ಮುಂದಿನ ವರ್ಷ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆಯಾಗುವುದು ಪಕ್ಕಾ..

ಕಿಯಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮೊದಲ ವಾಹನವನ್ನಾಗಿ ಸೆಲ್ಟೊಸ್ ಎಸ್‍ಯುವಿ ಕಾರನ್ನು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದ್ದು, ತಮ್ಮ ಎರಡನೆಯ ವಾಹನವಾಗಿ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದೆ. ಕಿಯಾ ಮೋಟಾರ್ಸ್ ಸಂಸ್ಥೆಯು ಬಿಡುಗಡೆ ಮಾಡಲಿರುವ ಆ ಎಂಪಿವಿ ಕಾರು ಕಿಯಾ ಕಾರ್ನಿವಾಲ್ ಅಗಿರಲಿದ್ದು, ಈ ಕಾರನ್ನು ಮುಂದಿನ ವರ್ಷ ನಡೆಯುವ 2020 ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸುವ ಅವಕಾಶಗಳಿವೆ.

ಮುಂದಿನ ವರ್ಷ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆಯಾಗುವುದು ಪಕ್ಕಾ..

ಹೌದು, ಕಿಯಾ ಮೋಟಾರ್ಸ್ ಮೊದಲಿಗೆ ಕಿಯಾ ಕಾರ್ನಿವಲ್ ಎಂಪಿವಿ ಕಾರನ್ನು 2020ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಿದ್ದು, ನಂತರ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಹಾಗೆ ಈ ಕಾರಿಗೆ ಬೆಲೆಯನ್ನು ನಿಗದಿ ಮಾಡಿ ಬಿಡುಗಡೆ ಮಾಡಲಿದೆ. ಇಷ್ಟೆ ಅಲ್ಲದೆಯೆ ದೇಶಿಯ ಮರುಕಟ್ಟೆಯಲ್ಲಿ ಕಾರ್ನಿವಲ್ ಎಂದು ಕರೆಲ್ಪಡುವ ಈ ಕಾರು ಇನ್ನಿತರೆ ದೇಶದ ಮಾರುಕಟ್ಟೆಯಲ್ಲಿ ಸೆಡೊನಾ ಎಂದು ಕರೆಯಲ್ಪಡುತ್ತಿದೆ.

ಮುಂದಿನ ವರ್ಷ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆಯಾಗುವುದು ಪಕ್ಕಾ..

ಮಾರುಕಟ್ಟೆಯಲ್ಲಿ ಟೊಯೊಟಾ ಕ್ರಿಸ್ಟಾ ಕಾರುಗಳುಗೆ ಪೈಪೋಟಿ ನೀಡಲಿರುವ ಕಿಯಾ ಕಾರ್ನಿವಲ್ ಎಂಪಿವಿ ಕಾರು, ಪ್ರೀಮಿಯಂ ಉಪಕರಣಗಳನ್ನು ಪಡೆಯಲಿದ್ದು, ಕ್ರಿಸ್ಟಾ ಗಿಂತಲೂ ಅಧಿಕವಾದ ವೈಶಿಷ್ಟ್ಯತೆಗಳನ್ನು ಪಡೆಯಲಿದ್ದು, ಗಾತ್ರವನ್ನು ಸಹ ಹೆಚ್ಚಿನದಾಗಿ ಪಡೆಯಲಿದೆ.

ಮುಂದಿನ ವರ್ಷ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆಯಾಗುವುದು ಪಕ್ಕಾ..

ಕಿಯಾ ಕಾರ್ನಿವಲ್ 7 ಸೀಟರ್, 8 ಸೀಟರ್ ಮತ್ತು 11 ಸೀಟರ್ ಮಾದರಿಯಲ್ಲಿ ಬಿಡುಗಡೆಯಾಗಬಹುದಾಗಿದ್ದು, ಟೊಯೊಟಾ ಇನೊವಾ ಕ್ರಿಸ್ಟಾ ಕಾರಿಗಿಂತಲೂ 380ಎಂಎಂ ಉದ್ದ, 155ಎಂಎಂ ಅಗಲ ಮತ್ತು ಕ್ಯಾಬಿಕ್‍ನ ಒಳಭಾಗದಲ್ಲಿಯು ಸಹ ವಿಸ್ತರಿಸಲಾಗಿದೆ. ಒಟ್ಟಾರೆಯಾಗಿ ಕಿಯಾ ಕಾರ್ನಿವಲ್ ಕಾರು 5,115 ಎಂಎಂ ಉದ್ದ, 1,985ಎಂಎಂ ಅಗಲ, 1,740ಎಂಎಂ ಎತ್ತರವಾದ ವಿನ್ಯಾಸವನ್ನು ಹೊಂದಿದ್ದು, 3060ಎಂಎಂನ ವ್ಹೀಲ್ ಬೇಸ್ ಅನ್ನು ಸಹ ಹೊಂದಿದೆ.

ಮುಂದಿನ ವರ್ಷ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆಯಾಗುವುದು ಪಕ್ಕಾ..

ಕಿಯಾ ಕಾರ್ನಿವಲ್ ಕಾರು ಫ್ರಂಟ್ ವ್ಹೀಲ್ ಡ್ರೈವ್ ಪ್ಲಾಟ್‍‍ಫಾರ್ಮ್‍ನಲ್ಲಿ ನಿರ್ಮಾಣವಾಗಿರಲಿದ್ದು, ಇನೋವಾ ಕ್ರಿಸ್ಟಾ ಕಾರು ರಿಯರ್ ವ್ಹೀಲ್ ಡ್ರೈವ್, ಲ್ಯಾಡರ್ ಫ್ರೆಮ್‍ನಿಂದ ನಿರ್ಮಾಣವಾಗಿದೆ. ಆದುದಾರಿಂದ ಕಾರ್ನಿವಲ್ ಕಾರಿನಲ್ಲಿ ಮೂರನೆಯ ಸಾಲಿನ ಸೀಟ್‍‍ಗಳಲ್ಲಿ ಆರಾಮದಾಯಕವಾಗಿ ಸಂಚರಿಸಬಹುದಾಗಿದ್ದು, ಕಾರಿನೊಳಗೆ ಏರಲು ಕೂಡಾ ಅಷ್ಟೆ ಸುಲಭವಾಗುತ್ತೆ.

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!ಮುಂದಿನ ವರ್ಷ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆಯಾಗುವುದು ಪಕ್ಕಾ..

ಕೇವಲ ಬಟನ್ ಪುಶ್ ಮಾಡಿ ಡೋರ್ ಎಳೆದುಕೊಳ್ಳಬಹುದಾದ ವ್ಯವಸ್ಥೆಯಿದ್ದು, ಇದರ ಜೊತೆಗೆ ಡ್ಯುಯಲ್ ಸನ್‌ರೂಫ್, ತ್ರಿ ಜೋನ್ ಏರ್ ಕಂಡಿಷನ್ ಸಿಸ್ಟಂ ಸೇರಿದಂತೆ ಹಲವು ವಿಶ್ವದರ್ಜೆ ಸೌಲಭ್ಯವನ್ನು ಪಡೆದಿರುವುದು ಎಂಪಿವಿ ಪ್ರಿಯರ ಆಕರ್ಷಣೆಗೆ ಕಾರಣವಾಗಲಿದೆ.

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!ಮುಂದಿನ ವರ್ಷ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆಯಾಗುವುದು ಪಕ್ಕಾ..

ವೈಶಿಷ್ಟ್ಯತೆಗಳು

ಕಿಯಾ ಕಾರ್ನಿವಲ್ ಎಂಪಿವಿ ಕಾರಿನಲ್ಲಿ ಕಿಯಾ ಸಂಸ್ಥೆಯ ಯುವಿಒ ಕನೆಕ್ಟ್ ಇನ್-ಕಾರ್ ಕನೆಕ್ಟಿವಿಟಿ ಸ್ಯೂಟ್, ದೊಡ್ಡ ಗಾತ್ರದ ಇನ್ಫೋಟೈನ್ಮೆಂಟ್ ಸಿಸ್ಟಂ, ಎರಡು ಸನ್‍ರೂಫ್, ಮೆಮೊರಿ ಫಂಕ್ಷನ್ ಒಳಗೊಂಡ ಎಲೆಕ್ಟ್ರಿಕ್ ಸಹಾಯದಿಂದ ಅಡ್ಜಸ್ಟ್ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, 3 ಜೋನ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಇನ್ನಿತರೆ ಸೇಫ್ಟಿ ಕಿಟ್‍ಗಳನ್ನು ಪಡೆಯಲಿದೆ.

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!ಮುಂದಿನ ವರ್ಷ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆಯಾಗುವುದು ಪಕ್ಕಾ..

ಎಂಜಿನ್ ಸಾಮರ್ಥ್ಯ

ಕಿಯಾ ಕಾರ್ನಿವಲ್ ಎಂಪಿವಿ ಕಾರು ದೇಶಿಯ ಮಾರುಕಟ್ಟೆಯಲ್ಲಿ 2.2 ಲೀಟರ್ 4ಸಿಲೆಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದ್ದು, ಈ ಎಂಜಿನ್ 202ಬಿಹೆಚ್‍ಪಿ ಮತ್ತು 441ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗಯೆ ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!ಮುಂದಿನ ವರ್ಷ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆಯಾಗುವುದು ಪಕ್ಕಾ..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಕಿಯಾ ನಿರ್ಮಾಣದ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 8-ಸೀಟರ್ ಮತ್ತು 11 ಸೀಟರ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಯಾವ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!ಮುಂದಿನ ವರ್ಷ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆಯಾಗುವುದು ಪಕ್ಕಾ..

ಈ ಕಾರನ್ನು ದೇಶಿಯವಾಗಿ ಭಾಗಶಃ ಜೋಡಿಸಲಾಗುವುದಾಗಿದ್ದು, ಎಂಜಿನ್ ಅನ್ನು ಮಾತ್ರ ಫುಲ್ಲಿ ಬ್ಯುಲ್ಟ್ ಯೂನಿಟ್ ಆಗಿ ಆಮದು ಮಾಡಿಕೊಳ್ಳಲಾಗುವುದು. ಈ ರೀತಿಯಾದ ವ್ಯವಹಾರ ನಡೆದಿದ್ದೆ ಆದಲ್ಲಿ ಕಾರಿನ ಬೆಲೆಯು ದುಬಾರಿಯಾಗಿರಲಿದ್ದು, ಸುಮಾರು 25-26 ಲಕ್ಷದ ಬೆಲೆಯನ್ನು ಪಡೆದಿರಲಿದೆ ಎಂಸು ಅಂದಾಜಿಸಲಾಗುತ್ತಿದೆ.

Most Read Articles

Kannada
English summary
Kia Carnival MPV India Launch Confirmed Details. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X