2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಸೆಲ್ಟೊಸ್ ನಂತರ ಮತ್ತಷ್ಟು ಹೊಸ ವಿನ್ಯಾಸದ ಕಾರುಗಳನ್ನು ಪರಿಚಯಿಸಲು ಉತ್ಸುಕವಾಗಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಕಾರ್ನಿವಾಲ್ ಎಂಪಿವಿ ಮಾದರಿಯನ್ನು ಬಿಡುಗಡೆಗೆ ಸದ್ಯ ಯೋಜನೆ ರೂಪಿಸಿದ್ದು, 2020ರ ಫೆಬ್ರುವರಿ 5ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರೀ ನೀರಿಕ್ಷೆಯೊಂದಿಗೆ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದ್ದು, ದೇಶದ ಟಾಪ್ 3 ಕಾರು ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಕೈಗೆಟುಕುವ ಬೆಲೆಯ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ಸೆಲ್ಟೊಸ್ ಬಿಡುಗಡೆಯ ನಂತರ ಕಾರ್ನಿವಾಲ್ ಸೇರಿದಂತೆ ವಿವಿಧ ನಮೂನೆಯ ಐದು ಹೊಸ ಕಾರುಗಳನ್ನು ರಸ್ತೆಗಿಳಿಸಲು ಸಿದ್ದತೆ ನಡೆಸುತ್ತಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಸಹೋದರ ಸಂಸ್ಥೆಯಾದ ಹ್ಯುಂಡೈಗಿಂತಲೂ ಅತ್ಯುತ್ತಮ ಕಾರು ಉತ್ಪನ್ನಗಳನ್ನು ಹೊಂದಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಅಗ್ಗದ ಬೆಲೆಯಲ್ಲಿ ಉತ್ತಮ ಮಾದರಿಯ ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಇದರಲ್ಲಿ ಎರಡನೇ ಕಾರು ಮಾದರಿಯಾಗಿ ಕಾರ್ನಿವಾಲ್ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರು ಬಿಡುಗಡೆಯಾಗುತ್ತಿದ್ದು, ಪ್ರಸ್ತುತ ಮಾರುಕಟ್ಟೆ ಭಾರೀ ಬೇಡಿಕೆ ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಕಾರ್ನಿವಾಲ್ ಭರ್ಜರಿ ಪೈಪೋಟಿ ನೀಡಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂ.10 ಲಕ್ಷದಿಂದ ರೂ.50 ಲಕ್ಷ ಬೆಲೆಯಲ್ಲಿ ವಿವಿಧ ಕಾರು ಮಾದರಿಗಳನ್ನು ಮಾರಾಟಮಾಡುವ ಕಿಯಾ ಸಂಸ್ಥೆಯು ಭಾರತದಲ್ಲೂ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಸೆಲ್ಟೊಸ್ ಯಶಸ್ವಿಯ ಖುಷಿಯಲ್ಲಿರುವ ಕಿಯಾ ಸಂಸ್ಥೆಯು ಸದ್ಯ ಕಾರ್ನಿವಾಲ್ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿದೆ. ಕಾರ್ನಿವಾಲ್ ಕಾರು ಹಲವು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾಗೆ ಪ್ರತಿ ಸ್ಪರ್ಧಿಯಾಗಲಿದ್ದು, ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ. 20 ಲಕ್ಷದಿಂದ ಆರಂಭಿಕವಾಗಿ ಮತ್ತು ರೂ.30 ಲಕ್ಷ ಟಾಪ್ ಎಂಡ್ ಬೆಲೆಯನ್ನು ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಕಾರ್ನಿವಾಲ್ ಕಾರು 5, 115-ಎಂಎಂ ಉದ್ದ, 1,985-ಎಂಎಂ ಅಗಲ ಮತ್ತು 1,755 ಎತ್ತರವನ್ನು ಹೊಂದಿದ್ದು, ಇನೋವಾ ಕ್ರಿಸ್ಟಾ ಕಾರಿಗಿಂತಲೂ 375-ಎಂಎಂ ಹೆಚ್ಚು ಉದ್ದ,155-ಎಂಎಂ ಹೆಚ್ಚು ಅಗಲ ಮತ್ತು 40-ಎಂಎಂ ನಷ್ಟು ಕಡಿಮೆ ಎತ್ತರವನ್ನು ಪಡೆದುಕೊಂಡಿರಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಎಂಜಿನ್ ಸಾಮಾರ್ಥ್ಯ

ಕಿಯಾ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ 2.2-ಲೀಟರ್ ಟರ್ಬೋ ಡೀಸೆಲ್ ಜೊತೆ 3.3-ಲೀಟರ್ ವಿ6 ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಬೆಲೆ ತಗ್ಗಿಸುವುದಕ್ಕಾಗಿ 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.6-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

MOST READ: ಟೊಯೊಟಾ ವೆಲ್‌ಫೈರ್ ಖರೀದಿಗೆ ಬುಕ್ಕಿಂಗ್ ಶುರು- ಬೆಲೆ ರೂ. 80 ಲಕ್ಷ ಅಷ್ಟೆ ಅಂತೆ..!

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗಿಂತಲೂ ಉತ್ತಮ ಪ್ರೀಮಿಯಂ ಸೌಲಭ್ಯ ಹೊಂದಿದ್ದು, 10.1-ಇಂಚಿನ ಇನ್ಪೋಟೈನ್ ಸಿಸ್ಟಂ, ಕಿಯಾ ಯುವಿಒ ಕನೆಕ್ಟ್, ಕಾರ್ ಕನೆಕ್ಟಿವಿಟಿ ಸೂಟ್, ಲಾರ್ಜ್ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎರಡು ಸನ್‌ರೂಫ್, ಪವರ್ ಅಡ್ಜೆಸ್ಟ್‌ಬಲ್ ಡ್ರೈವರ್ ಸೀಟ್, ತ್ರಿ ಕ್ಲೈಮೆಟ್ ಜೋನ್ ಕಂಟ್ರೋಲ್ ಸೌಲಭ್ಯದೊಂದಿಗೆ ಸುರಕ್ಷತೆಗಾಗಿ 6 ಏರ್‌ಬ್ಯಾಗ್,ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಹೊಂದಿರಲಿದೆ.

MOST READ: ಜಿಎಸ್‌ಟಿ ಇಳಿಕೆ ಹಿನ್ನಲೆಯಲ್ಲಿ ಟೆಕ್ನೊ ಎಲೆಕ್ಟ್ರಾ ಸ್ಕೂಟರ್‌ಗಳ ಬೆಲೆ ಕಡಿತ

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಹೀಗಾಗಿ ಇನೋವಾ ಕ್ರಿಸ್ಟಾ ಆವೃತ್ತಿಗೆ ಪ್ರತಿಹಂತದಲ್ಲೂ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಕಿಯಾ ಕಾರ್ನಿವಾಲ್ ಕಾರು ಮಾದರಿಯು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಹೊಸ ಕಾರ್ನಿವಾಲ್ ಖರೀದಿಗೆ ಲಭ್ಯವಿರಲಿದೆ.

MOST READ: ದುಬಾರಿ ಬೆಲೆಯ ಹಾರ್ಲೆ ಡೇವಿಡ್‍‍ಸನ್ ಬೈಕ್ ಖರೀದಿಸಿದ ರಾಜ್‍‍ಕುಮಾರ್ ರಾವ್

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಜೊತೆಗೆ ಭಾರತದಿಂದಲೇ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ಹೊಸ ಕಾರುಗಳನ್ನು ರಫ್ತು ಮಾಡಲು ನಿರ್ಧರಿಸಿರುವ ಕಿಯಾ ಸಂಸ್ಥೆಯು ಈಗಾಗಲೇ ಮೆಡ್ ಇನ್ ಇಂಡಿಯಾ ಯೋಜನೆ ಅಡಿ ಸೆಲ್ಟೊಸ್ ಕಾರನ್ನು ರಫ್ತು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಕಾರ್ನಿವಾಲ್ ಕೂಡಾ ಭಾರತದಲ್ಲೇ ನಿರ್ಮಾಣವಾಗುವ ಸುಳಿವು ನೀಡಿದೆ.

Source: Autocarindia

Most Read Articles

Kannada
English summary
Kia is planning to launch its second product Carnival MPV at Auto Expo 2020.
Story first published: Wednesday, October 16, 2019, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X