ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಬಾಲಿವುಡ್ ತಾರೆಯರು ಈ ವರ್ಷದ ಪ್ರಾರಂಭದಿಂದಲೂ ಹೊಸ ಹೊಸ ಕಾರುಗಳನ್ನು ಖರೀದಿಸುತ್ತಲೇ ಇದ್ದಾರೆ. ಈ ಸಾಲಿಗೆ ಈಗ ಬಾಲಿವುಡ್ ನಟಿ ಕಂಗನಾ ರನಾವತ್ ಸೇರ್ಪಡೆಯಾಗಿದ್ದಾರೆ. ಬಾಲಿವುಡ್ ನಟಿ ಈಗ ಮರ್ಸಿಡಿಸ್ ಬೆಂಜ್ ಜಿಎಲ್ಇ ಕ್ಲಾಸ್ ಎಸ್‍‍ಯು‍‍ವಿಯನ್ನು ಖರೀದಿಸಿದ್ದಾರೆ. ಜರ್ಮನಿ ಮೂಲದ ಈ ಎಸ್‍‍ಯು‍‍ವಿ ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಶ್ರೇಣಿಯಲ್ಲಿದೆ.

ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಈ ಎಸ್‍‍ಯುವಿಯ ಮೂಲ ಮಾದರಿಯ 250ಡಿ ಬೆಲೆ ರೂ.61.75 ಲಕ್ಷಗಳಾಗಿದ್ದರೆ, ಟಾಪ್ ಎಂಡ್ 350ಜಿ ಮಾದರಿಯ ಬೆಲೆಯು ರೂ.77.82 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರಗಳಾಗಿವೆ. ಮರ್ಸಿಡಿಸ್ ಬೆಂಝ್ ಲ್ಯಾಂಡ್‍‍ಮಾರ್ಕ್ ಕಾರ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಂಗನಾ ರನಾವತ್‍‍ರವರಿಗೆ ಹೊಸ ಎಸ್‍‍ಯು‍‍ವಿಯ ಡೆಲಿವರಿ ಮಾಡುತ್ತಿರುವ ಚಿತ್ರವನ್ನು ಶೇರ್ ಮಾಡಿದೆ.

ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಕಂಗನಾರವರು ಖರೀದಿಸಿರುವ ಬಿಳಿ ಬಣ್ಣದ ಮರ್ಸಿಡಿಸ್ ಜಿಎಲ್ಇ ಎಸ್‌ಯುವಿಯ ಮಾದರಿ ಯಾವುದೆಂದು ಇನ್ನೂ ತಿಳಿದುಬಂದಿಲ್ಲ. ಕಂಗನಾರವರು ಈಗಾಗಲೇ ಅಲ್ಟ್ರಾ ಐಷಾರಾಮಿಯ ಬಿಎಂಡಬ್ಲ್ಯು 7 ಸೀರಿಸ್ ಸೆಡಾನ್ ಸೇರಿದಂತೆ ಹಲವು ಕಾರುಗಳನ್ನು ಹೊಂದಿದ್ದಾರೆ.

ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಯಾವುದಾದರೂ ಕಾರ್ಯಕ್ರಮಗಳಿಗೆ ಅಥವಾ ಚಿತ್ರಿಕರಣಕ್ಕೆ ಹೋಗುವಾಗ ಕಂಗನಾರವರು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಮುಂದೆ ಜಿಎಲ್ಇ-ಕ್ಲಾಸ್ ಎಸ್‍‍ಯುವಿಯಲ್ಲಿ ಓಡಾಡುವ ಸಾಧ್ಯತೆಗಳಿವೆ. ಬಹಳಷ್ಟು ಬಾಲಿವುಡ್ ತಾರೆಗಳು ತಮ್ಮ ವೈಯಕ್ತಿಕ ಬಳಕೆಗಾಗಿ ದುಬಾರಿ ಬೆಲೆಯ ಎಸ್‌ಯುವಿಗಳನ್ನು ಬಳಸುತ್ತಿದ್ದಾರೆ.

ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಈ ವರ್ಷದ ಆರಂಭದಲ್ಲಿ, ಕತ್ರಿನಾ ಕೈಫ್‍‍ರವರು ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಎಸ್‌ಯುವಿಯನ್ನು ಖರೀದಿಸಿದ್ದರು. ಮಲೈಕಾ ಅರೋರಾ, ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಹಲವು ತಾರೆಯರು ಎಸ್‍‍ಯು‍‍ವಿಗಳ ಒಡೆಯರಾಗಿದ್ದಾರೆ.

ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಮರ್ಸಿಡಿಸ್ ಜಿಎಲ್ಇ ಕ್ಲಾಸ್ ಎಸ್‌ಯುವಿ ಬಗ್ಗೆ ಹೇಳುವುದಾದರೆ, ಹುಮಾ ಖುರೇಷಿ, ಸಲ್ಮಾನ್ ಖಾನ್, ಶಾಹಿದ್ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಎಸ್‍‍ಯುವಿಯನ್ನು ಹೊಂದಿದ್ದಾರೆ. ಶಾಹಿದ್ ಕಪೂರ್ ಹಾಗೂ ಸಲ್ಮಾನ್ ಖಾನ್‍‍ರವರು ಜಿಎಲ್ಇ 43 ಎಎಂಜಿ ಕೂಪೆಯನ್ನು ಹೊಂದಿದ್ದಾರೆ.

ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಈ ಎಸ್‍‍ಯು‍‍ವಿ ಸಾಮಾನ್ಯ ಜಿಎಲ್ಇ ಎಸ್‍‍ಯುವಿಗಿಂತ ಹೆಚ್ಚು ಸ್ಪೋರ್ಟಿ ಹಾಗೂ ಬಲಶಾಲಿಯಾದ ಆವೃತ್ತಿಯಾಗಿದೆ. ಜಿಎಲ್ಇ ಕ್ಲಾಸ್ ಅನ್ನು ಈ ಮೊದಲು ಎಂ ಕ್ಲಾಸ್ ಎಂದು ಕರೆಯಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಜಿಎಲ್ ಕ್ಲಾಸ್ ಎಸ್‌ಯುವಿ ಸೇರಿದಂತೆ ಹಲವಾರು ಎಸ್‍‍ಯು‍‍ವಿ ಸರಣಿಗಳ ಹೆಸರನ್ನು ಬದಲಾಯಿಸಲಾಗಿದೆ.

ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಟ್ರೈ ಸ್ಟಾರ್ ಬ್ರ್ಯಾಂಡ್‌ಗಾಗಿ ಭಾರತದಲ್ಲಿ ಜನಪ್ರಿಯ ಉತ್ಪನ್ನವಾಗಿದ್ದ ಹಳೆಯ ಎಂ ಕ್ಲಾಸ್‌ನ ನವೀಕೃತ ಆವೃತ್ತಿಯಾಗಿ ಜಿಎಲ್‌ಇ ಅನ್ನು ಭಾರತಕ್ಕೆ ತರಲಾಯಿತು. ಈ ಎಸ್‍‍ಯು‍‍ವಿ ಪರಿಷ್ಕರಿಸಿದ ಗ್ರಿಲ್, ಹೊಸ ಹೆಡ್‌ಲ್ಯಾಂಪ್‌ ಹಾಗೂ ಹೊರಭಾಗದಲ್ಲಿ ಹೊಸ ಎಲ್‌ಇಡಿ ಟೇಲ್‌ಲೈಟ್‌ಗಳನ್ನು ಹೊಂದಿದೆ.

ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಇಂಟಿರಿಯರ್ ಬಗ್ಗೆ ಹೇಳುವುದಾದರೆ ಈ ಐಷಾರಾಮಿ ಎಸ್‍‍ಯುವಿಯಲ್ಲಿ ಮೆಮೊರಿ ಹೊಂದಿರುವ ಎಲೆಕ್ಟ್ರಿಕ್ ಸೀಟ್ ಅಡ್ಜಸ್ಟ್ ಮೆಂಟ್‍‍ಗಳು, ಕಮಾಂಡ್ ಇಂಟರ್‍‍ಫೇಸ್ ಹಾಗೂ ಐದು ವಿಧದ ಡ್ರೈವಿಂಗ್ ಮೋಡ್‌ಗಳಿವೆ.

ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಮರ್ಸಿಡಿಸ್ ಬೆಂಜ್ ಭಾರತದಲ್ಲಿ ಜಿಎಲ್ಇ ಎಸ್‍‍ಯು‍‍ವಿಯೊಂದಿಗೆ ಒಟ್ಟು ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ. ಅವುಗಳಲ್ಲಿ ಎರಡು ಡೀಸೆಲ್‍ ಎಂಜಿನ್‍‍ಗಳಾಗಿವೆ. ಮೂಲ ಮಾದರಿಯು 2.1ಲೀಟರ್‍‍ನ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 201 ಬಿಎಚ್‌ಪಿ ಪವರ್ ಹಾಗೂ 500 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕಂಗನಾ ರನಾವತ್

ಮಧ್ಯಮ ಮಾದರಿಯು 3.0 ಲೀಟರ್‍‍ನ ವಿ6 ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 333 ಬಿಹೆಚ್‍‍ಪಿ ಪವರ್ ಹಾಗೂ 480 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಪ್ ಮಾದರಿಯ ವಾಹನವು 3.0ಲೀಟರ್ ವಿ6 ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 255 ಬಿಹೆಚ್‍‍ಪಿ ಪವರ್ 620 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲ್ಲಾ ಎಂಜಿನ್‍‍ಗಳು 9ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿವೆ.

Most Read Articles

Kannada
English summary
Bollywood actress Kangana Ranaut buys a Spanking new Mercedes-Benz GLE luxury SUV - Read in kannada
Story first published: Tuesday, July 30, 2019, 14:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X