ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಕಾರು ಉತ್ಪಾದನಾ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸಲು ಸಜ್ಜಾಗುತ್ತಿದ್ದು, ಈಗಾಗಲೇ ಬಿಡುಗಡೆಯಾಗಲಿರುವ ತನ್ನ ಮೊದಲ ಸೆಲ್ಟೊಸ್ ಕಾರನ್ನು ಪ್ರದರ್ಶನ ಮಾಡಿ ಮುಂದಿನ ಕೆಲವೇ ದಿನಗಳಲ್ಲಿ ಮಾರಾಟಕ್ಕೆ ಅಧಿಕೃತ ಚಾಲನೆ ನೀಡುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ 2 ವರ್ಷಗಳ ಅವಧಿಯಲ್ಲಿ ಒಟ್ಟು 8 ವಿವಿಧ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವ ಕಿಯಾ ಸಂಸ್ಥೆಯು ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಭಾರತದಲ್ಲೂ ಸಹ ಎಲೆಕ್ಟ್ರಿಕ್ ವಾಹನ ಉತ್ಪಾದನೆಗಾಗಿ ಕೇಂದ್ರ ಸರ್ಕಾರವು ಭಾರೀ ಪ್ರಮಾಣದ ಸಬ್ಸಡಿ ಯೋಜನೆಗಳನ್ನು ಘೋಷಣೆ ಮಾಡಿದೆ. ಹೀಗಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಭಾರೀ ಪ್ರಮಾಣದ ಬಂಡವಾಳದೊಂದಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಾರ್ಯಕ್ಕೆ ಚಾಲನೆ ನೀಡಿದ್ದು, ಇನ್ನು ಕೆಲವು ಸಂಸ್ಥೆಗಳು ಇವಿ ವಾಹನಗಳ ಬಿಡುಗಡೆಗಾಗಿ ಅಂತಿಮ ಹಂತಮದ ಸಿದ್ದತೆಯಲ್ಲಿವೆ.

ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ಇದರಲ್ಲಿ ಕಿಯಾ ಮೋಟಾರ್ಸ್ ಸಹ ಮೊದಲ ಬಾರಿಗೆ ಭಾರತದಲ್ಲಿ ತನ್ನ ಕಾರು ಉತ್ಪನ್ನಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಇದರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯ ಕಾರುಗಳ ಜೊತೆಯಲ್ಲಿ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಕಾರುಗಳು ಸಹ ಮಾರುಕಟ್ಟೆಗೆ ಪ್ರವೇಶ ಪಡೆಯುವ ಸನಿಹದಲ್ಲಿವೆ.

ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ಕಿಯಾ ಸಂಸ್ಥೆಯು ಮೊದಲು ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಲಿದ್ದು, ತದನಂತರವಷ್ಟೇ 2020ರ ಜನವರಿ ಹೊತ್ತಿಗೆ 7 ಸೀಟರ್ ಸಾಮರ್ಥ್ಯದ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಮಾದರಿಯನ್ನು ಬಿಡುಗಡೆಗೆ ಯೋಜನೆ ರೂಪಿಸಿದೆ. ತದನಂತರವಷ್ಟೇ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ಈ ಬಗ್ಗೆ ಸೆಲ್ಟೊಸ್ ಕಾರು ಅನಾವರಣದಲ್ಲಿ ಭಾಗಿಯಾಗಿದ್ದ ಕಿಯಾ ಸಂಸ್ಥೆಯ ಮುಖ್ಯಸ್ಥ ಹಾನ್ ವೂ ಪಾರ್ಕ್ ಅವರು ಕೆಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದು, 2020ರ ಮಧ್ಯಂತರದಲ್ಲಿ ಕಿಯಾ ಮೊದಲ ಎಲೆಕ್ಟ್ರಿಕ್ ಕಾರು ರಸ್ತೆಗಿಳಿಯಲಿದೆ ಎಂದಿದ್ದಾರೆ. ಹಾಗೆಯೇ ಸಾಮಾನ್ಯ ಕಾರುಗಳ ಮಾದರಿಯಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಎಲ್ಲಾ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರುಗಳನ್ನು ಪರಿಚಯಿಸಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.

ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ಕಿಯಾ ಮೋಟಾರ್ಸ್ ಈಗಾಗಲೇ ವಿದೇಶಿ ಮಾರುಕಟ್ಟೆಗಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಚಾಲನೆ ನೀಡಿ ಯುರೋಪ್ ಮತ್ತು ಚೀನಿ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಐಷಾರಾಮಿ ವೈಶಿಷ್ಟ್ಯತೆಯ ನಿರೊ ಮತ್ತು ಮಧ್ಯಮ ಗಾತ್ರದ ಸೊಲ್ ಎಲೆಕ್ಟ್ರಿಕ್ ಕಾರು ಆವೃತ್ತಿಗಳು ಭಾರತಕ್ಕೂ ಪ್ರವೇಶಿಸಲಿವೆ.

ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ಇವುಗಳಲ್ಲಿ ನಿರೊ ಎಲೆಕ್ಟ್ರಿಕ್ ಕಾರು ದುಬಾರಿ ಬೆಲೆಗಳೊಂದಿಗೆ ಅಧಿಕ ಮೈಲೇಜ್, ವಿಶೇಷ ಚಾಲನಾ ಗುಣಲಕ್ಷಣಗಳೊಂದಿಗೆ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯಲಿದ್ದರೆ, ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಯ ಸೊಲ್ ಎಲೆಕ್ಟ್ರಿಕ್ ಆವೃತ್ತಿಯು ಮಧ್ಯಮ ಕ್ರಮಾಂಕದ ವಿನ್ಯಾಸದೊಂದಿಗೆ ಉತ್ತಮ ಮೈಲೇಜ್ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ತವಕದಲ್ಲಿದೆ.

ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ಸದ್ಯ ಸೊಲ್ ಕಾರುಗಳು ವಿದೇಶಿ ಮಾರುಕಟ್ಟೆಯಲ್ಲಿ ಆವೃತ್ತಿಗಳು ಪ್ರತಿ ಚಾರ್ಚ್‌ಗೆ 280ರಿಂದ 300ಕಿಮಿ ಮೈಲೇಜ್ ಸಾಮರ್ಥ್ಯವನ್ನು ಹೊಂದಿದೆ. ಇದೇ ಮಾದರಿಯು ಕೆಲವು ಬದಲಾವಣೆಗಳೊಂದಿಗೆ ಭಾರತದಲ್ಲೂ ಖರೀದಿಗೆ ಲಭ್ಯವಾಗಲಿದೆ ಎನ್ನಲಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಸೊಲ್ ಕಾರು ರೂ. 7 ಲಕ್ಷದಿಂದ ರಿಂದ ರೂ.10 ಲಕ್ಷ ಬೆಲೆಯೊಳಗೆ ಹೊಸ ಕಾರನ್ನು ಬಿಡುಗಡೆ ಮಾಡಲಿಯೆಂತೆ.

ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ಇದರಲ್ಲಿ ನಿರೊ ಎಲೆಕ್ಟ್ರಿಕ್ ಕಾರು ಪ್ರತಿ ಚಾರ್ಜ್ 400ರಿಂದ 450 ಕಿ.ಮಿ ಮೈಲೇಜ್ ರೇಂಜ್‌ನೊಂದಿಗೆ ಹಲವು ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ರೂ. 20 ಲಕ್ಷದಿಂದ ರೂ.25 ಲಕ್ಷ ಬೆಲೆ ಪಡೆದುಕೊಳ್ಳುವ ಮೂಲಕ ಐಷಾರಾಮಿ ಎಲೆಕ್ಟ್ರಿಕ್ ಕಾರು ಖರೀದಿದಾರನ್ನು ಸೆಳೆಯುವ ಯೋಜನೆಯಲ್ಲಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ಇನ್ನು ಕಿಯಾ ಸಂಸ್ಥೆಯು ಎಸ್‌ಯುವಿ ಮತ್ತು ಎಂಪಿವಿ ಕಾರುಗಳನ್ನು ಹೊರತುಪಡಿಸಿ ಸಣ್ಣ ಗಾತ್ರದ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ವರ್ಷನ್‌ಗಳಲ್ಲಿ ಎಸ್‌ಯುವಿ ಮತ್ತು ಎಂಪಿವಿ ಕಾರುಗಳನ್ನು ಮಾತ್ರವೇ ಬಿಡುಗಡೆ ಮಾಡಲಿರುವ ಕಿಯಾ ಸಂಸ್ಥೆಯು ಸಣ್ಣ ಗಾತ್ರದ ಎಲೆಕ್ಟ್ರಿಕ್ ಮಾದರಿಗಳಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

Most Read Articles

Kannada
English summary
South Korean car maker Kia motors is planning to launch low cost electric car in India. Read in Kannada.
Story first published: Monday, June 24, 2019, 17:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X