ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿದ ಮೊದಲ ಎಸ್‍‍ಯುವಿ ಸೆಲ್ಟೋಸ್ ಹೊಸ ಸಂಚಲನವನ್ನು ಮೂಡಿಸಿದೆ. ಭಾರತೀಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಯಶ್ವಸಿಯಾಗಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಕಿಯಾ ಸೆಲ್ಟೋಸ್ ಎಸ್‍‍ಯುವಿ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿ ದಾಖಲೆಗಳ ಸರದಾರ ಆಗಿದೆ. ಭಾರತದ ಗ್ರಾಹಕರು ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‍‍ಗಳಿಗೆ ಫುಲ್ ಫಿದಾ ಆಗಿದ್ದಾರೆ. ಭಾರತದ ಎಸ್‍‍ಯುವಿ ಸೆಗ್‍‍ಮೆಂಟ್‍‍ನಲ್ಲಿ ಕಿಯಾ ಸೆಲ್ಟೋಸ್ ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಖರೀದಿಸಿದ ಹಲವಾರು ಕಾರು ಪ್ರಿಯರು ಅದನ್ನು ಮಾಡಿಫೈ ಮಾಡುತ್ತಿದ್ದಾರೆ. ಅದರಂತೆ ಕೇರಳದಲ್ಲಿ ಮಾಡಿಫೈ ಮಾಡಿರುವ ಒಂದು ಉದಾಹರಣೆ ಇಲ್ಲಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಪರ್ಫಮಾನಾ ಎಂಬ ಕ್ಯಾಲಿಕಟ್ ಮೂಲದ ಕಸ್ಟಮ್ ಮಳಿಗೆಯು ಸೆಲ್ಟೋಸ್‍ ಅನ್ನು ಮಾಡಿಫೈ ಮಾಡಿದೆ. ಕಿಯಾ ಸೆಲ್ಟೋಸ್ ಎಸ್‍‍ಯುವಿಗೆ ಡ್ಯುಯಲ್ ಟೋನ್ ಬಣ್ಣವನ್ನು ನೀಡಲಾಗಿದೆ. ಕಿಯಾ ಸೆಲ್ಟೊಸ್ ಎಸ್‍‍ಯುವಿ ಎ, ಬಿ ಮತ್ತು ಸಿ ಪಿಲ್ಲರ್‍‍‍ಗಳು ಹಿಂಭಾಗದ ಸ್ಪಾಯ್ಲರ್ ಮತ್ತು ರೂಫ್‍‍ಗೆ ವೈನ್ ರೆಡ್ ಕಲರ್ ಅನ್ನು ನೀಡಲಾಗಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಈ ಎಸ್‍‍ಯುವಿಯ ವ್ಹೀಲ್ ಆರ್ಚ್ ಕ್ಲಾಡಿಂಗ್, ರೇರ್ ಬಂಪರ್ ಮತ್ತು ಫ್ರಂಟ್ ಲೋವರ್ ಬಂಪರ್ ಬ್ಲ್ಯಾಕ್ ಬ್ಲ್ಯಾಕ್ ಬಣ್ಣವನ್ನು ಅಳವಡಿಸಲಾಗಿದೆ. ಮಾಡಿಫೈ ಮಾಡಲಾದ ಈ ಕಿಯಾ ಸೆಲ್ಟೋಸ್ ಟಾಪ್ ಮಾದರಿಯಾಗಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಈ ಮಾಡಿಫೈ ಮಾಡಲಾದ ಎಸ್‍‍ಯುವಿಯಲ್ಲಿ ವಿಶಾಲವಾದ ಟಯರ್‍‍ಗಳನ್ನು ಅಳವಡಿಸಲಾಗಿದೆ. ಮಾಡಿಫೈ ಮಾಡಲಾದ ಈ ಎಸ್‍‍ಯುವಿಯಲ್ಲಿ 19 ಇಂಚಿನ ಮಲ್ಟಿ ಸ್ಪೋಕ್ ಬ್ಲ್ಯಾಕ್ ರಿಮ್ಡ್ ಟಿಎಸ್‍ಡಬ್ಲ್ಯು ಚಿಕೇನ್ ಟಯರ್‍ ಅನ್ನು ಅಳವಡಿಸಲಾಗಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಈ ಎಸ್‍ಯುವಿಯ ಮುಂಭಾಗದಲ್ಲಿ ಬ್ಲಾಕ್ ಗ್ರಿಲ್ ಅನ್ನು ಅಳವಡಿಸಲಾಗಿದೆ. ಕೆಂಪು ಬಣ್ಣದ ಲೆದರ್ ಸೀಟ್ ಅನ್ನು ಅಳವಡಿಸಲಾಗಿದೆ. ಕಿಯಾ ಸೆಲ್ಟೋಸ್‍ ಎಸ್‍‍ಯು‍ವಿಯನ್ನು ಬಿಎಸ್-6 ಎಂಜಿನ್‍‍ನ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಇವುಗಳಲ್ಲಿ 1.5 ಲೀಟರ್ ಪೆಟ್ರೋಲ್ , 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‍‍ಗಳು ಸೇರಿವೆ. ಎಸ್‍‍ಯು‍ವಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಇನ್ನೂ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿವೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

1.5 ಲೀಟರ್ ಪೆಟ್ರೋಲ್ ಸಿವಿ‍ಟಿ, 1.5 ಲೀಟರ್ ಡೀಸೆಲ್‍ಗೆ ಐವಿ‍ಟಿ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 6 ಸ್ಪೀಡಿನ ಮ್ಯಾನುವಲ್ ಹಾಗೂ 7 ಸ್ಪೀಡಿನ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಅಳವಡಿಸಲಾಗಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಸುರಕ್ಷತಾ ಫೀಚರ್ಸ್‍‍ಗಳು

ಕಿಯಾ ಸೆಲ್ಟೋಸ್ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನದ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಫೀಚರ್ಸ್‍‍ಗಳು

ಸೆಲ್ಟೋಸ್‍‍ನ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಚಾಲಕನ ಸೀಟು, ರೇರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಅನ್ನು ಅಳವಡಿಸಲಾಗಿದೆ.

ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದ ಕಿಯಾ ಸೆಲ್ಟೊಸ್ ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಎಂಜಿ ಹೆಕ್ಟರ್, ನಿಸ್ಸಾನ್ ಕಿಕ್ಸ್ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
This Modified Dual-Tone Kia Seltos Looks Dynamic And Sporty - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X