ಕರ್ನಾಟಕದಲ್ಲಿ ಕ್ಯಾಬ್ ಸಂಸ್ಥೆಗಳಿಗೆ ಬರಲಿದೆ ಹೊಸ ರೂಲ್ಸ್

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ 2010ರಲ್ಲಿ ಭವಿಶ್ ಅಗರ್‍‍ವಾಲ್‍‍ರವರು ಒಲಾ ಕಂಪನಿಯನ್ನು ಸ್ಥಾಪಿಸಿದರು. ಇದರ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದೆ. ಒಲಾ ವಾಹನಗಳನ್ನು ಟ್ಯಾಕ್ಸಿಯಾಗಿ, ವಸ್ತುಗಳ ಡೆಲಿವರಿಗಾಗಿ ಹಾಗೂ ಫುಡ್ ಡೆಲಿವರಿಗಾಗಿ ಬಳಸಲಾಗುತ್ತಿದೆ.

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಮತ್ತೊಂದು ಕ್ಯಾಬ್ ಸೇವಾ ಸಂಸ್ಥೆಯಾದ ಅಮೇರಿಕಾದ ಸ್ಯಾಸ್ ಫ್ರಾನ್ಸಿಸ್ಕೊ ಮೂಲದ ಉಬರ್ ಕಂಪನಿಯನ್ನು 2009ರಲ್ಲಿ ಸ್ಥಾಪಿಸಲಾಯಿತು. ಈ ಕಂಪನಿಯು ಭಾರತವೂ ಸೇರಿದಂತೆ ಪ್ರಪಂಚದ 63 ದೇಶಗಳಲ್ಲಿ ಹಾಗೂ 785 ಮೆಟ್ರೊಪಾಲಿಟನ್ ನಗರಗಳಲ್ಲಿ ಸೇವೆಯನ್ನು ನೀಡುತ್ತಿದೆ.

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಈ ಎರಡೂ ಕಂಪನಿಗಳ ಸೇವೆಯನ್ನು ಈ ಕಂಪನಿಗಳ ವೆಬ್‍‍ಸೈಟ್ ಮೂಲಕ ಹಾಗೂ ಆಪ್ ಮೂಲಕ ಪಡೆಯಬಹುದು. ಕೆಲವೊಮ್ಮೆ ಕೈಗೆಟಕುವ ದರದಲ್ಲಿ ಇನ್ನೂ ಕೆಲವೊಮ್ಮೆ ದುಬಾರಿ ಬೆಲೆಯನ್ನು ವಿಧಿಸಿ ಸೇವೆಯನ್ನು ಒದಗಿಸುತ್ತಿವೆ.

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಆದರೆ ಈ ಕಂಪನಿಗಳಲ್ಲಿನ ನೌಕರರಿಗೆ ಸರಿಯಾದ ವೇತನ ನೀಡುತ್ತಿಲ್ಲ ಹಾಗೂ ಅವರುಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬುದು ಈ ಎರಡೂ ಕಂಪನಿಗಳ ಮೇಲಿರುವ ದೂರು. ಡೆಲಿವರಿ ಬಾಯ್ ಹಾಗೂ ಕ್ಯಾಬ್ ಡ್ರೈವರ್ ಸೇರಿದಂತೆ ಈ ಕಂಪನಿಗಳಲ್ಲಿರುವ ಸಾವಿರಾರು ನೌಕರರ ಹಿತ ಕಾಯುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಈ ಕಂಪನಿಗಳಿಗಾಗಿ ಕಾರ್ಮಿಕ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿದೆ.

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಇತ್ತೀಚಿಗೆ ಕರ್ನಾಟಕದ ಕಾನೂನು ಸಚಿವರಾದ ಎಸ್ ಸುರೇಶ್ ಕುಮಾರ್‍‍ರವರು ಕಾನೂನು ಇಲಾಖೆಯ ಅಧಿಕಾರಿಗಳ ಜೊತೆ ಸೇರಿ, ಕಂಪನಿಗಳ ಪ್ರತಿನಿಧಿಗಳು ಹಾಗೂ ನೌಕರರ ಜೊತೆಗೆ ಸುದೀರ್ಘ ಅವಧಿಯವರೆಗೆ ಮಾತುಕತೆ ನಡೆಸಿದ್ದರು.

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಈ ಬಗ್ಗೆ ಮಾತನಾಡಿದ ಸುರೇಶ್ ಕುಮಾರ್‍‍ರವರು, ಕಂಪನಿಗಳು ಡೆಲಿವರಿ ಬಾಯ್‍‍ಗಳು ಹಾಗೂ ಕ್ಯಾಬ್ ಚಾಲಕರು ತಮ್ಮ ಪಾಲುದಾರರು ಎಂದು ಹೇಳಿವೆ. ಆದರೆ ಡೆಲಿವರಿ ಬಾಯ್‍‍ಗಳು ಹಾಗೂ ಕ್ಯಾಬ್ ಚಾಲಕರ ಪ್ರಕಾರ ಅವರು ಉದ್ಯೋಗಿಗಳಿಗಿಂತ ಹೆಚ್ಚೇನೂ ಅಲ್ಲ.

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಇದರ ಪರಿಣಾಮವಾಗಿ, ನಮ್ಮ ಉಪ ಕಾರ್ಮಿಕ ಆಯುಕ್ತ ಬಾಲಕೃಷ್ಣರವರಿಗೆ ಎರಡೂ ಕಡೆಯವರೊಂದಿಗೆ ಚರ್ಚಿಸಿ ಇಂದಿನಿಂದ ಒಂದು ತಿಂಗಳೊಳಗೆ ವಿವರವಾದ ವರದಿಯನ್ನು ನೀಡುವಂತೆ ನಿರ್ದೇಶನ ನೀಡಿದ್ದೇನೆ. ಈ ವರದಿಯ ಆಧಾರದ ಮೇಲೆ ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ. ನಂತರ ಈ ಕಂಪನಿಗಳಿಗಾಗಿ ಕಾರ್ಮಿಕ ಕಾನೂನನ್ನು ರೂಪಿಸಲಿದೆ ಎಂದು ಹೇಳಿದರು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಈ ಸಭೆಯಲ್ಲಿ ಭಾಗವಹಿಸಿದ್ದ ಒಲಾ ಹಾಗೂ ಉಬರ್ ಕಂಪನಿಯ ನೌಕರರು, ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಸೌಲಭ್ಯ ಹೊಂದಿರುವ ಜೊಮ್ಯಾಟೊ ಹಾಗೂ ಸ್ವಿಗ್ಗಿಯಂತಹ ಕಂಪನಿಗಳ ನೌಕರರ ನಿರ್ಧಾರವನ್ನು ವಿರೋಧಿಸಿದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಕಾರ್ಮಿಕ ಮುಖಂಡರಾದ ಕುಮಾರ್‍‍ರವರು ಮಾತನಾಡಿ, ಈ ಕಂಪನಿಗಳು ಡೆಲಿವರಿ ಬಾಯ್‍‍ಗಳಿಗೆ ಪ್ರತಿ ತಿಂಗಳು ರೂ.25,000 ಸಂಬಳ ಹಾಗೂ ಇನ್ಶೂರೆನ್ಸ್ ಆಗಿ ರೂ.6 ಲಕ್ಷ ನೀಡಲಾಗುವುದೆಂಬ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ, ಮೊಬೈಲ್‍‍ಗಳ ಮೂಲಕ ಹರಡುತ್ತಿವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಈಗ ಡೆಲಿವರಿ ಬಾಯ್‍‍ಗಳು ತಮ್ಮ ಕಂಪನಿಯ ಪಾಲುದಾರರು ಎಂದು ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ಮಾತನ್ನು ವಿರೋಧಿಸಿ ಮಾತನಾಡಿದ ಸ್ವಿಗ್ಗಿ ಕಂಪನಿಯ ಕಾನೂನು ಪ್ರತಿನಿಧಿ, ವೈದ್ಯಕೀಯ ಉದ್ದೇಶಗಳಿಗಾಗಿ ರೂ.1 ಲಕ್ಷ ಹಾಗೂ ಅಪಘಾತಗಳಿಗಾಗಿ ರೂ.5 ಲಕ್ಷವನ್ನು ಪ್ರತಿ ಡೆಲಿವರಿ ಪಾಲುದಾರರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ನಮ್ಮ ಡೆಲಿವರಿ ಪಾಲುದಾರರು ಸ್ವಿಗ್ಗಿಯನ್ನು ಹೊರತುಪಡಿಸಿ ಬೇರೆ ಕಡೆ ಕೆಲಸ ಮಾಡಬಹುದಾಗಿದೆ. ನಮ್ಮ ಪಾಲುದಾರರಲ್ಲಿ ಬಹುಪಾಲು ಜನರು ಕಾಲೇಜು ವಿದ್ಯಾರ್ಥಿಗಳು ಹಾಗೂ ಹೆಚ್ಚುವರಿ ಆದಾಯವನ್ನು ಗಳಿಸಲು ಬರುವವರಾಗಿದ್ದಾರೆ ಎಂದು ಕಂಪನಿಯ ಕಾನೂನು ತಂಡದ ಪಾಂಡುರಂಗರವರು ಹೇಳಿದರು.

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಇದರ ಬಗ್ಗೆ ಮಾತನಾಡಿದ ಮತ್ತೊಬ್ಬ ಕಾರ್ಮಿಕ ಮುಖಂಡರು ಕಂಪನಿಯ ಮೌಲ್ಯಮಾಪನವು ತಪ್ಪಾಗಿದೆ. ಕಂಪನಿಗಳು ತಮ್ಮ ಪ್ರಕರಣವನ್ನು ಸಾಬೀತುಪಡಿಸಲು ದೋಷಪೂರಿತ ಪ್ಯಾರೆಟೋ ಮಾದರಿಯನ್ನು ಬಳಸುತ್ತಿವೆ ಎಂದು ಹೇಳಿದರು.

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಈ ಕಂಪನಿಗಳಲ್ಲಿರುವ ಹೆಚ್ಚಿನ ಉದ್ಯೋಗಿಗಳು / ಪಾಲುದಾರರು ಪುಡ್ ಡೆಲಿವರಿಯಿಂದ ಬರುವ ಹಣದಿಂದ ಜೀವನ ನಡೆಸುವವರು. ಕಂಪನಿಗಳು ಪ್ರತಿ ಫುಡ್ ಆರ್ಡರ್ ಮೇಲೆ ಇಂತಿಷ್ಟು ಪ್ರೋತ್ಸಾಹ ಧನವನ್ನು ನೀಡುತ್ತವೆ.

ಕ್ಯಾಬ್ ಸಂಸ್ಥೆಗಳಿಗೂ ಬರಲಿದೆ ಹೊಸ ಕಾನೂನು

ಈ ಕಾರಣಕ್ಕೆ ಡೆಲಿವರಿ ಬಾಯ್‍‍ಗಳು ಹೆಚ್ಚು ಮೊತ್ತವನ್ನು ಗಳಿಸಲು ಹೆಚ್ಚು ಫುಡ್ ಆರ್ಡರ್‍‍ಗಳನ್ನು ಡೆಲಿವರಿ ಮಾಡುತ್ತಿದ್ದಾರೆ. ಪ್ರತಿ ಫುಡ್ ಡೆಲಿವರಿಯ ಮೇಲೆ ರೂ.12ರಿಂದ ರೂ.15 ಪಡೆಯುತ್ತಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಕಾರ್ಮಿಕ ಮುಖಂಡರು ಹೇಳಿದರು.

Most Read Articles

Kannada
English summary
Government to frame labour rules and regulations for app-based companies - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X