡೀನ್ ಮಸ್ಚೆರೆನಾಸ್, ಫಾಬಿದ್ ಅಹ್ಮದ್, ಚೇತನ್ ಶಿವರಾಮ್, ಮೂರ್ತಿ ಪಿ.ವಿ.ಎಸ್ ಭಾಗಿಯಾಗುವ ಮೂಲಕ ಸ್ಪರ್ಧೆಗೆ ಮತ್ತಷ್ಟು ಮೆರಗು ತಂದಿದ್ದರು.

ಸ್ಪರ್ಧೆಯಲ್ಲಿ ಬರೋಬ್ಬರಿ 55 ಸ್ಪರ್ಧಿಗಳು ಒಟ್ಟು ಆರು ವಿವಿಧ ಹಂತಗಳಲ್ಲಿ ಪೈಪೋಟಿ ನೀಡುವ ಮೂಲಕ ಮೋಟಾರ್ ಸ್ಪೋರ್ಟ್ ಪ್ರಿಯರ ಗಮನಸೆಳೆದರು. ಸ್ಪರ್ಧೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಮಹೀಂದ್ರಾ ಅಡ್ವೆಂಚರ್, ಅಕ್ಷರಾ ರೇಸಿಂಗ್, ಅರ್ಕಾ ರೇಸಿಂಗ್, ಸ್ನ್ಯಾಪ್ ರೇಸಿಂಗ್, ಚೆಟ್ಟಿನಾಡ್ ಸ್ಪೋರ್ಟಿಂಗ್ ತಂಡಗಳು ಭಾರೀ ಪೈಪೋಟಿ ನೀಡುವ ಮೂಲಕ ಚಾಂಪಿಯನ್ ಪಟ್ಟಕ್ಕಾಗಿ ತೀವ್ರ ಹಣಾಹಣಿ ನಡೆಸಿದವು.

K-1000 ರ್ಯಾಲಿಯ ಮೊದಲ ದಿನದವೇ ಮುಂಚೂಣಿಯಲ್ಲಿದ್ದ ಮಹೀಂದ್ರಾ ಅಡ್ವೆಂಚರ್ ತಂಡದ ಗೌರವ್ ಗಿಲ್ ಮತ್ತು ನ್ಯಾವಿಗೇಟರ್ ಮೂಸಾ ಶೆರಿಫ್ ಹಾಗೂ ಅಮಿತ್ರಜಿತ್ ಘೋಷ್ ಮತ್ತು ನ್ಯಾವಿಗೇಟರ್ ಅಶ್ವಿನ್ ನಾಯಕ್ಗೆ ಆರ್ಕಾ ಮೋಟಾರ್ಸ್ಪೋರ್ಟ್ನ ಕರ್ಣ ಕಡೂರ್ ಮತ್ತು ನಿಖಿಲ್ ಪೈ ಅವರು ಭರ್ಜರಿ ಪೈಪೋಟಿ ನೀಡಿದರು.

ಆದರೆ ಕೊನೆಯ ಕ್ಷಣದಲ್ಲಿ ಗೌರವ್ ಗಿಲ್ ಮತ್ತು ನ್ಯಾವಿಗೇಟರ್ ಮೂಸಾ ಶೆರಿಫ್ ಅವರು ಆರ್ಕಾ ಮೋಟಾರ್ಸ್ಪೋರ್ಟ್ ತಂಡವನ್ನು ಹಿಂದಿಕ್ಕಿ 28 ಸೆಕೆಂಡ್ ಅಂತರದಲ್ಲಿ ಮುನ್ನಡೆ ಸಾಧಿಸಿದರಲ್ಲದೇ ಟೀಮ್ ಚಾಂಪಿಯನ್ ತಂಡದ ಡಾ. ಬಿಕ್ಕು ಬಾಬು ಮತ್ತು ಪ್ರಿವಾಟಿರ್ ತಂಡದ ಡೀನ್ ಮಸ್ಕರೇನ್ಹಾಸ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡರು.

ನಂತರ ಒಂದನೇ ದಿನದ 3 ಹಂತದ ಹಣಾಹಣಿಯಲ್ಲೂ ಆರ್ಕಾ ಮೋಟಾರ್ಸ್ಪೋರ್ಟ್ ತಂಡವನ್ನು ಕೇವಲ 20 ಸೇಕೆಂಡುಗಳ ಅಂತರದಲ್ಲಿ ಮಣಿಸಿ ಮುನ್ನಡೆ ಕಾಯ್ದುಕೊಂಡ ಗೌರವ್ ಗಿಲ್ ಮೊದಲನೇ ದಿನದ ಅಂತ್ಯಕ್ಕೆ ಒಟ್ಟು 50 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದರು.
MOST READ: ಡಿ.1ರಿಂದ ಕಡ್ಡಾಯವಾಗಲಿರುವ ಫಾಸ್ಟ್ಟ್ಯಾಗ್ ಈಗಲೇ ಉಚಿತವಾಗಿ ಪಡೆಯಿರಿ..!

ಇದೇ ವೇಳೆ ಆರ್ಕಾ ಮೋಟಾರ್ಸ್ಪೋರ್ಟ್ನ ಕರ್ಣ ಕಡೂರ್ ಅವರಿದ್ದ ಕಾರು ಟೀಮ್ ಚಾಂಪಿಯನ್ ತಂಡದ ಡಾ. ಬಿಕ್ಕು ಬಾಬು ಹಿಂದಿಕ್ಕಿ 7.5 ಸೆಕೆಂಡುಗಳ ಮುನ್ನಡೆ ಸಾಧಿಸಿದರು. ಒಟ್ಟಾರೆ ಮೊದಲ ದಿನದ ಕೊನೆಯಲ್ಲಿ ಗೌರವ್ ಗಿಲ್ ಮೊದಲ ಸ್ಥಾನದಲ್ಲಿ ಕರ್ಣ ಕಡೂರ್ ಎರಡನೇ ಮತ್ತು ಡಾ.ಬಿಕ್ಕು ಬಾಬು ಮೂರನೇ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.
MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

2ನೇ ದಿನ ಸ್ಪರ್ಧೆಯಲ್ಲಿ ಗೌರವ್ ಗಿಲ್ಗೆ ಶಾಕ್
ಮೊದಲ ದಿನದ ಸ್ಪರ್ಧೆಯಲ್ಲಿ ಒಟ್ಟು 50 ಅಂಕಗಳ ಮುನ್ನಡೆಯಲ್ಲಿದ್ದ ಗೌರವ್ ಗಿಲ್ ಈ ಬಾರಿಯೂ K-1000 ರ್ಯಾಲಿಯಲ್ಲೂ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಳ್ಳಬೇಕೆಂಬ ತವಕದಲ್ಲಿರುವಾಗಲೇ 2ನೇ ದಿನದ ಆಟ ಶುರುವಾಗುವುದಕ್ಕೂ ಮೊದಲೇ ಎಕ್ಸ್ಯುವಿ300 ಕಾರು ಸ್ಟಾರ್ಟ್ ಆಗದೇ ಶಾಕ್ ಕೊಟ್ಟಿತು.
MOST READ: ಹೆಂಡತಿಗಿಂತ ಕಾರೇ ಬೆಸ್ಟ್, ಯಾಕೆ ಗೊತ್ತಾ?

ಹಲವಾರು ಪ್ರಯತ್ನಗಳ ನಂತರವೂ ತಾಂತ್ರಿಕ ಕಾರಣದಿಂದಾಗಿ ಕಾರು ಚಾಲನೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಎದುರಾದಾಗ ಸ್ಪರ್ಧೆಯಿಂದಲೇ ಹೊರನಡೆದ ಗೌರವ್ ಗಿಲ್, ಅಕ್ಷರಾ ರೇಸಿಂಗ್ ಮತ್ತು ಟೀಮ್ ಚಾಂಪಿಯನ್ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಮಹೀಂದ್ರಾ ತಂಡದ ಗೌರವ್ ಗಿಲ್ಗೆ ಮಾತ್ರವಲ್ಲದೇ ಮೊದಲ ದಿನದ ಸ್ಪರ್ಧೆಯ ಉತ್ತಮ ಪೈಪೋಟಿಯೊಂದಿಗೆ ಪ್ರಶಸ್ತಿ ನೀರಿಕ್ಷೆಯಲ್ಲಿದ್ದ ಶೃಪ್ತಾ ಪಡಿವಲ್ ನೇತೃತ್ವದ ಡೀನ್ ಮಸ್ಕರೇನ್ಹಾಸ್ ಸಹ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದರು.

ಡೀನ್ ಮಸ್ಕರೇನ್ಹಾಸ್ಗೆ ಹಿನ್ನಡೆಯಾಗಿದ್ದರಿಂದ ರೇಸ್ ಕಾನ್ಸೆಪ್ಟ್ಸ್ ಮೋಟೊರ್ಸ್ಪೋರ್ಟ್ಸ್ ತಂಡದ ಯೂನಸ್ ಇಲಿಯಾಸ್ ಮತ್ತು ಹರೀಶ್ ಗೌಡ ಮುನ್ನಡೆ ಕಾಯ್ದಕೊಂಡರಲ್ಲದೇ ಟೀಮ್ ಚಾಂಪಿಯನ್ಸ್ ತಂಡದ ಫಾಬಿದ್ ಅಹ್ಮದ್ ಮತ್ತು ಸನತ್ ಜಿ ತಂಡಕ್ಕೂ ತಾಂತ್ರಿಕ ಸಮಸ್ಯೆ ಕೈ ಕೊಟ್ಟಿತು.

ಟೀಮ್ ಚಾಂಪಿಯನ್ಸ್ ತಂಡಕ್ಕೆ ಆದ ತಾಂತ್ರಿಕ ಸಮಸ್ಯೆಯಿಂದಾಗಿ 3ನೇ ಮತ್ತು 4ನೇ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಅಕ್ಷರಾ ರೇಸಿಂಗ್ ತಂಡದ ಶಿವರಾಮ್ ಅಚ್ಚರಿ ಎಂಬಂತೆ ಮೊದಲ ಸ್ಥಾನಕ್ಕೇರಿದರು. ನಂತರ ಸ್ಥಾನದಲ್ಲಿ ಟೀಮ್ ಚಾಂಪಿಯನ್ ತಂಡದ ಡಾ.ಬಿಕ್ಕು ಬಾಬು 2ನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಜೊತೆಗೆ ಅಮಿತ್ರಜಿತ್ ಘೋಷ್ / ಅಶ್ವಿನ್ ನಾಯಕ್ ತಂಡವು ಒಟ್ಟಾರೆ 1 ಗಂಟೆ, 51 ನಿಮಿಷ ಮತ್ತು 4.3 ಸೆಕೆಂಡುಗಳ ಮುಕ್ತಾಯದ ಸಮಯದೊಂದಿಗೆ ಮೂರನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದಲ್ಲದೇ ಪ್ರಮುಖ ಕಾರು ಚಾಲಕರಿಗೆ ಅಚ್ಚರಿ ಮೂಡಿಸಿದರು.

ಈ ಬಾರಿ K-1000 ರ್ಯಾಲಿಯಲ್ಲಿ ಪ್ರಮುಖ ಕಾರು ಚಾಲಕರಿಗೆಯೇ ತಾಂತ್ರಿಕ ಸಮಸ್ಯೆ ಎದುರಾಗಿದ್ದಲ್ಲದೇ ಅತಿ ಸುಲಭವಾಗಿದ್ದ ಗೆಲುವಿನ ಹಾದಿಯು ಮತ್ತಷ್ಟು ಕಠಿಣ ಎದುರಾಯಿತು. ಇದರಿಂದ ಕೆಲವು ತಂಡಗಳ ಚಾಲಕರು ಬೇಸರ ವ್ಯಕ್ತಪಡಿಸಿದ್ದಲ್ಲದೇ ಮುಂದಿನ ಬಾರಿಯ ಸ್ಪರ್ಧೆಗೆ ಮತ್ತಷ್ಟು ತಯಾರಿಯೊಂದಿಗೆ ಪೈಪೋಟಿ ಎದುರಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ವಿಕೇಂಡ್ ಖುಷಿಯಲ್ಲಿದ್ದ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸುವಲ್ಲಿ ಯಶಸ್ವಿಯಾದ ಸ್ಪರ್ಧಿಗಳು ಭರ್ಜರಿ ಮೊತ್ತದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರಲ್ಲದೇ ಕಾರ್ ರೇಸ್ ಅಂದರೆ ಕೇವಲ ವೇಗವಾಗಿ ಚಾಲನೆ ಮಾಡುವುದು ಅಷ್ಟೇ ಅಲ್ಲಾ, ಬದಲಾಗಿ ಸುರಕ್ಷತೆಯೊಂದಿಗೆ ಗುರಿ ತಲುಪುದು ಹೇಗೆ ಎಂಬುವುದನ್ನು ತಿಳಿಸುವ ಏಕೈಕ ಮಾರ್ಗ ಎಂಬುವುದಾಗಿ ಮನದಟ್ಟು ಮಾಡಿಕೊಟ್ಟರು.