ಅಂತೂ ಇಂತೂ ನಿಷೇಧದ ಭೀತಿಯಿಂದ ಪಾರಾದ ಓಲಾ..!

ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ್ದ ಸಾರಿಗೆ ಇಲಾಖೆಯು ನಿಯಮ ಉಲ್ಲಂಘಿಸಿ ಕಾರ್ಯಾಚರಣೆ ನಡೆಸುತ್ತಿದ್ದ ಹಿನ್ನಲೆಯಲ್ಲಿ 6 ತಿಂಗಳ ಕಾಲ ನಿಷೇಧ ಹೇರಿತ್ತು. ಆದ್ರೆ ನಿಷೇಧಗೊಳಿಸಿದ ಕೇವಲ ಎರಡೇ ದಿನಗಳಲ್ಲಿ ಸೇವಾ ಪರವಾನಿಗೆಯನ್ನು ವಾಪಸ್ ಪಡೆಯುವಲ್ಲಿ ಓಲಾ ಯಶಸ್ವಿಯಾಗಿದೆ.

ಅಂತೂ ಇಂತೂ ನಿಷೇಧದ ಭೀತಿಯಿಂದ ಪಾರಾದ ಓಲಾ..!

ರಾಜಧಾನಿ ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಸಂಚಾರವನ್ನು ಆರು ತಿಂಗಳ ಕಾಲ ನಿಷೇಧಿಸಿ, ಸೇವಾ ಪರವಾನಗಿ ರದ್ದುಗೊಳಿಸಿದ್ದ ಸಾರಿಗೆ ಇಲಾಖೆಯು ತನ್ನ ಆದೇಶವನ್ನು ಹಿಂಪಡೆದಿದೆ. ಈ ಸಂಬಂಧ ರಾಜ್ಯ ಸರ್ಕಾರವೇ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ್ದು, ಕ್ಯಾಬ್ ಸೇವೆಯನ್ನೇ ಜೀವನಾಧಾರ ಮಾಡಿಕೊಂಡಿರುವ ಸಾವಿರಾರು ಚಾಲಕರ ಕುಟುಂಬಗಳು ನಿಟ್ಟುಸಿರುವ ಬಿಟ್ಟಿವೆ.

ಅಂತೂ ಇಂತೂ ನಿಷೇಧದ ಭೀತಿಯಿಂದ ಪಾರಾದ ಓಲಾ..!

ಓಲಾ ಮೇಲಿನ ನಿಷೇಧ ಹಿಂಪಡೆಯುವಿಕೆ ಕುರಿತಂತೆ ಸಾಮಾಜಿಕ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಓಲಾ ಕ್ಯಾಬ್ ಸೇವೆಗಳು ಎಂದಿನಂತೆ ಸಂಚರಿಸಲಿದ್ದು, ಸರ್ಕಾರದ ನೀತಿ ನಿಯಮಗಳ ಅಡಿ ಓಲಾ ಕಾರ್ಯನಿರ್ವಹಿಸಬೇಕಿದೆ ಎಂದಿದ್ದಾರೆ.

ಹಾಗೆಯೇ ಓಲಾ ಸಂಸ್ಥೆಯು ತನ್ನ ಬೈಕ್ ಟ್ಯಾಕ್ಸಿ ಓಡಿಸಲು ಹೊಸ ತಂತ್ರಜ್ಞಾನ ನಿಯಮದಡಿ ಪರವಾನಿಗೆ ಪಡೆಯುವ ಅವಶ್ಯಕತೆ ಎಂದು ಸ್ಪಷ್ಟಪಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆಯವರು, ಮುಂಬರುವ ದಿನಗಳಲ್ಲಿ ಬೈಕ್ ಟ್ಯಾಕ್ಸಿಗಳು ಕೂಡಾ ಅಧಿಕೃತವಾಗಿಯೇ ಓಡಾಡುವ ಬಗ್ಗೆ ಸುಳಿವು ನೀಡಿದ್ದಾರೆ.

ಅಂತೂ ಇಂತೂ ನಿಷೇಧದ ಭೀತಿಯಿಂದ ಪಾರಾದ ಓಲಾ..!

ಇನ್ನು 02-04-2016ರಿಂದ ಜಾರಿಗೆ ಬರುವಂತೆ ಅನಿ ಟೆಕ್ನಾಲಜಿಸ್ ಪ್ರೈ. ಲಿಮಿಟೆಡ್(ಓಲಾ) ಸಂಸ್ಥೆಯು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಿಗಾಗಿ ಸಾರಿಗೆ ಇಲಾಖೆಯಿಂದ ಅನುಮತಿ ಪಡೆದಿತ್ತು. ಆದ್ರೆ ನಿಯಮ ಮೀರಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತಿರುವ ಓಲಾ ಲೈಸೆನ್ಸ್ ರದ್ದುಗೊಳಿಸಲಾಗಿತ್ತು. ಲೈಸೆನ್ಸ್ ಪಡೆದ ನಂತರ ಸಾರಿಗೆ ನಿಯಮಾವಳಿಗಳಲ್ಲಿ ನಿಗದಿಪಡಿಸಿದ ನಿಬಂಧನೆಗಳನ್ವಯ ಕಾರ್ಯಾಚರಣೆ ಮಾಡಬೇಕಿದ್ದ ಓಲಾ, ಕ್ಯಾಬ್ ಸೇವೆಗಳನ್ನು ಹೊರತುಪಡಿಸಿ ಅಕ್ರಮವಾಗಿ ವೈಟ್ ಬೋರ್ಡ್ ಹೊಂದಿರುವ ಬೈಕ್ ಟ್ಯಾಕ್ಸಿ ಸೇವೆಯನ್ನು ಸಹ ಶುರು ಮಾಡಿದ್ದೆ ಇಷ್ಟೆೇಲ್ಲಾ ರಾದ್ದಾಂತಕ್ಕೆ ಕಾರಣವಾಗಿತ್ತು.

ಅಂತೂ ಇಂತೂ ನಿಷೇಧದ ಭೀತಿಯಿಂದ ಪಾರಾದ ಓಲಾ..!

ಕಳೆದ ಮೂರು ನಾಲ್ಕು ತಿಂಗಳಿನಿಂದ ಬೆಂಗಳೂರು, ಮೈಸೂರಿನಲ್ಲಿ ಓಲಾ ಬೈಕ್ ಟ್ಯಾಕ್ಸಿ ಸೇವೆಗಳ ಹಾವಳಿ ಹೆಚ್ಚಾಗಿದ್ದಲ್ಲದೇ ಬೈಕ್ ಟ್ಯಾಕ್ಸಿಯಿಂದಾಗಿ ಆಟೋ ಚಾಲಕರ ಆದಾಯಕ್ಕೂ ಭಾರೀ ಹೊಡೆತ ಬಿದ್ದಿತ್ತು. ಈ ಕುರಿತು ಓಲಾ ವಿರುದ್ಧ ಪ್ರತಿಭಟಿಸಿದ್ದ ಆಟೋ ಚಾಲಕರ ಸಂಘಗಳು, ವೈಟ್ ಬೋರ್ಡ್ ಹೊಂದಿರುವ ಬೈಕ್ ಟ್ಯಾಕ್ಸಿಗಳ ನಿಯಂತ್ರಿಸಿ ಎಂದು ಮನವಿ ಮಾಡಿದ್ದರು.

ಅಂತೂ ಇಂತೂ ನಿಷೇಧದ ಭೀತಿಯಿಂದ ಪಾರಾದ ಓಲಾ..!

ಈ ಕುರಿತು ಕಾರ್ಯಚರಣೆ ನಡೆಸಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳು ಓಲಾ ಸಂಸ್ಥೆಯು ಅಕ್ರಮವಾಗಿ ನಡೆಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಲ್ಲೇ ಬೈಕ್ ಟ್ಯಾಕ್ಸಿಗೆ ಬಳಸಲಾಗುತ್ತಿದ್ದ ಕೆಎ-05, ಜೆಜೆ 6702, ಕೆಎ-51, ಕೆ 8134, ಕೆಎ-04, ಹೆಚ್‌ಡಿ 1756, ಕೆಎ-16, ಇಜೆ 9055 ನೋದಂಣಿಯ ಬೈಕ್‌ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿ ಅಕ್ರಮ ಪತ್ತೆ ಹಚ್ಚಿ ಓಲಾ ಸಂಸ್ಥೆಗೆ ನೋಟಿಸ್ ನೀಡಲಾಗಿತ್ತು.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಅಂತೂ ಇಂತೂ ನಿಷೇಧದ ಭೀತಿಯಿಂದ ಪಾರಾದ ಓಲಾ..!

ಕೊನೆಗೆ ನೋಟಿಸ್‌ಗೂ ಯಾವುದೇ ಉತ್ತರ ಸಿಗದ ಹಿನ್ನೆಲೆಯಲ್ಲಿ ನಿಷೇಧ ಹೇರಿದ್ದ ಸಾರಿಗೆ ಸಂಸ್ಥೆಯು ಹಲವು ಸುತ್ತಿನ ಮಾತುಕತೆಗಳು ಮತ್ತು ದಂಡ ಪಾವತಿಸಲು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ನಿಷೇಧವನ್ನು ಹಿಂಪಡೆದಿದ್ದು, ಮುಂಬರುವ ದಿನಗಳಲ್ಲಿ ಅಧಿಕೃತವಾಗಿಯೇ ಬೈಕ್ ಟ್ಯಾಕ್ಸಿಗಳನ್ನು ಓಡಿಸುವ ಬಗ್ಗೆ ಓಲಾ ಉತ್ಸುಕವಾಗಿದೆ.

ಅಂತೂ ಇಂತೂ ನಿಷೇಧದ ಭೀತಿಯಿಂದ ಪಾರಾದ ಓಲಾ..!

ಇನ್ನು ಕಳೆದ ವಾರವಷ್ಟೇ ಓಲಾ ಸಂಸ್ಥೆಯಲ್ಲಿ ಬರೋಬ್ಬರಿ ರೂ. 2,100 ಕೋಟಿ ಬಂಡವಾಳ ಹೂಡಿಕೆ ಮಾಡಿರುವ ಹ್ಯುಂಡೈ ಮತ್ತು ಕಿಯಾ ಮೋಟಾರ್ಸ್ ಸಂಸ್ಥೆಯು ಕ್ಯಾಬ್ ಸೇವೆಗಳಲ್ಲಿ ಹೊಸ ಬದಲಾವಣೆಗಾಗಿ ಯೋಜನೆ ರೂಪಿಸಿದ್ದು, ಓಲಾ ಕ್ಯಾಬ್ ಸೇವೆಗಳಿಗಾಗಿ ಹ್ಯುಂಡೈ ಮತ್ತು ಕಿಯಾ ಮೋಟಾರ್ಸ್ ಸಂಸ್ಥೆಗಳು ಎಲೆಕ್ಟ್ರಿಕ್ ಕಾರುಗಳನ್ನು ಪೂರೈಸಲಿವೆ ಎನ್ನವಾಗಿದೆ.

MOST READ: ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಅಂತೂ ಇಂತೂ ನಿಷೇಧದ ಭೀತಿಯಿಂದ ಪಾರಾದ ಓಲಾ..!

ಈ ಮೂಲಕ 2010ರಲ್ಲಿ ಕೇವಲ ರೂ.10 ಕೋಟಿ ಬಂಡವಾಳದೊಂದಿಗೆ ಆರಂಭವಾಗಿದ್ದ ಓಲಾ ಸಂಸ್ಥೆಯು ಸದ್ಯದ ಮಾರುಕಟ್ಟೆಯ ಮೌಲ್ಯದ ಪ್ರಕಾರ ರೂ. 29 ಸಾವಿರ ಕೋಟಿಯಷ್ಟು ಬೆಲೆಬಾಳುವ ದೇಶದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ರೂ. 758 ಕೋಟಿ ವಾರ್ಷಿಕ ಆದಾಯವನ್ನು ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದೆ.

Most Read Articles

Kannada
English summary
Ola cabs back on Bengaluru roads as Karnataka govt lifts ban. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X