ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಕಿಯಾ ಸಂಸ್ಥೆಯು ಭಾರತದಲ್ಲಿ ಕಾರು ಬಿಡುಗಡೆಗೊಳಿಸಲಿದೆ ಎನ್ನುವ ದಿನದಿಂದ ಹಿಡಿದು ಇದುವರೆಗೂ ಒಂದಲ್ಲಾ ಒಂದು ಕುತೂಹಲ ಮೂಡಿಸುತ್ತಲೇ ಬಂದಿದ್ದು, ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿರುವ ತನ್ನ ಮೊದಲ ಕಾರು ಮಾದರಿಯಾದ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಎಸ್‌ಪಿ2ಐ ಎನ್ನುವ ಹೆಸರಿನೊಂದಿಗೆ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶನ ಮಾಡಿದ್ದ ಕಿಯಾ ಸಂಸ್ಥೆಯು ತದನಂತರ ಹಲವು ಬದಲಾವಣೆಗಳೊಂದಿಗೆ ಎಸ್‌ಪಿ2ಐ ಕಾರಿಗೆ ಅಧಿಕೃತವಾಗಿ ಸೆಲ್ಟೊಸ್ ಎಂದು ಹೆಸರಿಸಿದ್ದಲ್ಲದೇ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿನೂತನ ಸೌಲಭ್ಯ ಒದಗಿಸುವ ಬಗ್ಗೆ ಸುಳಿವು ನೀಡಿತ್ತು. ಅಂತೆಯೇ ಇದೀಗ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದ ಕಾರನ್ನು ಅಧಿಕೃತವಾಗಿ ಬಹಿರಂಗಪಡಿಸುವ ಮೂಲಕ ಎಸ್‌ಯುವಿ ಪ್ರಿಯರನ್ನು ಮೊದಲ ನೋಟದಲ್ಲೇ ಸೆಳೆಯುವಂತಹ ಹೊಸ ಸ್ಪೋರ್ಟಿ ವಿನ್ಯಾಸವನ್ನು ಒದಗಿಸಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿರುವ ಹ್ಯುಂಡೈ ಕ್ರೆಟಾ ಮಾದರಿಯಲ್ಲೇ ಸಿದ್ದವಾಗಿರುವ ಸೆಲ್ಟೊಸ್ ಕಾರು ಕ್ರೆಟಾಗಿಂತಲೂ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವಿಲ್ಲ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಸೆಲ್ಟೊಸ್ ಡಿಸೈನ್ ವೈಶಿಷ್ಟ್ಯತೆ

ಕಿಯಾ ಸಂಸ್ಥೆಯು ಸೆಲ್ಟೊಸ್ ಕಾರಿನಲ್ಲಿ ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹಲವು ಹೊಸ ವಿನ್ಯಾಸಗಳನ್ನು ಪರಿಚಯಿಸಿದ್ದು, ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಹಾಗೆಯೇ ಸೆಲ್ಟೊಸ್ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹಾಗೆಯೇ ಕಾರಿನ ಲುಕ್ ಹೆಚ್ಚಿಸಲು ಅಲ್ಲಲ್ಲಿ ಬ್ರಿಡ್ಜ್ ಕ್ರೋಮ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಕೂಡಾ ಹೊಸ ಕಾರಿನ ಖದರ್ ಹೆಚ್ಚಿಸಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಕಾರಿನ ಒಳಾಂಗಣ ವಿನ್ಯಾಸ

ಕಿಯಾ ಸಂಸ್ಥೆಯು ಸೆಲ್ಟೊಸ್ ಕಾರಿನ ಹೊಸ ವಿನ್ಯಾಸಗಳನ್ನು ಮಾತ್ರವೇ ಪ್ರದರ್ಶನ ಮಾಡಿದ್ದು, ಬಿಡುಗಡೆಯ ದಿನದ ತನಕ ಕಾರಿನ ಒಳವಿನ್ಯಾಸಗಳನ್ನು ಬಹಿರಂಗಪಡಿಸದಿರಲು ನಿರ್ಧರಿಸಿದೆ. ಹೀಗಾಗಿ ಕಾರಿನ ಒಳಾಂಗಣ ಮಾಹಿತಿ ನೀಡಿದೆಯಾದರೂ ಒಳಾಂಗಣ ಚಿತ್ರಗಳನ್ನು ಮಾತ್ರ ರಹಸ್ಯವಾಗಿಟ್ಟಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಕಿಯಾ ಸಂಸ್ಥೆಯು ಹೇಳಿಕೊಂಡಿರುವ ಪ್ರಕಾರ, ಹೊಸ ಸೆಲ್ಟೊಸ್ ಕಾರಿನ ಒಳಾಂಗಣ ವಿನ್ಯಾಸವು ಮಾರುಕಟ್ಟೆಯಲ್ಲಿರುವ ಇತರೆ ಕಂಪ್ಯಾಕ್ಟ್ ಎಸ್‌ಯುವಿಗಳಿಂತಲೂ ಉತ್ತಮವಾಗಿರಲಿವೆ ಎಂದಿದ್ದು, ಕಾರಿನಲ್ಲಿ 10.25-ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೆಟೆಡ್ ಲೆದರ್ ಸೀಟುಗಳು, 360 ಡಿಗ್ರಿ ವ್ಯೂ ಮಾನಿಟರ್, ಹೆಡ್ ಅಪ್ ಡಿಸ್‌ಪ್ಲೇ, ಸನ್‌ರೂಫ್ ಮತ್ತು 8-ಸ್ಪಿಕರ್ಸ್ ಬಾಷ್ ಸೌಂಡ್ ಸಿಸ್ಟಂ ಹೊಂದಿರಲಿದೆಯೆಂತೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಇದರ ಜೊತೆಗೆ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್ ಸೌಲಭ್ಯಗಳು ಕೂಡಾ ಸೆಲ್ಟೊಸ್‌ನಲ್ಲಿವೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಬ್ಲ್ಯೂ ಲಿಂಕ್ ಪ್ಯಾಕೇಜ್ ಸೌಲಭ್ಯದಿಂದಾಗಿ ಹೊಸ ಸೆಲ್ಟಾಸ್ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದ್ದು, ಜಿಯೋ ಫೆನ್ಸ್, ಟೈಮ್ ಫೆನ್ಸ್ ಮತ್ತು ವೆಹಿಕಲ್ ಕಂಟ್ರೋಲ್ ಮ್ಯಾನೆಜೆಮೆಂಟ್ ಫೀಚರ್ಸ್‌ಗಳಿಂದಾಗಿ ಅಪಘಾತದ ಮುನ್ಸೂಚನೆಯ ಎಚ್ಚರಿಕೆ ಸೇರಿದಂತೆ ಕಾರು ಕಳ್ಳತನವಾದಲ್ಲಿ ಕೆಲವೇ ಸೇಕೆಂಡುಗಳಲ್ಲಿ ಮಾಲೀಕರಿಗೆ ಮಾಹಿತಿ ರವಾನೆ ಮಾಡುವ ವ್ಯವಸ್ಥೆ ಇದಾಗಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಎಂಜಿನ್ ಸಾಮಾರ್ಥ್ಯ

ಸೆಲ್ಟೊಸ್ ಕಾರು ಬಿಎಸ್-6 ಪ್ರೇರಿತ 1.5-ಲೀಟರ್ ಸಾಮಾರ್ಥ್ಯ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ ಸ್ಪೋರ್ಟಿ ವರ್ಷನ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಜಿಟಿ ಆವೃತ್ತಿಯನ್ನು ಸಹ ಪರಿಚಯಿಸುತ್ತಿದ್ದು, ಹೊಸ ಎಂಜಿನ್ ಅಧಿಕೃತ ಪರ್ಫಾಮೆನ್ಸ್ ಕುರಿತು ಬಿಡುಗಡೆಯ ದಿನದಂದೇ ಹೆಚ್ಚಿನ ಮಾಹಿತಿ ದೊರೆಯಲಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಸುರಕ್ಷಾ ಸೌಲಭ್ಯಗಳು

ಶೇ.73ರಷ್ಟು ಅತ್ಯುತ್ತಮ ಸ್ಟೀಲ್ ಪಡೆದುಕೊಂಡಿರುವ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಖರೀದಿಗೆ ಲಭ್ಯವಿರುವ ಬಣ್ಣಗಳು

ಸೆಲ್ಟೊಸ್ ಕಾರುಗಳು ಒಟ್ಟು ಎಂಟು ಬಣ್ಣಗಳಲ್ಲಿ ಖರೀದಿ ಲಭ್ಯವಿರಲಿದ್ದು, ಇವುಗಳಲ್ಲಿ ಐದು ಡ್ಯುಯಲ್ ಟೋನ್ ಬಣ್ಣಗಳನ್ನು ಪರಿಚಯಿಸಲಾಗಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)

ಜುಲೈ ಕೊನೆಯಲ್ಲಿ ಇಲ್ಲವೇ ಅಗಸ್ಟ್ ಆರಂಭದಲ್ಲಿ ಸೆಲ್ಟೊಸ್ ಕಾರು ಬಿಡುಗಡೆಯಾಗಲಿದ್ದು, ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಇನ್ನು ಕಿಯಾ ಸಂಸ್ಥೆಯು ಸೆಲ್ಟೊಸ್ ಬಿಡುಗಡೆಯ ನಂತರ ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಒಟ್ಟು 8 ಹೊಸ ಕಾರು ಆವೃತ್ತಿಗಳನ್ನು ಮುಂದಿನ 2 ವರ್ಷಗಳ ಅವಧಿಯಲ್ಲಿ ಬಿಡುಗಡೆ ಮಾಡಲಿದ್ದು, ಇದರಲ್ಲಿ 2 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಈಗಾಗಲೇ ಸಿದ್ದತೆ ಮಾಡಿಕೊಂಡಿದೆ.

ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಎಸ್‌ಯುವಿ ಭಾರತದಲ್ಲಿ ಅನಾವರಣ

ಇದಕ್ಕಾಗಿಯೇ ಬರೋಬ್ಬರಿ 7 ಸಾವಿರ ಕೋಟಿ ಬಂಡವಾಳದೊಂದಿಗೆ ಆಂಧ್ರಪ್ರದೇಶದಲ್ಲಿ ಹೊಸ ಕಾರು ಉತ್ಪಾದನಾ ಘಟಕವನ್ನು ತೆರೆದಿದ್ದು, ಇಲ್ಲಿ ವಾರ್ಷಿಕವಾಗಿ 3 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತು ಮಾಡುವ ಗುರಿಹೊಂದಿದೆ.

Most Read Articles

Kannada
English summary
Kia Seltos Unveiled In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X