ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ಕೊರಿಯಾದ ವಿನ್ಯಾಸಗಾರ ಹ್ಯಾನ್‍‍ಬೋಮ್ ಲೀ ರವರು ಹೊಸ ಕಾರನ್ನು ವಿನ್ಯಾಸಗೊಳಿಸಿದ್ದು, ಈ ಕಾರಿನ ಕ್ಯಾಬಿನ್‍‍ನಲ್ಲಿ ಬಿಸಿ ನೀರಿನ ಟಬ್ ಇರಲಿದೆ. ಈ ಕಾರ್ ಅನ್ನು ನಗರ ಪ್ರದೇಶದ ಚಾಲನೆಗೆಂದು ವಿನ್ಯಾಸಗೊಳಿಸಲಾಗಿದೆ.

ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ದುಬಾರಿ ಬೆಲೆಯ ಲಗ್ಷುರಿ ಕಾರುಗಳು ನಂಬಲಾಸಾಧ್ಯವಾದ ಆರಾಮವನ್ನು ನೀಡುತ್ತಿವೆ. ರೋಲ್ಸ್ ರಾಯ್ಸ್, ಬೆಂಟ್ಲಿ ರೀತಿಯ ಕಾರುಗಳಲ್ಲಿ ಆರಾಮದಾಯಕ ಅನುಭವವನ್ನು ನೀಡುತ್ತಲೇ ಇವೆ. ಆದರೆ ಈಗ ವಿನ್ಯಾಸಗೊಳಿಸಲಾಗಿರುವ ಕಾರು ಅವುಗಳನ್ನೆಲ್ಲಾ ಮೀರಿಸುತ್ತದೆ. ಕೊರಿಯಾದ ಹ್ಯಾನ್‍‍ಬೋಮ್ ಲೀ ವಿನ್ಯಾಸಗೊಳಿಸಿರುವ ಕಾರ್ ಅನ್ನು ಉತ್ಪಾದನೆ ಮಾಡಿದರೆ, ಕಾರುಗಳ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಲೀರವರು ಉಬರ್ ಕೂಲ್ ಆಫ್ ಕೂಲ್ ಎಂಬ ಯೋಜನೆಯೊಂದಿಗೆ ಬಂದಿದ್ದಾರೆ.

ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ಅದುವೇ ಕಾರಿನ ಕ್ಯಾಬಿನ್‍‍ನಲ್ಲಿರುವ ಬಿಸಿ ನೀರಿನ ಟಬ್. ಕೊರಿಯಾ ಮೂಲದ ಈ ವ್ಯಕ್ತಿಯು ಹೋಂಡಾದ ಜನಪ್ರಿಯ ಕಾರ್ ಆದ ಸಿಟಿ ಕಾರಿನ ಆಧಾರದ ಮೇಲೆ ಈ ಕಾನ್ಸೆಪ್ಟ್ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಈ ಕಾರಿಗೆ ಆನ್‍‍ಸೆನ್ ಎಂಬ ಹೆಸರನ್ನಿಟ್ಟಿದ್ದಾರೆ.

ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ಚಿಕ್ಕದಾದ ಆಲ್ ಎಲೆಕ್ಟ್ರಿಕ್ ಕಾರು ಹೆಚ್ಚಿನ ಸ್ಪೇಸ್‍‍ಯಿರುವ ಕ್ಯಾಬಿನ್‍ ಹೊಂದಲಿದ್ದು ಆನ್‍‍ಬೋರ್ಡ್ ಹಾಟ್ ಸ್ಪ್ರಿಂಗ್ ಅಳವಡಿಸಲಾಗುತ್ತದೆ. ಅಲ್ ಎಲೆಕ್ಟ್ರಿಕ್ ಪವರ್‍‍ಟ್ರೇನ್‍ನ ಕಾರಣದಿಂದಾಗಿ ಈ ಎಲೆಕ್ಟ್ರಿಕ್ ಕಾರಿನಲ್ಲಿ ಹೆಚ್ಚಿನ ಕ್ಯಾಬಿನ್ ಸ್ಪೇಸ್ ನೀಡಲಾಗುವುದು.

ಈ ಕಾರಿನಲ್ಲಿ ಬಿಸಿ ನೀರಿನ ಸ್ನಾನ ಮಾಡಬಹುದಂತೆ..!

ಕಾರಿನಲ್ಲಿರುವ ಅರ್ಧದಷ್ಟು ಕ್ಯಾಬಿನ್, ಬೆಂಚ್ ರೀತಿಯ ಸೀಟುಗಳನ್ನು ಹೊಂದಿದ್ದರೆ, ಅರ್ಧಕ್ಕಿಂತ ಹೆಚ್ಚು ಗಿಂಬಲ್ ಟೆಕ್ನಾಲಜಿಯನ್ನು ಬಳಸುವ ಸಿಲಿಂಡರಿಕಲ್ ಸೆಲ್ ಅನ್ನು ಹೊಂದಲಿವೆ. ಈ ಸಿಲಿಂಡರಿಕಲ್ ಸೆಲ್‍‍ನಿಂದ ಬಾತ್ ಟಬ್ ಹೊಂದಬಹುದು. ಈ ಸೆಲ್ ಅನ್ನು ಬಿಗಿಯಾಗಿ ಲಾಕ್ ಮಾಡಲಾಗುತ್ತದೆ. ಈ ರೀತಿಯಲ್ಲಿ ಲಾಕ್ ಮಾಡದಿದ್ದರೇ, ನೀರು ಲೀಕ್ ಆಗಲಿದೆ. ಬಟನ್ ಪ್ರೆಸ್ ಮಾಡುವುದರ ಮೂಲಕ ಈ ಸೆಲ್‍‍ನಲ್ಲಿ ನೀರನ್ನು ತುಂಬಿಸಬಹುದು.

ನೀರು ತುಂಬಿದ ನಂತರ ವ್ಯಕ್ತಿಯೊಬ್ಬ ತನಗೆ ಆರಾಮವೆನಿಸುವ ಸೀಟಿನ ಮೇಲೆ ಕೂತು ಸ್ನಾನ ಮಾಡಬಹುದು. ಬಟನ್ ಪ್ರೆಸ್ ಮಾಡುವುದರ ಮೂಲಕವೇ, ಔ‍‍ಟ್‍‍ಲೆಟ್ ಫನೆಲ್‍‍ಗಳಿಂದ ನೀರನ್ನು ಹೊರಹಾಕಬಹುದು.

MOST READ: ವಾಹನಗಳ ಬೆಲೆ ಏರಿಕೆ ಮಾಡಿದ ಮಹೀಂದ್ರಾ

ಸ್ನಾನ ಮಾಡಲು ಯೋಗ್ಯವಾದ ವಾಹನವೆಂದು ಕರೆಸಿಕೊಳ್ಳುವ ಈ ವಾಹನವು ಇದುವರೆಗೂ ಕಂಡಿರದ, ಕೇಳಿರದ ವಿಲಕ್ಷಣವಾದ ವಾಹನವಾಗಿದೆ. ಬಹಳಷ್ಟು ಸಮಯ ಹಾಗೂ ಯೋಚನೆಗಳ ನಂತರ ವಿನ್ಯಾಸಗಾರರು ಈ ರೀತಿಯ ಪ್ರಯೋಗಶೀಲ ವಿನ್ಯಾಸಗಳನ್ನು ಸಿದ್ದಪಡಿಸುತ್ತಾರೆ.

MOST READ: ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍‍ಗೆ 55 ಸಾವಿರ ದಂಡ

ಈಗಾಗಲೇ ಈ ರೀತಿಯ ಅನೇಕ ಅಟಾನಾಮಸ್ ಕಾನ್ಸೆಪ್ಟ್ ಗಳು ಬಿಡುಗಡೆಯಾಗಿದ್ದು, ಇವುಗಳು ಭವಿಷ್ಯದ ಕಾರುಗಳು ಹೇಗಿರಲಿವೆ ಎಂಬುದನ್ನು ತಿಳಿಸುತ್ತವೆ. ಅದರಲ್ಲೂ ಈ ಹೊಸ ಕಾನ್ಸೆಪ್ಟ್ ಹೆಚ್ಚು ಆಸಕ್ತಿಕರವಾಗಿದೆ.

MOST READ: ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸಾಮಾನ್ಯ ಕಾರು ಚಾಲಕರಿಗೆ ಈ ರೀತಿಯ ಕಾರುಗಳಿಂದ ಏನೂ ಪ್ರಯೋಜನವಾಗುವುದಿಲ್ಲ. ಬಹುಶಃ ಲೀರವರು ಈಜುವುದನ್ನು, ಈಜುಕೊಳವನ್ನು ಇಷ್ಟ ಪಡಬಹುದು. ನಮ್ಮ ಪ್ರಕಾರ ಅವರು ವಿನ್ಯಾಸಕಾರರಾಗಿರುವುದರಿಂದ ತಮ್ಮ ಬಹುತೇಕ ಸಮಯವನ್ನು ಪ್ರಯಾಣಿಸುವುದರಲ್ಲಿಯೇ ಕಳೆಯುತ್ತಾರೆ. ಆದರೆ ಬಾತ್ ಟಬ್ ಅನ್ನು ಕಾರಿನಲ್ಲಿ ಹೊಂದುವ ಉದ್ದೇಶವೇನು ಎಂಬುದು ತಿಳಿಯುತ್ತಿಲ್ಲ.

ನಮ್ಮ ಪ್ರಶ್ನೆಗಳೆಂದರೆ ನೀರನ್ನು ಎಲ್ಲಿ ಸಂಗ್ರಹಿಸಲಾಗುವುದು ? ನಾವು ಈ ಟಬ್‍‍ನಲ್ಲಿ ಸ್ನಾನವನ್ನು ಮಾಡದಿದ್ದರೆ ಈ ಸಿಲಿಂಡರ್‍ ಸೆಲ್‍ನಿಂದ ಏನು ಪ್ರಯೋಜನ ? ಈ ಟಬ್‍‍ನಲ್ಲಿ ಎಷ್ಟು ಬಗೆಯ ಪೈಪ್‍ಗಳನ್ನು ಅಳವಡಿಸಿ ನೀರು ತುಂಬಿಸಲು ಹಾಗೂ ಹೊರ ಹಾಕಲು ಅಳವಡಿಸಲಾಗುವುದು ಎಂಬ ಪ್ರಶ್ನೆಗಳು ಸಹಜ. ಇವುಗಳಿಗೆಲ್ಲಾ ಕಾರು ಬಿಡುಗಡೆಯಾದಾಗ ಸ್ಪಷ್ಟ ಉತ್ತರ ದೊರಕಲಿದೆ.

Most Read Articles

Kannada
English summary
Korean Designer Features Hot Water Bath In Car — Where’s The Rest Of The House? - Read in kannada
Story first published: Thursday, June 20, 2019, 13:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X