ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಹೆಚ್ಚುತ್ತಿರುವ ಮಾಲಿನ್ಯ ಮತ್ತು ಡೀಸೆಲ್ ನಿರ್ವಹಣಾ ವೆಚ್ಚಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮಹತ್ವದ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆ ಅಡಿ ಕರ್ನಾಟಕ ಸರ್ಕಾರವು 400 ಎಲೆಕ್ಟ್ರಿಕ್ ಬಸ್‌ಗಳ ನಿರ್ಮಾಣಕ್ಕಾಗಿ ಒಲೆಕ್ಟ್ರಾ ಬಿವೈಡಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಮಾಲಿನ್ಯ ನಿಯಂತ್ರಣಕ್ಕಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಯ ಅವಶ್ಯಕತೆಯಿದ್ದು, ಮಾಲಿನ್ಯ ಹೊರಸೂಸುವಿಕೆಯಲ್ಲಿ ಗರಿಷ್ಠ ಪಾಲು ಹೊಂದಿರುವ ಡೀಸೆಲ್ ಎಂಜಿನ್‌ ಬಸ್‌ಗಳ ಬಳಕೆಯನ್ನು ತಗ್ಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರವು ಫೇಮ್ 2 ಯೋಜನೆ ಅಡಿ ಬರೋಬ್ಬರಿ 10 ಸಾವಿರ ಕೋಟಿ ವ್ಯಯ ಮಾಡುತ್ತಿದ್ದು, ಕರ್ನಾಟಕ ಸರ್ಕಾರವು ಖರೀದಿ ಮಾಡುವ ಎಲೆಕ್ಟ್ರಿಕ್ ಬಸ್‌ಗಳಿಗೆ ಕೇಂದ್ರ ಸರ್ಕಾರವು ಸಬ್ಸಡಿ ಒದಗಿಸಲಿದೆ.

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಫೇಮ್ 2 ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರವು ಸುಮಾರು 400 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿ ಮಾಡುತ್ತಿದ್ದು, ಹೊಸ ಎಲೆಕ್ಟ್ರಿಕ್ ಬಸ್‌ಗಳು ನಗರ ಸಾರಿಗೆ, ಇಂಟರ್ ಸಿಟಿ ಮತ್ತು ಅಂತರ್‌ರಾಜ್ಯಗಳ ನಡುವೆ ಸಂಪರ್ಕದಲ್ಲಿ ಮಹತ್ವದ ಬದಲಾವಣೆ ತರಲಿವೆ.

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಪುಣೆ ಮೂಲದ ಒಲೆಕ್ಟ್ರಾ ಬಿವೈಡಿ ಸಂಸ್ಥೆಯಿಂದ ಖರೀದಿ ಮಾಡಲಾಗುವ 400 ಎಲೆಕ್ಟ್ರಿಕ್ ಬಸ್‌ಗಳಲ್ಲಿ ಬಿಎಂಟಿಸಿ ಸಂಸ್ಥೆಗೆ 300 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲಾಗುತ್ತಿದ್ದು, ಇನ್ನುಳಿದ 100 ಎಲೆಕ್ಟ್ರಿಕ್ ಬಸ್‌ಗಳಲ್ಲಿ ಕೆಎಸ್ಆರ್‌ಟಿಗೆ 50 ಮತ್ತು ಎನ್‌ಡಬ್ಲ್ಯೂ‌ಕೆಎಸ್‌ಟಿಸಿಗೆ 50 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ನಿರ್ಧರಿಸಲಾಗಿದೆ.

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಐರಾವಾತ ಬ್ರಾಂಡ್ ಅಡಿ ಚಲಿಸುತ್ತಿರುವ ವೊಲ್ವೋ ಡೀಸೆಲ್ ಬಸ್‌ಗಳಿಂದ ಲಾಭಕ್ಕಿಂತ ನಿರ್ವಹಣಾ ವೆಚ್ಚವೇ ಹೆಚ್ಚುತ್ತಿರುವುದರಿಂದ ತುರ್ತಾಗಿ ಎಲೆಕ್ಟ್ರಿಕ್ ಬಸ್‌ಗಳ ಸೇವೆ ಪ್ರಾರಂಭಿಸಲಾಗುತ್ತಿದ್ದು, ವೋಲ್ವೋ ಬಿ 7 ಆರ್ ಮತ್ತು ಬಿ 9 ಆರ್ ಡೀಸೆಲ್ ಬಸ್‌‌ಗಳ ನಿರ್ವಹಣೆಗಿಂತ ಒಲೆಕ್ಟ್ರಾ ಬಿವೈಡಿ ಕೆ 9 ಬಸ್‌ಗಳಿಂದ ನಿರ್ವಹಣಾ ವೆಚ್ಚವು ಅಧಿಕ ಮಟ್ಟದಲ್ಲಿ ಇಳಿಕೆಯಾಗುವ ನೀರಿಕ್ಷೆಯಿದೆ. ಜೊತೆಗೆ ಮಾಲಿನ್ಯ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ತಗ್ಗಲಿದ್ದು, ಹೊಸ ಎಲೆಕ್ಟ್ರಿಕ್ ಬಸ್‌ಗಳು ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರಲಿವೆ.

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಚೀನಾ ಮೂಲದ ಬಿವೈಡಿ ಸಂಸ್ಥೆಯು ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಈಗಾಗಲೇ ಸಾಕಷ್ಟು ಮುನ್ನಡೆ ಕಾಯ್ದುಕೊಂಡಿದ್ದು, ಇದೇ ಸಂಸ್ಥೆ ಇದೀಗ ಪುಣೆ ಮೂಲದ ಒಲೆಕ್ಟ್ರಾ ಜೊತೆಗೂಡಿ ಭಾರತೀಯ ರಸ್ತೆಗಳಿಗೆ ಹೊಂದಾಣಿಕೆಯಾಗಬಲ್ಲ ವಿವಿಧ ಶ್ರೇಣಿಯ ಎಲೆಕ್ಟ್ರಿಕ್ ಬಸ್‌ಗಳನ್ನು ಸಿದ್ದಪಡಿಸಿ ಮಾರಾಟಕ್ಕೆ ಚಾಲನೆ ನೀಡಿದೆ.

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಇದೀಗ ಕೆಎಸ್‌ಆರ್‌ಟಿಸಿ ಸಂಸ್ಥೆಯು ಖರೀದಿಸುತ್ತಿರುವ ಒಲೆಕ್ಟ್ರಾ ಬಿವೈಡಿ ಕೆ 9 ಬಸ್‌ಗಳು ನಗರ ಸಾರಿಗೆ ಮತ್ತು ಇಂಟರ್ ಸಿಟಿ ಮಾರ್ಗಗಳಲ್ಲಿ ಸಂಚರಿಸಲಿದ್ದು, ಕೆ 9 ಬಸ್‌ಗಳು ಪ್ರತಿ ಚಾರ್ಜ್‌ಗೆ 250 ಕಿ.ಮಿ ಮೈಲೇಜ್ ಸಾಮರ್ಥ್ಯದ ಸುಧಾರಿತ ಬ್ಯಾಟರಿ ತಂತ್ರಜ್ಞಾನ ಸೌಲಭ್ಯ ಹೊಂದಿರಲಿವೆ.

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಇದರಲ್ಲಿ ಕೆಎಸ್‌ಆರ್‌ಟಿಸಿ ಅಧೀನಕ್ಕೆ ಬರುವ 50 ಬಸ್‌ಗಳು ಇಂಟರ್ ಸಿಟಿ ಮಾರ್ಗಗಳಲ್ಲಿ ಸಂಚಾರ ನಡೆಸಲಿದ್ದು, ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೂ ಮುನ್ನ ಅಗತ್ಯ ಚಾರ್ಚಿಂಗ್ ಸ್ಟೆಷನ್‌ಗಳನ್ನು ತೆರೆಯಲು ಚಾಲನೆ ನೀಡಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಇಂಟರ್ ಸಿಟಿ ಮಾರ್ಗಗಳು

ಮಾಹಿತಿಗಳ ಪ್ರಕಾರಮೊದಲ ಹಂತದಲ್ಲಿ ಬೆಂಗಳೂರು-ಮೈಸೂರು, ಬೆಂಗಳೂರು-ತುಮಕೂರು, ಬೆಂಗಳೂರು-ದಾವಣಗೆರೆ ಮತ್ತು ಬೆಂಗಳೂರು-ಶಿವಮೊಗ್ಗ ಮಾರ್ಗಗಳನ್ನು ಆಯ್ದುಕೊಳ್ಳಲಾಗಿದ್ದು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಡಿ ಬರುವ ಮಾರ್ಗಗಳನ್ನು ಇನ್ನು ಘೋಷಣೆ ಮಾಡಿಲ್ಲ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಹೀಗಾಗಿ ಸದ್ಯಕ್ಕೆ ದೂರದ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡದಿರಲು ನಿರ್ಧರಿಸಲಾಗಿದ್ದು, ಬ್ಯಾಟರಿ ಸಾಮರ್ಥ್ಯಕ್ಕಿಂತ ಹೆಚ್ಚು ದೂರವಿರುವ ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ಹೆಚ್ಚುವರಿ ಎಲೆಕ್ಟ್ರಿಕ್ ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಇನ್ನು ಒಲೆಕ್ಟ್ರಾ ಬಿವೈಡಿ ಕೆ 9 ಬಸ್‌ಗಳು ಪೂರ್ಣ ಪ್ರಮಾಣದ ಚಾರ್ಜಿಂಗ್‌ಗಾಗಿ ಎರಡೂವರೆ ಗಂಟೆಯಿಂದ ಮೂರು ಗಂಟೆ ಸಮಯ ತೆಗೆದುಕೊಳ್ಳಲಿದ್ದು, ದೂರದ ಪ್ರಯಾಣದಲ್ಲಿ ಕೊನೆಯ ಹಂತದ ನಿಲ್ದಾಣ ಮತ್ತು ಮಾರ್ಗ ಮಧ್ಯದ ನಿಲ್ದಾಣದಲ್ಲಿ ಪೂರ್ಣಪ್ರಮಾಣದ ಚಾರ್ಜಿಂಗ್ ನಂತರವೇ ಸಂಚಾರ ಆರಂಭಿಸಲಿವೆ.

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಇದರಿಂದ ಆರಂಭದಲ್ಲಿ ಚಾರ್ಜಿಂಗ್‌ ಪ್ರಕ್ರಿಯೆಗೆ ಹೆಚ್ಚಿನ ಸಮಯ ವ್ಯರ್ಥವಾಗುವ ಸಾಧ್ಯತೆಗಳಿದ್ದು, ಕಡಿಮೆ ಅವಧಿಯಲ್ಲಿ ಪೂರ್ಣ ಪ್ರಮಾಣದ ಚಾರ್ಜಿಂಗ್ ತಂತ್ರಜ್ಞಾನ ಅಭಿವೃದ್ದಿಗಾಗಿ ಒಲೆಕ್ಟ್ರಾ ಬಿವೈಡಿ ಈಗಾಗಲೇ ಚಾಲನೆ ನೀಡಿದೆ.

ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಒಟ್ಟಿನಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಂದ ಸಾರ್ವಜನಿಕ ಸಾರಿಗೆ ವಲಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದ್ದು, ಧೀರ್ಘಕಾಲಿಕ ಬ್ಯಾಟರಿ ಸೌಲಭ್ಯ ಒದಗಿಸಿದ್ದಲ್ಲಿ ಮಾತ್ರವೇ ಹೊಸ ಯೋಜನೆಯಿಂದ ಗರಿಷ್ಠ ಲಾಭ ನೀರಿಕ್ಷೆ ಮಾಡಬಹುದಾಗಿದೆ.

Most Read Articles

Kannada
English summary
Karnataka To Procure Olectra BYD K9 Electric Buses To Connect Four Cities. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X