Just In
Don't Miss!
- Technology
2020ಕ್ಕೆ ಆಪಲ್ನಿಂದ 5G ಐಫೋನ್ ಪಕ್ಕಾ ಅಂತೆ..!
- News
ರಾಜ್ಯದಲ್ಲಿ ಬಿಯರ್ ಕುಡಿಯುವವರ ಪ್ರಮಾಣ ಇಳಿಕೆ: ತನಿಖೆಗೆ ಆದೇಶ
- Movies
KPL ಫಿಕ್ಸಿಂಗ್ ಪ್ರಕರಣ: ನಟಿಯರಿಗೆ ಶಾಕ್ ನೀಡಿದ ಕಮಿಷನರ್ ಭಾಸ್ಕರ್ ರಾವ್
- Sports
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಎಡವಿದ್ದೆಲ್ಲಿ?: ಸೋಲಿಗೆ ಪ್ರಮುಖ ಕಾರಣಗಳು!
- Finance
50 ಪೈಸೆ ಬಾಕಿ ಉಳಿದಿದೆ ಎಂದು ಬ್ಯಾಂಕ್ ನೋಟಿಸ್; ಕಟ್ಟಲು ಹೋದರೆ ಕಿರಿಕ್
- Education
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ನೇಮಕಾತಿ: ಡಿ.31ರೊಳಗೆ ಅರ್ಜಿ ಹಾಕಿ
- Lifestyle
ಮದುವೆ ಮುನ್ನ ಸಂಗಾತಿಯ ಆರೋಗ್ಯ ತಪಾಸಣೆ ಮಾಡಿಸಲೇಬೇಕು, ಏಕೆ?
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಅನಾವರಣಗೊಂಡ ಮಾಡಿಫೈ ಆಫ್ ರೋಡ್ ಕಿಯಾ ಸೆಲ್ಟೋಸ್
ಕಿಯಾ ಸೆಲ್ಟೊಸ್ ಜಾಗತಿಕ ಮಟ್ಟದ ಎಸ್‍ಯುವಿಯಾಗಿದೆ. ಈಗಾಗಲೇ ಅನೇಕ ದೇಶಗಳಲ್ಲಿ ಬಿಡುಗಡೆಯಾಗಿರುವ ಕಿಯಾ ಮೋಟಾರ್ಸ್ ಕಂಪನಿಯ ಸೆಲ್ಟೋಸ್ ಇದೀಗ ಯುಎಸ್‍ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇದಕ್ಕೂ ಮೊದಲೂ ತಯಾರಕರು ಮತ್ತು ಡೀಲರ್‍ಗಳು ಭಾಗವಹಿಸಿದ ಈವೆಂಟ್‍ನಲ್ಲಿ ಈ ಎಸ್‍ಯುವಿಯನ್ನು ಅನಾವರಣಗೊಳಿಸಿದೆ.

ಪ್ರಸ್ತುತ ಇತರ ದೇಶಗಳಲ್ಲಿ ಮಾರಾಟವಾಗುತ್ತಿರುವ ಸಾಮಾನ್ಯ ಸೆಲ್ಟೋಸ್‍ಗಳನ್ನು ಪ್ರದರ್ಶಿಸುವುದರ ಜೊತೆಗೆ ಕಿಯಾ ಅಮೇರಿಕಾವು ಸೆಲ್ಟೋಸ್‍ನ ಎರಡು ಮಾರ್ಪಡು ಪಡಿಸಿದ(ಮಾಡಿಫೈ) ಆವೃತ್ತಿಗಳನ್ನು ಸಹ ಪ್ರದರ್ಶಿಸಿತು. ಎರಡು ಆಫ್-ರೋಡ್ ಎಸ್‍ಯುವಿಗಳು ಮಾರ್ಪಾಡುಗಳನ್ನು ಹೊಂದಿರುವುದರಿಂದ, ಎರಡೂ ಪರಿಕಲ್ಪನೆಗಳು ಸೆಲ್ಟೋಸ್ ಆಫ್ ರೋಡ್ ಮಾರ್ಪಾಡುಗಳಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದರ ಬಗ್ಗೆ ಸಮಂಜಸವಾದ ಕಲ್ಪನೆಯನ್ನು ಒದಗಿಸಿದೆ.

ಈ ಆಫ್ ರೋಡ್ ಆವೃತ್ತಿಯು ಬೇಸ್ ರೂಪಾಂತವನ್ನು ಆಧರಿಸಿದೆ ಅಭಿವೃದ್ದಿಪಡಿಸಲಾಗಿದೆ. ಇದರಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಮತ್ತು ಎಲ್ಇಡಿ ಹೆಡ್‍ಲ್ಯಾಂಪ್ ಅನ್ನು ಹೊಂದಿಲ್ಲ.

ಈ ಆಪ್ ರೋಡ್ ಕಿಯಾ ಸೆಲ್ಟೋಸ್ ಎಸ್‍ಯುವಿಯ ಮುಂಭಾಗ ಮತ್ತು ಹಿಂಭಾಗದಲ್ಲಿ ಆರೇಂಜ್ ಮತ್ತು ವೈಟ್ ಬಣ್ಣದ ಬಂಪರ್‍ಗಳನ್ನು ಹೊಂದಿದೆ. ಈ ವಾಹನವು ಆರೇಂಜ್ ಬಣ್ಣದ ರೂಫ್ ಮತ್ತು ಒಆರ್‍ವಿಎಂ ಅನ್ನು ಹೊಂದಿದೆ.

ಮುಂಭಾಗದಲ್ಲಿ ಮ್ಯಾಟ್ ಫೀನಿಶ್‍ನೊಂದಿಗೆ ಬ್ಲ್ಯಾಕ್ ಗ್ರಿಲ್ ಅನ್ನು ಹೊಂದಿದೆ. ಆಕರ್ಷಕ ಹೆಡ್‍ಲೈಟ್, ಮುಂಭಾಗದ ಬಂಪರ್‍ನಲ್ಲಿ ಹೆಚ್ಚುವರಿಯಾಗಿ ನಾಲ್ಕು ಲೈಟ್‍ಗಳನ್ನು ಅಳವಡಿಸಲಾಗಿದೆ. ಇನ್ನೂ ನಾಲ್ಕು ಲೈಟ್‍ಗಳನ್ನು ಎಸ್‍ಯುವಿಯ ರೂಫ್‍ನ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ.

ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿಸಲಾಗಿದೆ, ಸಸ್ಪೆಂಕ್ಷನ್ ಸಹ ವಿಭಿನ್ನವಾಗಿದೆ. ಟಯರ್‍ಗಳು ಆಫ್ ರೋಡ್ ಸ್ಪೆಕ್ ಮತ್ತು ಯಾವುದೇ ಕಠಿಣ ರಸ್ತೆಗಳಲ್ಲಿ ಸುಲಭವಾಗಿ ಸಾಗಲು ನೆರವಾಗುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಟೋ ಹುಕ್ ಮತ್ತು ವಿಂಚ್ ನೀಡಲಾಗಿದೆ.

ಎರಡನೇ ಮಾರ್ಪಾಡು ಪಡಿಸಿದ ಕಿಯಾ ಸೆಲ್ಟೋಸ್ ಎಸ್‍ಯುವಿಯು ಬ್ಲ್ಯಾಕ್ ರೂಫ್ ಮತ್ತು ಬಾಡಿಯು ಬಿಳಿ ಬಣ್ಣವನ್ನು ಹೊಂದಿದೆ. ಇದರೊಂದಿಗೆ ಎಲ್ಇಡಿ ಹೆಡ್‍ಲೈಟ್‍ಗಳ ಜೊತೆಗೆ ಎಲ್ಇಡಿ ಡಿಆರ್‍ಎಲ್ ಅನ್ನು ಹೊಂದಿದೆ. ಮುಂಭಾಗದ ಬಂಪರ್, ಹಿಂಭಾಗದ ಬಂಪರ್, ಸೈಡ್ ಸ್ಕರ್ಟ್‍ಗಳು ಮತ್ತು ಟಯರ್‍ಗಳಲ್ಲಿ ಗೋಲ್ಡನ್ ಕಲರ್ ಮಿಶ್ರಣವನ್ನು ಹೊಂದಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇದರಲ್ಲಿ ಆಫರೋಡ್ ಟಯರ್‍ಗಳನ್ನು ಅಳವಡಿಸಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಹುಕ್ ಕೆಂಪು ಬಣ್ಣದಲ್ಲಿದೆ. ಮುಂಭಾಗದಲ್ಲಿ ಗ್ರಿಲ್, ಕ್ರೋಮ್ ಮತ್ತು ಹೆಡ್‍ಲೈಟ್‍ಗಳನ್ನು ಹೊಂದಿದೆ. ಮುಂಭಾಗದಲ್ಲಿರುವ ರಕ್ಷಣೆಗಾಗಿ ಬಂಪರ್ ಅನ್ನು ಹೊಂದಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಈ ಎಸ್‍ಯುವಿಯಲ್ಲಿ ಹೆಚ್ಚುವರಿಯಾಗಿ 4 ಹೆಡ್‍ಲೈಟ್‍ಗಳನ್ನು ರೂಫ್‍ನಲ್ಲಿ ಅಳವಡಿಸಲಾಗಿದೆ. ಒಆರ್‍ವಿಎಂಗಳು ಕೆಂಪು ಬಣ್ಣಗಳನ್ನು ಹೊಂದಿದೆ. ಈ ಎರಡು ಆಫ್ ರೋಡ್ ಸೆಲ್ಟೋಸ್ ಎಸ್‍ಯುವಿಗಳಲ್ಲಿ 1.4 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 140ಬಿಹೆಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಸಿಟಿ ಅನ್ನು ಅಳವಡಿಸಲಾಗಿದೆ.