ಬಹುನೀರಿಕ್ಷಿತ ಆರ್‌ಸಿ 125 ಬಿಡುಗಡೆ ಮಾಡಲು ಸಜ್ಜಾದ ಕೆಟಿಎಂ..!

ಕೆಟಿಎಂ ಸಂಸ್ಥೆಯು ಕಳೆದ ವರ್ಷ ನವೆಂಬರ್‌ನಲ್ಲಿ ಡ್ಯೂಕ್ 125 ವರ್ಷನ್ ಬಿಡುಗಡೆಗೊಳಿಸುವ ಮೂಲಕ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ತನ್ನ ಮತ್ತೊಂದು ಜನಪ್ರಿಯ ಆವೃತ್ತಿಯಾದ ಆರ್‌ಸಿ 125 ಆವೃತ್ತಿಯನ್ನು ಸಹ ಬಿಡುಗಡೆಗೊಳಿಸುತ್ತಿದೆ.

ಬಹುನೀರಿಕ್ಷಿತ ಆರ್‌ಸಿ 125 ಬಿಡುಗಡೆ ಮಾಡಲು ಸಜ್ಜಾದ ಕೆಟಿಎಂ..!

ಎಂಟ್ರಿ ಲೆವಲ್ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ಉದ್ದೇಶದೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿರುವ 125 ಸಿಸಿ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಕೆಟಿಎಂ ಸಂಸ್ಥೆಯು ಡ್ಯೂಕ್ 125 ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಇದೀಗ ಆರ್‌ಸಿ 125 ಆವೃತ್ತಿಯನ್ನು ಬಿಡುಗಡೆಗೊಳಿಸುವ ಉದ್ದೇಶದೊಂದಿಗೆ ದೇಶದ ವಿವಿಧಡೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದಲ್ಲದೇ ಮುಂದಿನ ಜುಲೈ ಆರಂಭದಲ್ಲೇ ಹೊಸ ಬೈಕ್ ವಿತರಣೆ ಶುರು ಮಾಡುವುದಾಗಿ ಹೇಳಿಕೊಂಡಿದೆ.

ಬಹುನೀರಿಕ್ಷಿತ ಆರ್‌ಸಿ 125 ಬಿಡುಗಡೆ ಮಾಡಲು ಸಜ್ಜಾದ ಕೆಟಿಎಂ..!

ತಾಂತ್ರಿಕವಾಗಿ ಡ್ಯೂಕ್ 125 ಬೈಕಿನ ಎಂಜಿನ್ ಮಾದರಿಯನ್ನೇ ಹೊಂದಿರುವ ಆರ್‌ಸಿ 125 ಮಾದರಿಯು ಸಹ ಎಂಟ್ರಿ ಲೆವಲ್ ಪರ್ಫಾಮೆನ್ಸ್ ವಿಭಾಗದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದು, ಹೊಸ ಬೈಕ್ ಅನ್ನು ಬಜಾಜ್ ಸಂಸ್ಥೆಯು ಟೆಸ್ಟಿಂಗ್ ನಡೆಸುತ್ತಿದೆ.

ಬಹುನೀರಿಕ್ಷಿತ ಆರ್‌ಸಿ 125 ಬಿಡುಗಡೆ ಮಾಡಲು ಸಜ್ಜಾದ ಕೆಟಿಎಂ..!

ಭಾರತದಲ್ಲಿ ಕೆಟಿಎಂ ಬೈಕ್‌ಗಳ ಮಾರಾಟ ಮತ್ತು ಅಭಿವೃದ್ಧಿಯ ಹೊಣೆ ಹೊತ್ತಿರುವ ಬಜಾಜ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಬೈಕ್‌ಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಹೊಸ ಆರ್‌ಸಿ 125 ಬೈಕ್ ಮಾದರಿಯು ಯಮಹಾ ಆರ್ 15 ವಿ3 ಬೈಕಿಗೆ ತೀವ್ರ ಪೈಪೋಟಿ ನೀಡಲಿದೆ.

ಬಹುನೀರಿಕ್ಷಿತ ಆರ್‌ಸಿ 125 ಬಿಡುಗಡೆ ಮಾಡಲು ಸಜ್ಜಾದ ಕೆಟಿಎಂ..!

ಇನ್ನು ಕೆಟಿಎಂ ಸಂಸ್ಥೆಯು ಪ್ರಮುಖವಾಗಿ ಪರ್ಫಾಮೆನ್ಸ್ ಬೈಕ್ ಆವೃತ್ತಿಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಭಾರತವನ್ನು ಹೊರತುಪಡಿಸಿ ಜಾಗತಿಕ ಮಾರುಕಟ್ಟೆಗಳಲ್ಲಿ 1200 ಸಿಸಿ ಸಾಮರ್ಥ್ಯದ 1290 ಸೂಪರ್ ಡ್ಯೂಕ್ ಬೈಕ್ ಆವೃತ್ತಿಯನ್ನು ಸಹ ಮಾರಾಟ ಮಾಡುತ್ತಿದೆ. ಹೀಗಿರುವಾಗ ಭಾರತೀಯ ಗ್ರಾಹಕರ ಬೇಡಿಕೆಯನ್ನು ಅರಿತಿರುವ ಕೆಟಿಎಂ ಸಂಸ್ಥೆಯು 125ಸಿಸಿ ಸಾಮರ್ಥ್ಯದ ಎಂಜಿನ್‌ನೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ಹೊಸ ಪ್ರಯತ್ನಕ್ಕೆ ಕೈಹಾಕಿದೆ.

ಬಹುನೀರಿಕ್ಷಿತ ಆರ್‌ಸಿ 125 ಬಿಡುಗಡೆ ಮಾಡಲು ಸಜ್ಜಾದ ಕೆಟಿಎಂ..!

ಆರ್‌ಸಿ 125 ತಾಂತ್ರಿಕವಾಗಿ 125ಸಿಸಿ ಆವೃತ್ತಿಯಾದರೂ ಆರ್‌ಸಿ 200 ಮಾದರಿಯಿಂದಲೇ ಬಹುತೇಕ ಹೊರ ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು, ಹೊಸ ಬೈಕಿನಲ್ಲಿ 43-ಎಂಎಂ ಡಬ್ಲ್ಯುಪಿ ಅಪ್‌ಸೈಡ್-ಡೌನ್ ಫೋಕ್ಸ್‌ನೊಂದಿಗೆ ಖರೀದಿ ಉತ್ತಮವಾಗಿದೆ.

ಬಹುನೀರಿಕ್ಷಿತ ಆರ್‌ಸಿ 125 ಬಿಡುಗಡೆ ಮಾಡಲು ಸಜ್ಜಾದ ಕೆಟಿಎಂ..!

ಆರ್‌ಸಿ 200 ಮಾದರಿಯಲ್ಲೇ ಚಾರ್ಸಿ, ಸಸ್ಷೆನ್, ಚಕ್ರಗಳು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬಾಡಿ ಪ್ಯಾನೆಲ್ ಸಹ ಆರ್‌ಸಿ 125ನಲ್ಲಿದ್ದು, ಬೈಕಿನ ಸ್ಪೋಟಿ ಲುಕ್ ಹೆಚ್ಚಿಸುವುದರ ಜೊತೆ ಎಂಜಿನ್ ರಕ್ಷಣೆಗಾಗಿ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಲಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬಹುನೀರಿಕ್ಷಿತ ಆರ್‌ಸಿ 125 ಬಿಡುಗಡೆ ಮಾಡಲು ಸಜ್ಜಾದ ಕೆಟಿಎಂ..!

ಎಂಜಿನ್ ಮತ್ತು ಟಾಪ್ ಸ್ಪೀಡ್

ಆರ್‌ಸಿ 125 ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

ಬಹುನೀರಿಕ್ಷಿತ ಆರ್‌ಸಿ 125 ಬಿಡುಗಡೆ ಮಾಡಲು ಸಜ್ಜಾದ ಕೆಟಿಎಂ..!

ಈ ಮೂಲಕ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿರುವ ಆರ್‌ಸಿ 125 ಬೈಕ್ ಮಾದರಿಯು ಗಂಟೆಗೆ 109ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್‌ ನೀಡಲಿದ್ದು, ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, 17-ಇಂಚಿನ ಅಲಾಯ್ ವೀಲ್ಹ್ ಸೇರಿದಂತೆ ಅಂಡರ್ ಬೆಲ್ಲಿ ಎಕ್ಸಾಸ್ಟ್ ಸೌಲಭ್ಯ ಹೊಂದಿರಲಿದೆ.

MOST READ: ಅಡ್ವೆಂಚರ್ ಪ್ರಿಯರ ಹೀರೋ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಬಿಡುಗಡೆ

ಬಹುನೀರಿಕ್ಷಿತ ಆರ್‌ಸಿ 125 ಬಿಡುಗಡೆ ಮಾಡಲು ಸಜ್ಜಾದ ಕೆಟಿಎಂ..!

ಬಿಡುಗಡೆ ಮತ್ತು ಬೆಲೆ (ಅಂದಾಜು)

ಮಾಹಿತಿಗಳ ಪ್ರಕಾರ ಹೊಸ ಆರ್‌ಸಿ 125 ಬೈಕ್ ಜುಲೈ ಆರಂಭದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, ಬೈಕ್ ಬೆಲೆಯು ರೂ. 1.30 ಲಕ್ಷದಿಂದ ರೂ. 1.45 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on ktm ಕೆಟಿಎಂ
English summary
KTM RC 125 deliveries to begin in July 2019. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X