ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಹೊಸ ಕಾರು ಖರೀದಿಗೂ ಮುನ್ನ ಬುಕ್ಕಿಂಗ್ ಮಾಡುವ ಗ್ರಾಹಕರು ಇಂತಿಷ್ಟು ದಿನಗಳ ಕಾಲ ಬೇಡಿಕೆಯ ಆಧಾರದ ಮೇಲೆ ಕಾಯಲೇಬೇಕಾದ ಅನಿವಾರ್ಯತೆ ಇದ್ದೆ ಇರುತ್ತೆ. ಇದಕ್ಕಾಗಿಯೇ ಹೊಸ ಯೋಜನೆ ರೂಪಿಸಿರುವ ಕಿಯಾ ಸಂಸ್ಥೆಯು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಸೆಲ್ಟೊಸ್ ಕಾರನ್ನು ಅತಿ ಕಡಿಮೆ ಅವಧಿಯಲ್ಲಿ ವಿತರಣೆ ಮಾಡುವ ಉದ್ದೇಶದಿಂದ ಉತ್ಪಾದನಾ ಸಾಮಾರ್ಥ್ಯವನ್ನು ದುಪ್ಪಟ್ಟುಗೊಳಿಸಿದೆ.

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಕಿಯಾ ಸಂಸ್ಥೆಯು ಸದ್ಯ ಸೆಲ್ಟೊಸ್ ಕಾರನ್ನು ಕೇವಲ ಒಂದೇ ಶಿಫ್ಟ್ ಮೂಲಕ ಪ್ರತಿ ತಿಂಗಳು 10 ಸಾವಿರ ಕಾರುಗಳನ್ನು ಮಾತ್ರವೇ ಉತ್ಪಾದನೆ ಮಾಡುತ್ತಿದ್ದು, ಇದೀಗ ಹೊಸ ಕಾರಿಗೆ ಭಾರೀ ಬೇಡಿಕೆ ಬಂದ ಹಿನ್ನಲೆಯಲ್ಲಿ ಎರಡನೇ ಶಿಫ್ಟ್ ಮೂಲಕವು ಕಾರು ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರಿಂದಾಗಿ ಸೆಲ್ಟೊಸ್ ಕಾರು ಉತ್ಪಾದನಾ ಪ್ರಮಾಣವು ಇದೀಗ 10 ಸಾವಿರದಿಂದ 15 ಸಾವಿರಕ್ಕೆ ಏರಿಕೆಯಾಗಿದ್ದು, ದೀಪಾವಳಿ ಮುನ್ನ ಗರಿಷ್ಠ ಪ್ರಮಾಣದ ಕಾರು ಮಾರಾಟಕ್ಕೆ ಭರ್ಜರಿ ತಯಾರಿ ನಡೆಸಿದೆ.

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಎರಡನೇ ಶಿಫ್ಟ್ ಆರಂಭವಾದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 1 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುವ ಕಿಯಾ ಸಂಸ್ಥೆಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಸದ್ಯ ಮಾರುಕಟ್ಟೆಯಲ್ಲಿ ಸೆಲ್ಟೊಸ್ ಬಿಡುಗಡೆಯ ನಂತರ ಪ್ರತಿ ತಿಂಗಳು ಸರಾಸರಿಯಾಗಿ 6,050(ಅಗಸ್ಟ್) ಮತ್ತು 7,750(ಸೆಪ್ಟೆಂಬರ್) ಯುನಿಟ್ ಮಾರಾಟವಾಗಿದ್ದು, ಇದೀಗ ದೀಪಾವಳಿ ಹಿನ್ನಲೆಯಲ್ಲಿ ಸೆಲ್ಟೊಸ್ ಖರೀದಿಗಾಗಿ ಬರೋಬ್ಬರಿ 60 ಸಾವಿರಕ್ಕೂ ಹೆಚ್ಚು ಗ್ರಾಹಕರು ರೂ.50 ಸಾವಿರ ಮುಂಗಡ ಪಾವತಿಸಿ ಬುಕ್ಕಿಂಗ್ ಪಡೆದುಕೊಂಡಿದ್ದಾರೆ.

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಇದರಿಂದ ಅಕ್ಟೋಬರ್ ಅವಧಿಯ ಕಾರು ಮಾರಾಟದಲ್ಲಿ ಹೊಸ ದಾಖಲೆಗೆ ಮುಂದಾಗಿರುವ ಕಿಯಾ ಸಂಸ್ಥೆಯು ಸೆಲ್ಟೊಸ್ ಕಾರು ಉತ್ಪಾದನೆಯನ್ನು ಹೆಚ್ಚಿಸಿದ್ದು, ಬುಕ್ಕಿಂಗ್ ಮಾಡಿದ ಒಂದೇ ವಾರದಲ್ಲಿ ಹೊಸ ಕಾರನ್ನು ವಿತರಣೆ ಮಾಡುವ ಭರವಸೆ ನೀಡುತ್ತಿದೆ. ಇದು ಇತರೆ ಕಾರು ಮಾರಾಟ ಸಂಸ್ಥೆಗಳು ನೀಡುವ 3 ರಿಂದ 4 ವಾರಗಳ ಕಾಯುವಿಕೆ ಅವಧಿಗೆ ಹೋಲಿಕೆ ಮಾಡಿದ್ದಲ್ಲಿ ಗ್ರಾಹಕರು ಹೆಚ್ಚಿನ ಮಟ್ಟದಲ್ಲಿ ಕಿಯಾ ಸೆಲ್ಟೊಸ್ ಖರೀದಿಯತ್ತ ಮುಖ ಮಾಡುತ್ತಿರುವುದು ಪ್ರಮುಖ ಆಕರ್ಷಣೆಯಾಗಲಿದೆ.

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿದ್ದು, ಆಕರ್ಷಕ ಬೆಲೆಗಳೊಂದಿಗೆ ಎಸ್‌ಯುವಿ ಪ್ರಿಯರ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಆಕರ್ಷಕ ಬೆಲೆ, ಸುಧಾರಿತ ತಂತ್ರಜ್ಞಾನ ಬಳಕೆಯಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಹೊಂದುತ್ತಿರುವ ಕಿಯಾ ಸೆಲ್ಟೊಸ್ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 16.99 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ. ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ ಒಟ್ಟು 6 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 9 ವೆರಿಯೆಂಟ್‌ಗಳನ್ನು ಹೊಂದಿದೆ.

MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಸೆಲ್ಟೊಸ್ ಕಾರು ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

MOST READ: ಟೊಯೊಟಾ ವೆಲ್‌ಫೈರ್ ಖರೀದಿಗೆ ಬುಕ್ಕಿಂಗ್ ಶುರು- ಬೆಲೆ ರೂ. 80 ಲಕ್ಷ ಅಷ್ಟೆ ಅಂತೆ..!

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದೆ.

MOST READ: ಮುಂದಿನ ಒಂದು ವರ್ಷದೊಳಗೆ ಏಳು ಹೊಸ ಕಾರು ಬಿಡುಗಡೆ ಮಾಡಲಿದೆ ಮಹೀಂದ್ರಾ

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆತಿದೆ.

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಸುರಕ್ಷಾ ಸೌಲಭ್ಯಗಳು

ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ

ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು,ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯ ಹೊಸ ಕಾರಿನ ಖದರ್ ಹೆಚ್ಚಿಸಿದೆ.

Most Read Articles

Kannada
English summary
Kia Seltos Crosses 60,000 Bookings and Increases Production to Meet Demand. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X