ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಕಿಯಾ ಮೋಟಾರ್ಸ್ ಸಂಸ್ಥೆಯ ಬೃಹತ್ ಬಂಡವಾಳದೊಂದಿಗೆ ಕಾರು ಉತ್ಪಾದನೆಗೆ ಚಾಲನೆ ನೀಡಿರುವುದಲ್ಲದೇ ಸೆಲ್ಟೊಸ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಕಿಯಾ ಸಂಸ್ಥೆಯು ದೇಶದಲ್ಲೇ ಮೊದಲ ಬಾರಿಗೆ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭಿಸಿದೆ.

ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್‌ಗಳು ಅತ್ಯಾಧುನಿಕ ಫೀಚರ್ಸ್‌ಗಳನ್ನು ಒಳಗೊಂಡ ಕಾರು ಮಾರಾಟ ಮಳಿಗೆಗಳಾಗಿದ್ದು, ಈ ಕಾರು ಮಾರಾಟ ಮಳಿಗೆಗಳಲ್ಲಿ ಕಾರು ಸಂಸ್ಥೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಒಂದೇ ಸೂರಿನಡಿ ತಿಳಿದುಕೊಳ್ಳಬಹುದಾದ ವ್ಯವಸ್ಥೆ ಹೊಂದಿರುತ್ತದೆ. ಕಿಯಾ ಮೋಟಾರ್ಸ್ ಸಹ ತನ್ನ ನೆಚ್ಚಿನ ಗ್ರಾಹಕರಿಗೆ ಅಂತರ್‌ರಾಷ್ಟ್ರೀಯ ಮಟ್ಟದ ಸೇವೆಗಳನ್ನು ನೀಡಲು ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್‌ಗಳ ನಿರ್ಮಾಣಕ್ಕೆ ಚಾಲನೆ ನೀಡಿದೆ.

ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ಕಿಯಾ ಸಂಸ್ಥೆಯ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ದಹೆಲಿ ಬಳಿಯ ಗುರುಗ್ರಾಮ್‌ನಲ್ಲಿ ಆರಂಭವಾಗಿದ್ದು, 5,280 ಸ್ಕ್ವೇರ್ ಫೀಟ್ ವಿಸ್ತಿರ್ಣದಲ್ಲಿ ತಲೆಎತ್ತಿರುವ ಹೊಸ ಕಾರು ಮಾರಾಟ ಮಳಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್‌ನಲ್ಲಿ ಮಿಡಿಯಾ ಜೋನ್, ಕೆಫೆ ಮತ್ತು ರಿಯಾಲಿಟಿ ಜೋನ್‌ಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದ್ದು, ಕಾರು ಖರೀದಿಸುವ ಗ್ರಾಹಕರಿಗೆ ಬ್ರಾಂಡ್ ಎಕ್ಸ್‌ಪಿರೆನ್ಸ್‌ನಲ್ಲಿ ಹೊಸ ಲೋಕವೇ ಅನಾವರಣಗೊಳ್ಳಲಿದೆ.

ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ಕಿಯಾ ಸಂಸ್ಥೆಯು ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್‌ನಲ್ಲಿ ತನ್ನ ಕಾರು ಮಾದರಿಗಳ ಕುರಿತಾದ ಮಾಹಿತಿಯೊಂದಿಗೆ ಭವಿಷ್ಯದಲ್ಲಿ ಕಾರು ಉತ್ಪನ್ನ ಕುರಿತಾದ ಪರಿಕಲ್ಪನೆಗಳ ಪ್ರದರ್ಶನ ಮತ್ತು ಕಾರು ಉತ್ರಾದನಾ ತಂತ್ರಗಾರಿಕೆ ಕುರಿತಾದ ಮಾಹಿತಿ ಸಿಗಲಿದೆ. ಹೀಗಾಗಿ ಕಾರು ಖರೀದಿಸಲು ಬರುವ ಗ್ರಾಹಕರಿಗೆ ಇದು ಯಾವುದೇ ಗೊಂದಲಗಳಿಲ್ಲದೇ ಒಂದೇ ಸೂರಿನಡಿ ಎಲ್ಲಾ ಮಾಹಿತಿಗಳನ್ನು ನೀಡುವುದರಿಂದ ಗ್ರಾಹಕರು ಮತ್ತು ಬ್ರಾಂಡ್ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ಅದರಲ್ಲೂ ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರುವ ಕಿಯಾ ಸಂಸ್ಥೆಗೆ ಬ್ರಾಂಡ್ ವಿಸ್ತರಣೆಯು ಪ್ರಮುಖ ಗುರಿಯಾಗಿದ್ದು, ಬೀಟ್360 ಸ್ಟೋರ್‌ಗಳು ಕಿಯಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿವೆ.

ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ಜೊತೆಗೆ ಗ್ರಾಹಕರ ಬೇಡಿಕೆಯೆಂತೆ ಕಾರು ಉತ್ಪನ್ನಗಳನ್ನು ಅತಿ ಕಡಿಮೆ ಅವಧಿಯೊಳಗೆ ಪೂರೈಕೆ ಮಾಡುವ ಗುರಿಗಹೊಂದಲಾಗಿದ್ದು, ಮಹಾನಗರಗಳಲ್ಲಿ ಮಾತ್ರವಲ್ಲದೇ 2ನೇ ಮತ್ತು 3ನೇ ದರ್ಜೆಯ ನಗರಗಳಲ್ಲೂ ತನ್ನ ಮಾರಾಟ ಮಳಿಗೆಗಳನ್ನು ತೆರೆಯಲು ಕಿಯಾ ಯೋಜನೆ ರೂಪಿಸಿದೆ.

MOST READ: ಹೊಸ ವಾಹನಗಳ ಖರೀದಿ ಹೆಚ್ಚಿಸಲು ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಕಡಿತ

ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ವಾರ್ಷಿಕವಾಗಿ 3 ಲಕ್ಷ ಕಾರುಗಳ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಕಿಯಾ ಸಂಸ್ಥೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಅತಿದೊಡ್ಡ ಕಾರು ಉತ್ಪಾದನಾ ಘಟಕವನ್ನು ತೆರಿದಿದ್ದು, ಕೈಗೆಟುವ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ ವಾಹನಗಳಿಂದಾಗಿ ಗ್ರಾಹಕರನ್ನು ಸೆಳೆಯುತ್ತಿದೆ.

MOST READ: ಶೀಘ್ರದಲ್ಲೇ ಹೊಸ ಕಾರುಗಳಲ್ಲಿ ಕಡ್ಡಾಯವಾಗಲಿದೆ ಈ ಫೀಚರ್..!

ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ಇನ್ನು ಕಳೆದ ಅಗಸ್ಟ್ 22ರಂದು ಬಿಡುಗಡೆಗೊಂಡಿರುವ ಸೆಲ್ಟೊಸ್ ಕಾರು ಮೊದಲ ತಿಂಗಳಿನಲ್ಲೇ 6 ಸಾವಿರ ಯುನಿಟ್ ಮಾರಾಟ ದಾಖಲೆ ಮಾಡುವ ಮೂಲಕ ಸೆಪ್ಟೆಂಬರ್ ಅವಧಿಯಲ್ಲೂ ಗರಿಷ್ಠ ಕಾರು ಮಾರಾಟ ದಾಖಲೆ ಹೊಂದಿದೆ. ಒಟ್ಟು 7,750 ಕಾರುಗಳ ಮಾರಾಟದೊಂದಿಗೆ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

MOST READ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ಆಕರ್ಷಕ ಬೆಲೆ, ಸುಧಾರಿತ ತಂತ್ರಜ್ಞಾನ ಬಳಕೆಯಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಕಿಯಾ ಸೆಲ್ಟೊಸ್ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 16.99 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ. ಪ್ರತಿ ಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಕಾರುಗಳಿಂತಲೂ ಹೆಚ್ಚಿನ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿದ್ದು, ಆಕರ್ಷಕ ಬೆಲೆಗಳೊಂದಿಗೆ ಎಸ್‌ಯುವಿ ಪ್ರಿಯರ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಕಿಯಾ ಮೋಟಾರ್ಸ್ ಮೊದಲ ಬ್ರಾಂಡ್ ಎಕ್ಸ್‌ಪಿರೆನ್ಸ್ ಬೀಟ್360 ಸ್ಟೋರ್ ಆರಂಭ

ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ ಒಟ್ಟು 6 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 9 ವೆರಿಯೆಂಟ್‌ಗಳನ್ನು ಹೊಂದಿದ್ದು, ಟೆಕ್ ಲೈನ್‌ನಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಮತ್ತು ಜಿಟಿ ಲೈನ್‌ನಲ್ಲಿ ಜಿಟಿಕೆ, ಜಿಟಿಎಕ್ಸ್ ಮತ್ತು ಜಿಟಿಕೆ ಪ್ಲಸ್, ಜಿಟಿಕೆ ಪ್ಲಸ್ ಎಎಂಟಿ ವೆರಿಯೆಂಟ್‌ಗಳಲ್ಲಿ ಲಭ್ಯವಿವೆ. ಟೆಕ್ ಲೈನ್‌ ಕಾರು ಮಾದರಿಗಳು ಸಾಮಾನ್ಯ ಚಾಲನಾ ತಂತ್ರಜ್ಞಾನ ಹೊಂದಿದ್ದರೆ ಜಿಟಿ ಲೈನ್‌ ಕಾರುಗಳು ಸಾಮಾನ್ಯ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ವೈಶಿಷ್ಟ್ಯತೆ ಹೊಂದಿವೆ.

Most Read Articles

Kannada
English summary
Kia Motors India Opens First BEAT360 Experience Store. Read in Kannada.
Story first published: Friday, October 11, 2019, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X