ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟವನ್ನು ಆರಂಭಿದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಕಿಯಾ ಮೋಟಾರ್ಸ್ ಸಂಸ್ಥೆಯು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವುದಲ್ಲದೇ ಅಧಿಕೃತವಾಗಿ ದೇಶದ ಐದನೇ ಅತಿದೊಡ್ಡ ಕಾರು ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿದೆ.

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳು ಅನುಕ್ರಮವಾಗಿ ಒಂದು, ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದು, ಇದೀಗ ಹೊಸದಾಗಿ ಕಿಯಾ ಮೋಟಾರ್ಸ್ ಸಂಸ್ಥೆಯು ಐದನೇ ಅತಿದೊಡ್ಡ ಕಾರು ಮಾರಾಟ ಸಂಸ್ಥೆಯಾಗಿ ಸ್ಥಾನ ಪಡೆದಿದೆ. ಕಿಯಾ ಮೋಟಾರ್ಸ್ ಅಬ್ಬರದ ಮುಂದೆ ಟೊಯೊಟಾ ಮತ್ತು ಹೋಂಡಾ ಸಂಸ್ಥೆಗಳು ಸಹ ನೆಲಕಚ್ಚಿದ್ದು, ಶೀಘ್ರದಲ್ಲೇ ಮೂರನೇ ಸ್ಥಾನದತ್ತ ಮುನ್ನುಗ್ಗುವ ತವಕದಲ್ಲಿದೆ.

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಯು ಕಾರು ಮಾರಾಟದಲ್ಲಿ ಬಹುದೊಡ್ಡ ಜಾಲ ಹೊಂದಿದ್ದು, ತದನಂತರದ ಸ್ಥಾನದಲ್ಲಿರುವ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳಿಗೆ ಸರಿಸಮನಾಗಿ ಬೆಳೆಯುತ್ತಿರುವ ಕಿಯಾ ಸಂಸ್ಥೆಯು ಮತ್ತಷ್ಟು ಆಕರ್ಷಕ ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಸಹೋದರ ಸಂಸ್ಥೆಯಾದ ಹ್ಯುಂಡೈಗಿಂತಲೂ ಅತ್ಯುತ್ತಮ ಕಾರು ಉತ್ಪನ್ನಗಳನ್ನು ಹೊಂದಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಅಗ್ಗದ ಬೆಲೆಯಲ್ಲಿ ಉತ್ತಮ ಮಾದರಿಯ ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ.

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಈ ಮೂಲಕ ಎಲ್ಲಾ ಮಾದರಿಯ ಕಾರು ಮಾದರಿಗಳು ಪೈಪೋಟಿ ನೀಡಲು ಸಿದ್ದವಾಗಿರುವ ಕಿಯಾ ಸಂಸ್ಥೆಯು ಸದ್ಯ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟೊಯೊಟಾಗೆ ಪೈಪೋಟಿಯಾಗಿ ಎರಡು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿರುವುದು ಭಾರೀ ಸಂಚಲನಕ್ಕೆ ಕಾರಣವಾಗಲಿದೆ.

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಸೆಲ್ಟೊಸ್ ಯಶಸ್ವಿ ನಂತರ ಮುಂದಿನ ಕಾರು ಬಿಡುಗಡೆಯ ಯೋಜನೆ ಕುರಿತಂತೆ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿರುವ ಕಿಯಾ ಹಿರಿಯ ಅಧಿಕಾರಿಯೊಬ್ಬರು ಪ್ರತಿ ಆರು ತಿಂಗಳಿಗೊಂದು ಹೊಸ ಕಾರು ಉತ್ಪನ್ನ ಬಿಡುಗಡೆ ಮಾಡುವ ಯೋಜನೆಯಿದ್ದು, ಮುಂಬರುವ 2020ರ ಫೆಬ್ರುವರಿಯಲ್ಲಿ ನಂತರ ಕಾರ್ನಿವಾಲ್ ಎಂಪಿವಿ ಹಾಗೂ ಹೊಸ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗೊಳಿಸಲಾಗುವುದು ಎನ್ನುವ ಮಾಹಿತಿ ನೀಡಿದ್ದಾರೆ.

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಹೊಸ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.

MOST READ: ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಇಳಿಕೆ- ಹೆಚ್ಚಳಗೊಂಡ ಹೊಸ ವಾಹನಗಳ ಮಾರಾಟ..!

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಈಗಾಗಲೇ ವಿವಿಧ ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರು ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಹಾಗೆಯೇ ಟೊಯೊಟಾ ಸಂಸ್ಥೆಯ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಮಾರುಕಟ್ಟೆ ಪ್ರವೇಶ ಪಡೆಯಲಿರುವ ಕಾರ್ನಿವಾಲ್ ಕಾರು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಇನೋವಾ ಕ್ರಿಸ್ಟಾ ಕಾರಿಗಿಂತಲೂ ಅತ್ಯುತ್ತಮ ಫೀಚರ್ಸ್‌ನೊಂದಿಗೆ ಹೊಸ ಅಧ್ಯಾಯ ಶುರುಮಾಡಲಿದೆ.

MOST READ: ಬರೋಬ್ಬರಿ 12 ಕೋಟಿ ಮೌಲ್ಯದ ಬೆಂಟ್ಲಿ ಮೊಜಾನ್ ಕಾರು ಖರೀದಿಸಿದ ಬೆಂಗಳೂರು ಉದ್ಯಮಿ

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಮಾಹಿತಿಗಳ ಪ್ರಕಾರ ಹೊಸ ಕಾರ್ನಿವಾಲ್ ಕಾರು 7 ಸೀಟರ್ ಮತ್ತು 9 ಸೀಟರ್ ಆವೃತ್ತಿಯಲ್ಲಿ ಖರೀದಿ ಲಭ್ಯವಾಗಲಿದ್ದು, ಕಾರಿನ ಬೆಲೆಯು ಆರಂಭಿಕವಾಗಿ ರೂ.16 ಲಕ್ಷದಿಂದ ರೂ.25 ಲಕ್ಷ ಎಕ್ಸ್‌ಶೋರೂಂ ಬೆಲೆ ಪಡೆದುಕೊಳ್ಳಲಿದೆ. ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾ ಕಾರಿಗಿಂತ 300-ಎಂಎಂ ನಷ್ಟು ಹೆಚ್ಚು ಉದ್ದವಾಗಿದ್ದು, ಮೂರನೇ ಸಾಲಿನಲ್ಲೂ ಅರಾಮದಾಯಕವಾಗಿ ಕೂರಬಹುದಾದ ಆಸನ ಸೌಲಭ್ಯವನ್ನು ಹೊಂದಿದೆ.

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಇನ್ನು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ಸೆಲ್ಟೊಲ್ ಕಾರು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.16.99 ಲಕ್ಷ ಬೆಲೆ ಹೊಂದಿದ್ದು, ಸಾಮಾನ್ಯ ಮತ್ತು ಪರ್ಫಾಮೆನ್ಸ್ ಮಾದರಿಯಲ್ಲಿ ಖರೀದಿಗೆ ಲಭ್ಯವಿರುವ ಈ ಕಾರು ಅಕ್ಟೋಬರ್ ಅವಧಿಯಲ್ಲಿ 12,850 ಯುನಿಟ್ ಮಾರಾಟಗೊಂಡಿವೆ.

ಕಾರು ಮಾರಾಟದಲ್ಲಿ ಟೊಯೊಟಾ, ಹೋಂಡಾ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿದ ಕಿಯಾ ಮೋಟಾರ್ಸ್

ಸೆಲ್ಟೊಸ್ ಕಾರು ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

Most Read Articles

Kannada
English summary
Kia Motors Becomes The Fifth Largest Car Maker In India. Read in Kannada.
Story first published: Tuesday, November 5, 2019, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X