ಐಷಾರಾಮಿ ಲುಕ್ ಹೊಂದಿದ ಕಿಯಾ ಸೆಲ್ಟೋಸ್

ಭಾರತದಲ್ಲಿ ಕಿಯಾ ಕಂಪನಿಯು ಮೊದಲ ಬಾರಿಗೆ ಬಿಡುಗಡೆಗೊಳಿಸಿದ ಸೆಲ್ಟೋಸ್ ದಕ್ಷಿಣ ಕೊರಿಯಾ ಮೂಲದ ಉತ್ಪಾದಕರಿಗೆ ದೊಡ್ಡ ಯಶಸ್ಸನ್ನು ನೀಡಿದೆ. ಈ ಕಾಂಪ್ಯಾಕ್ಟ್ ಎಸ್‍‍ಯು‍ವಿ ಬಿಡುಗಡೆಯಾದ ಕೇವಲ 35 ದಿನಗಳಲ್ಲಿ 40,000ಕ್ಕೂ ಹೆಚ್ಚು ಬುಕ್ಕಿಂಗ್‍‍ಗಳನ್ನು ದಾಖಲಿಸಿದೆ. ಕಿಯಾ ಕಂಪನಿಯು ಇದೀಗ ಕಾಂಪ್ಯಾಕ್ಟ್ ಎಸ್‍‍ಯು‍ವಿನಲ್ಲಿ ಕೆಲವು ನವೀಕರಣವನ್ನು ನಡೆಸಲು ಮುಂದಾಗಿದೆ.

ಐಷಾರಾಮಿ ಲುಕ್ ಹೊಂದಿದ ಕಿಯಾ ಸೆಲ್ಟೋಸ್

ಚಿತ್ರದಲ್ಲಿ ಇರುವ ಹಾಗೆ ಹಲವಾರು ನವೀಕರಣದೊಂದಿಗೆ ಐಷಾರಾಮಿ ಎಸ್‍‍ಯು‍ವಿಯನ್ನಾಗಿ ಮಾಡಲಾಗಿದೆ. ಈ ಕಾರಿನ ಸಂಪೂರ್ಣ ನವೀಕರಣ ಕಾರ್ಯವನ್ನು ದೆಹಲಿ ಮೂಲದ ಆಟೋಮೋಟಿವ್ ಸಂಸ್ಥೆ ಕಾರ್ ಸ್ಟೈಲಿನ್ ಅವರು ಮಾಡಿದೆ.

ಐಷಾರಾಮಿ ಲುಕ್ ಹೊಂದಿದ ಕಿಯಾ ಸೆಲ್ಟೋಸ್

ಸೆಲ್ಟೋಸ್‍‍ನಲ್ಲಿ ಮಾಡಿದ ಪ್ರಮುಖ ಬದಲಾವಣೆಗಳು ಕ್ಯಾಬಿನ್‍ ಈಗ ವೈಟ್, ಬ್ಲೂ ಮತ್ತು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಈ ಕಾರಿನ ಬಾಡಿಯ ಬಣ್ಣವು ಇಂಟೆಲಿಜೆನ್ಸಿ ಬ್ಲೂ ಬಣ್ಣವನ್ನು ಹೊಂದಿದ್ದು, ಇದರಿಂದ ಕ್ಯಾಬಿನ್‍‍ನೊಳಗೆ ಇದೇ ರೀತಿಯ ಬಣ್ಣದ ಅಂಶಗಳನ್ನು ಹೊಂದಿದೆ.

ಐಷಾರಾಮಿ ಲುಕ್ ಹೊಂದಿದ ಕಿಯಾ ಸೆಲ್ಟೋಸ್

ಸೆಲ್ಟೋಸ್ ಎಚ್‍‍‍ಟಿ ಲೈನ್ ರೂಪಾಂತರಗಳು ಹೆಚ್ಚು ಐಷಾರಾಮಿ ಆಧಾರಿತ ಕ್ಯಾಬಿನ್ ಅನ್ನು ಹೊಂದಿದ್ದರೆ, ಜಿ‍‍ಟಿ ಲೈನ್ ರೂಪಾಂತರಗಳು ಸ್ಪೋರ್ಟಿ ಲುಕಿಂಗ್ ಕ್ಯಾಬಿನ್‍‍ನನ್ನು ಹೊಂದಿವೆ. ಡ್ಯಾಶ್‍ಬೋರ್ಡ್ ಈಗ ಬ್ಲೂಲ್ ಟ್ರಿಮ್ ಅನ್ನು ಅದರ ಉದ್ದಕ್ಕೂ ಹೊಂದಿದೆ. ಡೋರ್ ಪ್ಯಾಡ್‍‍ಗಳು ಇದೇ ರೀತಿಯ ಬ್ಲೂ ಬಣ್ಣದ ಅಂಶಗಳನ್ನು ಹೊಂದೆವೆ. ಕ್ಯಾಬಿನ್‍‍ಗೆ ಐಷಾರಾಮಿ ಲುಕ್‍ ನೀಡಲು ಡೋರ್‍ ಪ್ಯಾಡ್‍‍ಗಳು, ಲೋವರ್ ಡ್ಯಾಶ್‍ಬೋರ್ಡ್, ಪಿಲ್ಲರ್ ಮತ್ತು ಕೆಲವು ಇತರ ಪ್ರದೇಶಗಳಲ್ಲಿ ಲೆದರ್ ಅನ್ನು ಹೊಂದಿದೆ. ಸೀಟ್‍ಗಳು ನಪ್ಪಾ ಲೆದರ್ ಅನ್ನು ಹೊಂದಿದೆ.

ಐಷಾರಾಮಿ ಲುಕ್ ಹೊಂದಿದ ಕಿಯಾ ಸೆಲ್ಟೋಸ್

ಲೆದರ್ ಮತ್ತು ಇತರ ಗುಣಮಟ್ಟದ ವಸ್ತುಗಳಿಂದ ಹೊಸ ಸೆಲ್ಟೋಸ್ ಹೆಚ್ಚು ದುಬಾರಿ ಎಸ್‍‍ಯು‍ವಿ ಲುಕ್ ಅನ್ನು ಹೊಂದಿದೆ. ಡ್ಯಾಶ್‍‍ಬೋರ್ಡ್‍‍ನ ಮೇಲೆನ ತುದಿಯನ್ನು ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು, ಇದು ಚಾಲನೆ ಮಾಡುವಾಗ ನೇರ ಸೂರ್ಯನ ಬೆಳಕಿನಲ್ಲಿ ಪ್ರತಿಫಲನವನ್ನು ಕಡಿಮೆ ಮಾಡುತ್ತದೆ. ಒಟ್ಟಾರೆಯಾಗಿ ಕಿಯಾ ಸೆಲ್ಟೋಸ್ ಐಷಾರಾಮಿ ಕ್ಯಾಬಿನ್ ಅನ್ನು ಹೊಂದಿದೆ.

ಐಷಾರಾಮಿ ಲುಕ್ ಹೊಂದಿದ ಕಿಯಾ ಸೆಲ್ಟೋಸ್

ಸೆಲ್ಟೋಸ್ ಎಸ್‍ಯು‍ವಿನಲ್ಲಿ ಬಿಎಸ್-6 ಪ್ರೇರಿತ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಡೀಸೆಲ್ ಎಂಜಿನ್‌ನಲ್ಲಿ ಒಟ್ಟು 6 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 9 ವೆರಿಯೆಂಟ್‌ಗಳನ್ನು ಹೊಂದಿವೆ.

ಐಷಾರಾಮಿ ಲುಕ್ ಹೊಂದಿದ ಕಿಯಾ ಸೆಲ್ಟೋಸ್

ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರೇರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಅನ್ನು ಅಳವಡಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಐಷಾರಾಮಿ ಲುಕ್ ಹೊಂದಿದ ಕಿಯಾ ಸೆಲ್ಟೋಸ್

ಸೆಲ್ಟೋಸ್‍ ಎಸ್‍‍‍ಯು‍ವಿನಲ್ಲಿ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಐಷಾರಾಮಿ ಲುಕ್ ಹೊಂದಿದ ಕಿಯಾ ಸೆಲ್ಟೋಸ್

ಈ ಎಸ್‍‍ಯು‍ವಿನಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ,ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಅನ್ನು ಹೊಂದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಐಷಾರಾಮಿ ಲುಕ್ ಹೊಂದಿದ ಕಿಯಾ ಸೆಲ್ಟೋಸ್

ಕಿಯಾ ಸೆಲ್ಟೋಸ್ ಹೊಸ ನವೀಕರಣದೊಂದಿಗೆ ಇನ್ನಷ್ಟು ಗ್ರಾಹಕರನ್ನು ಸೆಳೆಯಲು ಪಯತ್ನಿಸುತ್ತಿವೆ. ಭಾರತದಲ್ಲಿ ಕಿಯಾ ಸೆಲ್ಟೋಸ್ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಸೆಲ್ಟೊಸ್ ಎಸ್‍ಯುವಿಯು ತನ್ನ ಸೆಗ್‍ಮೆಂ‍ಟ್‍‍ನ ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಎಸ್‍‍ಯು‍ವಿಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

Most Read Articles

Kannada
English summary
Kia Seltos turned into a luxury SUV with fully customised interiors - Read in Kannada
Story first published: Friday, October 18, 2019, 15:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X