2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಜಗತ್ತಿನ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, 2019ರ ಅಗಸ್ಟ್ ಹೊತ್ತಿಗೆ ತನ್ನ ಮೊದಲ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಭಾರತೀಯ ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆ ತರಲಿರುವ ಬಹುನೀರಿಕ್ಷಿತ ಕಾರು ಉತ್ಪಾದನಾ ಸಂಸ್ಥೆ ಅಂದ್ರೆ ತಪ್ಪಾಗುದಿಲ್ಲ. ಈಗಾಗಲೇ ಭಾರತದಲ್ಲಿ ಮೊದಲ ಹಂತವಾಗಿ ಬಿಡುಗಡೆಯಾಗುವ ತನ್ನ ಹೊಸ ಕಾರು ಉತ್ಪನ್ನಗಳ ಬಗ್ಗೆ ಮಾಹಿತಿ ಹೊರಹಾಕಿರುವ ಕಿಯಾ ಸಂಸ್ಥೆಯು ಸದ್ಯದಲ್ಲೇ ಮಾರುಕಟ್ಟೆಗೆ ಪ್ರವೇಶಿಸುವ ತವಕದಲ್ಲಿದೆ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಕಿಯಾ ಸಂಸ್ಥೆಯು ವಿವಿಧ ಮಾದರಿಯ ಒಟ್ಟು 8 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಇದರಲ್ಲಿ ಮೊದಲಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದೇ ಎಸ್‌ಪಿ ಕಾನ್ಸೆಪ್ಟ್ ಕಂಪ್ಯಾಕ್ಟ್ ಎಸ್‌ಯುವಿ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಆಂಧ್ರಪ್ರದೇಶದಲ್ಲಿ ತನ್ನ ಮೊದಲ ಕಾರು ಉತ್ಪಾದನಾ ಘಟಕವನ್ನು 7 ಸಾವಿರ ಕೋಟಿ ವೆಚ್ಚದಲ್ಲಿ ತೆರೆಯುವ ಮೂಲಕ ಈಗಾಗಲೇ ಕಾರು ಉತ್ಪಾದನೆಯನ್ನು ಆರಂಭಗೊಳಿರುವ ಕಿಯಾ ಸಂಸ್ಥೆಯು ಮುಂಬರುವ 2019ರ ಅಗಸ್ಟ್ ಆರಂಭದಲ್ಲೇ ಹೊಸ ಕಾರುಗಳ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಕಿಯಾ ಸಂಸ್ಥೆಯು 2018ರ ದೆಹಲಿ ಆಟೋ ಮೇಳದಲ್ಲೂ ಸಹ ತನ್ನ ಬಹುನೀರಿಕ್ಷಿತ ಹೊಸ ಕಾರುಗಳನ್ನು ಪ್ರದರ್ಶನ ಮಾಡಿ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದು, ಕೈಗೆಟುಕುವ ಬೆಲೆಗಳಲ್ಲಿ ಮಧ್ಯಮ ಗಾತ್ರದ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಇವುಗಳಲ್ಲಿ ಎಸ್‌ಪಿ ಕಾನ್ಸೆಪ್ಟ್ ಎಸ್‌ಯುವಿಯು ಮುಂದಿನ ಅಗಸ್ಟ್ ಆರಂಭದಲ್ಲೇ ಬಿಡುಗಡೆ ಸಜ್ಜಾಗುತ್ತಿದ್ದು, ಈ ನಡುವೆ ಮತ್ತೆರಡು ಹೊಸ ಕಾರುಗಳನ್ನು ಸಹ ಬಿಡುಗಡೆ ಮಾಡುತ್ತಿರುವಾಗಿ ಸುಳಿವು ನೀಡಿದೆ. ಕ್ರಾಸ್ ಓವರ್ ಎಸ್‌ಯುವಿ ಮಾದರಿಯಾದ ಸ್ಟೊನಿಕ್ ಮತ್ತು ಇನೋವಾ ಕ್ರಿಸ್ಟಾ ಮಾದರಿಯ ಗ್ರ್ಯಾಂಡ್ ಕಾರ್ನಿವಾಲ್ ಎಂಪಿವಿ ಕಾರನ್ನು ಪರಿಚಯಿಸುತ್ತಿರುವುದು ಖಚಿತವಾಗಿದೆ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಇದರ ಜೊತೆಗೆ ಕಿಯಾ ಸ್ಟಿಂಗರ್ ಜಿಟಿ ಎಸ್, ಸಿಡ್ ಎನ್ನುವ ಕಾರುಗಳು ಲಗ್ಷುರಿ ಸೆಡಾನ್ ಅಂಶಗಳೊಂದಿಗೆ ಕಾರು ಪ್ರಿಯರನ್ನು ಸೆಳೆಯುತ್ತಿದ್ದು, 19-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳು, ಬ್ರಿಂಬೋ ಬ್ರೇಕಿಂಗ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಡ್ರೈವಿಂಗ್ ಸೌಲಭ್ಯಗಳನ್ನು ಪಡೆದಿರುವುದು ಬಹಿರಂಗವಾಗಿದೆ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್ ಮತ್ತು ಐಷಾರಾಮಿ ಕಾರುಗಳನ್ನು ಸಿದ್ದಗೊಳಿಸಿದ್ದು, ಇನೋವಾ ಕ್ರಿಸ್ಟಾ ಕಾರುಗಳ ಪ್ರತಿಸ್ಪರ್ಧಿಯಾಗಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರಿನ ಭಾರೀ ನೀರಿಕ್ಷೆ ಇಟ್ಟುಕೊಳ್ಳಲಾಗಿದೆ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಇದರೊಂದಿಗೆ ಕಿಯಾ ಎಸ್‌ಪಿ ಕಾನ್ಸೆಪ್ಟ್, ಸ್ಟೊನಿಕ್, ಗ್ರ್ಯಾಂಡ್ ಕಾರ್ನಿವಾಲ್, ಸ್ಟಿಂಗರ್, ಸೆರಾಟೊ ಕಾರುಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಿದ್ದವಾಗಿದ್ದು, ಹ್ಯುಂಡೈ ಮಾದರಿಯಲ್ಲೇ ಕಿಯಾ ಕಾರುಗಳು ಸಹ ಬೆಲೆ ಪಟ್ಟಿ ಸಿದ್ದವಾಗುವ ಸಾಧ್ಯತೆಗಳಿವೆ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ತರುವ ಉದ್ದೇಶದೊಂದಿದೆ ಬೃಹತ್ ಯೋಜನೆ ಹೊತ್ತು ಬಂದಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಗಳಿಗೆ ತ್ರೀವ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ ಅಂದ್ರೆ ತಪ್ಪಾಗುವುದಿಲ್ಲ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಮೊದಲ ಹಂತವಾಗಿ ಎಸ್‌ಪಿ ಕಾನ್ಸೆಪ್ಟ್ ಕಾರನ್ನು ಬಿಡುಗಡೆ ಮಾಡಲಿರುವ ಕಿಯಾ ಸಂಸ್ಥೆಯು ತದನಂತರ ಸೊರೆಂಟೊ, ಸ್ಟೊನಿಕ್ ಕ್ರಾಸ್ ಓವರ್ ಎಸ್‌ಯುವಿ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.

MOST READ: ಸೈಕಲ್‌ ಗುದ್ದಿದ ರಭಸಕ್ಕೆ ಟೊಯೊಟೊ ಕಾರಿನ ಪರಿಸ್ಥಿತಿ ಹೀಗಾ ಆಗೋದು..!

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಇದರಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವ ಉದ್ದೇಶದಿಂದ ಗ್ರ್ಯಾಂಡ್ ಕಾರ್ನಿವಾಲ್ ಅಭಿವೃದ್ಧಿ ಮಾಡಲಾಗುತ್ತಿದ್ದು, ಇದು 7 ಸೀಟರ್, 9 ಸೀಟರ್ ಮತ್ತು 11 ಸೀಟರ್ ವೈಶಿಷ್ಟ್ಯತೆಯನ್ನು ಹೊಂದಿಯಂತೆ. ಹೀಗಾಗಿ ಈ ಕಾರು ಟೂರಿಸ್ಟ್ ಬಳಕೆಯ ವಾಹನ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸಾಧ್ಯತೆಯಿದೆ.

2019ರ ಆಗಸ್ಟ್ ಹೊತ್ತಿಗೆ ಕಿಯಾ ಮೊದಲ ಕಾರು ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಇದರಿಂದ ಕಿಯಾ ಮೋಟಾರ್ಸ್ ಸಂಸ್ಥೆಯು ಮಾರುತಿ ಸುಜುಕಿ, ಹ್ಯುಂಡೈ, ಟೊಯೊಟಾ ಮತ್ತು ಟಾಟಾ ಮೋಟಾರ್ಸ್ ನಿರ್ಮಾಣದ ಕಾರುಗಳಿಗೆ ಭಾರೀ ಪೈಪೋಟಿ ನೀಡುವುದು ಸ್ಪಷ್ಟವಾಗಿದ್ದು, ಗ್ರಾಹಕರನ್ನು ಸೆಳೆಯಲು ಕಿಯಾ ಕೈಗೊಳ್ಳುವ ಮುಂದಿನ ಯೋಜನೆಗಳ ಬಗ್ಗೆ ಮತ್ತಷ್ಟು ಕುತೂಹಲವಿದೆ ಎನ್ನಬಹುದು.

Most Read Articles

Kannada
Read more on ಕಿಯಾ kia motors
English summary
Kia Motors is preparing for the launch of its first product in the Indian market. Read in Kannada.
Story first published: Saturday, January 12, 2019, 18:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X