ಮಾರುತಿ ಮತ್ತು ಹ್ಯುಂಡೈಗೆ ಟಕ್ಕರ್ ನೀಡಲು ಸಜ್ಜಾದ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು...

ಕಿಯಾ ಮೋಟಾರ್ಸ್ ಸಂಸ್ಥೆಯು ಸೆಲ್ಟೊಸ್ ಎಸ್‌ಯುವಿ ಕಾರು ಮಾರಾಟದಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತೈದು ಹೊಸ ಕಾರುಗಳನ್ನು ಪರಿಚಯಿಸಲು ಯೋಜನೆ ರೂಪಿಸಿದೆ. ಇದರಲ್ಲಿ ಕಾರ್ನಿವಾಲ್ ಎಂಪಿವಿ ಹಾಗೂ ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯೊಂದು ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

ಮಾರುತಿ ಮತ್ತು ಹ್ಯುಂಡೈಗೆ ಟಕ್ಕರ್ ನೀಡಲು ಸಜ್ಜಾದ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು...

ಭಾರೀ ನೀರಿಕ್ಷೆಯೊಂದಿಗೆ ಭಾರತೀಯ ಆಟೋ ಉದ್ಯಮಕ್ಕೆ ಕಾಲಿಟ್ಟಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಸಂಸ್ಥೆಯು ದೇಶದ ಟಾಪ್ 3 ಕಾರು ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಕೈಗೆಟುಕುವ ಬೆಲೆಯ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಸೆಲ್ಟೊಸ್ ಬಿಡುಗಡೆಯ ನಂತರ ಕಾರ್ನಿವಾಲ್ ಸೇರಿದಂತೆ ವಿವಿಧ ನಮೂನೆಯ ಐದು ಹೊಸ ಕಾರುಗಳನ್ನು ರಸ್ತೆಗಿಳಿಸಲು ಸಿದ್ದತೆ ನಡೆಸುತ್ತಿದ್ದು, ಹೊಚ್ಚ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಸದ್ಯ ಭಾರೀ ಚರ್ಚಗೆ ಕಾರಣವಾಗಿದೆ.

ಮಾರುತಿ ಮತ್ತು ಹ್ಯುಂಡೈಗೆ ಟಕ್ಕರ್ ನೀಡಲು ಸಜ್ಜಾದ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು...

ಸಹೋದರ ಸಂಸ್ಥೆ ಹ್ಯುಂಡೈಗಿಂತಲೂ ಅತ್ಯುತ್ತಮ ಕಾರು ಉತ್ಪನ್ನಗಳನ್ನು ಹೊಂದಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಅಗ್ಗದ ಬೆಲೆಯಲ್ಲಿ ಉತ್ತಮ ಮಾದರಿಯ ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದೆ.

ಮಾರುತಿ ಮತ್ತು ಹ್ಯುಂಡೈಗೆ ಟಕ್ಕರ್ ನೀಡಲು ಸಜ್ಜಾದ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು...

ಮಾಹಿತಿಗಳ ಪ್ರಕಾರ, ಮುಂಬರುವ ಫೆಬ್ರುವರಿ ವೇಳೆಗೆ ಕಾರ್ನಿವಾಲ್ 7 ಸೀಟರ್ ಎಂಪಿವಿ ಬಿಡುಗಡೆ ಮಾಡಲಿರುವ ಕಿಯಾ ಸಂಸ್ಥೆಯು ತದನಂತರ ಕ್ಯೂವೈಎ ಹೆಸರಿನ ಕಂಪ್ಯಾಕ್ಟ್ ಎಸ್‌ಯುವಿ, ಸೊರೆಂಟೊ ಸೆಡಾನ್ ಮತ್ತು ಸೊಲ್ ಎಲೆಕ್ಟ್ರಿಕ್, ನಿರೊ ಎಲೆಕ್ಟ್ರಿಕ್ ಮತ್ತು ಐಷಾರಾಮಿ ಎಸ್‌ಯುವಿ ಮಾದರಿಯಾದ ಟೆಲ್ಲುರೈಡ್ ಕಾರನ್ನು ಬಿಡುಗಡೆ ಮಾಡಲಿದೆಯೆಂತೆ.

ಮಾರುತಿ ಮತ್ತು ಹ್ಯುಂಡೈಗೆ ಟಕ್ಕರ್ ನೀಡಲು ಸಜ್ಜಾದ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು...

ಸೆಲ್ಟೊಸ್ ಯಶಸ್ವಿ ನಂತರ ಮುಂದಿನ ಕಾರು ಬಿಡುಗಡೆಯ ಯೋಜನೆ ಕುರಿತಂತೆ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿರುವ ಕಿಯಾ ಹಿರಿಯ ಅಧಿಕಾರಿಯೊಬ್ಬರು ಪ್ರತಿ ಆರು ತಿಂಗಳಿಗೊಂದು ಹೊಸ ಕಾರು ಉತ್ಪನ್ನ ಬಿಡುಗಡೆ ಮಾಡುವ ಯೋಜನೆಯಿದ್ದು, ಮುಂಬರುವ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿ ನಂತರ ಕಾರ್ನಿವಾಲ್ ಎಂಪಿವಿ ಹಾಗೂ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗೊಳಿಸಲಾಗುವುದು ಎನ್ನುವ ಮಾಹಿತಿ ನೀಡಿದ್ದಾರೆ.

ಮಾರುತಿ ಮತ್ತು ಹ್ಯುಂಡೈಗೆ ಟಕ್ಕರ್ ನೀಡಲು ಸಜ್ಜಾದ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು...

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿ ನೀಡಿದಲಿದೆ.

ಮಾರುತಿ ಮತ್ತು ಹ್ಯುಂಡೈಗೆ ಟಕ್ಕರ್ ನೀಡಲು ಸಜ್ಜಾದ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು...

ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಈಗಾಗಲೇ ವಿವಿಧ ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಸದ್ಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ಸೆಲ್ಟೊಲ್ ಕಾರು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.16.99 ಲಕ್ಷ ಬೆಲೆ ಹೊಂದಿದ್ದು, ಸಾಮಾನ್ಯ ಮತ್ತು ಪರ್ಫಾಮೆನ್ಸ್ ಮಾದರಿಯಲ್ಲಿ ಈ ಕಾರು ಖರೀದಿಗೆ ಲಭ್ಯವಿದೆ.

ಮಾರುತಿ ಮತ್ತು ಹ್ಯುಂಡೈಗೆ ಟಕ್ಕರ್ ನೀಡಲು ಸಜ್ಜಾದ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು...

ಸೆಲ್ಟೊಸ್ ಕಾರು ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ ಇವರೇ..!

ಮಾರುತಿ ಮತ್ತು ಹ್ಯುಂಡೈಗೆ ಟಕ್ಕರ್ ನೀಡಲು ಸಜ್ಜಾದ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು...

ಪ್ರತಿ ಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಕಾರುಗಳಿಂತಲೂ ಹೆಚ್ಚಿನ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿದ್ದು, ಆಕರ್ಷಕ ಬೆಲೆಗಳೊಂದಿಗೆ ಎಸ್‌ಯುವಿ ಪ್ರಿಯರ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಮಾರುತಿ ಮತ್ತು ಹ್ಯುಂಡೈಗೆ ಟಕ್ಕರ್ ನೀಡಲು ಸಜ್ಜಾದ ಕಿಯಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು...

ಇದೇ ರೀತಿಯಾಗಿ ಕಿಯಾ ಸಂಸ್ಥೆಯ ಮುಂಬರುವ ದಿನಗಳಲ್ಲಿ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಎಂಪಿವಿ ಕಾರುಗಳಲ್ಲೇ ವಿನೂತನ ವಿನ್ಯಾಸ ಹೊಂದಿರುವ ಕಾರ್ನಿವಾಲ್ ಬಿಡುಗಡೆ ಮೂಲಕ ಭಾರೀ ಪ್ರಮಾಣದ ಕಾರುಗಳ ಮಾರಾಟಕ್ಕೆ ಯೋಜನೆ ರೂಪಿಸಿದೆ.

Most Read Articles

Kannada
English summary
Kia mini SUV Spied on Video. Read in Kannada.
Story first published: Wednesday, October 30, 2019, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X