ನ್ಯೂಯಾರ್ಕ್ ಆಟೋ ಶೋನಲ್ಲಿ ಗಮನ ಸೆಳೆದ ಕಿಯಾ ಹಬನಿರೋ

ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿ ಕಿಯಾ 2019ರ ನ್ಯೂಯಾರ್ಕ್ ಅಂತರಾಷ್ಟ್ರೀಯ ಆಟೋ ಶೋನಲ್ಲಿ ತನ್ನ ಹೊಸ ಕಾರು ಫಂಕಿ ಹಬನಿರೋ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿತು. ಕಿಯಾ ಹಬನಿರೋ ಹೊಸ ತಲೆಮಾರಿನ ನೀರೋ ಇವಿ ಹೋಲಿಕೆ ಹೊಂದಿದ್ದು, 2021ರ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ನ್ಯೂಯಾರ್ಕ್ ಆಟೋ ಶೋನಲ್ಲಿ ಗಮನ ಸೆಳೆದ ಕಿಯಾ ಹಬನಿರೋ

ಕಾನ್ಸೆಪ್ಟ್ ವೆಹಿಕಲ್‍ನಲ್ಲಿ ಇರಬೇಕಾದ ಎಲ್ಲಾ ಲಕ್ಷಣಗಳು ಹಬನಿರೋವಿನಲ್ಲಿ ಇವೆ. ಅವುಗಳೆಂದರೆ ಆಕರ್ಷಕ ಹೆಸರು, ಬಾಂಕರ್ ಡೋರ್ಸ್, ವಿಭಿನ್ನ ಒಳವಿನ್ಯಾಸ ಮತ್ತು ಲೆವೆಲ್ 5 ನ ಅಟಾನಮಿ. ಕಿಯಾ ಕಂಪನಿಯು ಹಬನಿರೋ ಕಾರನ್ನು ಆಲ್ ಎಲೆಕ್ಟ್ರಿಕ್ ಎವರಿಥಿಂಗ್ ಕಾರ್ ಅಥವಾ ಇಸಿಇವಿ ಎಂಬ ಹೆಸರಿನಿಂದ ಕರೆಯುತ್ತದೆ. ಅಂದರೆ ಕಮ್ಯೂಟರ್, ಕ್ರಾಸ್ ಒವರ್, ಸ್ಪೊರ್ಟ್ ಯುಟಿಲಿಟಿ, ಸ್ಟೇಟ್ ಆಫ್ ಆರ್ಟ್ ಟೆಕ್ನಾಲಜಿ ವರ್ಕ್‍ರೂಂ ಮತ್ತು ಅಡ್ವೆಂಚರ್ ವೆಹಿಕಲ್.

ನ್ಯೂಯಾರ್ಕ್ ಆಟೋ ಶೋನಲ್ಲಿ ಗಮನ ಸೆಳೆದ ಕಿಯಾ ಹಬನಿರೋ

ಕಿಯಾ ಹಬನಿರೋ ಕನ್ಸೆಪ್ಟ್ ಸ್ಪೋರ್ಟ್ಸ್ ಕಾರಿನ ಮುಂಭಾಗದಲ್ಲಿ ಅಲ್ಟ್ರಾ ಸ್ಲೀಕ್ ಎಲ್ಇಡಿ ಹೆಡ್ ಲೈಟ್ಸ್ ಇದ್ದು, ಅದರ ಕೆಳಗೆ ಕೊರಿಯಾ ಕಾರ್ ತಯಾರಿಕಾ ಕಂಪನಿಯ ಟ್ರೇಡ್ ಮಾರ್ಕ್ ಆದ ಟೈಗರ್ ನೋಸ್ ಇಡಲಾಗಿದೆ. ಹಗಲು ಹೊತ್ತಿನಲ್ಲೂ ಉರಿಯುವ ಲೈಟ್ ಗಳು ಹೊಸ ಕಿಯಾದ ಪ್ರಮುಖ ಆಕರ್ಷಣೆಯಾಗಿದೆ.

ನ್ಯೂಯಾರ್ಕ್ ಆಟೋ ಶೋನಲ್ಲಿ ಗಮನ ಸೆಳೆದ ಕಿಯಾ ಹಬನಿರೋ

ಹೀಗಾಗಿ ಕಾನ್ಸೆಪ್ಟ್ ಅವೃತ್ತಿಯಲ್ಲಿ ತೋರಿಸಲಾದ ಪ್ರಮುಖ ತಾಂತ್ರಿಕಾಂಶಗಳನ್ನು ಕಾರು ತಯಾರಿಕೆಯಲ್ಲೂ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಕಿಯಾ ಹಬನಿರೋವಿನಲ್ಲಿರುವ ಬಹು ಭಾಗಗಳ ಜೊತೆಗೆ ಸ್ಮೂಥ್ ಸರ್ಫೆಸ್ ಇರುವ ಬಾಡಿ ಪ್ಯಾನೆಲ್ ಗಳನ್ನು ಸಹ ಉತ್ಪದನಾ ಹಂತದಲ್ಲಿರುವ ನೀರೋದಲ್ಲಿ ಅಳವಡಿಸುವ ಸಾಧ್ಯತೆ ಇದೆ.

ನ್ಯೂಯಾರ್ಕ್ ಆಟೋ ಶೋನಲ್ಲಿ ಗಮನ ಸೆಳೆದ ಕಿಯಾ ಹಬನಿರೋ

ಹೊಸ ಕಾನ್ಸೆಪ್ಟ್ ಡಿಸೈನ್ ಆದ ಬಟರ್ ಫ್ಲೈ ಡೋರ್‍‍ಗಳು 2021ರಲ್ಲಿ ಬಿಡುಗಡೆಯಾಗಲಿರುವ ನೀರೋ ಕಾರಿನಲ್ಲಿ ಕಂಡು ಬರುವುದಿಲ್ಲ. ಉತ್ಪಾದನಾ ಹಂತದಲ್ಲಿರುವ ಕಾರಿನ ಒಳ ವಿನ್ಯಾಸದಲ್ಲಿ ಬೃಹತ್ತಾಗಿ ಮನೆಯ ಫರ್ನಿಚರ್‍‍ನಂತೆ ಕಾಣುವ ನಾಲ್ಕು ಚೇರುಗಳ ಕ್ಯಾಟಲಾಗ್ ಸಹ ಕಂಡು ಬರುವುದಿಲ್ಲ. ಕಿಯಾ ಹಬನಿರೋವಿನಲ್ಲಿ 2 ಮೋಟಾರ್‍‍ಗಳಿದ್ದು, ಒಂದೊಂದು ಸಹ ಒಂದೊಂದು ಅಕ್ಸೆಲ್ ನಲ್ಲಿದ್ದು ಇವಿಯನ್ನು ಫೋರ್ ವ್ಹೀಲ್ ಡ್ರೈವ್ ವೆಹಿಕಲ್ ಮಾಡಿವೆ. ಹಬನಿರೋವಿನ ದೂರವನ್ನು483 ಕಿ.ಮೀ (300 ಮೈಲಿಗಳು) ಎಂದು ಅಂದಾಜಿಸಲಾಗಿದೆ.

ನ್ಯೂಯಾರ್ಕ್ ಆಟೋ ಶೋನಲ್ಲಿ ಗಮನ ಸೆಳೆದ ಕಿಯಾ ಹಬನಿರೋ

ಕಾನ್ಸೆಪ್ಟ್ ಕಾರುಗಳನ್ನು ಕಿಯಾದ ಹೊಸ ಎಲೆಕ್ಟ್ರಿಕ್ ಅರ್ಕಿಟೆಕ್ಚರ್ ನ ಮೇಲೆ ಮಾಡಲಾಗಿದೆ. ಹಬನಿರೋ 4,430 ಎಂಎಂ ಉದ್ದ ಮತ್ತು 2,830 ಅಗಲದ (ನೀರೋಗಿಂತ 75 ಎಂಎಂ ಜಾಸ್ತಿ) ವ್ಹೀಲ್ ಬೇಸ್ ಹೊಂದಿದೆ. ಹಬನಿರೋ ಕಾನ್ಸೆಪ್ಟ್ ವ್ಹೀಲ್ ಬೇಸ್ ಚಾಲ್ತಿಯಲ್ಲಿರುವ ನೀರೋವಿಗಿಂತ 130 ಎಂಎಂ ಉದ್ದವಾಗಿದೆ. ಕಾನ್ಸೆಪ್ಟ್ ಕಾರು 20 ಇಂಚಿನ ರಗ್ಗಡ್ ಟಯರ್‍‍ಗಳ ವ್ಹೀಲ್ ಮೇಲೆ ಕುಳಿತು ಕೊಳ್ಳುತ್ತದೆ.

MUST READ: ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಕಿಯಾ ಮೋಟಾರ್ಸ್ ಮೊದಲ ಕಾರು..!

ನ್ಯೂಯಾರ್ಕ್ ಆಟೋ ಶೋನಲ್ಲಿ ಗಮನ ಸೆಳೆದ ಕಿಯಾ ಹಬನಿರೋ

ಕಿಯಾ ಹಬನಿರೋ ಅನಾವರಣದ ಬಗ್ಗೆ ಮಾತನಾಡಿದ ಅಮೇರಿಕಾದಲ್ಲಿರುವ ಕಿಯಾ ಡಿಸೈನ್ ಸೆಂಟರಿನ ಉಪಾಧ್ಯಕ್ಷ ಟಾಮ್ ಕಿಯರ್ನ್ಸ್ ರವರ ಪ್ರಕಾರ ನಾವು ಈ ಕಾನ್ಸೆಪ್ಟ್ ಕಾರು ಸಿಟಿ ರಸ್ತೆಗಳಲ್ಲಿ ಆರಾಮದಾಯಕವಾಗಿ ಓಡಾಡಲು ಬಯಸುತ್ತೇವೆ.

ನ್ಯೂಯಾರ್ಕ್ ಆಟೋ ಶೋನಲ್ಲಿ ಗಮನ ಸೆಳೆದ ಕಿಯಾ ಹಬನಿರೋ

ಹಾಗೆಯೇ ಈ ಕಾರು ಕೋಸ್ಟಲ್ ರೋಡ್‍ಗಳಲ್ಲಿರುವ ಕಾರ್ವಿಂಗ್ ಟರ್ನ್ ಮತ್ತು ದೂರದ ಅಡ್ವೆಂಚರ್‍‍ಗಳ ಆಫ್ ರೋಡಿಂಗ್ ಗೆ ಸೂಕ್ತವಾಗಿದೆ. ನಾವು ಒಂದೇ ಕಾರು ಎಲ್ಲರಿಗೂ ಮತ್ತು ಎಲ್ಲಕ್ಕೂ ಬೇಕು ಅಂದುಕೊಂಡಿದ್ದೇವು, ನಾವು ಹಬನೀರೋ ತಯಾರಕರ ಕಲ್ಪನೆಯನ್ನು , ಟೆಕ್ನಾಲಜಿಯನ್ನು ನೋಡಿದಾಗ ಅದನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಿದೆವು ಎಂದಿದ್ದಾರೆ.

Most Read Articles

Kannada
Read more on ಕಿಯಾ kia motors
English summary
Funky Kia Habaniro Adds A Dose Of Electric Fire To The 2019 New York Auto Show - Read in Kannada
Story first published: Thursday, April 18, 2019, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X