ಕೊಚ್ಚಿಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು

ಕೇರಳ ರಾಜ್ಯ ಸರ್ಕಾರವು 2022ರ ವೇಳೆಗೆ ಹತ್ತು ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವುದಾಗಿ ಈ ಹಿಂದೆಯೇ ಹೇಳಿತ್ತು. ಈ ರೀತಿಯ ಪರಿಸರ ಸ್ನೇಹಿ ವಾಹನ ಸೇವೆಯನ್ನು ಕೊಚ್ಚಿಯಿಂದ ಪ್ರಾರಂಭಿಸಲಾಗುವುದು. ವರದಿಗಳ ಪ್ರಕಾರ, ಈ ಬಂದರು ನಗರವು, ಶೀಘ್ರದಲ್ಲಿಯೇ ಮೊದಲ ಸಾರ್ವಜನಿಕ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಹೊಂದಲಿದೆ.

ಕೊಚ್ಚಿಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು

ಈ ಕಾರ್ಯವನ್ನು ಸಾರ್ವಜನಿಕ ಸ್ವಾಮ್ಯದ ತೈಲ ಕಂಪನಿಗಳು ಕೈಗೆತ್ತಿಕೊಳ್ಳಲಿದ್ದು, ಶೀಘ್ರದಲ್ಲಿಯೇ 15 ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಕೊಚ್ಚಿ ನಗರದಲ್ಲಿ ಸ್ಥಾಪಿಸಲಿವೆ. ಉದ್ಯಮ ಮೂಲಗಳ ಪ್ರಕಾರ, ಮೊದಲ ಮೂರು ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಕೊಚ್ಚಿ ವಲಯದಲ್ಲಿ ಸ್ಥಾಪಿಸಲಾಗುವುದು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಈ ಯೋಜನೆಯ ಭಾಗವಾಗಿದ್ದು, 15 ಚಾರ್ಜಿಂಗ್ ಸ್ಟೇಷನ್‍‍ಗಳ ಪೈಕಿ 14 ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಸ್ಥಾಪಿಸಲಿದೆ.

ಕೊಚ್ಚಿಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು

ಮೊದಲಿಗೆ ಇದಾಪ್‍‍ಪಲ್ಲಿ, ಇನ್ಫೋಪಾರ್ಕ್ ಮತ್ತು ಕೇರಳ ಹೈಕೋರ್ಟ್‍‍ಗಳ ಬಳಿ ಇರುವ ಪೆಟ್ರೋಲಿಯಂ ಔಟ್‍‍ಲೆಟ್ ಗಳಲ್ಲಿ ಕಾರ್ಯಾರಂಭ ಮಾಡಲಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹ ಇದಾಪ್‍‍ಪಲ್ಲಿಯಲ್ಲಿ ಚಾರ್ಜಿಂಗ್ ಸ್ಟೇಷನ್ ನಿರ್ಮಿಸಲಿದೆ.

ಕೊಚ್ಚಿಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು

ಸರ್ಕಾರವು ಕೊಚ್ಚಿಯಲ್ಲಿ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ನಿರ್ಮಿಸಿದ ನಂತರ ತ್ರಿಶ್ಯೂರ್ ಜಿಲ್ಲೆಯಲ್ಲಿನ ಪಣಂಚೇರಿ, ಕೊಲಾಚಿ, ಚಲಾಕುಡಿ, ಕೊಂಬಿಡಿ, ಚೆವೂರ್, ಕೊಡುಂಗಲ್ಲೂರ್, ತ್ರಿಪ್ರಯಾರ್, ಚೂಂಡಾಲ್ ಮತ್ತು ವನಿಯಾಂಪರಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ನಿರ್ಮಿಸಲಿದೆ.

ಕೊಚ್ಚಿಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು

ಈ ಚಾರ್ಜಿಂಗ್ ಸ್ಟೇಷನ್‍‍ಗಳಲ್ಲಿ ಬ್ಯಾಟರಿಗಳನ್ನು ಚಾರ್ಜ್ ಮಾಡಬಹುದು ಹಾಗೂ ಬ್ಯಾಟರಿಗಳನ್ನು ಬದಲಿಸಬಹುದು. ಸುರಕ್ಷತಾ ಕ್ರಮವಾಗಿ ಈ ಎಲೆಕ್ಟ್ರಿಕ್ ಚಾರ್ಜಿಂಗ್‍‍ಗಳನ್ನು ಫ್ಯೂಯಲ್ ಮೆಷಿನ್‍ಗಳಿಂದ 6 ಮೀಟರ್‍‍ಗಳಷ್ಟು ದೂರದಲ್ಲಿ ಅಳವಡಿಸಲಾಗುವುದು. ಚಾರ್ಜಿಂಗ್ ಸಮಯದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ತಡೆಯಲು ಈ ಯೂನಿಟ್‍‍ಗಳನ್ನು ಲಾಕ್ ಮಾಡಬಹುದಾಗಿದೆ. ಈ ಚಾರ್ಜಿಂಗ್ ಘಟಕಗಳಿಗಾಗಿಯೇ ಪ್ರತ್ಯೇಕವಾದ ಪವರ್ ಸಪ್ಲೈ‍‍ಲೈನ್‍‍ಗಳಿರಲಿವೆ.

MOST READ: ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಮಿಂಚಲಿವೆ ಮಾರುತಿ ಸುಜುಕಿ ಜನಪ್ರಿಯ ಕಾರುಗಳು

ಕೊಚ್ಚಿಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೇರಳ ಸರ್ಕಾರದ ನಡೆಯನ್ನು ಮೆಚ್ಚಲೇಬೇಕು. ಈ ಸಾರ್ವಜನಿಕ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು, ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ತಗುಲಿದ ಸಮಯ ಹಾಗೂ ಚಾರ್ಜ್ ಮಾಡಲಾದ ವಾಹನಗಳ ಸಂಖ್ಯೆಗಳ ಬಗೆಗಿನ ಸರಿಯಾದ ಮಾಹಿತಿಯನ್ನು ನೀಡಲಿವೆ. ಇವುಗಳನ್ನು ತಿಳಿದ ನಂತರ ಅವಶ್ಯಕತೆ ಇದ್ದಲ್ಲಿ ಸರ್ಕಾರವು ಇನ್ನಷ್ಟು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍‍ಗಳನ್ನು ತೆರೆಯಲಿದೆ.

ಕೊಚ್ಚಿಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಯುಗವನ್ನು ಆರಂಭಿಸಬೇಕಿದ್ದರೆ, ಅದಕ್ಕೆ ಪೂರಕವಾಗಿ ಸೌಲಭ್ಯಗಳನ್ನು ನೀಡುವುದು ಸಹ ಅವಶ್ಯಕವಾಗಿದೆ. ಭಾರತದಲ್ಲಿ ಸದ್ಯಕ್ಕೆ ಇರುವ ಪ್ರಮುಖ ತೊಂದರೆಯೆಂದರೆ ಮೂಲಭೂತ ಸೌಲಭ್ಯಗಳ ಕೊರತೆ. ಅತ್ಯಧಿಕ ಸಂಖ್ಯೆಯ ಕಾರುಗಳಿರುವ ಮುಂಬೈ ಮತ್ತು ದೆಹಲಿಗಳಲ್ಲಿ ಪರಿಸ್ಥಿತಿಯು ತುಂಬಾ ಕೆಟ್ಟದಾಗಿದೆ.

ಕೊಚ್ಚಿಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು

ಈ ತೊಂದರೆಗಳನ್ನು ಹೋಗಲಾಡಿಸಲು ಪ್ರತಿ ನಗರಗಳಲ್ಲೂ ಕನಿಷ್ಟ 15 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‍‍ಗಳಾದರೂ ಇರಲೇಬೇಕು. ಇದರಿಂದ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲೂ ಏರಿಕೆಯಾಗಲಿದೆ.

Most Read Articles

Kannada
English summary
Kochi To Get 15 Electric Vehicle Charging Station — Total Operational Capacity By End 2020 - Read in kannada
Story first published: Friday, May 24, 2019, 17:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X