ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ2ಐ ಕಾರು..

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಮೊದಲ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳಿಗೆ ಚಾಲನೆ ನೀಡುತ್ತಿದ್ದು, 2019ರ ಸೆಪ್ಟೆಂಬರ್ ಅಂತ್ಯಕ್ಕೆ ತನ್ನ ಮೊದಲ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ2ಐ ಕಾರು..

ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಭಾರತೀಯ ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆ ತರಲಿರುವ ಬಹುನೀರಿಕ್ಷಿತ ಕಾರು ಉತ್ಪಾದನಾ ಸಂಸ್ಥೆ ಅಂದ್ರೆ ತಪ್ಪಾಗುದಿಲ್ಲ. ಈಗಾಗಲೇ ಭಾರತದಲ್ಲಿ ಮೊದಲ ಹಂತವಾಗಿ ಬಿಡುಗಡೆಯಾಗುವ ತನ್ನ ಹೊಸ ಕಾರಿನ ಡಿಸೈನ್ ಕುರಿತಾಗಿ ಕೆಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದು, ವಿವಿಧ ಹಂತದಲ್ಲಿ ಎಂಜಿನ್ ಪರೀಕ್ಷೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ2ಐ ಕಾರು..

ಕಿಯಾ ಇಂಡಿಯಾ ಸಂಸ್ಥೆಯು ವಿವಿಧ ಮಾದರಿಯ ಒಟ್ಟು 8 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದರಲ್ಲಿ ಮೊದಲಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಎಸ್‌ಪಿ2ಐ ಕಾನ್ಸೆಪ್ಟ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ2ಐ ಕಾರು..

ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿರುವ ಎಸ್‌ಪಿ2ಐ ಕಾರು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುವ ತವಕದಲ್ಲಿದ್ದು, ಹೊಸ ಕಾರು ಉತ್ಪಾದನೆಗೆ ಈಗಾಗಲೇ ಅಧಿಕೃತ ಚಾಲನೆ ಕೂಡಾ ಸಿಕ್ಕಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ2ಐ ಕಾರು..

ಎಸ್‌ಪಿ2ಐ ಕಾನ್ಸೆಪ್ಟ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ರಸ್ತೆಗಿಳಿಯುತ್ತಿದ್ದು, ಸಾಮಾನ್ಯ ಮಾದರಿಯ ಎಂಜಿನ್ ಮಾತ್ರವಲ್ಲದೇ ಸ್ಪೋರ್ಟಿ ವರ್ಷನ್‌ನಲ್ಲೂ ಹೊಸ ಎಸ್‌ಪಿ ಕಾನ್ಸೆಪ್ಟ್ ಕಾರನ್ನು ಬಿಡುಗಡೆ ಮಾಡುವುದಾಗಿ ಕಿಯಾ ಸಂಸ್ಥೆಯು ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಕಿಯಾ ಹೊಸ ಎಸ್‌ಯುವಿ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಸಾಮಾನ್ಯ ಮಾದರಿಯಲ್ಲಿ ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ2ಐ ಕಾರು..

ಹಾಗೆಯೇ ಸ್ಪೋರ್ಟಿ ವರ್ಷನ್ ಮಾದರಿಯು 1.4-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು, ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಎಂಜಿನ್‌ಗಿಂತಲೂ ಇದು ಪರ್ಫಾಮೆನ್ಸ್ ವಿಚಾರದಲ್ಲಿ ಹೆಚ್ಚು ಬಲಿಷ್ಠತೆಯನ್ನು ಹೊಂದಿರಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ2ಐ ಕಾರು..

ಜೊತೆಗೆ ಕಾರಿನ ಒಳಭಾಗದಲ್ಲಿ ಸಾಮಾನ್ಯ ಮಾದರಿಯ ಕಾರುಗಳಿಂತಲೂ ತುಸು ಸ್ಪೋರ್ಟಿ ಲುಕ್ ಹೊಂದಿರಲಿದ್ದು, ಹೆಚ್ಚುವರಿಯಾಗಿ ಆಫ್-ರೋಡ್ ಡ್ರೈವ್ ಮೊಡ್ ಸೌಲಭ್ಯಗಳು ಇದರಲ್ಲಿವೆ. ಹೀಗಾಗಿ ಸ್ಪೋರ್ಟಿ ಮಾದರಿಗಳನ್ನು ಇಷ್ಟಪಡುವ ಗ್ರಾಹಕರ ಆಯ್ಕೆಗೆ ಇದು ಸಹಕಾರಿಯಾಗಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ2ಐ ಕಾರು..

ಇದರೊಂದಿಗೆ ಸಾಮಾನ್ಯ ಮಾದರಿಯ ಕಾರು ಬೆಲೆಗಿಂತಲೂ ತುಸು ದುಬಾರಿ ಎನ್ನಿಸುವ ಸ್ಪೋರ್ಟಿ ವರ್ಷನ್ ಮಾದರಿಯು ಪರ್ಫಾಮೆನ್ಸ್ ಪ್ರಿಯರು ಇಷ್ಟಪಡುವ 140-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು ಎನ್ನಲಾಗಿದ್ದು, ಬೆಲೆಗಳು ಎಕ್ಸ್‌ಶೋರೂಂ ಪ್ರಕಾರ ರೂ.12 ಲಕ್ಷದಿಂದ ರೂ.16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ2ಐ ಕಾರು..

ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ತರುವ ಉದ್ದೇಶದೊಂದಿದೆ ಬೃಹತ್ ಯೋಜನೆಯೊಂದಿಗೆ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಹೊಸ ಕಾರು ಉತ್ಪನ್ನ ಅಭಿವೃದ್ಧಿ ಮಾಡಲು ಚಿಂತಿಸಿದೆ.

Source: Motorbeam

Most Read Articles

Kannada
English summary
Kia SP2i SUV Spotted Ahead Of Launch. Read in Kannada.
Story first published: Wednesday, May 15, 2019, 20:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X