ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?

ಸೆಲ್ಟೊಸ್ ಬಿಡುಗಡೆಯ ನಂತರ ಕಿಯಾ ಮೋಟಾರ್ಸ್ ಸಂಸ್ಥೆಯ ಎರಡನೇ ಕಾರು ಮಾದರಿಯಾಗಿ ಕಾರ್ನಿವಾಲ್ ಎಂಪಿವಿ ಆವೃತ್ತಿಯು ಮಾರುಕಟ್ಟೆ ಪ್ರವೇಶಿಸಲಿದ್ದು, 2020ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಖರೀದಿಗೆ ಈಗಾಗಲೇ ಆಯ್ದು ಕಿಯಾ ಮೋಟಾರ್ಸ್ ಡೀಲರ್ಸ್‌ಗಳಲ್ಲಿ ಬುಕ್ಕಿಂಗ್ ಸ್ವಿಕರಿಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?

ಕಾರ್ನಿವಾಲ್ ಕಾರು ಖರೀದಿಗೆ ಅಧಿಕೃತವಾಗಿ ಇದುವರೆಗೂ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿಲ್ಲವಾದರೂ ಕೂಡಾ ಆಸಕ್ತ ಗ್ರಾಹಕರು ಹೊಸ ಕಾರು ಖರೀದಿಗೆ ಈಗಿನಿಂದಲೇ ಮುಂಗಡ ಪಾವತಿ ಮಾಡುತ್ತಿದ್ದು, ಹೊಸ ಕಾರು ಮುಂದಿನ ತಿಂಗಳು ಜನವರಿ ಅಂತ್ಯಕ್ಕೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಹೊಸ ಕಾರು ಈಗಾಗಲೇ ಸಾವಿರಾರು ಗ್ರಾಹಕರ ಮುಂಗಡ ಪಾವತಿಸಿ ಬುಕ್ಕಿಂಗ್ ಮಾಡಿರುವ ಬಗ್ಗೆ ವರದಿಯಾಗಿದ್ದು, ಸೆಲ್ಟೊಸ್ ಮಾದರಿಯಲ್ಲೇ ಕಾರ್ನಿವಾಲ್ ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ಸುಳಿವು ನೀಡಿದೆ.

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?

ಕಿಯಾ ಮೋಟಾರ್ಸ್ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಕೈಗೆಟುಕುವ ಬೆಲೆಯ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ಕಾರ್ನಿವಾಲ್ ಎಂಪಿವಿ ನಂತರ ಕಂಪ್ಯಾಕ್ಟ್ ಎಸ್‌ಯುವಿ ಸೇರಿದಂತೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಬಿಡುಗಡೆಯಾಗಲಿವೆ.

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?

ಕಾರು ಮಾರಾಟದಲ್ಲಿ ಹೊಸ ಬದಲಾವಣೆ ಕಾರಣವಾಗಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಅಗ್ಗದ ಬೆಲೆಯಲ್ಲಿ ಉತ್ತಮ ಮಾದರಿಯ ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದೆ.

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?

ಸದ್ಯ ಎಂಪಿವಿ(ಮಲ್ಟಿ ಪ್ಯಾಸೆಂಜರ್ ವೆಹಿಕಲ್) ವಿಭಾಗದಲ್ಲಿ ಭಾರೀ ಬೇಡಿಕೆ ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿರುವ ಕಿಯಾ ಕಾರ್ನಿವಾಲ್ ಎಂಪಿವಿ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 18 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯು ರೂ.25 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗಿದೆ.

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?

ಕಾರ್ನಿವಾಲ್ ಕಾರು 5, 115-ಎಂಎಂ ಉದ್ದ, 1,985-ಎಂಎಂ ಅಗಲ ಮತ್ತು 1,755 ಎತ್ತರವನ್ನು ಹೊಂದಿದ್ದು, ಇನೋವಾ ಕ್ರಿಸ್ಟಾ ಕಾರಿಗಿಂತಲೂ 375-ಎಂಎಂ ಹೆಚ್ಚು ಉದ್ದ,155-ಎಂಎಂ ಹೆಚ್ಚು ಅಗಲ ಮತ್ತು 40-ಎಂಎಂ ನಷ್ಟು ಕಡಿಮೆ ಎತ್ತರವನ್ನು ಪಡೆದುಕೊಂಡಿರಲಿದೆ.

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?

ಕಿಯಾ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ 2.2-ಲೀಟರ್ ಟರ್ಬೋ ಡೀಸೆಲ್ ಜೊತೆ 3.3-ಲೀಟರ್ ವಿ6 ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಬೆಲೆ ತಗ್ಗಿಸುವುದಕ್ಕಾಗಿ 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.6-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?

ಇನ್ನು ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗಿಂತಲೂ ಉತ್ತಮ ಪ್ರೀಮಿಯಂ ಸೌಲಭ್ಯ ಹೊಂದಿದ್ದು, 10.1-ಇಂಚಿನ ಇನ್ಪೋಟೈನ್ ಸಿಸ್ಟಂ, ಕಿಯಾ ಯುವಿಒ ಕನೆಕ್ಟ್, ಕಾರ್ ಕನೆಕ್ಟಿವಿಟಿ ಸೂಟ್, ಲಾರ್ಜ್ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎರಡು ಸನ್‌ರೂಫ್, ಪವರ್ ಅಡ್ಜೆಸ್ಟ್‌ಬಲ್ ಡ್ರೈವರ್ ಸೀಟ್, ತ್ರಿ ಕ್ಲೈಮೆಟ್ ಜೋನ್ ಕಂಟ್ರೋಲ್ ಸೌಲಭ್ಯ ಹೊಂದಿದೆ.

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?

ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸಹ ಹೊಂದಿರಲಿದೆ.

ಕಿಯಾ ಕಾರ್ನಿವಾಲ್ ಎಂಪಿವಿ ಖರೀದಿಗಾಗಿ ಬುಕ್ಕಿಂಗ್ ಶುರು?

ಹೀಗಾಗಿ ಇನೋವಾ ಕ್ರಿಸ್ಟಾ ಆವೃತ್ತಿಗೆ ಪ್ರತಿಹಂತದಲ್ಲೂ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಕಿಯಾ ಕಾರ್ನಿವಾಲ್ ಕಾರು ಮಾದರಿಯು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಫೆಬ್ರುವರಿ 5ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಕ್ಕೂ ಮುನ್ನ ಹೊಸ ಕಾರ್ನಿವಾಲ್ ಖರೀದಿಗೆ ಲಭ್ಯವಿರಲಿದೆ.

Most Read Articles

Kannada
English summary
Select Kia dealerships have started accepting bookings for the Carnival, though no official confirmation has been announced yet.
Story first published: Thursday, December 5, 2019, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X