ಕಿಯಾ ಸೆಲ್ಟಾಸ್ ಕಾರಿನ ಮೊದಲ ಮೊದಲ ಟೀಸರ್ ಬಿಡುಗಡೆ

ಕಿಯಾ ಮೋಟಾರ್ಸ್ ಸಂಸ್ಥೆಯು ಇದೇ 20ಕ್ಕೆ ಭಾರತದಲ್ಲಿ ಬಿಡುಗಡೆಯಾಗುವ ತನ್ನ ಮೊದಲ ಕಾರು ಮಾದರಿಯನ್ನು ಪ್ರದರ್ಶಿಸಲು ಸಜ್ಜಾಗುತ್ತಿದ್ದು, ಸೆಲ್ಟಾಸ್ ಹೆಸರಿನಲ್ಲಿ ಬಿಡುಗಡೆಯಾಗುವ ಮೊದಲ ಕಾರಿನ ಟೀಸರ್ ಚಿತ್ರವೊಂದನ್ನು ಬಿಡುಗಡೆ ಮಾಡಿದೆ.

ಕಿಯಾ ಸೆಲ್ಟಾಸ್ ಕಾರಿನ ಮೊದಲ ಮೊದಲ ಟೀಸರ್ ಬಿಡುಗಡೆ

ಹ್ಯುಂಡೈ ಸಂಸ್ಥೆಯ ಕ್ರೆಟಾದಂತೆಯೇ ಬಹುತೇಕ ವಿನ್ಯಾಸ ಹೊಂದಿರುವ ಕಿಯಾ ಸೆಲ್ಟಾಸ್ ಕಾರು ಭಾರತದಲ್ಲಿ ಜನಪ್ರಿಯತೆ ಗಳಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಮಾರುತಿ ಸುಜುಕಿ ಬ್ರೆಝಾ ಮತ್ತು ಹ್ಯುಂಡೈ ಕ್ರೆಟಾ ಕಾರುಗಳೇ ಇದರ ಪ್ರಮುಖ ಪ್ರತಿಸ್ಪರ್ಧಿ ಕಾರು ಮಾದರಿಗಳಾಗಿವೆ. ಸ್ಪೋರ್ಟಿ ಲುಕ್, ಪ್ರೀಮಿಯಂ ಫೀಚರ್ಸ್‌ಗಳು, ಗಮನ ಸೆಳೆಯುವ ಡ್ರೈವ್ ಟೆಕ್ನಾಲಜಿ ಮತ್ತು ಕೈಗೆಟುಕುವ ಬೆಲೆಗಳು ಸೆಲ್ಟಾಸ್ ಖರೀದಿಯ ಪ್ರಮುಖ ಅಂಶಗಳಾಗಿವೆ.

ಕಿಯಾ ಸೆಲ್ಟಾಸ್ ಕಾರಿನ ಮೊದಲ ಮೊದಲ ಟೀಸರ್ ಬಿಡುಗಡೆ

ಇನ್ನು ಭಾರತದಲ್ಲಿ ವಿವಿಧ ಮಾದರಿಯ ಒಟ್ಟು 8 ಹೊಸ ಕಾರುಗಳನ್ನು 2 ವರ್ಷಗಳ ಅವಧಿಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಮೊದಲ ಹಂತದಲ್ಲಿ ಸೆಲ್ಟಾಸ್ ಬಿಡುಗಡೆ ನಂತರ ಮತ್ತೆರಡು ಹೊಸ ಕಾರು ಮಾದರಿಗಳನ್ನು ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಗಾಗಿ ಸಿದ್ದವಾಗಿದೆ.

ಕಿಯಾ ಸೆಲ್ಟಾಸ್ ಕಾರಿನ ಮೊದಲ ಮೊದಲ ಟೀಸರ್ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರುಗಳನ್ನು ಅಭಿವೃದ್ಧಿಪಡಿಸಲು ವಿವಿಧ ಹಂತಗಳ ಮಾರುಕಟ್ಟೆ ಅಧ್ಯಯನ ನಡೆಸಿರುವ ಕಿಯಾ ಸಂಸ್ಥೆಯು ಬೆಲೆಯ ವಿಚಾರವಾಗಿ ಮಧ್ಯಮ ವರ್ಗ ವರ್ಗವನ್ನು ಮತ್ತು ಪ್ರೀಮಿಯಂ ಫೀಚರ್ಸ್ ಇಷ್ಟಪಡುವ ಕ್ಲಾಸ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೆಲ್ಟಾಸ್ ಸಿದ್ದಪಡಿಸಿದೆ.

ಕಿಯಾ ಸೆಲ್ಟಾಸ್ ಕಾರಿನ ಮೊದಲ ಮೊದಲ ಟೀಸರ್ ಬಿಡುಗಡೆ

ಸೆಲ್ಟಾಸ್ ಕಾರಿನ ಕುರಿತಾಗಿ ಕೆಲವು ಮಾಹಿತಿ ಬಿಟ್ಟುಕೊಟ್ಟಿರುವ ಕಿಯಾ ಸಂಸ್ಥೆಯು ಹೊಸ ಕಾರಿನ ಮುಂಭಾಗದಲ್ಲಿ ಎಲ್ಇಡಿ ಇಂಡೀಕೇಟರ್‌, ಫ್ರಂಟ್ ಫಾಸಿಯಾ, ಗ್ರಿಲ್ ನ ಬಳಿ ಟೈಗರ್ ಚಿಹ್ನೆ, ಎರಡೂ ಬದಿಯಲ್ಲೂ ಎಲ್ಇಡಿ ಹೆಡ್ ಲ್ಯಾಂಪ್‍ ಕ್ಲಸ್ಟರ್, ರೂಪ್ ರೈಲ್ಸ್ ಜೋಡಿಸಿರುವುದು ಸ್ಪಷ್ಟವಾಗಿದೆ.

ಹಾಗೆಯೇ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿರು ಹೊಸ ಕಾರಿನ ಮುಂಭಾಗದಲ್ಲಿರುವ ಗ್ರಿಲ್ ನ ಕೆಳಗೆ ದೊಡ್ಡ ಏರ್ ಡ್ಯಾಮ್ ಇದ್ದು, ಮುಂಭಾಗದಲ್ಲಿರುವ ಬಂಪರ್ ನ ಬಳಿ ಸಮವಾಗಿರುವ ಫಾಗ್ ಲ್ಯಾಂಪ್ ಗಳಿವೆ. ಜೊತೆಗೆ ಹಿಂಭಾಗದಲ್ಲೂ ಎಲ್ಇಡಿ ಟೈಲ್ ಲೈಟ್‍ಗಳನ್ನು ಅಳವಡಿಸಲಾಗಿದ್ದು, ಸ್ಪೋರ್ಟಿ ಮಾದರಿಯ ಟ್ವಿನ್ ಎಕ್ಸಾಸ್ಟ್, ರಿಯರ್ ಬಂಪರ್ ಜೋಡಿಸಲಾಗಿದೆ.

ಕಿಯಾ ಸೆಲ್ಟಾಸ್ ಕಾರಿನ ಮೊದಲ ಮೊದಲ ಟೀಸರ್ ಬಿಡುಗಡೆ

ಕಾರಿನ ಒಳವಿನ್ಯಾಸ

ಸೆಲ್ಟಾಸ್ ಕಾರಿನಲ್ಲಿ 10.25-ಇಂಚಿನ ಲಾರ್ಜ್ ಟಚ್‍ಸ್ಕ್ರೀನ್ ಇನ್ಫೊಟೇನ್ಮೆಂಟ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಳನ್ನು ಜೋಡಿಸಲಾಗಿದ್ದು, 8-ಇಂಚಿನ ಡಿಸ್‌ಪ್ಲೈ, ಕ್ರೂಸ್ ಕಂಟ್ರೂಲರ್, ಹೆಡ್ ಅಪ್ ಡಿಸ್‌ಪ್ಲೇ, ವೆಂಟಿಲೆಟೆಡ್ ಲೆದರ್ ಸೀಟುಗಳು ಮತ್ತು ಬ್ಯೂ ಲಿಂಕ್ ಪ್ಯಾಕೇಜ್ ಫೀಚರ್ಸ್‌ಗಳನ್ನು ಹೊಂದಿರಲಿದೆಯೆಂತೆ.

ಕಿಯಾ ಸೆಲ್ಟಾಸ್ ಕಾರಿನ ಮೊದಲ ಮೊದಲ ಟೀಸರ್ ಬಿಡುಗಡೆ

ಕಿಯಾ ಹೊಸ ಎಸ್‍ಯುವಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಮಾದರಿಗಳಲ್ಲೂ ಬರುವ ಸಾಧ್ಯತೆಗಳಿದ್ದು, ಪವರ್ ಹಾಗೂ ಟಾರ್ಕ್ ಉತ್ಪಾದನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಹಾಗೆಯೇ ಎರಡೂ ಎಂಜಿನ್ ಮಾದರಿಗಳಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿವೆ ಎನ್ನಲಾಗಿದೆ.

ಕಿಯಾ ಸೆಲ್ಟಾಸ್ ಕಾರಿನ ಮೊದಲ ಮೊದಲ ಟೀಸರ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಸೆಲ್ಟಾಸ್ ಕಾರು ಹಲವು ವಿಶೇಷತೆಗಳೊಂದಿಗೆ ರಸ್ತೆಗಿಳಿಯುತ್ತಿದ್ದು, ಸಾಮಾನ್ಯ ಮಾದರಿಯ ಎಂಜಿನ್ ಮಾತ್ರವಲ್ಲದೇ ಸ್ಪೋರ್ಟಿ ವರ್ಷನ್‌ನಲ್ಲೂ ಹೊಸ ಕಾರನ್ನು ಬಿಡುಗಡೆ ಮಾಡುವುದಾಗಿ ಕಿಯಾ ಸಂಸ್ಥೆಯು ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿತ್ತು. ಹೀಗಾಗಿ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿರುವ ಹೊಸ ಕಾರು ಸಾಮಾನ್ಯ ಮಾದರಿಯ ಎಂಜಿನ್ ಜೊತೆ ಸ್ಪೋರ್ಟಿ ವರ್ಷನ್ ಅನ್ನು ಕೂಡಾ ಹೊಂದಿದೆ.

ಕಿಯಾ ಸೆಲ್ಟಾಸ್ ಕಾರಿನ ಮೊದಲ ಮೊದಲ ಟೀಸರ್ ಬಿಡುಗಡೆ

ಸಾಮಾನ್ಯ ಮಾದರಿಯಲ್ಲಿ ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಪರ್ಫಾಮೆನ್ಸ್ ಪ್ರಿಯರಿಗಾಗಿ 7-ಸ್ಪೀಡ್ ಡಿಟಿಸಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 1.4-ಲೀಟರ್ ಟರ್ಬೋಚಾಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಸಹ ಅಭಿವೃದ್ಧಿಗೊಳಿಸಲಾಗಿದೆ.

MOST READ: ಆಕರ್ಷಕ ಬೆಲೆಗಳಲ್ಲಿ ಬಹುನೀರಿಕ್ಷಿತ ಟೊಯೊಟಾ ಗ್ಲಾಂಝಾ ಬಿಡುಗಡೆ

ಕಿಯಾ ಸೆಲ್ಟಾಸ್ ಕಾರಿನ ಮೊದಲ ಮೊದಲ ಟೀಸರ್ ಬಿಡುಗಡೆ

ಈ ಮೂಲಕ ಎಸ್‌ಯುವಿ ಮಾದರಿಗಳನ್ನು ಇಷ್ಟಪಡುವ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲು ಯತ್ನಿಸಿರುವ ಕಿಯಾ ಸಂಸ್ಥೆಯು ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11.30 ಲಕ್ಷದಿಂದ ಹೈ ಎಂಡ್ ಮಾದರಿಗೆ ರೂ.15 ಲಕ್ಷ ನಿಗದಿ ಮಾಡಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Kia Teases Seltos Compact SUV Ahead of Reveal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X