6 ಕೋಟಿ ರೂಪಾಯಿ ಕಾರನ್ನು ಮಾಡಿಫೈ ಮಾಡಲು 10 ಕೋಟಿ ಖರ್ಚು

ದುಡ್ಡು ಖರ್ಚು ಮಾಡುವ ಶಕ್ತಿಯಿದ್ರೆ ಈ ಜಗತ್ತಿನಲ್ಲಿ ಯಾವುದು ಕೂಡಾ ಅಸಾಧ್ಯವೇ ಇಲ್ಲ. ಅದರಲ್ಲೂ ಆಟೋ ಮಾಡಿಫಿಕೇಷನ್‌‌ಗಾಗಿ ಹಣ ಖರ್ಚು ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲೊಬ್ಬ ಲೇಡಿ ಬಿಲೇನಿಯರ್ ತಾನು ಖರೀದಿಸಿದ ರೂ.6 ಕೋಟಿ ಮೌಲ್ಯದ ಲಂರ್ಬೋಗಿನಿ ಅವೆಂಟಡೊರ್ ಕಾರಿಗೆ ಬರೋಬ್ಬರಿ ರೂ. 10 ಕೋಟಿಗೂ ಹೆಚ್ಚು ಖರ್ಚು ಮಾಡಿ ಮಾಡಿಫೈ ಮಾಡಿಸಿ ಸುದ್ಧಿಯಾಗಿದ್ದಾಳೆ.

6 ಕೋಟಿ ರೂಪಾಯಿ ಕಾರನ್ನು ಮಾಡಿಫೈ ಮಾಡಲು 10 ಕೋಟಿ ಖರ್ಚು

ಇತ್ತೀಚೆಗೆ ಆಟೋ ಉದ್ಯಮದಲ್ಲಿ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿರುವ ಮಾಡಿಫಿಕೇಷನ್ ತಂತ್ರಜ್ಞಾನವು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ತಮ್ಮಷ್ಟಿದ ಮಾಡಿಫೈ ಡಿಸೈನ್ ಮಾಡಿಸಿಕೊಳ್ಳಲು ಬಹತೇಕ ವಾಹನ ಮಾಲೀಕರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆದ್ರೆ ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇಲ್ಲೊಬ್ಬ ಲೇಡಿ ಬಿಲೇನಿಯರ್‌ ಒಬ್ಬಳು ತನ್ನ ಲಂರ್ಬೋಗಿನಿ ಅವೆಂಟಡೊರ್ ಕಾರನ್ನು ಮಿರಿ-ಮಿರಿ ಮಿಂಚುವಂತೆ ಮಾಡಲು ಬರೋಬ್ಬರಿ ರೂ.10 ಕೋಟಿ ಖರ್ಚು ಮಾಡಿದ್ದಾಳೆ.

6 ಕೋಟಿ ರೂಪಾಯಿ ಕಾರನ್ನು ಮಾಡಿಫೈ ಮಾಡಲು 10 ಕೋಟಿ ಖರ್ಚು

ಹೌದು, ರಷ್ಯಾದ ಮೂಲದ ಬಿಲೇನಿಯರ್ ಹಾಗೂ ಸೆಲೆಬ್ರಿಟಿ ಆಗಿಯೂ ಮಿಂಚುತ್ತಿರುವ ದರಿಯಾ ರಾಡಿಯೋನೊವಾ ಎಂಬಾಕೆ ಲಂರ್ಬೋಗಿನಿ ಅವೆಂಟಡೊರ್ ಎಸ್‌ವಿ ಲಿಮಿಟೆಡ್ ಎಡಿಷನ್ ಕಾರನ್ನು ಮಿರಿ-ಮಿರಿ ಮಿಂಚುವಂತೆ ಮಾಡಲು ಸ್ಫಟಿಕದಿಂದ ಮಾಡಿಫೈ ಮಾಡಿಸಿದ್ದಾಳೆ.

6 ಕೋಟಿ ರೂಪಾಯಿ ಕಾರನ್ನು ಮಾಡಿಫೈ ಮಾಡಲು 10 ಕೋಟಿ ಖರ್ಚು

ಕಾರಿನ ಮೇಲ್ಭಾಗವನ್ನು ಸಂಪೂರ್ಣವಾಗಿ ಸ್ಪಟಿಕದಿಂದ ಮಾಡಿಫೈ ಮಾಡಲು ಬರೋಬ್ಬರಿ 20 ಲಕ್ಷ ಸ್ಫಟಿಕದ ಹರಳುಗಳನ್ನು ಬಳಸಲಾಗಿದ್ದು, ಇದು ವಾಹನ ಬೆಳಕಿಗೆ ಮಿರಿ ಮಿರಿ ಮಿಂಚುವುದಲ್ಲದೇ ಬೆಳಕಿನ ಪ್ರತಿಫಲನಕ್ಕೆ ತಕ್ಕಂತೆ ವಿವಿಧ ಬಣ್ಣವನ್ನು ಪಡೆದುಕೊಳ್ಳುತ್ತದೆ.

6 ಕೋಟಿ ರೂಪಾಯಿ ಕಾರನ್ನು ಮಾಡಿಫೈ ಮಾಡಲು 10 ಕೋಟಿ ಖರ್ಚು

ಸದ್ಯ ದರಿಯಾ ರಾಡಿಯೋನೊವಾ ಅವರ ಝಗಮಗಿಸುವ ಲಂಬೋರ್ಗಿನಿ ಅವೆಂಟಡೊರ್ ಕಾರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಕೆಲವರು ಕಾರಿನ ಮಾಡಿಫೈ ಬಗೆಗೆ ಆಶ್ಚರ್ಯ ವ್ಯಕ್ತಪಡಿಸಿದರೆ ಇನ್ನು ಕೆಲವರು ಇಂತಾ ಶೋಕಿ ಬೇಕಿತ್ತಾ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.

6 ಕೋಟಿ ರೂಪಾಯಿ ಕಾರನ್ನು ಮಾಡಿಫೈ ಮಾಡಲು 10 ಕೋಟಿ ಖರ್ಚು

ಆದ್ರೆ ಅದೇನೇ ಇರಲಿ ಆಟೋ ಮಾಡಿಫಿಕೇಷನ್ ಇಂದು ಜಗತ್ತಿನಾದ್ಯಂತ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದ್ದು, ದರಿಯಾ ರಾಡಿಯೋನೊವಾ ತುಸು ವಿಭಿನ್ನ ಎನ್ನುವಂತೆ ಯೋಚನೆ ಮಾಡಿ ತನ್ನ ಕಾರಿಗೆ ಸ್ಪಟಿಕದಿಂದ ಮಾಡಿಫೈ ಮಾಡಿಸಿ ಸುದ್ದಿಯಾಗಿದ್ದಾಳೆ.

MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಇನ್ನು ಈ ಕಾರು 6.5-ಲೀಟರ್(6498 ಸಿಸಿ) ವಿ12 ನ್ಯಾಚುರಲಿ ಆಸ್ಪೈರೆಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7-ಸ್ಪೀಡ್ ಐಎಸ್ಆರ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 770-ಬಿಎಚ್‌ಪಿ ಮತ್ತು 720-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

6 ಕೋಟಿ ರೂಪಾಯಿ ಕಾರನ್ನು ಮಾಡಿಫೈ ಮಾಡಲು 10 ಕೋಟಿ ಖರ್ಚು

ಈ ಮೂಲಕ ಗಂಟೆಗೆ 351 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಅವೆಂಟಡೊರ್ ಎಸ್‌ವಿ ಕಾರು, ಕೇವಲ 2.8 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ಹಾಗೂ 8 ಸೇಕೆಂಡುಗಳಲ್ಲಿ 200 ಕಿ.ಮಿ ವೇಗ ಪಡೆಯುವ ಸಾಮರ್ಥ್ಯ ಈ ಕಾರಿಗಿದೆ.

MOST READ: ಜಗತ್ತಿನ ಅತಿ ದುಬಾರಿ ರೋಲ್ಸ್ ರಾಯ್ಸ್ ಕಲಿನಿಯನ್ ಐಷಾರಾಮಿ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

6 ಕೋಟಿ ರೂಪಾಯಿ ಕಾರನ್ನು ಮಾಡಿಫೈ ಮಾಡಲು 10 ಕೋಟಿ ಖರ್ಚು

ಟೂ ಸೀಟರ್ ಕೂಪೆ ವಿನ್ಯಾಸ ಹೊಂದಿರುವ ಅವೆಂಟಡೊರ್ ಎಸ್‌ವಿಜೆ ಕಾರಿನಲ್ಲಿ ಬೆಲೆ ತಕ್ಕಂತೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೀರಿಂಗ್ ವೀಲ್ಹ್‌, ಕಾರ್ಬನ್ ಪೈಬರ್ ಎಂಜಿನ್ ಬ್ಯಾನೆಟ್, ಅಲ್ಯುಮಿನಿಯಂ ಫ್ರಂಟ್ ಬ್ಯಾನೆಟ್ ಜೋಡಣೆ ಹೊಂದಿರುವ ಈ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ಸರಾಸರಿ 4 ಕಿ.ಮಿ ಮೈಲೇಜ್ ನೀಡುತ್ತೆ ಅಂದ್ರೆ ನಂಬಲೇಬೇಕು.

Most Read Articles

Kannada
English summary
Russian Billionaire Woman Wraps Lamborghini Aventador With 2 Million Crystals. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X