ಮೋದಿ ಟೀಕಿಸಲು ಕಿಯಾ ಮೋಟಾರ್ಸ್ ಬಳಸಿಕೊಂಡ ಚಂದ್ರಬಾಬು ನಾಯ್ಡು..!

ದಕ್ಷಿಣ ಕೋರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಕಿಯಾ ಮೋಟಾರ್ಸ್ ಸಂಸ್ಥೆಯು ಇದೇ ವರ್ಷ ಅಗಸ್ಟ್ ಹೊತ್ತಿಗೆ ತನ್ನ ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಯಾಗಿ ಸಜ್ಜುಗೊಳ್ಳುತ್ತಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಲೋಕಸಭೆ ಚುನಾವಣೆಯಲ್ಲಿ ಕಿಯಾ ಸಂಸ್ಥೆಯನ್ನು ಪ್ರಧಾನಿ ಮೋದಿ ವಿರುದ್ಧ ಟೀಕಾಸ್ತ್ರವಾಗಿ ಬಳಕೆ ಮಾಡುತ್ತಿದ್ದಾರೆ.

ಮೋದಿ ಟೀಕಿಸಲು ಕಿಯಾ ಮೋಟಾರ್ಸ್ ಬಳಸಿಕೊಂಡ ಚಂದ್ರಬಾಬು ನಾಯ್ಡು..!

2017ರಲ್ಲಿ ಭಾರತಕ್ಕೆ ಪ್ರವೇಶಿಸಿರುವ ಕಿಯಾ ಸಂಸ್ಥೆಯು ಸದ್ಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡದಲ್ಲಿ ತಲೆ ಎತ್ತಿರುವ ತನ್ನ ಮೊದಲ ಕಾರು ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಇದಕ್ಕಾಗಿ ಬರೋಬ್ಬರಿ 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಆದ್ರೆ ಕಿಯಾ ಸಂಸ್ಥೆಯು ಈ ಮೊದಲು ಗುಜರಾತ್‌ನಲ್ಲಿ ತನ್ನ ಮೊದಲ ಕಾರು ಉತ್ಪಾದನಾ ಘಟಕ ತೆರೆಯಲು ಮುಂದಾಗಿ ಕೊನೆಯ ಕ್ಷಣದಲ್ಲಿ ಆಂಧ್ರದತ್ತ ಮುಖ ಮಾಡಿತ್ತು. ಇದೀಗ ಇದೇ ವಿಚಾರ ರಾಜಕೀಯ ಟೀಕಾಸ್ತ್ರವಾಗಿ ಬಳಕೆಯಾಗುತ್ತಿದೆ.

ಮೋದಿ ಟೀಕಿಸಲು ಕಿಯಾ ಮೋಟಾರ್ಸ್ ಬಳಸಿಕೊಂಡ ಚಂದ್ರಬಾಬು ನಾಯ್ಡು..!

ಪ್ರಧಾನಿ ಮೋದಿಯವರು ಗುಜರಾತ್‌ನಲ್ಲಿ ಕಿಯಾ ಮೋಟಾರ್ಸ್‌ ಕಾರು ಘಟಕ ಸ್ಥಾಪನೆಗಾಗಿ ತೋರಿದ ಹಿಟ್ಲರ್ ನೀತಿಯಿಂದಾಗಿಯೇ ಕಿಯಾ ಸಂಸ್ಥೆಯು ಗುಜರಾತ್ ಅನ್ನು ಬಿಟ್ಟು ಶಾಂತಿ ಮತ್ತು ಕೈಗಾರಿಕೊದ್ಯಮವನ್ನು ಬೆಂಬಲಿಸುತ್ತಿರುವ ಆಂಧ್ರಪ್ರದೇಶವನ್ನು ಆಯ್ಕೆ ಮಾಡಿರುವುದಾಗಿ ಚಂದ್ರಬಾಬು ನಾಯ್ಡು ಹೊಸ ಬಾಂಬ್ ಸಿಡಿಸಿದ್ದಾರೆ.

ಮೋದಿ ಟೀಕಿಸಲು ಕಿಯಾ ಮೋಟಾರ್ಸ್ ಬಳಸಿಕೊಂಡ ಚಂದ್ರಬಾಬು ನಾಯ್ಡು..!

ಆದ್ರೆ ಕಿಯಾ ಮೋಟಾರ್ಸ್ ಸಂಸ್ಥೆಯು ಗುಜರಾತ್‌ನಲ್ಲೂ ಬಿಟ್ಟು ಆಂಧ್ರ ಆಯ್ಕೆ ಮಾಡಿರುವುದರ ಹಿಂದಿನ ಅಸಲಿ ಕಾರಣ ಏನು ಎನ್ನುವುದು ಯಾರಿಗೂ ಗೊತ್ತಿಲ್ಲದ್ದಿದ್ದರೂ ಸಹ ಮೋದಿಯವರನ್ನು ಟೀಕಿಸಲು ಚಂದ್ರುಬಾಬು ನಾಯ್ಡು ಹೊಸ ಅಸ್ತ್ರವನ್ನು ಹುಡುಕಿವುದು ಸದ್ಯ ಆಂಧ್ರ ರಾಜಕೀಯ ಭಾರೀ ಸದ್ದು ಮಾಡುತ್ತಿದೆ.

ಮೋದಿ ಟೀಕಿಸಲು ಕಿಯಾ ಮೋಟಾರ್ಸ್ ಬಳಸಿಕೊಂಡ ಚಂದ್ರಬಾಬು ನಾಯ್ಡು..!

ಇನ್ನು ಕಿಯಾ ಮೋಟಾರ್ಸ್ ಸಂಸ್ಥೆಯು 540 ಎಕರೆ ವಿಸ್ತೀರ್ಣದಲ್ಲಿ ತನ್ನ ಮೊದಲ ಕಾರು ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡಿದ್ದು, ಶೇ.90 ರಷ್ಟು ಕಾರು ಉತ್ಪಾದನಾ ಘಟಕ ನಿರ್ಮಾಣದ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿರುವುದಲ್ಲದೇ ಮುಂದಿನ ಅಗಸ್ಟ್ ಹೊತ್ತಿಗೆ ಹೊಸ ಕಾರುಗಳು ಭಾರತದಲ್ಲಿ ಭಾರೀ ಸಂಚಲನ ಸೃಷ್ಠಿಸುವ ತವಕದಲ್ಲಿವೆ.

ಮೋದಿ ಟೀಕಿಸಲು ಕಿಯಾ ಮೋಟಾರ್ಸ್ ಬಳಸಿಕೊಂಡ ಚಂದ್ರಬಾಬು ನಾಯ್ಡು..!

ಜೊತೆಗೆ ಕಿಯಾ ಮೋಟಾರ್ಸ್ ಸಂಸ್ಥೆಯು ಹೊಸ ಕಾರು ಉತ್ಪಾದನಾ ಘಟಕದಲ್ಲಿ ಶೇ. 90ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೀಡುವ ಭರವಸೆ ನೀಡಿದ್ದು, ಈಗಾಗಲೇ 10 ಸಾವಿರ ಉದ್ಯೋಗಿಗಳನ್ನು ನೇಮಕಗೊಳಿಸಿ ಉದ್ಯೋಗ ಕೌಶಲ್ಯ ಅಭಿವೃದ್ದಿ ಕಾರ್ಯಗಾರವನ್ನು ಸಹ ಕೈಗೊಂಡಿದೆ.

ಮೋದಿ ಟೀಕಿಸಲು ಕಿಯಾ ಮೋಟಾರ್ಸ್ ಬಳಸಿಕೊಂಡ ಚಂದ್ರಬಾಬು ನಾಯ್ಡು..!

ಸದ್ಯ ಕಿಯಾ ಸಂಸ್ಥೆಯು ನಿರ್ಮಾಣಗೊಳಿಸಿರುವ ಕಾರು ಉತ್ಪಾದನಾ ಘಟಕದಲ್ಲಿ ವರ್ಷಕ್ಕೆ ಮೂರು ಲಕ್ಷ ಕಾರುಗಳನ್ನು ಅಭಿವೃದ್ಧಿಗೊಳಿಸಬಹುದಾದಷ್ಟು ಸಾಮರ್ಥ್ಯವನ್ನು ಹೊಂದಿದ್ದು, ಮೂರು ಹಂತದ ಪಾಳೆಯಲ್ಲಿ ಕಾರು ಉತ್ಪಾದನಾ ಕಾರ್ಯ ನಡಲಿಯಲಿದೆ.

MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

ಮೋದಿ ಟೀಕಿಸಲು ಕಿಯಾ ಮೋಟಾರ್ಸ್ ಬಳಸಿಕೊಂಡ ಚಂದ್ರಬಾಬು ನಾಯ್ಡು..!

ಯುರೋಪ್ ಮತ್ತು ಅಮೆರಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಭಾರೀ ಜನಪ್ರಿಯತೆ ಸಾಧಿಸಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಭಾರತದಲ್ಲಿ ತನ್ನ ವಾಣಿಜ್ಯ ಚಟುವಟಿಕೆಗೆ ಚಾಲನೆ ನೀಡಿದ್ದು, ಕೈಗೆಟುಕುವ ಬೆಲೆಗಳಲ್ಲಿ ಹಲವು ಜನಪ್ರಿಯ ಕಾರುಗಳನ್ನು ಪರಿಚಯಿಸುವ ಸುಳಿವು ನೀಡಿದೆ.

ಮೋದಿ ಟೀಕಿಸಲು ಕಿಯಾ ಮೋಟಾರ್ಸ್ ಬಳಸಿಕೊಂಡ ಚಂದ್ರಬಾಬು ನಾಯ್ಡು..!

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್ ಮತ್ತು ಐಷಾರಾಮಿ ಕಾರುಗಳನ್ನು ಸಿದ್ದಗೊಳಿಸಿದ್ದು, ಇನೋವಾ ಕ್ರಿಸ್ಟಾ ಕಾರುಗಳ ಪ್ರತಿಸ್ಪರ್ಧಿಯಾಗಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರಿನ ಭಾರೀ ನೀರಿಕ್ಷೆ ಇಟ್ಟುಕೊಳ್ಳಲಾಗಿದೆ.

MOST READ: 7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್

ಮೋದಿ ಟೀಕಿಸಲು ಕಿಯಾ ಮೋಟಾರ್ಸ್ ಬಳಸಿಕೊಂಡ ಚಂದ್ರಬಾಬು ನಾಯ್ಡು..!

2019ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ತನ್ನ ಮೊದಲ ಎಸ್‌ಪಿ ಕಾನ್ಸೆಪ್ಟ್ ಕಾರನ್ನು ಬಿಡುಗಡೆ ಮಾಡಲಿರುವ ಕಿಯಾ ಸಂಸ್ಥೆಯು ತದನಂತರ ಸೊರೆಂಟೊ, ಸ್ಟೊನಿಕ್ ಕ್ರಾಸ್ ಓವರ್ ಎಸ್‌ಯುವಿ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.

Most Read Articles

Kannada
Read more on ಕಿಯಾ kia motors
English summary
Despite Narendra Modi's Threat, Kia Motor Opted Andhra Pradesh, Says Chandrababu Naidu. Read in Kannada.
Story first published: Tuesday, April 2, 2019, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X