ಕಿಯಾ ಮೊದಲ ಎಸ್‌ಯುವಿ ಕಾರಿನ ಅಧಿಕೃತ ಇಂಟಿರಿಯರ್ ಡಿಸೈನ್ ಬಹಿರಂಗ

ಕಿಯಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ತನ್ನ ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಸೆಪ್ಟೆಂಬರ್‌ ಆರಂಭದಲ್ಲಿ ಬಿಡುಗಡೆಯಾಗಲಿರುವ ಮೊದಲ ಕಾರಿನ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಹಂಚಿಕೊಂಡಿರುವುದಲ್ಲದೇ ಉತ್ಪಾದನಾ ಆವೃತ್ತಿಯನ್ನು ಸಹ ಬಹಿರಂಗಪಡಿಸಿದೆ. ಇದೀಗ ಮತ್ತೊಮ್ಮೆ ಹೊಸ ಕಾರಿನ ಡಿಸೈನ್‌ಗಳ ಕುರಿತಾಗಿ ಅಧಿಕೃತ ಕಾರಿನ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಜೂನ್ 20ರಂದು ಹೊಸ ಕಾರನ್ನು ಅನಾವರಣಗೊಳಿಸಲು ಸಿದ್ದತೆ ನಡೆಸಿದೆ.

ಕಿಯಾ ಮೊದಲ ಎಸ್‌ಯುವಿ ಕಾರಿನ ಅಧಿಕೃತ ಇಂಟಿರಿಯರ್ ಡಿಸೈನ್ ಬಹಿರಂಗ

ಭಾರತದಲ್ಲಿ ವಿವಿಧ ಮಾದರಿಯ ಒಟ್ಟು 8 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಮೊದಲ ಹಂತವಾಗಿ ಎಸ್‌ಪಿ2ಐ ಕಾನ್ಸೆಪ್ಟ್ ಎನ್ನುವ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಈಗಾಗಲೇ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್‌ಗಳನ್ನು ನಡೆಸಲಾಗಿದ್ದು, ಜೂನ್ 20ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಸ ಕಾರಿನ ಅಧಿಕೃತ ಹೆಸರು ಬಹಿರಂಗವಾಗಲಿದೆ.

ಕಿಯಾ ಮೊದಲ ಎಸ್‌ಯುವಿ ಕಾರಿನ ಅಧಿಕೃತ ಇಂಟಿರಿಯರ್ ಡಿಸೈನ್ ಬಹಿರಂಗ

ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿರುವ ಎಸ್‌ಪಿ2ಐ ಕಾರು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುವ ತವಕದಲ್ಲಿದ್ದು, ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆ ವೇಳೆ ಅತ್ಯುತ್ತಮ ಎಂಜಿನ್ ಪರ್ಫಾಮೆನ್ಸ್ ಪ್ರದರ್ಶಿಸುತ್ತಿದೆ.

ಕಿಯಾ ಮೊದಲ ಎಸ್‌ಯುವಿ ಕಾರಿನ ಅಧಿಕೃತ ಇಂಟಿರಿಯರ್ ಡಿಸೈನ್ ಬಹಿರಂಗ

ಇದೀಗ ಬಿಡುಗಡೆ ಮಾಡಲಾಗಿರುವ ರೇಖಾಚಿತ್ರಗಳ ಪ್ರಕಾರ ಹೊಸ ಕಾರಿನ ಮುಂಭಾಗದಲ್ಲಿ ಎಲ್ಇಡಿ ಇಂಡೀಕೇಟರ್‌ಗಳು, ಫ್ರಂಟ್ ಫಾಸಿಯಾ, ಗ್ರಿಲ್ ನ ಬಳಿ ಟೈಗರ್ ಚಿಹ್ನೆ, ಎರಡೂ ಬದಿಯಲ್ಲೂ ಎಲ್ಇಡಿ ಹೆಡ್ ಲ್ಯಾಂಪ್‍ ಕ್ಲಸ್ಟರ್, ರೂಪ್ ರೈಲ್ಸ್ ಇರುವುದು ಸ್ಪಷ್ಟವಾಗಿದೆ.

ಕಿಯಾ ಮೊದಲ ಎಸ್‌ಯುವಿ ಕಾರಿನ ಅಧಿಕೃತ ಇಂಟಿರಿಯರ್ ಡಿಸೈನ್ ಬಹಿರಂಗ

17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿರು ಹೊಸ ಕಾರಿ ಮುಂಭಾಗದಲ್ಲಿರುವ ಗ್ರಿಲ್ ನ ಕೆಳಗೆ ದೊಡ್ಡ ಏರ್ ಡ್ಯಾಮ್ ಇದ್ದು, ಮುಂಭಾಗದಲ್ಲಿರುವ ಬಂಪರ್ ನ ಬಳಿ ಸಮವಾಗಿರುವ ಫಾಗ್ ಲ್ಯಾಂಪ್ ಗಳಿವೆ. ಜೊತೆಗೆ ಹಿಂಭಾಗದಲ್ಲೂ ಎಲ್ಇಡಿ ಟೈಲ್ ಲೈಟ್‍ಗಳನ್ನು ಅಳವಡಿಸಲಾಗಿದ್ದು, ಸ್ಪೋರ್ಟಿ ಮಾದರಿಯ ಟ್ವಿನ್ ಎಕ್ಸಾಸ್ಟ್, ರಿಯರ್ ಬಂಪರ್ ಜೋಡಿಸಲಾಗಿದೆ.

ಕಿಯಾ ಮೊದಲ ಎಸ್‌ಯುವಿ ಕಾರಿನ ಅಧಿಕೃತ ಇಂಟಿರಿಯರ್ ಡಿಸೈನ್ ಬಹಿರಂಗ

ಹಾಗೆಯೇ ಹೊಸ ಕಾರಿನಲ್ಲಿ 10.25-ಇಂಚಿನ ಲಾರ್ಜ್ ಟಚ್‍ಸ್ಕ್ರೀನ್ ಇನ್ಫೊಟೇನ್ಮೆಂಟ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಳನ್ನು ಜೋಡಿಸಲಾಗಿದ್ದು, 8-ಇಂಚಿನ ಡಿಸ್‌ಪ್ಲೈ, ಕ್ರೂಸ್ ಕಂಟ್ರೂಲರ್, ಹೆಡ್ ಅಪ್ ಡಿಸ್‌ಪ್ಲೇ, ವೆಂಟಿಲೆಟೆಡ್ ಲೆದರ್ ಸೀಟುಗಳು ಮತ್ತು ಬ್ಯೂ ಲಿಂಕ್ ಪ್ಯಾಕೇಜ್ ಫೀಚರ್ಸ್‌ಗಳನ್ನು ಹೊಂದಿರಲಿದೆಯೆಂತೆ.

ಕಿಯಾ ಮೊದಲ ಎಸ್‌ಯುವಿ ಕಾರಿನ ಅಧಿಕೃತ ಇಂಟಿರಿಯರ್ ಡಿಸೈನ್ ಬಹಿರಂಗ

ಇನ್ನು ಕಿಯಾ ಹೊಸ ಎಸ್‍ಯುವಿ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಮಾದರಿಗಳಲ್ಲೂ ಬರುವ ಸಾಧ್ಯತೆಗಳಿದ್ದು, ಪವರ್ ಹಾಗೂ ಟಾರ್ಕ್ ಉತ್ಪಾದನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಹಾಗೆಯೇ ಎರಡೂ ಎಂಜಿನ್ ಮಾದರಿಗಳಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿವೆ ಎನ್ನಲಾಗಿದೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಕಿಯಾ ಮೊದಲ ಎಸ್‌ಯುವಿ ಕಾರಿನ ಅಧಿಕೃತ ಇಂಟಿರಿಯರ್ ಡಿಸೈನ್ ಬಹಿರಂಗ

ಎಂಜಿನ್ ಸಾಮರ್ಥ್ಯ

ಎಸ್‌ಪಿ2ಐ ಕಾನ್ಸೆಪ್ಟ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ರಸ್ತೆಗಿಳಿಯುತ್ತಿದ್ದು, ಸಾಮಾನ್ಯ ಮಾದರಿಯ ಎಂಜಿನ್ ಮಾತ್ರವಲ್ಲದೇ ಸ್ಪೋರ್ಟಿ ವರ್ಷನ್‌ನಲ್ಲೂ ಹೊಸ ಕಾರನ್ನು ಬಿಡುಗಡೆ ಮಾಡುವುದಾಗಿ ಕಿಯಾ ಸಂಸ್ಥೆಯು ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿತ್ತು. ಹೀಗಾಗಿ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿರುವ ಹೊಸ ಕಾರು ಸಾಮಾನ್ಯ ಮಾದರಿಯ ಎಂಜಿನ್ ಜೊತೆ ಸ್ಪೋರ್ಟಿ ವರ್ಷನ್ ಅನ್ನು ಕೂಡಾ ಹೊಂದಿದೆ.

ಕಿಯಾ ಮೊದಲ ಎಸ್‌ಯುವಿ ಕಾರಿನ ಅಧಿಕೃತ ಇಂಟಿರಿಯರ್ ಡಿಸೈನ್ ಬಹಿರಂಗ

ಸಾಮಾನ್ಯ ಮಾದರಿಯಲ್ಲಿ ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಪರ್ಫಾಮೆನ್ಸ್ ಪ್ರಿಯರಿಗಾಗಿ 7-ಸ್ಪೀಡ್ ಡಿಟಿಸಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 1.4-ಲೀಟರ್ ಟರ್ಬೋಚಾಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಸಹ ಅಭಿವೃದ್ಧಿಗೊಳಿಸಲಾಗಿದೆಯೆಂತೆ.

MOST READ: ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಕಿಯಾ ಮೊದಲ ಎಸ್‌ಯುವಿ ಕಾರಿನ ಅಧಿಕೃತ ಇಂಟಿರಿಯರ್ ಡಿಸೈನ್ ಬಹಿರಂಗ

ಈ ಮೂಲಕ ಎಸ್‌ಯುವಿ ಮಾದರಿಗಳನ್ನು ಇಷ್ಟಪಡುವ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲು ಯತ್ನಿಸಿರುವ ಕಿಯಾ ಸಂಸ್ಥೆಯು ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11.30 ಲಕ್ಷದಿಂದ ಹೈ ಎಂಡ್ ಮಾದರಿಗೆ ರೂ.15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
New Kia SUV (SP2i) Interior Design Sketches Officially Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X