Just In
- just now
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
Don't Miss!
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- News
ವಿಶ್ವದಾದ್ಯಂತ ಕೊರೊನಾಗೆ ಬಲಿಯಾದವರ ಸಂಖ್ಯೆ 2 ಕೋಟಿ ದಾಟಿದೆ!
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
11 ವರ್ಷಗಳ ಹಿಂದಿನ ಅಪಘಾತ ಪ್ರಕರಣದಲ್ಲಿ ಕೆಎಸ್ಆರ್ಟಿಸಿಗೆ ಸಿಕ್ಕ ಪರಿಹಾರ ಎಷ್ಟು ಗೊತ್ತಾ?
ಮಾರ್ಚ್ 26, 2008ರಲ್ಲಿ ನಡೆದಿದ್ದ ಅಪಘಾತ ಪ್ರಕರಣವೊಂದರಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಯು ಸುಮಾರು 11 ವರ್ಷಗಳ ನಂತರ ಪರಿಹಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅಪಘಾತದ ವೇಳೆ ನಷ್ಟ ಪರಿಹಾರಕ್ಕಾಗಿ ಸಮಗ್ರ ಮೋಟಾರ್ ವಿಮೆ ಹೊಂದಿರುವುದು ಎಷ್ಟು ಮುಖ್ಯವಾಗಿರುತ್ತೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ವಾಹನ ಚಾಲನೆ ವೇಳೆ ಸಾವರರು ಮಾಡುವ ಸಣ್ಣಪುಟ್ಟ ತಪ್ಪುಗಳೇ ಕೆಲವೊಮ್ಮೆ ದೊಡ್ಡ ದುರಂತಗಳಿಗೆ ಕಾರಣವಾಗುತ್ತವೆ. ಜೊತೆಗೆ ಇತ್ತೀಚೆಗೆ ಹೆಚ್ಚುತ್ತಿರುವ ವಾಹನ ಸಂಖ್ಯೆಯಿಂದಾಗಿ ಕೂಡಾ ಸಂಚಾರಿ ನಿಯಮಗಳ ಉಲ್ಲಂಘನೆಗಳ ಪ್ರಕರಣಗಳು ಸಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಸುಮಾರು 11 ವರ್ಷಗಳ ಹಿಂದೆ ಕೂಡಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ರಾಜಧಾನಿ ಬೆಂಗಳೂರಿನತ್ತ ಬರುತ್ತಿದ್ದ ಕೆಎಸ್ಆರ್ಟಿ ಬಸ್ವೊಂದಕ್ಕೆ ಬೇಲೂರು ಬಳಿ ಮಹೀಂದ್ರಾ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದು ಭೀಕರ ಅಪಘಾತವೊಂದು ಸಂಭವಿಸಿತ್ತು.

ಓವರ್ಟೇಕ್ ಮಾಡಿಕೊಂಡು ವಿರುದ್ಧ ದಿಕ್ಕಿನಿಂದ ಬಂದಿದ್ದ ಮಹೀಂದ್ರಾ ಗೂಡ್ಸ್ ವಾಹನವು ನಿಯಂತ್ರಣ ತಪ್ಪಿ ಬಸ್ ಮುಂಭಾಗಕ್ಕೆ ರಭಸವಾಗಿ ಗುದ್ದಿತ್ತು. ಈ ವೇಳೆ ಬಸ್ ಮುಂಭಾಗವು ಸಂಪೂರ್ಣ ಜಖಂಗೊಂಡಿದ್ದಲ್ಲದೇ ಬಸ್ ಚಾಲಕ ಸೇರಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿದ್ದವು.

ಘಟನೆ ನಂತರ ಪ್ರಕರಣ ದಾಖಲಿಸಿದ್ದ ಕೆಎಸ್ಆರ್ಟಿ ಸಂಸ್ಥೆಯು ತದನಂತರ ಕೋರ್ಟ್ ಮೆಟ್ಟಿಲೇರಿ ದಕ್ಷಿಣ ಕನ್ನಡ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯುನಲ್ನಲ್ಲಿ ರೂ. 7,36,647 ನಷ್ಟ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಿತ್ತು.

ಈ ಮಧ್ಯೆ ಅಪಘಾತವಾದ ನಂತರ ಗುಜುರಿ ಸೇರಿದ್ದ ಬಸ್ ಮೊದಲಿನಂತೆ ಕಾರ್ಯನಿರ್ವಹಿಸಲು ಸುಮಾರು 59 ದಿನಗಳೇ ಕಳೆದಿದ್ದವು. ಹೀಗಾಗಿ ವಿಮಾ ಮೊತ್ತ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಾಗ ಬಸ್ ಗುಜುರಿ ಸೇರಿದ್ದರಿಂದ ಕೆಎಸ್ಆರ್ಟಿಸಿಗೆ ಪ್ರತಿ ದಿನ ರೂ.12 ಸಾವಿರ ಆದಾಯ ನಷ್ಟವಾಗಿರುವ ಬಗ್ಗೆಯೂ ನಮೂದಿಸಲಾಗಿತ್ತು.

ಬಸ್ ರೀಪೇರಿ ಮತ್ತು ಪ್ರತಿ ದಿನ ಬರುತ್ತಿದ್ದ ರೂ.12 ಸಾವಿರ ಆದಾಯವನ್ನು ಸಹ ಪರಿಹಾರ ರೂಪದಲ್ಲಿ ನೀಡುವಂತೆ ಪಟ್ಟುಹಿಡಿದ್ದ ಕೆಎಸ್ಆರ್ಟಿಸಿ ಅರ್ಜಿಗೆ ಬಜಾಜ್ ಆಲಿಯನ್ಸ್ ಜನರಲ್ ಇನ್ಸುರೆನ್ಸ್ ಸಂಸ್ಥೆಯು ಆಕ್ಷೇಪ ವ್ಯಕ್ತಪಡಿಸಿತ್ತು.

ಎರಡೂ ಕಡೆಯ ವಾದ ಮತ್ತು ಪ್ರತಿವಾದ ಆಲಿಸಿದ್ದ ದಕ್ಷಿಣ ಕನ್ನಡ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯುನಲ್, ಬಸ್ ರೀಪೆರಿ ಪರಿಹಾರ ಹೊರತು ಪಡಿಸಿ ದಿನಂಪ್ರತಿ ರೂ.12 ಸಾವಿರ ಆದಾಯ ಬರುತ್ತಿತ್ತು ಎನ್ನುವುದಕ್ಕೆ ಬಲವಾದ ಸಾಕ್ಷ್ಯ ನೀಡಿದ್ದಲ್ಲಿ ಮಾತ್ರ ಪರಿಹಾರ ಸಾಧ್ಯ ಎಂದು ಹೇಳಿತ್ತು.
MOST READ: ವಾಹನ ಮಾಲೀಕರೇ ಇತ್ತ ಗಮನಿಸಿ- ಥರ್ಟ್ ಪಾರ್ಟಿ ವಿಮಾ ಮೊತ್ತದಲ್ಲಿ ಭಾರೀ ಬದಲಾವಣೆ..!

ಆದ್ರೆ ವಿಮಾ ಸಂಸ್ಥೆಯ ಕೇಳಿದ ಸಾಕ್ಷ್ಯಕ್ಕೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾದ ಕೆಎಸ್ಆರ್ಟಿಸಿ ಸಂಸ್ಥೆಗೆ ಕೊನೆಗೂ ರೂ.87,442 ರೀಪೆರಿ ಕಾರ್ಯಕ್ಕೆ ಮತ್ತು ರೂ. 43,721 ಆದಾಯ ನಷ್ಟ ಪರಿಹಾರವಾಗಿ ಆದೇಶ ನೀಡಿತ್ತು. ಇದಕ್ಕೆ ಒಪ್ಪದ ಕೆಎಸ್ಆರ್ಟಿ ಸಂಸ್ಥೆಯು ರೂ. 7 ಲಕ್ಷ ಪರಿಹಾರಕ್ಕಾಗಿ ಪಟ್ಟು ಹಿಡಿದು ಪ್ರಕರಣವನ್ನು 11 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಲ್ಲದೇ ಹೈಕೋರ್ಟ್ ಮೊರೆ ಹೋಗಿತ್ತು.

ಹೈಕೋರ್ಟ್ ಮೋರೆ ಹೋದಾಗಲು ಅದೇ ವಾದವನ್ನು ಮಂಡಿಸಿದ್ದ ಕೆಎಸ್ಆರ್ಟಿಸಿ ಸಂಸ್ಥೆಗೆ ಬಲವಾದ ಸಾಕ್ಷ್ಯ ಕೇಳಿದ್ದ ಇನ್ಸುರೆನ್ಸ್ ಸಂಸ್ಥೆಯು ಆದಾಯದ ಕುರಿತು ಸರಿಯಾದ ಸಾಕ್ಷ್ಯ ನೀಡಿದ್ದಲ್ಲಿ ಮಾತ್ರ ಪೂರ್ಣ ಪ್ರಮಾಣದ ಪರಿಹಾರ ನೀಡುವುದಾಗಿ ಹೇಳಿಕೊಂಡಿತ್ತು. ಆದ್ರೆ ಬಜಾಜ್ ಜನರಲ್ ಇನ್ಸುರೆನ್ಸ್ ಕೇಳಿದ ಸರಿಯಾದ ಮಾಹಿತಿ ಕೆಎಸ್ಆರ್ಟಿ ಬಳಿ ಇಲ್ಲದ ಕಾರಣ ಬರಬೇಕಿದ್ದ ಪರಿಹಾರಕ್ಕೂ ಇದೀಗ ಕತ್ತರಿ ಬಿದ್ದಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಸುಮಾರು 11 ವರ್ಷಗಳ ಹಿಂದಿನ ವಿಮಾ ಪರಿಹಾರ ಪ್ರಕರಣವನ್ನು ಇತ್ಯರ್ಥಗೊಳಿಸಿರುವ ಹೈಕೋರ್ಟ್ ಅಚ್ಚರಿ ಎಂಬಂತೆ ಕೆಎಸ್ಆರ್ಟಿಸಿಗೆ ರೂ.50 ಸಾವಿರ ಪರಿಹಾರವನ್ನು ವಾರ್ಷಿಕವಾಗಿ ಶೇ.6ರ ಬಡ್ಡಿ ಮೊತ್ತದಲ್ಲಿ ಪರಿಹಾರ ನೀಡಬೇಕಾಗಿ ವಿಮಾ ಸಂಸ್ಥೆಗೆ ಮಹತ್ವದ ಸೂಚನೆ ನೀಡಿದೆ. ಬರೋಬ್ಬರಿ 11 ಲಕ್ಷ ಪರಿಹಾರಕ್ಕಾಗಿ 11 ವರ್ಷ ಪರದಾಟಿದ ಕೆಎಸ್ಆರ್ಟಿಸಿಗೆ ಕೊನೆಗೆ ಸಿಕ್ಕಿದ್ದು 50 ಸಾವಿರ ಮಾತ್ರ.
Source:ET Auto